ಚಿತ್ರ ವಿಮರ್ಶೆಗಳು

ಪ್ರೇಕ್ಷಕರ ಮನಗೆದ್ದ ‘ಕಾಣದಂತೆ ಮಾಯವಾದನು’ ಚಿತ್ರ

ನಿರ್ದೇಶಕರಾಗಿದ್ದ ವಿಕಾಸ್ ನಾಯಕ ನಟನಾಗಿ ನಟಿಸಿದ ಚಿತ್ರ ‘ಕಾಣದಂತೆ ಮಾಯವಾದನು’

ರಮ್ಮಿ ಪಾತ್ರದಲ್ಲಿ ನಟಿಸಿರುವ ವಿಕಾಸ್ ಭರವಸೆಯ ನಟನೆಯ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಲವ್, ಕಾಮಿಡಿ, ಆಕ್ಷನ್ ಸೀಕ್ವೆನ್ಸ್ಗಳಲ್ಲಿ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಟ್ವಿಸ್ಟ್ಗಳು ಚಿತ್ರದಲ್ಲಿದ್ದು ಇದು ಚಿತ್ರದ ಗತಿಯನ್ನೇ ಬದಲಿಸುತ್ತದೆ. ಪ್ಯಾಂಟಸಿ ಎಲಿಮೆಂಟ್ಗಳು ಚಿತ್ರದ ಮೈನ್ ಅಟ್ರ್ಯಾಕ್ಷನ್.

ಕೊಲೆಯಾಗಿ ಭೂತವಾಗಿ ಮರುಜನ್ಮ ಪಡೆದು ಬರುವ ರಮ್ಮಿ ತನ್ನ ಮುಗ್ಧ ಪ್ರೀತಿಯನ್ನು, ಪ್ರೀತಿಸಿದವಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ. ಜೊತೆಗೆ ತನ್ನ ಸಾವಿಗೆ ಕಾರಣನಾದವನ ಮೇಲೆ ಹೇಗೆ ರಿವೇಂಜ್ ತೀರಿಸಿಕೊಳ್ಳುತ್ತಾನೆ ಎಂಬ ತಿರುಳನ್ನು ಇಟ್ಟುಕೊಂಡು ಪ್ಯಾಂಟಸಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್ ಪತ್ತಿಪಾಟಿ. ಚಿತ್ರಕಥೆ ಶೈಲಿ ಎಲ್ಲರಿಗೂ ಇಷ್ಟವಾಗುತ್ತೆ. ಕಾಮಿಡಿ, ಆಕ್ಷನ್ ಸೀಕ್ವೆನ್ಸ್ಗಳು ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುತ್ತೆ.

Image result for kanadanthe mayavadanu

ಒಟ್ನಲ್ಲಿ ಒಂದೊಳ್ಳೆ ಅನುಭವವನ್ನು ‘ಕಾಣದಂತೆ ಮಾಯವಾದನು’ ಚಿತ್ರ  ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದೆ.

ನಿರ್ದೇಶಕರಾಗಿದ್ದ ವಿಕಾಸ್ ನಾಯಕ ನಟನಾಗಿ ನಟಿಸಿದ ಚಿತ್ರ ‘ಕಾಣದಂತೆ ಮಾಯವಾದನು’. ಚಿತ್ರದಲ್ಲಿ ವಿಕಾಸ್ ಸಿಂಧು ಲೋಕನಾಥ್ ನಾಯಕ ನಾಯಕಿಯಾಗಿ  ಮಿಂಚಿದ್ದಾರೆ. ಚಿತ್ರದ ಸ್ಯಾಂಪಲ್ಗಳಿಂದ ಮನಸೆಳೆದ ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಅಳುಕು ಚಿತ್ರತಂಡಕ್ಕಿತ್ತು. ಇದೀಗ  ಬಿಡುಗಡೆಯಾಗಿರುವ ಚಿತ್ರಕ್ಕೆ ಪ್ರೇಕ್ಷಕ ಮನಸೋತಿದ್ದು, ಚಿತ್ರವನ್ನು ಮೆಚ್ಚಿಕೊಂಡಿದ್ದಾನೆ.
ಚಿತ್ರ: ಕಾಣದಂತೆ ಮಾಯವಾದನು
ನಿರ್ದೇಶಕ: ರಾಜ್ ಪತ್ತಿಪಾಟಿ
ನಿರ್ಮಾಪಕ: ಚಂದ್ರಶೇಖರ್ ನಾಯ್ಡು
ಸಂಗೀತ: ಗುಮ್ಮಿನೇನಿ ವಿಜಯ್
ಛಾಯಾಗ್ರಹಣ: ಸುಜ್ಞಾನ್
ತಾರಾಂಗಣ: ವಿಕಾಸ್, ಸಿಂಧು ಲೋಕನಾಥ್, ರಾಘವ್ ಉದಯ್, ಭಜರಂಗಿ ಲೋಕಿ, ಇತರರು
Rating 3.5 / 5

ಮನರಂಜನೆ ಜೊತೆಗೆ ಮನಮುಟ್ಟುವ ಪ್ರೇಮಕಥೆ ‘ಲವ್ ಮೊಕ್ಟೈಲ್’..!!

#Balkaninewskannada #kanadantemayavadanu #vikashnayak #sindhuloknath #punithrajkumar #sandalwoodmovies

 

Tags