ದಿನ ಭವಿಷ್ಯಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ದಿನಭವಿಷ್ಯ: 11 ಜನವರಿ 2019, ಶುಕ್ರವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಮೇಷಮಕ್ಕಳ ತುಂಟತನ ವಿಪರೀತವಾಗುವುದು. ಮನೆಯಲ್ಲಿರುವುದು ಕಷ್ಟ ಎನಿಸಬಹುದು. ಸಂಜೆ ಪ್ರಶಾಂತ ವಾತಾವರಣದಲ್ಲಿ ಕೆಲಕಾಲ ಏಕಾಂತವಾಗಿ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದು. ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ನಡೆಸುವಿರಿ. ಇದರಿಂದ ಕೊಂಚಮಟ್ಟಿನ ಪ್ರಯೋಜನ ಕಂಡುಬರುವುದು. ಇನ್ನು ಸ್ವಲ್ಪ ಕಾಲ ಇದ್ದ ಸ್ಥಳದಲ್ಲಿಯೇ ಕೆಲಸವನ್ನು ಮುಂದುವರೆಸುವಿರಿ.

ವೃಷಭನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನು ಪಾಲಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಎಲ್ಲರಿಗೂ ಒಳ್ಳೆಯವರಾಗುವುದು ಅಷ್ಟು ಸುಲಭವಲ್ಲ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರ್ರೂಪಿಸಿಕೊಳ್ಳುತ್ತ ಬರುವಿರಿ. ಇದರಿಂದ ನಿಮ್ಮ ಗೌರವ ಘನತೆ ಸಮಾಜದಲ್ಲಿ ಹೆಚ್ಚಾಗುವುದು.

ಮಿಥುನವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇದೆ. ಯಾವುದಕ್ಕೂ ಸಂಗಾತಿಯ ಸಲಹೆಯನ್ನು ಈ ವಿಷಯದಲ್ಲಿ ಕೇಳಿ.ತೀರ ಸನಿಹದಲ್ಲೇ ಇದ್ದ ಯಶಸ್ಸು ದೂರಕ್ಕೆ ಹೋಗುತ್ತಿದೆ ಎಂದು ಅನಿಸುತ್ತದೆ. ಮನೆಯ ಹಿರಿಯರ ಸಲಹೆ ಸೂಚನೆಯಂತೆ ಮುನ್ನಡೆಯಿರಿ. ಇದರಿಂದ ಅನುಕೂಲವಾಗುವುದು. ಆಂಜನೇಯ ಸ್ಮರಣೆ ಮಾಡಿ.

ಕಟಕಕನಸಿನಲ್ಲಿ ಕಂಡ ವಿಚಾರಗಳಿಗೂ ಈ ದಿನ ನಡೆಯುವ ವಿಚಾರಗಳಿಗೂ ತಾಳೆ ಆಗುತ್ತಿರುವುದು ನಿಮಗೆ ಸೋಜಿಗವನ್ನುಂಟು ಮಾಡುವುದು. ಕೆಲವು ಸಂದರ್ಭದಲ್ಲಿ ಮುಂದಾಗುವ ವಿಚಾರಗಳನ್ನು ಭಗವಂತನು ಕನಸಿನ ರೂಪದಲ್ಲಿ ತೋರುವನು.ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬ ದಿಶೆಯಲ್ಲಿ ನೀವು ಹಲವು ಷೇರು ವ್ಯವಹಾರಗಳಲ್ಲಿ ಹಣ ಹೂಡುವಿರಿ. ನಿಮ್ಮ ದೂರದೃಷ್ಟಿಯಂತೆ ಖರೀದಿಸಿದ ಷೇರುಗಳ ಮೌಲ್ಯ ಹೆಚ್ಚಾಗುವ ಸಂಭವವಿದೆ.

ಸಿಂಹನಿಮ್ಮ ಮುಂಗೋಪದಿಂದ ನಿಮ್ಮ ಸಂಗಾತಿ ಜತೆ ಘರ್ಷಣೆ ಉಂಟಾಗುವುದು. ತದನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತಗಳು ಆಗದಂತೆ ಎಚ್ಚರ ವಹಿಸಿ.ಯಾರು ಹಿತವರು ಈ ಮೂವರೊಳಗೆ ಎಂಬ ಮಾತಿನ ಆಂತರ್ಯ ತಿಳಿಯಲು ಬಹಳ ಪ್ರಯತ್ನ ಪಡುವಿರಿ. ಆದರೆ ಯಾವುದೇ ದೃಢ ನಿರ್ಧಾರ ತಳೆಯುವಲ್ಲಿ ವಿಫಲರಾಗುವಿರಿ. ಮೂವರು ಗಣ್ಯವ್ಯಕ್ತಿಗಳ ಸಂಘರ್ಷ ನಿಮ್ಮನ್ನು ಚಿಂತೆಗೆ ಈಡು ಮಾಡುವುದು.

ಕನ್ಯಾಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ನಿಮ್ಮ ಕಚೇರಿಯಲ್ಲಿನ ದಿಗ್ಗಜರ ಭಿನ್ನಾಭಿಪ್ರಾಯ ನಿಮಗೆ ವರವಾಗಿ ಪರಿಣಮಿಸುವುದು. ಇದರಿಂದ ನಿಮ್ಮ ಕಾರ್ಯ ಸುಲಲಿತವಾಗುವುದು. ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಪುನಃ ಜೋಡಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳು ನಿಮ್ಮಂತೆ ಆಗುತ್ತಿಲ್ಲ ಎಂದು ದುಡುಕಿ ಪರರನ್ನು ನೋಯಿಸದಿರಿ. ಆದಷ್ಟು ತಾಳ್ಮೆ ಇರಲಿ. ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗಿ.

ತುಲಾನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ನಿಮ್ಮೊಂದಿಗೆ ಸ್ನೇಹಿತರು ಹೆಜ್ಜೆ ಹಾಕುವರು.ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳು ವಿದ್ಯೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ಹಿರಿಯರ ಆಶೀರ್ವಾದ ದೊರೆಯುವುದು.

ವೃಶ್ಚಿಕಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚು ಚಿಂತೆ ಪಡಬೇಕಾಗಿಲ್ಲ. ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರರಾಗುವುದು. ಆದರೆ ಮಾತಿನಲ್ಲಿ ನಯ ವಿನಯ ಇರಲಿ.

ಧನುಸ್ಸುದೈಹಿಕ ಬಲದ ಜತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ. ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

ಮಕರಹೊಸ ಜನರ ಪರಿಚಯದೊಂದಿಗೆ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವುದು.ನಿಮ್ಮ ಸಮಸ್ಯೆಗಳು ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ಕುಂಭನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಸೂಕ್ಷ್ಮ ವಾಗಿ ಗಮನಿಸಿ ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು.ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಪ್ರಾರ್ಥಿಸಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ.

ಮೀನಕ್ಷುಲ್ಲಕರನ್ನು ನೀವು ದೂರ ಇಡುವುದೇ ಒಳ್ಳೆಯದು. ನಿಮ್ಮ ಪ್ರಗತಿಯನ್ನು ಕಂಡು ಕರಗುವ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತಾರೆ. ಅವರನ್ನು ಉದಾಸೀನ ಮಾಡುವುದೇ ಲೇಸು. ಈ ಹಿಂದೆ ಬರೆದ ಪರೀಕ್ಷೆ ಫಲಿತಾಂಶವು ಶೀಘ್ರದಲ್ಲಿ ಬರುವುದು. ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಖರ್ಚಿನ ಬಗ್ಗೆ ಹಿಡಿತವಿರಲಿ.

————————————————————————————————————————————-

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ, ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

Tags

Related Articles