ಬಾಲ್ಕನಿಯಿಂದವಿಡಿಯೋಗಳು

‘ಬಿಂದಾಸ್ ಗೂಗ್ಲಿ’ ಚಿತ್ರದ ಮೇಕಿಂಗ್ ವಿಡಿಯೋ

ವಿಜಯ್ ಕುಮಾರ್ ಸ್ಟಾರ್ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ,ಕುಂದಾನಗರಿ ಬೆಳಗಾವಿ ಮೂಲದ ನಿರ್ಮಾಪಕ ವಿಜಯ್ ಅಣ್ವೇಕರ್ ಅವರು ‘ಬಿಂದಾಸ್ ಗೂಗ್ಲಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ‘ಸ್ಟೂಡೆಂಟ್ಸ್’ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಸಂತೋಷ್​ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ಇಡೀ ಸಿನಿಮಾ ಸಾಗುವುದು ಡಾನ್ಸ್ ರಿಯಾಲಿಟಿ ಶೋ ರೀತಿಯಲ್ಲಿ. ಕಾಲೇಜು, ತುಂಟಾಟ, ಪ್ರೀತಿ-ಪ್ರೇಮದ ತೊಳಲಾಟ, ಕೊನೆಗೊಂದಿಷ್ಟು ಗಟ್ಟಿ ಸಂದೇಶ ಸಾರುವ ಹೂರಣವೇ ಚಿತ್ರದ ಜೀವಾಳ’ ಎನ್ನುತ್ತದೆ ಚಿತ್ರತಂಡ.

ಬಿಂದಾಸ್ ಗೂಗ್ಲಿ ಚಿತ್ರದ ಮೂಲಕ ನಿರ್ಮಾಪಕ ವಿಜಯ್ ಅಣ್ವೇಕರ್ ಅವರ ಪುತ್ರ  ಆಕಾಶ್  ನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಮಾಡುತ್ತಿದ್ದಾರೆ.

ಇನ್ನು ಚಿತ್ರದಲ್ಲಿ ನಾಯಕನಷ್ಟೇ ಮಹತ್ವದ ಪಾತ್ರವಾದ ನೃತ್ಯ ತರಬೇತು ಪಾತ್ರಧಾರಿಯಾಗಿ ನಟ ಧರ್ಮ ಕೀರ್ತಿರಾಜ್ ನಿಭಾಯಿಸಿದ್ದಾರೆ. ಚಿತ್ರಕ್ಕೆ ಮಮತಾ ರಾಹುತ್, ನಿಮಿತಾ ರತ್ನಾಕರ್,  ಶಿಲ್ಪಾ, , ಶೃತಿ ರಾಮಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದು, ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವಿನು ಮನಸು ಸಂಗೀತ, ಸುಜಿ, ಹೈಟ್ ಮಂಜು ಕೋರಿಯೋಗ್ರಫಿ ಮಾಡಿದ್ದಾರೆ.

Tags