ಬಾಲ್ಕನಿಯಿಂದಸಂದರ್ಶನ

ಚಾಕ್ಲೇಟ್ ಬಾಯ್ ದರ್ಶ್!!

ಎಂಸಿಎ ಓದಿನ ಜತೆಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಇವರದ್ದು ತೀರ್ಥಹಳ‍್ಳಿ ಮೂಲ. ಮುಂದೆ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ. 6.3 ಅಡಿ ಎತ್ತರ, ಸುಂದರ ಮೈಕಟ್ಟು ಹೊಂದಿರುವ ಚಾಕ್ಲೇಟ್ ಬಾಯ್ ಸದ್ಯ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ದುರ್ಗಾ’ ಧಾರವಾಹಿಯಲ್ಲಿ ನಕುಲ್ ಆಗಿ ನಾಯಕನ ಪಾತ್ರ ನಿರ್ವಹಿಸುತ್ತಿರುವ ದರ್ಶ್ ಚಂದ್ರಪ್ಪ. ದರ್ಶ್ ಎಂದರೆ ಕೃಷ್ಣ ಎಂದರ್ಥ. ಈ ಕೃಷ್ಣ ಧಾರವಾಹಿಯ ಮೂಲಕ ಮನೆ ಮಾತಾಗಿ ಸದ್ಯ ಎಲ್ಲಾ ಹುಡುಗಿಯರ ಹಾಟ್ ಫೆವರೀಟ್.

ದುರ್ಗಾ ಧಾರವಾಹಿಯಲ್ಲಿ 3 ರೀತೀಯ ವಿಭಿನ್ನ ಪಾತ್ರದಲ್ಲಿ ದರ್ಶ್ ಕಾಣಿಸಿಕೊಂಡಿದ್ದಾರೆ. ಈಗ ನಾಯಕನ ಹಿಂದಿನ ಜನುಮದ  ಕಥೆಯೊಂದು ಸಾಗುತ್ತಿದೆ.ಈ ಕಥೆಯಲ್ಲಿ  ನಾಯಕ ಜಮೀನ್ದಾರನಾಗಿ ಕಾಣಸಿಗುತ್ತಾನೆ. ಬಡವರನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಕನಿಕರ, ಅನುಕಂಪ. ಅವರ ಕಷ್ಟಕ್ಕೆ ಸ್ಪಂದಿಸುವಂಥ ಒಳ‍್ಳೆಯ ಹೃದಯ. ಹೀಗೆ ಕಥೆಯೊಂದು ಹೆಣೆಯುತ್ತಾ ಹೋಗುತ್ತದೆ.

ದರ್ಶ್ ಅವರ ತಂದೆ ಚಂದ್ರಪ್ಪ ಹಾಗೂ ತಾಯಿ ವೀಣಾ ಮನೆಯಲ್ಲಿ  ವಿರುದ್ದವಿದ್ದರೂ ಮೊದಲು ಪಾದಾರ್ಪಣೆ ಮಾಡಿದ್ದು ಮಾಡೆಲಿಂಗ್ ಕ್ಷೇತ್ರಕ್ಕೆ. ನನ್ನ ತಂದೆ ತಾಯಿಗೆ ನಾನು ಮಾಡೆಲಿಂಗ್ ಮಾಡೋದು ಅಥವಾ ನಟನಾಗೋದು ಒಂದೆಳ‍್ಳಷ್ಟು ಇಷ್ಟವಿಲ್ಲ ಈ ಕ್ಷೇತ್ರ ಅಲ್ಪ ದಿನ ಎಂಬುದು ಅವರ ಭಾವನೆ, ನಾನು ಪೂರ್ತಿ ಓದಿನ ಕಡೆಗೆ ಗಮನ ಹರಿಸಿ ಮುಂದೆ ಉದ್ಯೋಗದಲ್ಲೇ ಮುಂದುವರಿಯಬೇಕೆಂಬುದು ಅವರ ಕನಸು. ಆದರೆ ನಾನು ತುಂಬಾ ಉದ್ದ ಇರುವುದರಿಂದ ನನಗೆ ನನ್ನ ಗೆಳೆಯರು ಮಾಡೆಲಿಂಗ್ ಮಾಡು ಎಂದು ಹುರಿದುಂಬಿಸಿದರು. ಅವರ ಪ್ರೋತ್ಸಾಹವನ್ನು ಕಂಡು ನಾನೂ ಯಾಕೆ ಒಂದು ಕೈ ನೋಡಬಾರದೆಂದು ಮಾಡೆಲಿಂಗ್ ಸೇರಿಕೊಂಡೆ. ಆದರೆ ಅದೃಷ್ಟವೆಂಬಂತೆ ಕೊನೆಗೆ ಅದುವೇ ನನ್ನ ಕೈ ಹಿಡಿಯಿತು ಹಾಗೂ ಹಲವಾರು ಪ್ರತಿಷ್ಠಿತ ಬ್ರ್ಯಾಂಡ್ ಕಂಪೆನಿಯವರೊಂದಿಗೆ ಕೆಲಸ ಮಾಡುವುದರ ಜೊತೆಗೆ ದೇಶದೆಲ್ಲೆಡೆ ಶೋ ನೀಡಿದ್ದೇನೆ ಎನ್ನುವ ದರ್ಶ್ ಮೊದಲು ತಕ್ಷ್ ಪ್ರೊಡಕ್ಷನ್ಸ್ ಎಂಬ ಡ್ರಾಮಾ ಟೀಮ್ ನಲ್ಲಿ 3 ರೋಸಸ್ ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸಿದರಂತೆ. ಅದಾದ ಕೂಡಲೆ ಇವರಿಗೆ ದುರ್ಗಾ ಧಾರವಾಹಿಯಲ್ಲಿ ಆಕಸ್ಮಿಕವಾಗಿ ನಟಿಸುವ ಅವಕಾಶ ಒದಗಿ ಬಂತೆಂದು ತಮ್ಮ ಮನದಾಳದ ಮಾತನ್ನು ಹೇಳುತ್ತಾರೆ.

ದರ್ಶ್ ಗೆ ಕ್ಯಾಮರಾ ಮುಂದೆ ನಟಿಸುವಾಗ ಯಾವುದೇ ರೀತೀಯ ಭಯ ಆಗಲಿಲ್ಲವೆಂದು ಹೇಳುವ ಅವರಿಗೆ ಕ್ಯಾಮರಾ ತನ್ನ ಮುಂದೆ ಇದೆ ಎಂಬ ಪರಿವೇ ಇಲ್ಲದೆ ನಟನೆಯಲ್ಲೇ ತಲ್ಲೀನರಾಗಿ ಬಿಡುತ್ತಾರಂತೆ. ಇವರಿಗೆ ಬಾಲ್ಯದಲ್ಲಿ ನಾಟಕದಲ್ಲಿ ಅಭಿನಯಿಸಿದ ಅನುಭವವಿಲ್ಲದಿದ್ದರೂ ಇವರೊಬ್ಬ ಒಳ‍್ಳೆಯ ಅಥ್ಲೆಟ್. ನಾನು ತುಂಬಾ ಎತ್ತರವಿದ್ದುದರಿಂದ  ಆಟದ ಕಡೆ ಗಮನ ಕೊಡುತ್ತಿದ್ದೆ. ಇಂದು ನಾನು ನಟನಾ ಕ್ಷೇತ್ರಕ್ಕೆ ಕಾಲಿಡದಿದ್ದರೆ ಬಹುಶಃ ನಾನೊಬ್ಬ ಆಟಗಾರನಾಗುತ್ತಿದ್ದೆ ಎಂದು ಹೇಳಲು ಮಾತ್ರ ಮರೆಯಲಿಲ್ಲ ದರ್ಶ್.

ದರ್ಶ್ ಗೆ ಕನಸಿನ ಪಾತ್ರ ಯಾವುದೂ ಇಲ್ಲ, ಎಲ್ಲಾ ರೀತೀಯ ಪಾತ್ರ ಮಾಡಲು ಸೈ ಎನ್ನುವ ದರ್ಶ್ ಗೆ ಈಗಾಗಲೇ ಹಲವಾರು ಸಿನಿಮಾ ಆಫರ್ ಗಳು ಬರುತ್ತಿವೆ. ಸ್ಯಾಂಡಲ್ ವುಡ್ ಗೆ ಈಗಾಗಲೇ ಕಾಲಿಟ್ಟಿರುವ ದರ್ಶ್ ಕನ್ನಡದಲ್ಲಿ ವಿ.ಐ.ಪಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅದಲ್ಲದೆ ತಮಿಳಿನಲ್ಲಿ 2 ಸಿನಿಮಾ ಹೀರೋ ಆಗಿ ನಟಿಸಲು ಅವಕಾಶ ಸಿಕ್ಕಿದೆ  ಎನ್ನುತ್ತಾರೆ. ಇವರಿಗೆ ನಟನಾ ಕ್ಷೇತ್ರದಲ್ಲಿ ಎಲ್ಲರೂ ಸ್ಫೂರ್ತಿ ಹಾಗೂ ಎಲ್ಲರಿಂದಲೂ ತುಂಬಾ ಕಲಿಯೋದು ಇದೆ ಎನ್ನುವ ಇವರು ಒಬ್ಬ ನಟನಾಗಬೇಕಾದರೆ ಆತನಿಗೆ ತುಂಬಾ ಪರಿಶ್ರಮ ಬೇಕು ಎನ್ನುತ್ತಾರೆ ದರ್ಶ್ ಚಂದ್ರಪ್ಪ.

ನಟನೆ ಇವರಿಗೆ ತಾಳ್ಮೆ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿದೆಯಂತೆ.  ಬಿಡುವು ಸಿಕ್ಕಾಗಲೆಲ್ಲಾ ತನ್ನದೇ ಕಂಪೆನಿಯಾದ ‘ದರ್ಶ್ ಇವೆಂಟ್ಸ್ ಯಾಂಡ್ ಎಸೋಶೀಯೇಟ್ಸ್ ನಲ್ಲಿ ಕೆಲಸ ಮಾಡುತ್ತಾರೆ . ಜಿಮ್, ಸೈಕ್ಲಿಂಗ್, ಹಾಗೂ ಓದುವುದು ಇವರ ಹವ್ಯಾಸ. ಮುಂದೆ ಟೀವಿ ಧಾರವಾಹಿಗಿಂತ ಸಿನಿಮಾದಲ್ಲಿ  ಮುಂದುವರಿಯಲು ತುಂಬಾ ಆಸಕ್ತಿ. ದರ್ಶ್ ಗೆ ಅವರು ಸಟಿಸಿದ ಧಾರವಾಹಿಯನ್ನು ವೀಕ್ಷಿಸುವಾಗ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅಂತ ಅನ್ನಿಸಿದರೂ ಹಲವಾರು ಮಂದಿ ಇಂತಹ ಪಾತ್ರ ನಿನಗೆ ಬೇಕಿತ್ತಾ ಎಂಬ ಪ್ರಶ್ನೆ ಮಾಡಿದ್ದುಂಟು ಎಂದು ಜೋರಾದ ನಗುವಿನೊಂದಿಗೆ ಹೇಳುತ್ತಾರೆ ದರ್ಶ್. ಹರಿದ್ವಾರದಲ್ಲಿ ಹಾಗೂ ಮುಂಬಯಿನಲ್ಲಿ ನಡೆದ ಶೂಟಿಂಗ್ ಇವರಿಗೆ ಮರೆಯಲಾಗದ ಒಂದು ಸಿಹಿ ಕ್ಷಣ. ನನಗೆ ನಾನೇ ಗಾಡ್ ಫಾದರ್ ಎನ್ನುವ ದರ್ಶ್ ರನ್ನು ಹೊರಗೆ ಜನರು ನಕುಲ್ ಎಂದೇ ಗುರುತಿಸುತ್ತಾರೆ, ದರ್ಶ್ ಗೆ ಮುಂದೆ ಮತ್ತಷ್ಟು ಒಳ‍್ಳೆಯ ಅವಕಾಶಗಳು ದೊರೆತು ಇನ್ನಷ್ಟು ಬಾನೆತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸೋಣ.

   ಸುಹಾನಿ.ಬಡೆಕ್ಕಿಲ
                          

 

Tags