ಬಾಲ್ಕನಿಯಿಂದವಿಡಿಯೋಗಳು

‘ಬಿಂದಾಸ್ ಗೂಗ್ಲಿ’ ಚಿತ್ರಕ್ಕೆ ಖ್ಯಾತ ಕಲಾವಿದರುಗಳಿಂದ ಶುಭಾಶಯ

ವಿಜಯ್ ಕುಮಾರ್ ಸ್ಟಾರ್ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ, ಕುಂದಾನಗರಿ ಬೆಳಗಾವಿ ಮೂಲದ ನಿರ್ಮಾಪಕ ವಿಜಯ್ ಅಣ್ವೇಕರ್ ಅವರು ‘ಬಿಂದಾಸ್ ಗೂಗ್ಲಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ‘ಸ್ಟೂಡೆಂಟ್ಸ್’ ಎಂಬ ಸಿನಿಮಾ ಮಾಡಿದ್ದ ನಿರ್ದೇಶಕ ಸಂತೋಷ್​ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಾಗೂ ಈ ಚಿತ್ರದ ಮೂಲಕ ಮೂಲಕ ನಿರ್ಮಾಪಕ ವಿಜಯ್ ಅಣ್ವೇಕರ್ ಅವರ ಪುತ್ರ  ಆಕಾಶ್  ನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಮಾಡುತ್ತಿದ್ದಾರೆ.

ಈಗಾಗಲೇ ಈ ಚಿತ್ರತಂಡಕ್ಕೆ ಕನ್ನಡದ ಕಲಾವಿದರುಗಳಾದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪ್ರಥಮ್, ಗುರುನಂದನ್, ದೊಡ್ಡಣ್ಣ, ವಸಿಷ್ಠ ಸಿಂಹ, ಶ್ರೀನಿವಾಸ್ ಪ್ರಭು, ಶಿವರಾಮಣ್ಣ, ಅಂಬರೀಶ್ , ಮನೋರಂಜನ್, ಆಶಿಕಾ ರಂಗನಾಥ್, , ತಾರಾ, ಬಾಲಾಜಿ.. ಸೇರಿದಂತೆ ಅನೇಕರು ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

ಚಿತ್ರದಲ್ಲಿ ನವ ನಟ ಆಕಾಶ್,  ಮಮತಾ ರಾಹುತ್, ನಿಮಿತಾ ರತ್ನಾಕರ್,  ಶಿಲ್ಪಾ, ಶೃತಿ ರಾಮಕೃಷ್ಣ ಸೇರಿದಂತೆ ಅನೇಕರು ಅಭಿನಯಿಸಿದ್ದು, ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವಿನು ಮನಸು ಸಂಗೀತ, ಸುಜಿ, ಹೈಟ್ ಮಂಜು ಕೋರಿಯೋಗ್ರಫಿ ಮಾಡಿದ್ದಾರೆ.

 

 

Tags