ಚಿತ್ರ ವಿಮರ್ಶೆಗಳು

ಮನರಂಜನೆ ಜೊತೆಗೆ ಮನಮುಟ್ಟುವ ಪ್ರೇಮಕಥೆ ‘ಲವ್ ಮೊಕ್ಟೈಲ್’..!!

ಡಾರ್ಲಿಂಗ್ ಕೃಷ್ಣ ಮೊಲದ ಬಾರಿ ಆಕ್ಷನ್ ಕಟ್ ಹೇಳಿರೋ ‘ಲವ್ ಮೊಕ್ಟೈಲ್’ ಚಿತ್ರ ಇಂದು ಯಶಸ್ವಿಯಾಗಿ ಬಿಡುಗಡೆಯಾಗಿದೆ.

ರೇಟಿಂಗ್: 4/5

ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಆದಿ ಪಾತ್ರದಲ್ಲಿ ಸಖತ್ ತರ್ಲೆ ಹುಡುಗನಾಗಿ, ರೆಗ್ಯುಲರ್ ಹುಡುಗರನ್ನು ಪ್ರತಿನಿಧಿಸುವ ಪಾತ್ರದಲ್ಲಿ ನಟಿಸಿದ್ದಾರೆ. ಹೈ ಸ್ಕೂಲ್ನಿಂದ ಲವ್ಲಿ ಬೀಳೋ ಹುಡುಗ ಆದಿ. ಟ್ರೂ ಲವ್ ಟ್ರೂ ಲವ್ ಅಂತ ನಾಲ್ಕೈದು ಬಾರಿ ಲವ್ನಲ್ಲಿ ಬೀಳೋ ಹುಡುಗ. ಆದ್ರೆ ನಿಜವಾದ ಟ್ರೂ ಲವ್ ಆದಾಗ ಅದು ಆತನ ಜೀವನವನ್ನು ಹೇಗೆ ಬದಲಿಸುತ್ತೆ.

ಅವ್ನ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನ ಲವ್ ಮೊಕ್ಟೈಲ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಟ್ಟಿಕೊಟ್ಟಿದ್ದಾರೆ. ಸ್ಕೂಲ್, ಕಾಲೇಜ್, ಕೆಲಸ ಮಾಡುವ ಕಡೆಗಳಲ್ಲಿ ಪ್ರತಿಯೊಬ್ಬ ಹುಡುಗನ ಜೀವನ ಹಂತದಲ್ಲಿ ನಡೆಯುವ ಪ್ರೇಮ್ ಕಹಾನಿಗಳೇ ಇಲ್ಲೂ ಇದೆ. ಈ ಪಾತ್ರವನ್ನು ಜೀವಿಸಿ ನಟಿಸಿದ್ದಾರೆ ಡಾರ್ಲಿಂಗ್ ಕೃಷ್ಣ.
Image result for love mocktail
ಸಿನಿಮಾ ನೋಡ್ತಿದ್ದವರಿಗೆ ಇದು ತಮ್ಮದೇ ಜರ್ನಿ ಎನ್ನುವ ಹಾಗೆ ಕನೆಟ್ಟ್ ಆಗುತ್ತೆ ಲವ್ ಮೊಕ್ಟೈಲ್ . ವಿಭಿನ್ನ ರೀತಿಯ ಚಿತ್ರಕಥೆ ಶೈಲಿ ಎಲ್ಲರಿಗೂ ಇಷ್ಟವಾಗುತ್ತೆ. ಮನೋರಂಜನೆ ಮತ್ತು ಭಾವಾನಾತ್ಮಕ ಅಂಶಗಳನ್ನು ಚಿತ್ರದಲ್ಲಿ ಬಹಳ ಸೂಕ್ಮ್ಮವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ್ರು.

ಹೃದಯ ತುಂಬಿ ಬರುವ ಪ್ರೇಮಕಥೆ ಚಿತ್ರದಲ್ಲಿದ್ದು ಕೆಲವು ಕಡೆ ಲ್ಯಾಗ್ ಅನ್ಸಿದ್ರು ಅದನ್ನ  ಬ್ಯಾಲೆನ್ಸ್ ಮಾಡಿ ಚಿತ್ರ ಮಾಡಿದ್ದಾರೆ ಡಾರ್ಲಿಂಗ್ ಕೃಷ್ಣ. ಹಾಗಂತ ಹಿಂದೆಂದೂ ನೋಡಿರದ ಲವ್ ಸ್ಟೋರಿ ಸಬ್ಜೆಕ್ಟ್ ಸಿನಿಮಾ ಅಂತಲ್ಲ, ಹೇಳುವ ಶೈಲಿಯಲ್ಲಿ ವಿಭಿನ್ನತೆ ತೋರಿ  ಪ್ರೇಕ್ಷಕರನ್ನು ಗೆಲ್ಲುವುದರಲ್ಲಿ ಲವ್ ಮಾಕ್ಟೈಲ್ ಚಿತ್ರ ಯಶಸ್ವಿಯಾಗಿದೆ.

‘ಜಂಟಲ್ ಮ್ಯಾನ್’ ಹುಡುಕಿಕೊಂಡು ಬಂದ ರಿಯಲ್ ಜಂಟಲ್ ಮ್ಯಾನ್..!!

#Balkaninewskannada #darlingkrishna #lovemocktail #milananagraj #raghudixit #shricrazyminds #amrutha #sandalwoodmovies

 

 

Tags