ಬಾಲ್ಕನಿ ವಾರ ಭವಿಷ್ಯಬಾಲ್ಕನಿಯಿಂದ

ಬಾಲ್ಕನಿ ವಾರ ಭವಿಷ್ಯ – 4

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…!

 02-09-2018 ರ ಭಾನುವಾರ ದಿಂದ 08-09-2018 ಶನಿವಾರದ ತನಕ

 ಮೇಷಪೂರ್ವಾರ್ಧದಲ್ಲಿ ಮನಸ್ಸಿಗೆ ಕ್ಲೇಶವು ಧನವ್ಯಯವು, ವಸ್ತುಗಳ ಹಾನಿ, ಅನಾರೋಗ್ಯದ ಬಾದೆ ಇರುವುದಾದರೂ ಹೊಸ ಸಂಬಂಧ‍ಗಳು ಬೆಸೆಯುವ ವಾರ ಅಥವಾ ಹಳೆಯ ಸಂಬಂಧಗಳಿಗೆ ಮರುಜೀವ ಬರುವ ವಾರ. ಮಧ್ಯಬಾಗದಲ್ಲಿ ಧನಾರ್ಜನೆಯಾಗುವುದು, ಮನಸ್ಸಿಗೆ ಸೌಖ್ಯವು, ಸಲ್ಲಾಪದ ಮಾತುಕತೆ. ಉತ್ತರಾರ್ಧದಲ್ಲಿ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ಮಾತಿನ ಚಕಮಕಿ. ವಾರಾಂತ್ಯದಲ್ಲಿ ಪ್ರವಾಸ ಅಥವಾ ಸಿನಿಮಾ ಅಥವಾ ಮಾಲ್ ಗೆ ಭೇಟಿ ಸಾಧ್ಯತೆ.
 ವೃಷಭ – ಶರೀರ ಸೌಖ್ಯ, ಆರೋಗ್ಯ, ಸಂತೋಷವು, ಧನಾಭಿವೃದ್ದಿ, ಮೃಷ್ಟಾನ್ನ ಭೋಜನ, ಸ್ರೀ ಸೌಖ್ಯ, ಗೌರವ ಸನ್ಮಾನ, ಮಾತೃ ಸೌಖ್ಯ, ತಮ್ಮ ಸದ್ಬುದ್ಧಿಯಿಂದ ಕೆಲಸ-ಕಾರ್ಯ, ವ್ಯಾಪಾರದಲ್ಲಿ ಜಾಣ್ಮೆಯಿಂದ ಯಶಸ್ಸು ಸಾಧಿಸುವಿರಿ. ಆದರೂ ಕುಟುಂಬದಲ್ಲಿ ಜಗಳದ ಕಾರಣದಿಂದಾಗಿ ಮನಸ್ಸಿಗೆ ಕ್ಲೇಶ. ಮಕ್ಕಳಿಂದಾಗೆ ಆಯಾಸ ಬಾಧೆ. ಇಷ್ಟವಾದ ವಸ್ತುಗಳನ್ನು ಖರೀದಿಸುವ ವಾರ.
 ಮಿಥುನ – ಮನಸ್ಸಿಗೆ ವ್ಯಾಕುಲತೆ, ಶರೀರಾಲಾಸ್ಯವು ಆದರೂ ಮಧ್ಯರ್ಧಾದಲ್ಲಿ ಶರೀರ ಸೌಖ್ಯ, ಆರೋಗ್ಯ, ಸಂತೋಷವು, ಬಂಧು-ಸ್ನೇಹಿತರ ಕೂಡಿ ಮೃಷ್ಟಾನ್ನ ಭೋಜನ. ಮಕ್ಕಳಿಗಾಗಿ ಖರ್ಚು ಮಾಡುವಿರಿ. ಬಹುದಿನಗಳಿಂದ ಯೋಚಿಸುತ್ತಿದ್ದ ನಿಮ್ಮ ಇಷ್ಟದ ವಸ್ತುವನ್ನು  ಖರೀದಿ ಮಾಡುವಿರಿ. ಕುಲದೇವತಾ ಆರಾಧನೆ ಅಥವಾ ದರ್ಶನ, ಅಂದು ಕೊಂಡ ಕಾರ್ಯಸಿದ್ಧಿ, ಮರೆವು ಹೆಚ್ಚುವುದು. ರಾಜ ಕೋಪದ ಭಯವು ಕಾಡುವುದು.
 ಕಟಕ – ಪೂರ್ವಾರ್ಧದಲ್ಲಿ ಮನಸ್ಸಿಗೆ ನೆಮ್ಮದಿ, ಸುಖ. ಮನೆಯಲ್ಲಿ ತನಗಿಷ್ಟವಾದ ಭೋಜನ ಸುಖ, ಮಧ್ಯಬಾಗದಲ್ಲಿ ತನ್ನ ಸ್ವಂತ ಬುದ್ಧಿಯ ಪ್ರಕಾರವಾಗಿ ನಡೆದು ಕೊಳ್ಳುವಿರಿ. ಬಂಧುಗಳಿಂದ/ಸ್ನೇಹಿತರಿಂದ ಹೊಗಳಿಸಿಕೊಳ್ಳುವಿರಿ. ಸ್ತ್ರೀಯರ ಜೊತೆಗೆ ಸಂಭ್ರಮದ ಮಾತುಗಳು. ಮಕ್ಕಳ ವಿದ್ಯೆಗೆ ಸಂಬಂಧಿಸಿದ  ಭೌದ್ಧಿಕ ಮಾತುಗಳನ್ನು ಆಡುವಿರಿ. ಕುಂಟುಂಬದಲ್ಲಿ ಹೊಸ ವ್ಯಾಪಾರದ ಆಲೋಚನೆಯಲ್ಲಿ ತೊಡಗುವಿರಿ. ಉತ್ತರಾರ್ಧದಲ್ಲಿ ಧನ ವ್ಯಯ ಹಾಗು ಮನಸ್ಸಿಗೆ ಕ್ಲೇಶ
 ಸಿಂಹ – ಪೂರ್ವಾರ್ಧದಲ್ಲಿ ಆಲೋಚಿಸಿದ ಕಾರ್ಯಸಿದ್ಧಿ ಪ್ರಯತ್ನಿಸಿದ ಕಾರ್ಯಗಳು ಕೈಗೂಡುವುದು. ವೃತ್ತಿ ಅಥವಾ ವ್ಯಾಪಾರದಲ್ಲಿ ಸಂತೋಷದ ವಾತಾವರಣ. ಸೇವೆಯಲ್ಲಿ ಇದ್ದವರಿಗೆ ಹೊಸ ಕಾರ್ಯಗಳು ವ್ಯಾಪಾರದಲ್ಲಿ ಇದ್ದವರಿಗೆ ಹೊಸ ಆರ್ಡರ್ ಗಳು ಬರುವುದು. ಎದೆ ಅಥವಾ ಹೊಟ್ಟೆಯ ಭಾಗದಲ್ಲಿ ಉರಿ ಕಾಣಿಸಬಹುದು. ಅತಿಯಾದ ತಿರುಗಾಟದಿಂದ ಉಸಿರಾಟದ ಸಮಸ್ಯೆ.
 ಕನ್ಯಾ – ಪೂರ್ವಾರ್ಧದಲ್ಲಿ ಹೊರಗಿನ ಒತ್ತಡದಿಂದ ಮಕ್ಕಳ ಕಡೆಗೆ ಗಮನ ಕಡಿಮೆ ಕೊಡುವಿರಿ. ಅತೀವ ಕೆಲಸ ಕಾರ್ಯಗಳಿಂದ ಕೂಡಿರುವ ವಾರ ಹಾಗೂ ಉದ್ಯೋಗಸ್ತರಿಗೆ ಮೇಲಧಿಕಾರಿಗಳ ನೀರೀಕ್ಷೆಯಂತೆ ಕೆಲಸ ಮಾಡುವಲ್ಲಿ ವಿಫಲವಾಗಬಹುದು. ಉತ್ತರಾರ್ಧದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವ ವಾರವಾದರೂ, ನಿದ್ರಾಹಿನತೆಯಿಂದ ಕಣ್ಣಿನ ಬೇನೆ ಜಾಸ್ತಿಯಾಗುವುದು. ಪಿತೃವಿಗೆ ಆನಾರೋಗ್ಯ ಅಥವಾ ಪಿತೃವಿಗೆ ವೃತ ಪ್ರಯಾಣ.
 ತುಲಾ – ಅಜೀರ್ಣವ್ಯಾಧಿಯಿಂದ ಬಾಧೆ, ಗಂಡ/ಹೆಂಡತಿಯ ಕುಂಟುಂಬದಿಂದ ಸುದ್ದಿ. ವಸ್ತುಗಳು ಹಾನಿಯಾಗಬಹುದು. ಬಹು ದಿನಗಳಿಂದ ಯೋಚಿಸುತ್ತಿದ್ದ ಪ್ರಯಾಣಗಳು ಕೈಗೂಡುವುದು. ಕುಂಟುಂಬದಲ್ಲಿ ಮಧುರವಾದ ಬಾಂಧವ್ಯ. ಹಣವನ್ನು ಜಾಗರೂಕತೆಯಿಂದ ನಿಭಾಯಿಸಿ. ಖರ್ಚುಗಳು ಹೆಚ್ಚುವುದು. ಜ್ಞಾನಾರ್ಜನೆಯ ಸಮಯ. ಉತ್ತರಾರ್ಧದಲ್ಲಿ ಉದ್ಯೋಗ ಅಥವಾ ವ್ಯಾಪಾರ ಸ್ಥಳದಲ್ಲಿ ಬೇಸರ. ಬಹು ದಿವಸಗಳಿಂದ ಚಿಂತಿಸುತ್ತಿದ್ದ ಹೂಡಿಕೆ ಅಥವಾ ಹೊಸ ವ್ಯಾಪಾರದ ಚಾಲನೆ ಮಾಡಬಹುದು.
 ವೃಶ್ಚಿಕ – ಪೂರ್ವಾರ್ಧದಲ್ಲಿ ಮನಸ್ಸಿಗೆ ನೆಮ್ಮದಿ, ಯಶಸ್ಸು ವೃದ್ದಿ. ಧನಾರ್ಜನೆ, ರಾಜ ದರ್ಶನ, ರಾಜ ಸಂಭಾಷಣೆ. ಬಂಧು-ಮಿತ್ರರ ಜೊತೆಗೆ ಪ್ರೀತಿ ವಿಶ್ವಾಸದಿಂದಿರುವುದು. ಆದರೆ ಸೋಮಾರಿತನದಿಂದ ಅವಕಾಶಗಳನ್ನು ಕಳೆದುಕೊಳ್ಳವಿರಿ. ದ್ವಂದ ನಿಲುವುಗಳ ವಾರ. ಗುರುಹಿರಿಯರನ್ನು ಭೇಟಿಮಾಡುವಿರಿ ಕಳ್ಳರ ಭಯ ಅಥವಾ ತಮ್ಮೊಳಗೆ ಮಹಾಭಯವಿರುವುದರಿಂದ ಹನುಮನ ಪ್ರಾರ್ಥನೆಯಿಂದ ಒಳಿತಾಗುವುದು.
 ಧನಸ್ಸು – ಉದ್ಯೋಗದಲ್ಲಿ ವ್ಯಾಪಾರದಲ್ಲಿ ಹೆಚ್ಚಿನ ಲಾಭಗಳಿಸುವ ವಾರ ಅಥವಾ ಮುಂದಿನ ಭವಿಷ್ಯಕ್ಕೆ ಉತ್ತಮ ಅಡಿಪಾಯ ಬೀಳುವ ವಾರ. ಉತ್ತರಾರ್ಧದಲ್ಲಿ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತೇಜೋಭಿವೃದ್ಧಿ, ಕೀರ್ತಿ, ಇಷ್ಟಕಾರ್ಯಸಿದ್ಧಿ, ಕ್ಷೀರಾನ್ನ ಭೋಜನದ ವಾರ. ಅವಶ್ಯಕತೆ ಇರುವ ವಸ್ತುಗಳನ್ನು ಕೊಳ್ಳಿ. ಅನವಶ್ಯಕ ಅಥವಾ ಉಪಯೋಗಿಸದ ವಸ್ತುಗಳನ್ನು ಮಾರಿಬಿಡಿ. ಜೀವನವು ಆಮೆಗತಿಯಲ್ಲಿ ಸಾಗುತ್ತಿರುವ ಅನುಭವವು ಇಲ್ಲೂ ಮುಂದುವರೆಯುವುದು.

 

 ಮಕರ – ಪೂರ್ವಾರ್ಧದಲ್ಲಿ ವಾತ ಭಾದೆ, ಸದಾ ಸೋಮಾರಿತನ, ಮನಸ್ಸಿಗೆ ವ್ಯಥೆಯಾದರೂ ಸ್ಥಾನ ಭದ್ರತೆ ಇರುವುದು. ದೇಹಾರೋಗ್ಯವು, ಧನಲಾಭವು, ಯಶಸ್ಸು ವೃದ್ಧಿಯಾಗುವುದು. ಸ್ತ್ರೀಯರ ಜೊತೆಗೆ ಮಾತುಕತೆ ಧರ್ಮಕಾರ್ಯ ನೆರವೇರುವುದು. ವೃತಾ ವಾದಗಳು, ಇತರರಿಂದ ಅಸತ್ಯ ಮಾತುಗಳನ್ನು ಕೇಳುವಿರಿ. ಕೆಲಸದ ಒತ್ತಡಗಳಿಂದ ವಿರಾಮ ಬಯಸುವಿರಿ.
 ಕುಂಭ – ವಿಪರೀತ ಬುದ್ಧಿಯಿಂದ ಬಂಧು-ಇಷ್ಟರ ಜೊತೆಗೆ ವೈರತ್ವ. ಚಂಚಲ ಬುದ್ಧಿಯು, ಕಾರ್ಯ ವಿಕಲ್ಪವಾಗುವುದು. ನಿಮ್ಮ ನೆರೆಹೊರೆಯವರ ಜೊತೆಗೆ ದ್ವೇಷ. ಸೋದರ ಮಾವನಿಗೆ ಅನಾರೋಗ್ಯ ಅಥವಾ ವೈಮನಸ್ಸು. ಅತಿಯಾದ ಹುಂಬತನದಿಂದ ಮೇಲಾಧಿಕಾರಿಗಳ/ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವಿರಿ. ತೆರಿಗೆ ವಿಷಯದಲ್ಲಿ ಸ್ವಲ್ಪ ಗೊಂದಲವಿದ್ದು ಸರಿಪಡಿಸಿಕೊಳ್ಳಿ.
 ಮೀನ – ಪೂರ್ವಾರ್ಧದಲ್ಲಿ ಧನಾರ್ಜನೆಯಾಗುವುದು. ವಸ್ತ್ರಲಾಭವು, ಮನಸ್ಸಿಗೆ ಸೌಖ್ಯವು, ಧೈರ್ಯವು, ಇಷ್ಟ ಸಲ್ಲಾಪದ ಮಾತುಕತೆ. ಬಂಧು-ಮಿತ್ರರ ಸಮಾಗಮ. ಉತ್ತರಾರ್ಧದಲ್ಲಿ ಮಕ್ಕಳ ಅನಾರೋಗ್ಯ ವಿಷಯವಾಗಿ ಖರ್ಚು. ಚಿಂತಿಸಿದ ಕಾರ್ಯ ಸಫಲತೆ. ಶಾರೀರಿಕ ಸೌಖ್ಯ, ವಸ್ತ್ರಲಾಭವಿರುವುದು. ಬಹುದಿವಸದಿಂದ ಆಲೋಚನೆಯಲ್ಲಿದ್ದ ಪ್ರಯಾಣಕ್ಕೆ(ವಿದೇಶ) ಸೂಕ್ತ ಸಮಯ. ಇಲ್ಲವೇ ಅದಕ್ಕೆ ಅಡಿಪಾಯ ಬೀಳುವ ವಾರ.

 

 ಶುಕ್ರನು ಸ್ವಕ್ಷೇತ್ರವಾದ ತುಲಾರಾಶಿಗೆ ಪ್ರವೇಶವಾದ ಕಾರಣ

  • ಹೊಸ ಸಿನಿಮಾ ಘೋಷಣೆ ಮಾಡಲು ಅಥವಾ ರಿಲೀಸ್ ಮಾಡಲು ಉತ್ತಮ ಮಾಸ.
  • ವಿಜ್ಞಾನದ ಕಾಲ್ಪನಿಕ ಸಿನಿಮಾಗಳು ಘೋಷಣೆ ಮಾಡಲು ಉತ್ತಮ ಸಮಯ.
  • ಮುಂದಿನ 1 1/2 ತಿಂಗಳಲ್ಲಿ ದೊಡ್ಡ ಬಜೆಟ್ ಸಿನಮಾ ಘೋಷಣೆಯಾಗುವ ಸಾಧ್ಯತೆ ಹೆಚ್ಚು.
  • ಧರ್ಮ ರಕ್ಷಣೆಗೆ ಪಣತೊಟ್ಟಿರುವವರ ಸ್ವಯಂಕೃತ ಅಪರಾಧರಿಂದ ಇಕ್ಕಟ್ಟಿಗೆ ಸಿಲುಕುವ ವಾರ.
  • ಗಣ್ಯ ವ್ಯಕ್ತಿಗಳಿಗೆ ತೊಂದರೆ.(ಘನತೆ, ಆರೋಗ್ಯ, ನಷ್ಟ)

 ಜ್ಯೋತಿಷ  – ರವೀ. ಕೃ., ಬೆಂ.

 

Tags

Related Articles