ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನ ಭವಿಷ್ಯ: 04 ನವೆಂಬರ್ 2019

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

ಮೇಷ

ವ್ಯವಹಾರ ನಿಮಿತ್ತ ಮಾಡಲಿರುವ ಪ್ರಯಾಣ ಲಾಭದಾಯಕವಾಗಲಿದೆ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಬಂಧುಗಳೊಡನೆ ಅನಾವಶ್ಯಕ ವಾಗ್ವಾದ ಬೇಡ.

ಆದಾಯದ ಮೂಲಗಳು ಹೆಚ್ಚಲಿವೆ. ಅಂತೆಯೇ ಖರ್ಚಿನ ದಾರಿಯು ಅಧಿಕವಾಗಿದೆ. ಕಾರ್ಯಭಾರವನ್ನು ತುಸು ಕಡಿಮೆ ಮಾಡಿಕೊಳ್ಳಿ. ಅತಿ ಕಾರ್ಯಭಾರವು ಅನಾರೋಗ್ಯಕ್ಕೆ ಕಾರಣವಾಗುವುದು. ಅನಿರೀಕ್ಷಿತ ಪ್ರಯಾಣದಿಂದಾಗಿ ಕುಲದೇವತಾ ದರ್ಶನವಾಗುವುದು. ಹಳೆಯ ಸ್ನೇಹಿತರಿಂದ ಸಕಾಲಿಕ ನೆರವು ದೊರೆಯಲಿದೆ.

ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಈ ಮುಂಚೆ ಬರೆದ ಪರೀಕ್ಷೆಯ ಫಲಿತಾಂಶವು ಬರುವ ಸಾಧ್ಯತೆ ಇರುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು, ಮನಸ್ಸಿನ ಶಾಂತಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.

ಅದೃಷ್ಟ ಸಂಖ್ಯೆ:2

 

ವೃಷಭ

ಶ್ರಮದಲ್ಲಿಯೇ ಹಿತ ಕಾಣುವ ನಿಮಗೆ ಯಶಸ್ಸು ನಿಶ್ಚಿತ. ಮತ್ತು ಅದರ ಫಲವನ್ನು ಶೀಘ್ರದಲ್ಲಿಯೇ ಕಂಡುಕೊಳ್ಳುವಿರಿ. ಕೆಲವೊಮ್ಮೆ ನಿಮ್ಮ ಅತಿಯಾದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುವುದು. ಕುಟುಂಬದಲ್ಲಿ ಒಮ್ಮತ ಮೂಡುವುದು.

ಮನೆಯಲ್ಲಿ ಬಹಳ ದಿನಗಳ ಮೇಲೆ ಸಂತಸದ ವಾತಾವರಣ ಮೂಡಿ ಬರಲಿದೆ. ಮಂಗಳ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ. ಬಂಧುಗಳೊಡನೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆಯಲಿದೆ.

ಬರಲಿರುವ ಸಮಸ್ಯೆಗಳನ್ನು ಸಾವಧಾನ ಚಿತ್ತದಿಂದ ಎದುರಿಸಿ. ಗಾಬರಿಯಿಂದ ಗೊಂದಲ ಮಾಡಿಕೊಂಡಲ್ಲಿ ಸಮಸ್ಯೆಗಳು ಬೆಳೆಯುತ್ತಾ ಹೋಗಬಹುದೇ ವಿನಃ ಪರಿಹಾರವಾಗಲಾರವು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು.

ಅದೃಷ್ಟ ಸಂಖ್ಯೆ:1

ಮಿಥುನ

ಸಮಾಜದ ಸೇವೆ ನಿಮ್ಮಿಂದ ವಿಶೇಷವಾಗಿ ನಡೆದು ಸಮಾಜದಲ್ಲಿ ಮನ್ನಣೆಗಳಿಸುವಿರಿ. ಅನೇಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಬೇಕಾಗುವುದು.

ಸರ್ಕಾರದಿಂದ ಬರಬೇಕಾಗಿದ್ದ ಧನ ಸಹಾಯ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ. ವೈಯಕ್ತಿಕ ಕೆಲಸಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ನೌಕರಿ ಬದಲಾವಣೆ ಸಧ್ಯಕ್ಕೆ ಬೇಡವೇ ಬೇಡ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಆಂಜನೇಯ ಸ್ಮರಣೆ ಮಾಡಿ. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಕಂಡು ಬರುವುದು. ತಂದೆಯಿಂದ ಬಂದ ಬಳುವಳಿಯಾದ ಕುಲಕಸುಬನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಹೋಗಬೇಡಿ. ಆದಾಯಕ್ಕೆ ಸದ್ಯಕ್ಕೆ ಕತ್ತರಿ ಬಿದ್ದರೂ ಮುಂದಿನ ದಿನಗಳಲ್ಲಿ ಒಳಿತಾಗುವುದು. ಹಿರಿಯರ ಸಕಾಲಿಕ ಎಚ್ಚರಿಕೆಯ ಮಾತುಗಳು ನಿಮಗೆ ದಾರಿದೀಪವಾಗುವುದು.

ಅದೃಷ್ಟ ಸಂಖ್ಯೆ:2

ಕಟಕ

ಹಲವು ಸನ್ನಿವೇಶಗಳಿಂದಾಗಿ ಮಾನಸಿಕ ಚಂಚಲತೆ ಕಾಡುವುದು. ಸಂಬಂಧಪಡದ ಭೂವಿವಾದದ ಒತ್ತಡದಿಂದಾಗಿ ಬಳಲಿಕೆ ಉಂಟಾಗುವುದು. ಗುರು-ಹಿರಿಯರ ಸಲಹೆಯನ್ನು ಸ್ವೀಕರಿಸಿ.

ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಉದ್ಯೋಗಕ್ಕೆ ಸಂಬಂಧಪಟ್ಟಂತೆ ಲಾಭಗಳು ಹೆಚ್ಚಿದಷ್ಟೇ ಕಾರ್ಯ ಒತ್ತಡಗಳು ನಿಮ್ಮ ಮೇಲೆ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಶಾಂತಚಿತ್ತತೆ ಕಾಪಾಡಿಕೊಳ್ಳಿ. ಪ್ರಸಂಗ ಬಂದಲ್ಲಿ ಸ್ನೇಹಿತರ ಸಲಹೆ ಸಹಾಯ ಪಡೆಯಿರಿ.

ಎಲ್ಲವನ್ನೂ ನಿಭಾಯಿಸಬಲ್ಲೆನೆಂಬ ಅತಿಯಾದ ಆತ್ಮವಿಶ್ವಾಸ ಬೇಡ. ಮಕ್ಕಳು ತಮ್ಮ ನಡವಳಿಕೆಯಿಂದ ಹಿರಿಯರಿಗೆ ಮುಜುಗರವನ್ನುಂಟು ಮಾಡುವರು. ಕಾರ್ಯ ಒತ್ತಡದ ನಡುವೆಯೂ ಪರರಿಗೆ ಉಪಕಾರವನ್ನು ಮಾಡುವಿರಿ.

ಅದೃಷ್ಟ ಸಂಖ್ಯೆ:4

ಸಿಂಹ

ನೀವು ಸರ್ಕಾರಿ ಕೆಲಸಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು.

ಅವರಿವರ ಮಾತುಗಳಿಗೆ ಕಿವಿಗೊಡದಿರಿ.ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ.

ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು.
ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಏಕಾಂತದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.

ಅದೃಷ್ಟ ಸಂಖ್ಯೆ:5

ಕನ್ಯಾ

ನಿಮ್ಮ ಮಾತಿಗೂ ಕೃತಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿ. ಬೆನ್ನು ನೋವು ಅಥವಾ ಮಂಡಿನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಆಸ್ತಿ. ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ನಿಮಗೆ ಮುದವನ್ನುಂಟು ಮಾಡುವುದು.

ಅದೃಷ್ಟ ಸಂಖ್ಯೆ:6

ತುಲಾ

ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಗೌರವ ಆದರಗಳು ದೊರೆಯುವುದು. ಈ ವಿಚಾರವು ನಿಮ್ಮ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು.

ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಧರ್ಮ, ನ್ಯಾಯ ಹಾಗೂ ಸತ್ಯಗಳನ್ನು ರಕ್ಷಿಸುವುದೇ ನಿಮ್ಮ ಮೊದಲನೆಯ ಆದ್ಯತೆ ಆಗಿರುವುದು. ಹಾಗಿದ್ದರೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲಸದಿಂದ ದೂರ ಸರಿಯುವರು.

ಗುರು ಮಂತ್ರ ಪಠಿಸಿ. ನಿಮ್ಮ ಸೇವೆಯ ರೀತಿ ನೀತಿಗಳಿಂದ ಪ್ರಭಾವಿತರಾದ ಜನರು ನಿಮ್ಮನ್ನೆ ಮುಂದಿನ ಮುಖಂಡನಾಗಬೇಕೆಂದು ಪ್ರಾರ್ಥಿಸುವರು. ಇದು ಶುಭ ಸಮಾಚಾರವೇ ಆದರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿವುಂಟಾಗುವುದು.

ಅದೃಷ್ಟ ಸಂಖ್ಯೆ:4

ವೃಶ್ಚಿಕ

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

ವ್ಯರ್ಥವಾದ ಪ್ರಯತ್ನಗಳಿಂದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ತರವಲ್ಲ. ಹಣವನ್ನು ಆದಷ್ಟು ಕಡಿಮೆ ಖರ್ಚು ಮಾಡುವುದು ಒಳ್ಳೆಯದು.ನಿಮ್ಮ ಕೈ ಕೆಳಗಿನ ಕೆಲಸಗಾರರನ್ನು ಸಂತೋಷಪಡಿಸಿ.

ಆರ್ಥಿಕ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಗುರುಹಿರಿಯರ ಆಶೀರ್ವಾದ ಪಡೆಯಿರಿ. ಕುಲದೇವತಾ ಪ್ರಾರ್ಥನೆ ಮಾಡಿ.

ಅದೃಷ್ಟ ಸಂಖ್ಯೆ:5

ಧನುಸ್ಸು

ನಿಮ್ಮ ಎಲ್ಲಾ ಸಕರಾತ್ಮಕ ಚಿಂತನೆಗಳು ದೃಷ್ಟಿಕೋನ ಮತ್ತು ನಂಬಿಕೆ ಆತ್ಮವಿಶ್ವಾಸದಿಂದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿಸುವ ಸಾಧ್ಯತೆಗಳಿವೆ.

ನಿಮ್ಮ ಸೃಜನಶೀಲ ಉತ್ತಮವಾದ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ.

ಪ್ರೇಮಿಗಳು ತಮ್ಮ ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ಸಹೋದ್ಯೋಗಿಗಳು ನಿಮಗೆ ಕೆಲಸದಲ್ಲಿ ಕ್ರಿಯಾತ್ಮಕ ಮತ್ತು ಪ್ರಗತಿಪರ ಬದಲಾವಣೆಯನ್ನು ಪ್ರಾಕೃತಿಕವಾಗಿ ಹರಡಲು ಬೆಂಬಲಿಸುತ್ತಾರೆ.

ನೀವು ಚುರುಕಾದ ಜಾಣ್ಮೆಯ ಕ್ರಮವನ್ನು ಕೈಗೊಳ್ಳಲೂ ನಿಮ್ಮನ್ನು ನೀವು ಸಿದ್ಧಗೊಳಿಸಬೇಕಾದ ಅಗತ್ಯವಿದೆ. ಕೈಕೆಳಗಿನವರಿಗೆ ಪರಿಶ್ರಮ ಪಡುವಂತೆ ಪ್ರೇರೇಪಿಸುವುದು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

ಅನಕೂಲಕರವಾದ ಗ್ರಹಗಳು ಇಂದು ನೀವು ಸಂತೋಷ ಆನಂದ ಅನುಭವಿಸಲು ಬಹಳಷ್ಟು ಕಾರಣಗಳನ್ನು ತರುತ್ತವೆ. ನಿಮ್ಮ ವೈವಾಹಿಕ ಜೀವನ ಇಂದು ಮೋಜು, ಸಂತೋಷ, ಮತ್ತು ಆನಂದದ ಬಗೆಗಾಗಿರುತ್ತದೆ.

ಅದೃಷ್ಟ ಸಂಖ್ಯೆ:4

 

ಮಕರ

ಸಾಮಾಜಿಕವಾದ ಜೀವನಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ದೀರ್ಘ ಕಾಲ ಬಾಕಿಯಿದ್ದ ಖರ್ಚುಗಳು ಬಾಕಿಗಳು ಕೊನೆಗೂ ದೊರಕುತ್ತವೆ.

ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ಉತ್ತಮವಾಗಿ ತೆರೆದಿಡುತ್ತದೆ.

ಇಂದು ಪ್ರಣಯದ ಯಾವುದೇ ಆಸೆಯಿಲ್ಲ ನೀವು ಸ್ವಲ್ಪ ಕಾಲ ಒಬ್ಬಂಟಿಯಾಗಿದ್ದಂತೆ ತೋರುತ್ತದೆ. ಸಹೋದ್ಯೋಗಿಗಳು / ಸಹವರ್ತಿಗಳು ನಿಮ್ಮ ಸಹಾಯಕ್ಕೆ ಬರಬಹುದು. ಆದರೆ ಅವರು ಹೆಚ್ಚೇನೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.

ಅದೃಷ್ಟ ಸಂಖ್ಯೆ:5

ಕುಂಭ

ನೀವು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತೀದ್ದೀರಿ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಮನೋಉಲ್ಲಾಸ ನೀಡುವಂತಹ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು.

ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ನಿಮ್ಮ ಗೌಪ್ಯ ಮಾಹಿತಿಯನ್ನು ನಿಮ್ಮ ಸತಿಯ ಜೊತೆ ಹಂಚಿಕೊಳ್ಳುವುದಕ್ಕೂ ಮೊದಲು ಯೋಚಿಸಿ. ಅವಳು ಅದನ್ನು ಬೇರೆಯವರಿಗೆ ಹೇಳಬಹುದಾದ್ದರಿಂದ ಸಾಧ್ಯವಾದರೆ ಅದನ್ನು ತಪ್ಪಿಸಲು ಪ್ರಯತ್ನಿಸಿ.

ಪ್ರಣಯದ ಸಂದರ್ಭ ಸಂತೋಷಕರವೂ ಮತ್ತು ಅದ್ಭುತವೂ ಆಗಬಹುದು. ಯಾವುದೇ ಜಂಟಿ ಯೋಜನೆಯಲ್ಲಿ ಭಾಗವಹಿಸಬೇಡಿ.

ಅದೃಷ್ಟ ಸಂಖ್ಯೆ:4

ಮೀನ

ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು.

ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಅನೇಕ ರಕ್ಷ ಣಾವ್ಯೂಹಗಳನ್ನು ಹೆಣೆದು ಬಿಡಬೇಡಿ. ದೇವಿ ಆರಾಧನೆಯ ಜೊತೆಗೆ ಆಂಜನೇಯ ಸ್ತೋತ್ರವನ್ನು ಪಠಿಸಿ.

ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಅದೃಷ್ಟ ಸಂಖ್ಯೆ:1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ

ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

#dinabhavishya #daily-horoscope-kannada #astrology #astrology

Tags