ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಜಾನಕಿಯಾಗಿ ಮಿಂಚುತ್ತಿರುವ ಚಿಕ್ಕಮಗಳೂರಿನ ಚೆಲುವೆ ಗಾನವಿ

ಬೆಂಗಳೂರು, ಮೇ.26:

ಚಿಕ್ಕಮಗಳೂರಿನ ಚೆಲುವೆ ಗಾನವಿ ಲಕ್ಣ್ಮಣ್ ಬಗ್ಗೆ ಗೊತ್ತಿದೆಯಾ ಎಂದು ಕೇಳಿದರೆ ಹೆಚ್ಚಿನವರ ಉತ್ತರ ಇಲ್ಲ ಎಂದಿದ್ದರೆ ಇನ್ನೂ ಕೆಲವರು ಎಲ್ಲೋ ಕೇಳಿದ ನೆನಪು ಎನ್ನಬಹುದೇನೋ? ಆದರೆ ‘ಮಗಳು ಜಾನಕಿ’ ಯ ಜಾನಕಿ ಪಾತ್ರಧಾರಿ ಗೊತ್ತಿದೆಯಾ ಎಂದು ಪ್ರಶ್ನಿಸಿದರೆ ಎಲ್ಲರಿಗೂ ನೂರಕ್ಕೆ ನೂರು ಅಂಕ ಗ್ಯಾರಂಟಿ. ಜಾನಕಿಯನ್ನು ಗೊತ್ತಿಲದವರಿಲ್ಲ. ಜಾನಕಿಯ ಮಾತು ಗುಣ ನಡೆ, ನುಡಿಗೆ ಎಲ್ಲರೂ ಫಿದಾ ಆಗಿಬಿಟ್ಟಿದ್ದಾರೆ.

Image may contain: 1 person, outdoorಚಿಕ್ಕಂದಿನಿಂದಲೇ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಒಂದು ಹೆಜ್ಜೆ ಮುಂದಿದ್ದ ಗಾನವಿ ಆಲಿಯಾಸ್ ನಿಮ್ಮ ಪ್ರೀತಿಯ ಜಾನಕಿಗೆ ನೃತ್ಯದ ಬಗ್ಗೆ ವಿಶೇಷ ಒಲವು. ನೃತ್ಯದ ಮೇಲಿನ ಅತೀವ ಪ್ರೀತಿಯಿಂದ ನೃತ್ಯ ಶಿಕ್ಷಕಿಯಾಗಿ ಗಾನವಿ ಬದಲಾದರು‌. ಕಾರಣ ಇಷ್ಟೇ. ಮಕ್ಕಳಿಗೆ ನೃತ್ಯದ ಮೂಲಕ ಶಿಕ್ಷಣ ನೀಡುವುದು ಇವರ ಬಹು ದೊಡ್ಡ ಬಯಕೆಯಾಗಿತ್ತು‌.

ವಸತಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ವೃತ್ತಿ ಜೀವನವನ್ನು ಆರಂಭಿಸಿಯೇ ಬಿಟ್ಟರು ಗಾನವಿ. ಆದರೆ ಕೆಲಸಕ್ಕೆ ಸೇರಿದ ಕೆಲವು ಸಮಯದಲ್ಲಿ ಕಲೆಯ ಬಗೆಗಿನ ಗಾನವಿ ಒಲವು ಮತ್ತಷ್ಟು ಇಮ್ಮಡಿಯಾಯಿತು! ಕೆಲಸಕ್ಕೆ ತಿಲಾಂಜಲಿ ಹೇಳಿ ದೇಶ ಸುತ್ತಲು ಆರಂಭಿಸಿದರು. ಅದು ಕೂಡಾ ಕೇವಲ ಕಲೆಗೋಸ್ಕರ! ನಾನಾ ದೇಶ ಸುತ್ತುವುದರ ಜೊತೆಗೆ ನಾನಾ ನಮೂನೆಯ ಕಲೆಗಳನ್ನು ಕರಗತ ಮಾಡಿಕೊಂಡರು‌. ಡಾನ್ಸ್, ಮಾರ್ಷಲ್ ಆರ್ಟ್ಸ್‌, ನಟನೆ ಹೀಗೆ ಕಲೆಯ ನಾನಾ ಪ್ರಕಾರಗಳಲ್ಲಿ ಗಾನವಿ ಪಳಗಿದರು.

ರಂಗಭೂಮಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಾನವಿ ಅವರಿಗೆ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುವ ಬಯಕೆ. ಅಂತೆಯೇ ಸಾಕಷ್ಟು ಆಡಿಶನ್ ಗಳಲ್ಲೂ ಭಾಗವಹಿಸಿದರು‌. ಆದರೆ ಎಲ್ಲೂ ಅವರು ಆಯ್ಕೆ ಆಗಲೇ ಇಲ್ಲ. ‘ನೀವು ಈ ಪಾತ್ರಕ್ಕೆ ಹೊಂದುವುದಿಲ್ಲ’ ಎಂದು ವಾಪಸ್ ಕಳುಹಿಸುತ್ತಿದ್ದರು. ಆದರೆ ಇದೀಗ ಅವರ ಅದೃಷ್ಟದ ಬಾಗಿಲು ತೆರೆಯಿತು ಎಂದು ಅಂದುಕೊಳ್ಳಬಹುದೇನೊ?? ಟಿ.ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಯ ಆಡಿಶನ್ ನಲ್ಲಿ ಪಾಸಾದ ಗಾನವಿ ಸದ್ಯ ಜಾನಕಿಯೆಂದೇ ಚಿರಪರಿಚಿತ! ತಮ್ಮ ಮೂಲ ಹೆಸರೇನು ಎಂದು ಗಾನವಿ ಅವರಿಗೆ ಒಂದು ಕ್ಷಣ ಎನಿಸಿದರೆ ತಪ್ಪಲ್ಲ! ಅಷ್ಟರ ಮಟ್ಟಿಗೆ ಜಾನಕಿ ಪಾತ್ರ ಮೋಡಿ ಮಾಡಿ ಬಿಟ್ಟಿದೆ!!!

Image may contain: 1 person, standing and outdoorಬಣ್ಣದ ಲೋಕಕ್ಕೆ ಕಾಲಿಟ್ಟ ಖುಷಿಯಲ್ಲಿರುವ ಗಾನವಿ ತಮ್ಮ ನಟನಾ ಪಯಣದ ಮೊದಲ ಧಾರಾವಾಹಿಯಲ್ಲೇ ಟಿ.ಎನ್‌. ಸೀತಾರಾಮ್‌ ಅವರ ಜೊತೆ ನಟಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗಿದ್ದಾರೆ. ‘ಇದು ನನಗೆ ಬಯಸದೇ ಬಂದ ಭಾಗ್ಯ ಎಂದರೆ ತಪ್ಪಾಗಲಾರದು‌. ಮೊದಲ ದಿನ ಆಡಿಷನ್‌ ಗೆ ಹೋದಾಗ ಸೀತಾರಾಮ್‌ ಸರ್ ಸ್ಟುಡಿಯೋದಲ್ಲಿ ಇರುತ್ತಾರೆ ಅಂದುಕೊಂಡಿರಲೇ ಇಲ್ಲ. ಅವರ ಎದುರು ಆಡಿಷನ್ ನೀಡಿದ ಅನುಭವ ಭಿನ್ನವಾಗಿತ್ತು” ಎಂದು ಅನುಭವವನ್ನು ಬಿಚ್ಚಿಡುತ್ತಾರೆ ಗಾನವಿ.

” ಟಿ.ಎನ್ ಸೀತಾರಾಮ್ ಅವರಲ್ಲಿ ಒಂದು ಪಾಸಿಟಿವ್ ಎನರ್ಜಿ ಇದೆ. ಆ ಎನರ್ಜಿಯನ್ನು ಅವರು ತಮ್ಮ ಜೊತೆ ಇರುವವರಲ್ಲೂ ಮೂಡುವಂತೆ ಮಾಡುತ್ತಾರೆ. ನನ್ನ ಹಾಗೂ ಸೀತಾರಾಮ್‌ ಸರ್ ಅವರ ಮೊದಲ ಭೇಟಿಯೇ ನನಗೆ ಅದ್ಭುತ ಅನುಭವ ನೀಡಿತ್ತು. ಇನ್ನೂ ಅವರು ಧಾರಾವಾಹಿ ಸೆಟ್‌ ಗೆ ಬಂದರೆ ಇರುವ ಸ್ಫೂರ್ತಿ, ಅವರು ಕೊಡುವ ಸಲಹೆಗಳು ನಿಜಕ್ಕೂ ಅದ್ಬುತವಾದುದು” ಎಂದು ನಗುತ್ತಾ ಹೇಳುತ್ತಾರೆ ಗಾನವಿ‌.

Image may contain: 1 person, text
ಸದ್ಯ ಮಗಳು ಜಾನಕಿಯೆಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರಿನ ಚೆಲುವೆ ಗಾನವಿ ಅವರು ಇಂದು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ಅವರ  ಮನೆಯವರು, ಸ್ನೇಹಿತರು ಹಾಗೂ ಊರಿನವರು ನೀಡಿದ ಸಹಕಾರವೇ ಕಾರಣ. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಮಿಂಚ ಹೊರಟಿರುವ ಚೆಂದುಳ್ಳಿ ಚೆಲುವೆ ಗಾನವಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

– ಅನಿತಾ ಬನಾರಿ

Image may contain: 1 person, closeup

ಕಿರುತೆರೆಯ ಗುಬ್ಬಿ, ‘ಸೀತಾವಲ್ಲಭ’ ಧಾರಾವಾಹಿಯ ಮೈಥಿಲಿ ಈ ನಮ್ಮ ಬೆಡಗಿ…!

#ganavilaxman #balkaninews #sandalwood #kannadaserials

Tags