ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

‘ಬಿಳಿಹೆಂಡ್ತಿ’ಯ ಜೊತೆಗೆ ‘ಗಾಳಿಪಟ’ ಹಾರಿಸುತ್ತಿರುವ ಕಿರುತೆರೆಯ ‘ಕಣ್ಮಣಿ’

ಗಾಳಿಪಟ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ನಂದೀಶರಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು. ನಟನಾ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ ನಂದೀಶ ವಿಲನ್ ಆಗಿ ಕಿರುತೆರೆಗೆ ಪರಿಚಿತರಾದವರು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನುಮದ ಜೋಡಿ ಧಾರಾವಾಹಿಯಲ್ಲಿ ದುಷ್ಯಂತ್ ಆಗಿ ಅಭಿನಯಿಸಿರುವ ನಂದೀಶ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೀಲಿ ಧಾರಾವಾಹಿಯ ಅಜಿತ್ ಪಾತ್ರದಲ್ಲೂ ಮಿಂಚಿದ್ದಾರೆ. ಏಕಕಾಲದಲ್ಲಿ ಎರಡೆರಡು ಧಾರಾವಾಹಿಗಳಲ್ಲಿ ನಂದೀಶ ಅವರು ನಟಿಸುತ್ತಿದ್ದರೂ ಪಾತ್ರ ಮಾತ್ರ ಒಂದೇ! ಎರಡೂ ಧಾರಾವಾಹಿಗಳಲ್ಲಿ ವಿಲನ್ ಪಾತ್ರದ ಮೂಲಕ ವೀಕ್ಷಕರ ಮನೆಗೆ ಲಗ್ಗೆ ಇಟ್ಡಿದ್ದಾರೆ ನಂದೀಶ.

ಈಗಾಗಲೇ ಬೆಳ್ಳಿ ಕಾಲುಂಗುರ, ಮನೇದೇವ್ರು ಧಾರಾವಾಹಿಗಳಲ್ಲಿ ನಂದೀಶ್ ಅವರು ಅಭಿನಯಿಸಿದ್ದರೂ ಜನ ಇಂದು ಅಜಿತ್ ಮತ್ತು ದುಷ್ಯಂತ್ ಪಾತ್ರಗಳನ್ನು ಇಷ್ಟಪಟ್ಟಿದ್ದಾರೆ. ಕಿರುತೆರೆಯ “ಹ್ಯಾಂಡ್ ಸಮ್ ವಿಲನ್ ” ಎಂದೇ ಗುರುತಿಸಲ್ಪಡುವ ನಂದೀಶರ ಅಜಿತ್ ಪಾತ್ರಕ್ಕೆ ಬಹಳಷ್ಟು ಅಭಿಮಾನಿಗಳಿದ್ದಾರೆ.

ವಿಲನ್ ಆಗಿ ಪ್ರೇಕ್ಷಕರ ಮನಗೆದ್ದಿರುವ ನಂದೀಶರಿಗೆ ಸ್ವಭಾವತಃ ನೆಗೆಟಿವ್ ಪಾತ್ರಗಳೆಂದರೆ ಇಷ್ಟವಂತೆ. “ ನೆಗೆಟಿವ್ ಪಾತ್ರದಲ್ಲಿ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಮಾತ್ರವಲ್ಲ ಹೆಚ್ಚಾಗಿ ಜನರ ಗಮನ ಸೆಳೆಯುವುದು ಕೂಡಾ ನೆಗೆಟಿವ್ ಪಾತ್ರಗಳೇ. ಹಾಗಾಗಿ ಬಹುಬೇಗನೇ ಜನರ ಮನದಲ್ಲಿ ಸ್ಥಾನಗಿಟ್ಟಿಸಿಕೊಳ್ಳಬಹುದು ‘’ ಎನ್ನುತ್ತಾರೆ ನಂದೀಶ.

ಯಾವುದಾದರೂ ಚಾಲೆಂಜಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲವಿರುವ ನಂದೀಶ ಅವರಿಗೆ ಹುಚ್ಚ, ಮೆಂಟಲ್, ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸುವಾಸೆ. ಅಭಿನಯಿಸುವ ಪಾತ್ರಗಳು ಜನರ ಮನಸ್ಸಿನಲ್ಲಿ ಅಚ್ಚುಳಿಯಬೇಕು. ಹಾಗಿದ್ದಾಗ ನಾವು ನಟಿಸಿದ್ದು ಸಾರ್ಥಕವೆನಿಸುತ್ತದೆ ಎಂಬುದು ನಂದೀಶ್ ಅಭಿಪ್ರಾಯ.

ನಟನೆಯಲ್ಲಿ ಮುಂದುವರಿಯಬೇಕೆಂಬ ಹಂಬಲವಿರುವ ನಂದೀಶ್ ಅವರು ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಅಂಧಗಾರ ಚಿತ್ರದಲ್ಲಿ ನಂದೀಶ್ ಅವರು ಕುರುಡರಾಗಿ ಕಾಣಿಸಿಕೊಂಡಿದ್ದಾರೆ. “ನಟನೆ ಎಂದರೆ ನನ್ನ ಪ್ರಾಣ. ತುಂಬಾ ಪ್ರೀತಿ. ಅಭಿನಯವನ್ನ ನಾನು ಅದೆಷ್ಟು ಪ್ರೀತಿಸುತ್ತೇನೋ ಅಷ್ಟೇ ಗೌರವಿಸುತ್ತೇನೆ. ಪ್ರತಿಕ್ಷಣವೂ ನಾನು ನಟನೆಯ ಬಗ್ಗೆಯೇ ಆಲೋಚಿಸುತ್ತಿರುತ್ತೇನೆ” ಎನ್ನುವ ನಂದೀಶ್ ಅವರು ಮನೆಯವರ ವಿರೋಧದ ನಡುವೆಯೂ ಬಣ್ಣದ ಲೋಕಕ್ಕೆ ಕಾಲಿಟ್ಟವರು.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಣ್ಮಣಿ ಧಾರಾವಾಹಿಯಲ್ಲಿ ಕಿಶನ್ ಪಾತ್ರಧಾರಿಯಾಗಿ ಗಮನ ಸೆಳೆದಿದ್ದ ನಂದೀಶ್ ಅವರು ಸದ್ಯ ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಳಿ ಹೆಂಡ್ತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸದ್ಯ ತಮ್ಮ ಇಷ್ಟದ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಂದೀಶರ ಕಲಾ ಪಯಣಕ್ಕೆ ನಮ್ಮ ಬಾಲ್ಕನಿ ನ್ಯೂಸ್ ಆಲ್ ದಿ ಬೆಸ್ಟ್ ಹೇಳುತ್ತದೆ.

ಅನಿತಾ ಬನಾರಿ

Image result for bili hendthi kannada serial

 

 

ನೆಗೆಟಿವ್ ರೋಲ್ ನಲ್ಲಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ ಶರ್ಮಿತಾ ಗೌಡ

#balkaninews #serilactor #bilihendtikannadaserial #kannadamovies #bilihendtiserialactonandeesh

Tags