ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ದಿನಭವಿಷ್ಯ: 06 ಡಿಸೆಂಬರ್ 2019 ಶುಕ್ರವಾರ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

ಮೇಷ

ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ದಿನ ನಿಮಗೆ ಅನುಕೂಲವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ ಮತ್ತು ನಿಮ್ಮ ಮನಸ್ಸಿಗೆ ಒಪ್ಪುವ ವಾಹನವನ್ನು ಖರೀದಿ ಮಾಡುವಿರಿತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿಮ್ಮ ಪರಿಶ್ರಮ ಹಾಗೂ ಬಂಡವಾಳ ಸಫಲತೆಯನ್ನು ಹೊಂದುವುದು.

ವೃಷಭ

ಹಣಕಾಸಿನ ವಿಷಯದಲ್ಲಿ ಚಾಣಾಕ್ಷ ಮತಿಗಳಾದ ನೀವು ವ್ಯವಹಾರದಲ್ಲಿ ಕುಶಲತೆಯಿಂದ ಇರುವಿರಿನಿಮ್ಮ ಸೀದಾಸಾದಾ ಗುಣ ನಿಮ್ಮನ್ನು ಎಲ್ಲರೂ ಗೌರವಾದರಗಳಿಂದ ಕಾಣುವಂತೆ ಮಾಡುವುದು. ಒಂದು ದೊಡ್ಡ ಸಮಸ್ಯೆ ಮಂಜಿನಂತೆ ಕರಗಿ ಹೋಗುವುದರಿಂದ ಮನಸ್ಸು ನಿರಾಳವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು

ಮಿಥುನ

ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಭಯಪಡದೆ ಇಂತಹ ಜನರನ್ನು ದೂರ ಇಡುವುದು ಒಳ್ಳೆಯದು. ಸಂಗಾತಿಯ ಸಕಾಲಿಕ ಎಚ್ಚರಿಕೆ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದುಕೆಲವು ದಿನಗಳಿಂದ ಬರಲಿಲ್ಲವಲ್ಲ ಎಂದು ತಿಳಿದುಕೊಂಡ ಹಣದ ಬಾಬ್ತನ್ನು ನಿರಾಯಾಸವಾಗಿ ಸ್ವೀಕರಿಸುವಿರಿ. .

ಕಟಕ

ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷವನ್ನುಂಟು ಮಾಡುವುದು. ಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದೆ ಇರುವುದು ಒಳ್ಳೆಯದು.

ಸಿಂಹ

ವೃತ್ತಿಯಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹಾಗಾಗಿ ವೃತ್ತಿಯಲ್ಲಿ ಹೊಸ ಗಳಿಕೆಯು ಲಭ್ಯವಾಗಲಿದೆ. ಹೊಸ ವಸ್ತುಗಳನ್ನು ಖರೀದಿ ಮಾಡಲು ನೂತನ ಅವಕಾಶ ಕೂಡಿ ಬರುವುದುನಿಮ್ಮ ಸಾಧನೆಗೆ ತಕ್ಕ ಗೌರವ ಆದರಗಳು ಸಿಗುವ ಸಾಧ್ಯತೆಗಳಿವೆ. ಜನರನ್ನು ವಿಶ್ವಾಸಕ್ಕೆ ಪಡೆದು ಅವರಿಂದ ಕಾರ್ಯ ಮಾಡಿಸಿಕೊಳ್ಳುವಿರಿ. ಕಚೇರಿಯಲ್ಲಿನ ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು.

ಕನ್ಯಾ

ಧೈರ್ಯ ಸಾಹಸ ಪ್ರವೃತ್ತಿಯವರಾದ ನೀವು ಮುನ್ನುಗ್ಗುವುದರಲ್ಲಿ ಹಿಂದೆ ಬೀಳಬೇಡಿ. ಹಾಗಂತ ಆತುರದ ನಿರ್ಧಾರ ಸೂಕ್ತವಲ್ಲ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದುನಕಾರಾತ್ಮಕ ಧೋರಣೆಗಳನ್ನು ಕೈಬಿಡಿ. ಉತ್ತಮ ಜನರಿಂದ ನಿಮಗೆ ಬೆಂಬಲ ದೊರೆಯುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮಕ್ಕಳ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುವುದು.

ತುಲಾ

ಮಾತೇ ಮುತ್ತು ಮಾತೇ ಶತ್ರು. ಹಾಗಾಗಿ ಬೇಡದ ಮಾತುಗಳನ್ನು ಮಾತನಾಡಿ ಸುಮ್ಮನೆ ಕಿರಿಕಿರಿಗೆ ಸಿಕ್ಕಿಹಾಕಿಕೊಳ್ಳದಿರಿ. ಕ್ಲಿಷ್ಟ ಸನ್ನಿವೇಶಗಳನ್ನು ಜಾಣ್ಮೆಯಿಂದ ಎದುರಿಸುವುದು ಒಳ್ಳೆಯದು.
ಅಡಿಕೆ ಕದ್ದಮಾನ ಆನೆ ಕೊಟ್ಟರೂ ಹೋಗದು ಎಂಬಂತೆ ನೀವು ತಮಾಷೆಗಾಗಿ ಮಾತಾಡಿದ ಒಂದು ಪ್ರಸಂಗ ನಿಮ್ಮ ಗೌರವಕ್ಕೆ ಕುಂದು ತರಬಹುದು. ಹಿರಿಯರಾಗಿ ಹಿರಿತನದಿಂದ ಬಾಳ್ವೆ ನಡೆಸಿ.

ವೃಶ್ಚಿಕ

ಆರೋಗ್ಯವೇ ಭಾಗ್ಯ ಎಂಬುದನ್ನು ನೆನೆಪಿನಲ್ಲಿಟ್ಟುಕೊಂಡರೆ ಸಾಲದು. ಅದಕ್ಕಾಗಿ ಸೂಕ್ತ ಯೋಗ , ಪ್ರಾಣಾಯಾಮಗಳನ್ನು ಮಾಡುವ ಮೂಲಕ ದೇಹ ದಂಡಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಖರ್ಚಿನ ದಾರಿಗಾಗಿ ನೂರೆಂಟು ರೀತಿಯ ಪಟ್ಟಿ ನಿಮ್ಮ ಎದುರಿಗೆ ಬಂದು ನಿಲ್ಲುವುದು. ಅತ್ಯಂತ ತುರ್ತು ಸಮಯದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವುದು ಒಳ್ಳೆಯದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.  ಮನೆ ಒಳಗಿನ ಅಸಮಾಧಾನದ ಹೊಗೆ ನಿಮಗೆ ಉಸಿರು ಕಟ್ಟಿಸುವ ವಾತಾವರಣವನ್ನು ಸೃಷ್ಟಿಸಿದೆ.

ಧನುಸ್ಸು

ವಿಶೇಷ ಯೋಜನೆಗಳನ್ನು ಕೈಗೊಂಡು ಅದರಲ್ಲಿ ಯಶಸ್ಸು ಹೊಂದುವ ಕನಸು ಕಾಣುವಿರಿ. ನಿಮ್ಮ ಕನಸು ನನಸಾಗುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಮತ್ತು ಆಂಜನೇಯ ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ. ನಿಮಗೆ ನೂರಾರು ಕಡೆಗಳಿಂದ ಪ್ರಶಂಸೆಗಳು ಬರುವ ಸಾಧ್ಯತೆ ಅಧಿಕ ವಾಗಿರುವುದು. ನೀವು ಮಂಡಿಸಿದ ಪ್ರಬಂಧ ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆಯುವುದರಿಂದ ಸಂತಸದ ಕ್ಷಣಗಳನ್ನು ಅನುಭವಿಸುವಿರಿ.

ಮಕರ

ಪದೋನ್ನತಿಗೆ ಕಾರಣವಾಗುವ ಅನೇಕ ವಿಚಾರಗಳು ಅದೃಷ್ಟವಶಾತ್‌ ನಿಮ್ಮ ಪ್ರಬಲ ಅಸ್ತ್ರಗಳಾಗಿವೆ. ಇವು ನಿಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ಮಾಡಲು ಸಹಕಾರಿಯಾಗುವುವು. ಬಾಳ ಪಯಣದ ಸಂದರ್ಭದಲ್ಲಿ ಶುಭಕ್ಕೆ ಮುನ್ನುಡಿ ಬರೆಯುವ ದಿನವಾಗಿದೆ. ಭಗವಂತನ ಆಶೀರ್ವಾದ ನಿಮ್ಮ ಮೇಲಿದೆ. ಉಷ್ಣ ಸಂಬಂಧಿ ತೊಂದರೆಗಳ ನಿವಾರಣೆಗಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಕುಂಭ

ಶಾಂತರಾಗಲು ನಿಮಗೆ ಹೆಚ್ಚಿನ ಸಮಯ ಬೇಕಾಗುವುದು. ಎದುರಾಳಿಗಳು ಮಾತನಾಡಿದ ರೀತಿ ನಿಮ್ಮ ಮನಸ್ಸಿನಲ್ಲಿ ಕ್ರೋಧವನ್ನು ಹುಟ್ಟುಹಾಕಿದೆ. ಕ್ರೋಧದಿಂದ ಕ್ರೋಧವನ್ನು ಸೋಲಿಸಲು ಆಗುವುದಿಲ್ಲ. ಆದಷ್ಟು ಸಹನೆ, ಪ್ರೀತಿ, ವಾತ್ಸಲ್ಯಗಳನ್ನು ರೂಢಿಸಿಕೊಳ್ಳಿ. ದುಡುಕು ಮಾತುಗಳು ಸಾಕು. ದುಡುಕಿನಿಂದ ಹಲವು ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ.

 

ಮೀನ

ಪ್ರತಿ ದಿನವೂ ಒಂದೇ ತರಹ ಇರುವುದಿಲ್ಲ. ತಾಳ್ಮೆಯನ್ನು ಕಾಪಾಡಿಕೊಳ್ಳಿವಿವೇಕದ ವಿಚಾರವು ಶ್ರೀಮಂತಿಕೆಗಿಂತ ಘನವಾದುದು. ಇದರ ಅರಿವು ನಿಮಗೆ ಲಭ್ಯವಾಗಲಿದೆ. ದೂರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಬೀದಿಬದಿಯ ಆಹಾರವನ್ನು ಸೇವಿಸದೆ ಇರುವುದು ಒಳ್ಳೆಯದುನಿನ್ನೆಯ ಸೋಲನ್ನು ಮರೆಯಲಾಗದೆ ಪರಿತಪಿಸುತ್ತಿರುವಿರಿ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ನಿನ್ನೆಯ ಸೋಲು ಇಂದಿನ ಗೆಲುವಿಗೆ ಕಾರಣವಾಗುವುದು.

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.

ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ನಿಮ್ಮ ಕೈಗಳ ಮೆಹಂದಿಯ ಬಣ್ಣ ತುಂಬಾ ದಿನಗಳ ಕಾಲ ಇರಬೇಕೇ…?

#dinabhavishya #daily-horoscope-kannada #astrology #bhavishya

Tags