ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ದಿನಭವಿಷ್ಯ: 02 ಡಿಸೆಂಬರ್ 2019 ಸೋಮವಾರ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

ಮೇಷ

ಅಜೀರ್ಣ ಅಥವಾ ವಾಯು ತೊಂದರೆ ಎದುರಾಗುವ ಸಾಧ್ಯತೆ ಇರುವುದು. ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆದುಕೊಳ್ಳಿ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ.  ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಟಿಲ ಸಮಸ್ಯೆಗಳು ಎದುರಾಗುವವು. ಭಗವಂತನ ಮೊರೆ ಹೋಗಿ. ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ವೃಷಭ

ನಿಮಗೆ ಸಂಬಂಧಪಡದ ವ್ಯಕ್ತಿಗಳು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಮೂಗು ತೂರಿಸುವುದರಿಂದ ಮುಜುಗರಕ್ಕೆ ಒಳಗಾಗುವಿರಿ. ಅಂತಹ ವ್ಯಕ್ತಿಗಳಿಗೆ ಕಠಿಣ ಪದಗಳನ್ನು ಉಪಯೋಗಿಸಿ ದೂರ ಇರಲು ತಿಳಿಸಿ. ಯಾರೇ ನಿಮ್ಮ ನಿಲುವನ್ನು ಟೀಕಿಸಲಿ, ತರ್ಕಪೂರ್ಣವಾಗಿದ್ದಲ್ಲಿ ನಿಮ್ಮ ಹೆಜ್ಜೆಯನ್ನು ಹಿಂದೆ ಇಡಲೇ ಬೇಡಿ.

ಮಿಥುನ

ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ನಿಮ್ಮ ವಿಚಾರದಲ್ಲಿ ಜನರು ತಿಳಿದುಕೊಂಡ ತಪ್ಪು ಗ್ರಹಿಕೆಗಳು ದೂರವಾಗಲು ಇಂದು ಶುಭದಿನವಾಗಿದೆ. ಹಾಗಾಗಿ ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವುದು. ನೂತನ ಕೆಲಸ ಮಾಡಲು ಹೊಸ ಉತ್ಸಾಹ ಮೂಡುವುದು.

ಕಟಕ

ಸಾಮಾಜಿಕವಾಗಿ ವಿಶೇಷವಾದುದನ್ನು ಸಾಧಿಸಿ ಪ್ರಶಂಸೆ ಗಳಿಸಲು ಗ್ರಹಗಳು ಸಹಕಾರ ನೀಡುವವು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ನೆರವು ವಿವಿಧ ಮೂಲಗಳಿಂದ ಬರುವುದು.  ಅವಸರದ ನಿರ್ಣಯ ತೆಗೆದುಕೊಂಡು ನಂತರ ಕೈ ಕೈ ಹಿಸುಕಿಕೊಳ್ಳುವ ಸಾಧ್ಯತೆ ಇದೆ.

ಸಿಂಹ

ಯಾವುದೇ ಕೆಲಸ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ.  ವಿವೇಕದ ಮಾತುಗಳನ್ನು ಆಡಿದಾಗಲೂ ಅಹಂಕಾರ ತೋರುವ ಜನರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಿ. ಇದರಿಂದ ನಿಮ್ಮ ಕಾರ್ಯ ಸಾಧುವಾಗುವುದು. ಹಣಕಾಸಿನ ಸ್ಥಿತಿ ಸದ್ಯಕ್ಕೆ ಉತ್ತಮವಾಗಿರುವುದಿಲ್ಲ.

ಕನ್ಯಾ

ವಿನಾಕಾರಣಕ್ಕೆ ನಿಮ್ಮ ಅಮೂಲ್ಯ ಸಮಯವನ್ನು ಹಾಳುಗೆಡಹುವ ಜನರು ನಿಮಗೆ ತಲೆನೋವು ತರುವ ಸಾಧ್ಯತೆ ಇದೆ. ಅವರನ್ನು ಜಾಣ್ಮೆಯಿಂದ ಸಾಗ ಹಾಕಿ. ಸಮಾಜದಲ್ಲಿ ನಿಮಗೆ ಗೌರವ, ಆದರಗಳು ದೊರೆಯುವವು. ಪ್ರವಾಸದ ವೇಳೆ ನಡೆಸಿದ ಮಾತುಕತೆಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ದೂರವಿಡಿ. ನಿಮ್ಮ ಬಹುದಿನದ ಬಯಕೆ ಈಡೇರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ನೀಡಿ.

ತುಲಾ

ವಾಯುಪ್ರಕೋಪ ಅಥವಾ ಮಿತಿ ಮೀರಿದ ಅಲರ್ಜಿ ತೊಂದರೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಊಟದಲ್ಲಿ ಆದಷ್ಟು ಶಿಸ್ತು ಕಾಪಾಡಿಕೊಳ್ಳಿ.  ಮಾತನಾಡುವುದು ಅನಿವಾರ್ಯ ಆದಾಗಲೂ ಮೌನವಾಗಿರಲು ಅಭ್ಯಾಸ ಮಾಡಿ. ಇದರಿಂದ ಸಾಕಷ್ಟು ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಕಡಿಮೆ ಆಗುವವು. ಪ್ರಯಾಣ ಕಾಲದಲ್ಲಿ ಎಚ್ಚರ ಅಗತ್ಯ.

ವೃಶ್ಚಿಕ

ದೂರದ ಬೆಟ್ಟ ನುಣ್ಣಗೆ ಎಂದು ತಿಳಿದಿದ್ದರೂ ಪುನಃ ಪುನಃ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡು ಸೋಲು ಅನುಭವಿಸುವಿರಿ. ಸದ್ಯಕ್ಕೆ ಈಗಿರುವ ಕೆಲಸವನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು.  ನಿಮ್ಮ ಬುದ್ಧಿಮತ್ತೆ ಬಗ್ಗೆ ಎಲ್ಲೆಡೆ ಚರ್ಚೆಯಾಗುವುದು.

ಧನುಸ್ಸು

ಪರರ ಮಾತುಗಳನ್ನು ಕೇಳಿ ಕ್ರಮ ಕೈಗೊಳ್ಳುವ ವಿಚಾರ ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಆದಷ್ಟು ಸ್ವತಂತ್ರ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮಕರ

ದೂರದ ಊರಿಗೆ ಪ್ರವಾಸ ಕಾರ್ಯಕ್ರಮ ನಿಶ್ಚಯವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಅದಕ್ಕೆ ಪೂರಕವಾಗಿ ಹಣಕಾಸು ಕೂಡಾ ಬರುವುದು. ಮಡದಿ ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯೂ ಇದೆ. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಅನ್ಯರು ಅಪಾರ್ಥ ತಿಳಿಯುವರು.

ಕುಂಭ

ನೀವು ಎಷ್ಟೇ ಚಾಣಾಕ್ಷತನದಿಂದ ವಾದವನ್ನು ಮಂಡಿಸಿದರೂ ಸುಳ್ಳನ್ನೇ ಸತ್ಯವೆಂದು ವಾದಿಸುವವರ ನಡುವೆ ನಿಮ್ಮ ವಾದ ಮಹತ್ವ ಕಳೆದುಕೊಳ್ಳುವುದು. ದ್ವಿತೀಯ ವಾಕ್‌ ಸ್ಥಾನದ ರಾಹು ನಿಮ್ಮ ಮಾತಿನ ಮೂಲಕ ಆಟ ಆಡಲಿದ್ದಾನೆ. ಮಾತಿನ ಬಗ್ಗೆ ಎಚ್ಚರ ಇರಲಿ.

ಮೀನ

ನೀವು ಎಷ್ಟೇ ಚಾಣಾಕ್ಷ ತನದಿಂದ ವಾದವನ್ನು ಮಂಡಿಸಿದರೂ ಸುಳ್ಳನ್ನೇ ಸತ್ಯವೆಂದು ವಾದಿಸುವವರ ನಡುವೆ ನಿಮ್ಮ ವಾದ ಮಹತ್ವ ಕಳೆದುಕೊಳ್ಳುವುದು. ದ್ವಿತೀಯ ವಾಕ್‌ಸ್ಥಾನದ ರಾಹು ನಿಮ್ಮ ಮಾತಿನ ಮೂಲಕ ಆಟ ಆಡಲಿದ್ದಾನೆ. ಮಾತಿನ ಬಗ್ಗೆ ಎಚ್ಚರ ಇರಲಿ.ಅನೇಕ ದಿನಗಳ ಕಾರ್ಯಶೀಲತೆಯ ಫಲವಾಗಿ ಧನಲಾಭದ ದಾರಿ ನಿಮಗೆ ಸಿದ್ಧಿಸಲಿದೆ.

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.

ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

#dinabhavishya #daily-horoscope-kannada #astrology #bhavishya

Tags