ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಚೇಂಜ್ ಎಕ್ಸ್ ಚೇಂಜ್ ಗೊಂದಲಗಳ ರುಚಿ ‘ಆರೆಂಜ್’

ಜೂಮ್’ ಚಿತ್ರಕ್ಕಿಂತಲೂ ಪಾತ್ರದ ಕನ್ಫ್ಯೂಷನ್ ವಿಚಾರ...

ಚಿತ್ರ: ‘ಆರೆಂಜ್’ 

ತಾರಾಗಣ: ಗಣೇಶ್, ಪ್ರಿಯಾಆನಂದ್

ನಿರ್ದೇಶಕ: ಪ್ರಶಾಂತ್ ರಾಜ್

ನಿರ್ಮಾಪಕ: ನವೀನ್ ಜಿ.ಎಸ್

ರೇಟಿಂಗ್ಸ್: 3

ಜೂಮ್‘ ಟೀಮ್ ಮತ್ತೆ ಬರುತ್ತಿದೆ ಎನ್ನುವುದನ್ನು ಪದೇ ಪದೇ ಹೇಳಿತ್ತು ಚಿತ್ರತಂಡ. ಅದರಂತೆ ಮತ್ತೊಂದು ಫನ್ನಿ ಎಂಟರ್ಟೇನ್ಮೆಂಟ್ ಥೀಮ್ ಮೂಲಕ ಆರೆಂಜ್ ಹೊರಗೆ ಬಂದಿದೆ.

Image result for orange movie kannada

‘ಆರೆಂಜ್’ ಫಲಾಪೇಕ್ಷಿತ ಋಣ

ಕಥಾ ನಾಯಕನ ಹೆಸರು ಸಂತೋಷ್. ಆತನಿಗೆ ರೈಲೊಂದರಲ್ಲಿ ರಾಧಾ ಎಂಬ ಯುವತಿಯ ಪರಿಚಯವಾಗುತ್ತದೆ. ಆಕೆ ಆತನಿಗೆ ಆರೆಂಜ್ ಒಂದನ್ನು ನೀಡಿರುತ್ತಾಳೆ. ಕಳ್ಳನೋರ್ವ ಆಕೆಯ ಬ್ಯಾಗ್ ನಲ್ಲಿದ್ದ ಕಡಗದೊಂದಿಗೆ ಪರಾರಿಯಾಗುತ್ತಾನೆ. ಇದನ್ನು ರಾಧಾ ಗಮನಿಸುವುದಿಲ್ಲ. ಆದರೆ ಕಳ್ಳನನ್ನು ಬೆನ್ನತ್ತುವ ಸಂತೋಷ್ ಕಡಗದೊಂದಿಗೆ ಆಕೆಯ ಮನೆಗೆ ಹಾಜರಾಗುತ್ತಾನೆ. ಆದರೆ ಆ ಕಡಗದೊಂದಿಗೆ ಬರುವಾತನೇ ನಿಮ್ಮ ಅಳಿಯ ಎಂದು ನಾಯಕಿ ಮೊದಲೇ ತಂದೆಗೆ ಪತ್ರ ಬರೆದು ಹೋಗಿರುತ್ತಾಳೆ. ಬಂದಿದ್ದು ಮಗಳ ಪ್ರಿಯಕರ ಎಂದೇ ಆಕೆಯ ತಂದೆ ಮತ್ತು ಮನೆಯವರು ಅಂದುಕೊಳ್ಳುತ್ತಾರೆ. ಅಂತ್ಯದಲ್ಲಿ ಅದೇ ನಿಜವಾಗುತ್ತದೆ. ಆದರೆ ಅದರ ನಡುವಿನ ರಸಮಯವೆನಿಸುವ ಟ್ವಿಸ್ಟ್ ಗಳೇ ಚಿತ್ರದ ಮನರಂಜನಾ ಅಂಶ.

Related image

ಕಳ್ಳನಲ್ಲ ಸಮಾಜ ಸೇವಕ!

ಬಹುತೇಕ ಮನರಂಜನಾ ಚಿತ್ರಗಳ ಸೂತ್ರದಂತೆ ಚಿತ್ರದ ಕತೆಯಲ್ಲಿ ಕೂಡ ಲಾಜಿಕ್ಗಳನ್ನು ಹುಡುಕಬಾರದು. ಉದಾಹರಣೆಗೆ ನಾಯಕ ಒಬ್ಬ ಕಳ್ಳ ಎನ್ನುವುದನ್ನು ಟೈಟಲ್ ಕಾರ್ಡ್ ಹಾಕುವಾಗಲೇ ಹೇಳಲಾಗುತ್ತದೆ. ಆದರೆ ಜೈಲ್ ನಿಂದ ಹೊರಬರುವ ನಾಯಕ ಪೊಲೀಸ್ ಕಿವಿಯ ಗುಂಡುಗಳನ್ನು ಮಾಯ ಮಾಡೋದು ಬಿಟ್ಟರೆ ಚಿತ್ರದ ಕೊನೆಯವರೆಗೆ ಯಾವುದೇ ಕಳ್ಳತನ ಮಾಡಲ್ಲ ಎನ್ನುವುದು ವಿಶೇಷ. ಅದಕ್ಕೆ ತಕ್ಕಂತೆ ಚಿತ್ರದ ಕೊನೆಯಲ್ಲಿ ಆತನನ್ನು ಸಮಾಜ ಸೇವಕನಂತೆ ಚಿತ್ರಿಸಲಾಗುತ್ತದೆ.

Image result for orange movie kannada

 

ದೇವಗಿಲ್ ಹೊಡೆದಾಟಕ್ಕೆ ಸೀಮಿತ

ಸಂತೋಷ್ ಪಾತ್ರದಲ್ಲಿ ಗಣೇಶ್ ಎಂದಿನಂತೆ ಲವಲವಿಕೆಯ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಪಾತ್ರದಲ್ಲಿ ಪ್ರಿಯಾ ಆನಂದ್ ಗ್ಲಾಮರ್ ಜೊತೆಗೆ ಸಿಕ್ಕ ಅವಕಾಶದಲ್ಲಿ ಅಭಿನಯ ತೋರಿಸುವ ಪ್ರಯತ್ನ ನಡೆಸಿದ್ದಾರೆ. ನಾಯಕಿಯ ತಂದೆ ರಾಮ್ ಪುರದ ಹುಲಿ ವೀರಯ್ಯನಾಗಿ ಅವಿನಾಶ್ ನಟಿಸಿದ್ದಾರೆ. ಖಳಪಾತ್ರ ನರಸಿಂಹ ನಾಯಕನಾಗಿ ದೇವಗಿಲ್ ಹೊಡೆದಾಟಕ್ಕೆ ಮೀಸಲಾಗಿದ್ದಾರೆ. ಸಾಧುಕೋಕಿಲ ಎಂದಿನಂತೆ ಹಾಸ್ಯಪಾತ್ರದಲ್ಲಿ ಮನರಂಜಿಸುತ್ತಾರೆ. ಉಳಿದಂತೆ ರಂಗಾಯಣ ರಘು, ರವಿಶಂಕರ್ ಗೌಡ, ರಾಧಾರಾಮಚಂದ್ರ ಮೊದಲಾದವರ ತಾರಾಗಣವಿದೆ. ಥಮನ್ ಸಂಗೀತದಲ್ಲಿ ಒಂದೆರಡು ಹಾಡುಗಳು ಗಮನ ಸೆಳೆಯುತ್ತವೆ. ‘ಜೂಮ್’ ಚಿತ್ರಕ್ಕಿಂತಲೂ ಪಾತ್ರದ ಕನ್ಫ್ಯೂಷನ್ ವಿಚಾರದಲ್ಲಿ ಗಣೇಶ್ ನಟನೆಯಲ್ಲೇ ಹನ್ನೆರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ಚೆಲ್ಲಾಟ’ ಚಿತ್ರವನ್ನು ನೆನಪಿಸುತ್ತದೆ. ಗಣೇಶ್ ಅಭಿಮಾನಿಗಳಿಗೆ ಲವ್ ಸೀನ್ ಗಳ ಕೊರತೆ ಕಾಡಿದಂತೆ ಅನಿಸಿದರೆ ಅಚ್ಚರಿಯಿಲ್ಲ. ಹಾಸ್ಯಕ್ಕೆ ಕೊರತೆಯಿಲ್ಲ.

✍???? ಶಶಿಕರ ಪಾತೂರು

 

Tags