ಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ವಾರಭವಿಷ್ಯ: 11-11-2018ರ ಭಾನುವಾರದಿಂದ 17-11-2018 ಶನಿವಾರದ ತನಕ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…

ಮೇಷ ವಾರದ ಆರಂಭದಲ್ಲಿ ಬೇಡದ ವಿಷಯಕ್ಕೆ ತಲೆ ಹಾಕಿ ನಿಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಶೀತದ ಸಮಸ್ಯೆ ಇಲ್ಲೂ ಮುಂದುವರೆಯುವುದು. ಸೋದರ ಮಾವನಿಗೂ ಅನಾರೋಗ್ಯದ ಸಮಸ್ಯೆ ಅಥವಾ ಹಣಕಾಸಿನ ಮುಗ್ಗಟ್ಟು ಕಾಡುವುದು. ಗುರು ಹಿರಿಯರಿಗೆ ಅಗೌರವ ತೋರುವಿರಿ. ವಾರದ ಮಧ್ಯಭಾಗದಿಂದ ತಾಯಿಯ ಗಟ್ಟಿತನ ಹಾಗೂ ಮಾರ್ಗದರ್ಶನದಿಂದ ಒಳಿತು ಕಾಣುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಉದ್ಯೋಗ ಸ್ಥಳದಲ್ಲಿ ತಾಳ್ಮೆಯಿಂದ ವ್ಯವಹರಿಸಿದರೆ ಎಲ್ಲರ ವಿಶ್ವಾಸ ಗೆಲ್ಲುವಿರಿ. ಮಾಡುವ ಕೆಲಸಗಳು ಬದಲಾಗುವುದು. ರಿಯಲ್ ಎಸ್ಟೇಟ್ ಉದ್ಯಮ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವ್ಯಾಪಾರಸ್ಥರಿಗೆ ಉತ್ತಮ ವಾರ.

ವೃಷಭ ಈ ವಾರ ಜ್ಞಾನಕ್ಕಿಂತ ಬುದ್ದಿಯನ್ನು ಹೆಚ್ಚು ಉಪಯೋಗಿಸುವಿರಿ. ಇದರ ಪ್ರಭಾವದಿಂದ ಕುಟುಂಬ ಹಾಗೂ ಕೆಲಸದ ಕಛೇರಿಗಳಲ್ಲಿ ಸ್ವಲ್ಪ ಮನಸ್ತಾಪ. ಬುದ್ದಿಯ ಕೈ ಮೇಲಾಗದಂತೆ ನೋಡಿಕೊಳ್ಳಿ. ಸೋದರ ಮಾವನ ಕುಟುಂಬದಿಂದ ಸುದ್ದಿಯೊಂದು ಮುಟ್ಟುವುದು. ಹೂಡಿಕೆಗಳಿಂದ ಆದಾಯ. ವಾಹನಗಳಿಂದ ಖರ್ಚು. ತಾಯಿಯ/ಅತ್ತೆಯ ಆರೋಗ್ಯದಲ್ಲಿ ಏರುಪೇರು. ತುಂಬಾ ಏರು ಧ್ವನಿಯಲ್ಲಿ ಮಾತನಾಡುವ ವಾರ. ಇದು ನಿಮ್ಮ ಘನತೆಗೆ ತಕ್ಕದಲ್ಲ. ಹೊಸ ವ್ಯಾಪಾರ/ಹೂಡಿಕೆ ಬಗ್ಗೆ ಚರ್ಚೆ ಅಥವಾ ಬೇರೆಯವರಿಂದ ಸಲಹೆ ಪಡೆದುಕೊಳ್ಳುವಿರಿ. ಎಂದಿನಂತೆ ಅತಿಯಾದ ಕೆಲಸದ ಒತ್ತಡ ಮತ್ತು ಸಮಯ ಪಾಲನೆಯಲ್ಲಿ ಕೊಂಚ ಸಮಸ್ಯೆ.

ಮಿಥುನ ಹಣಕಾಸಿನ ಮುಗ್ಗಟ್ಟು ಮುಂದುವರೆಯುವ ವಾರ. ನಿಮ್ಮ ಲೆಕ್ಕಾಚಾರಗಳಂತೆ ನಿಮ್ಮ ಕೈ ಸೇರಬೇಕಾಗಿರುವ ಹಣ ಸಂದಾಯವಾಗದು. ಇದರಿಂದಾಗಿ ಹಣ ಹೊಂದಿಸಲು ಸ್ವಲ್ಪ ಪರದಾಡುವಿರಿ. ಸ್ವಲ್ಪ ಅಲಸ್ಯದಿಂದ ಸಮಯ ಪರಿಪಾಲನೆಯಲ್ಲಿ ಹಿನ್ನಡೆ. ಸೋದರ ಮಾವನ ಆರೋಗ್ಯದಲ್ಲಿ ಏರುಪೇರು. ಹಳೆಯ ವಸ್ತು,ವಿಷಯ ಅಥವಾ ಮಾತಿನಿಂದಾಗಿ ಕೊಂಚ ಹಿನ್ನಡೆ. ನಿಮ್ಮ-ನಿಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಶ್ರಮವನ್ನು ಹಾಕಿದಲ್ಲಿ ಮುಂದೆ ಅನುಕೂಲಕರ ಹಾಗೂ ಉತ್ತಮ ಕೀರ್ತಿ. ಅಮ್ಮನವರ ದರ್ಶನದಿಂದ ಧೈರ್ಯ ಹಾಗೂ ಕೆಲಸಗಳನ್ನು ನಿಭಾಯಿಸುವ ಶಕ್ತಿ ದೊರೆಯಲಿದೆ.

ಕಟಕ ವಾರದ ಆರಂಭದಲ್ಲಿ ಉದ್ಯೋಗದಲ್ಲಿ ಕೊಂಚ ಹಿನ್ನಡೆ ಹಾಗು ಕಿರಿಕಿರಿ ಅನುಭವಿಸುವಿರಿ. ವಿವಾಹದ ನಿರೀಕ್ಷೆಯಲ್ಲಿ ಇರುವವರು ಅದರ ಸಂಬಂಧ ಈ ವಾರ ಯಾವುದೇ ನಿರ್ಧಾರ ಬೇಡ. ತಂದೆಯ ಸಂಬಂಧದ ಕಡೆ ಯಾರಾದರೂ ಅನಾರೋಗ್ಯಕ್ಕೆ ಇಡಾಗುವರು. ವಾಹನ ಚಾಲನೆ ಮಾಡುವಾಗ ದಂಡದ ರೂಪದಲ್ಲಿ ಆರಕ್ಷಕರಿಗೆ ಪಾವತಿಸಬೇಕಾಗಬಹುದು. ಹಾಗಾಗಿ ವಾಹನ ಚಾಲನೆಯಲ್ಲಿ ನಿಯಮ ಪಾಲಿಸಿ. ವಿಶೇಷವಾಗಿ ಶಿರಸ್ತ್ರಾಣ ಧರಿಸಿ. ಕೆಲಸದ ಜಂಜಾಟದಿಂದ ವಿರಾಮ ಬಯಸುತ್ತಿರುವ ನೀವು ಹೊಳೆ ಅಥವಾ ನೀರಿನ ತಟದಲ್ಲಿರುವ ಕ್ಷೇತ್ರಕ್ಕೆ ಹೋಗಬಹುದು. ತಾಯಿಯ ಆರೋಗ್ಯದಲ್ಲಿ ಏರುಪೇರು.

ಸಿಂಹ ವಾರದ ಆರಂಭದಲ್ಲಿ ಹಳೆಯ ವಿಷಯ ಅಥವಾ ನಡೆದು ಹೋಗಿರುವ ಘಟನೆ ಬಗ್ಗೆ ವೃತಾ ಚರ್ಚೆಯಾಗಿ ನೆಮ್ಮದಿಗೆ ಧಕ್ಕೆ ತಂದುಕೊಳ್ಳುವಿರಿ. ಇಲ್ಲವೆ ಮಕ್ಕಳ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ಳುವಿರಿ ಹಾಗು ವಿಪರೀತ ಕಾಳಜಿ ವಹಿಸುವಿರಿ. ಕುಟುಂಬದ ಹಿರಿಯರೊಬ್ಬರಿಗೆ ಆರೋಗ್ಯದಲ್ಲಿ ಏರುಪೇರು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ. ಬಹಳ ದಿನಗಳಿಂದ ಗೃಹೋಪಯೋಗಿ ವಸ್ತು ಒಂದನ್ನು ಖರೀದಿಸಲು ಆಲೋಚಿಸುತ್ತಿದ್ದಿರಿ ಅದು ಈ ವಾರ ಕೈಗೂಡುವುದು. ಸ್ನೇಹಿತ ಅಥವಾ ಕುಟುಂಬ ವರ್ಗದಲ್ಲಿ ಮಾತುಕತೆಯ ಮಧ್ಯಸ್ಥಿಕೆ ವಹಿಸುವಿರಿ ಅಥವಾ ಪಾಲ್ಗೋಳ್ಳುವಿರಿ. ವಾರಾಂತ್ಯಕ್ಕೆ ತಾಯಿಯ/ಸಹೋದರ-ಸಹೋದರಿಯ ಜೊತೆ ವೃತಾ ವಾಗ್ವಾದ ಮತ್ತು ಸಹೋದರ-ಸಹೋದರಿಯಿಂದ ಸಲಹೆ.

ಕನ್ಯಾವಾರದ ಆರಂಭದಿಂದಲೂ ಕುಟುಂಬದಲ್ಲಿ ಕಲಹ. ಆಸ್ತಿ ವಿಚಾರವಾಗಿ ಹಲವು ದಿನದಿಂದ ಇದ್ದ ಗೊಂದಲ ಇಲ್ಲೂ ಮುಂದುವರೆಯುವುದು. ಮಕ್ಕಳು ಆಟವಾಡುವಾಗ ಅಥವಾ ಓಡಾಡುವಾಗ ಪೆಟ್ಟಾಗುವುದು. ಊಟದ ವಿಷಯವಾಗಿ ವೃಥಾ ಚರ್ಚೆ. ಎಂದಿನಂತೆ ನಿಮ್ಮ ಮಾತಿನಲ್ಲಿ ಗಟ್ಟಿತನವಿರುತ್ತದೆ ಹಾಗಾಗಿ ಉದ್ಯೋಗ. ನಿಮ್ಮ ಗಟ್ಟಿತನದಿಂದ ಎಲ್ಲಾ ವಿಷಯಗಳಲ್ಲೂ ಜಯಶೀಲರಾಗುವಿರಿ. ಸ್ತ್ರೀಯರಿಂದ ಕೊಂಚ ಕಿರಿಕಿರಿ. ಕುಟುಂಬದ ಹಿರಿಯ ಚೇತನಗಳನ್ನು ನೆನೆಯುವಿರಿ. ಇಷ್ಟು ದಿನದಿಂದ ಕಣ್ಮರೆಯಾಗಿದ್ದ ಶಿಸ್ತು ವಾರಾಂತ್ಯಕ್ಕೆ ಮರಳಿ ಬರಬಹುದು. ಸಿನಿಮಾ ಹಾಗು ಮನರಂಜನೆಗಾಗಿ ಖರ್ಚು. ಹಳೆಯ ವಾಹನವನ್ನು ಬದಲಾಯಿಸಲು ಇಚ್ಚಿಸುವಿರಿ.

ತುಲಾನಿದ್ರಾಹೀನತೆ ಮುಂದುವರೆಯುವ ವಾರ. ಒಂದು ತಿಂಗಳಿಂದ ಇದ್ದ ದ್ವಂದ್ವ ಈ ವಾರಕ್ಕೆ ಕೊನೆಯಾಗುವುದು. ವಾರದ ಆರಂಭದಲ್ಲಿ ಆತ್ಮ ಬಲ ಕಳೆದುಕೊಳ್ಳುವಿರಿ. ಇದರಿಂದ ಕೊಂಚ ವಿಚಲಿತರಾಗುವಿರಿ. ವಾರದ ಮಧ್ಯಭಾಗದಲ್ಲಿ ಕುಟುಂಬದಲ್ಲಿ ಕಿರಿಕಿರಿ. ವಾರಾಂತ್ಯಕ್ಕೆ ಆಸ್ತಿ ವಿಷಯವಾಗಿ ಚರ್ಚೆ ಅಥವಾ ಸಿಹಿ ಸುದ್ದಿ. ಸರ್ಕಾರಿ ಮಟ್ಟದ ಅಧಿಕಾರಿಯ ಭೇಟಿ ಅಥವಾ ಪರಿಚಯ. ನಿಮ್ಮ ಮಾತಿನಲ್ಲಿರುವ ಗಟ್ಟಿತನ, ಸತ್ಯಾಸತ್ಯತೆ, ವಿವರವಾಗಿ ತಿಳಿಹೇಳುವ ರೀತಿ ಬೇರೆಯವರನ್ನು ಆಕರ್ಶಿಸುತ್ತದೆ. ವೃಥಾ ಹಿರಿಯರಿಂದ ಅಪವಾದಕ್ಕೆ ಇಡಾಗುವ ವಾರ. ತಾಳ್ಮೆಯಿಂದ ವ್ಯವಹರಿಸಿದರೆ ಅಷ್ಟು ಕಿರಿಕಿರಿ ಅನಿಸದು. ದೇವಿಯ ದರ್ಶನದಿಂದ ಒಳಿತು ಕಾಣಬಹುದು.

ವೃಶ್ಚಿಕ ವಾರದ ಆರಂಭದಲ್ಲಿ ನಿಮ್ಮವರ ಬೆಂಬಲ ಸಿಗದು ಹಾಗು ನಿಮ್ಮ ನಡೆಗೆ ವಿರೋಧಗಳು ವ್ಯಕ್ತವಾಗುವುದು. ಆದರೆ ನಿಮ್ಮಲ್ಲಿರುವ ಗಟ್ಟಿತನ ಹಾಗು ಧೈರ್ಯ ಎಲ್ಲವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಇಷ್ಟುದಿನ ಪಟ್ಟ ಪರಿಶ್ರಮಕ್ಕೆ ಸಾರ್ತಕಥೆ ಕಾಣುವ ವಾರ. ಸರ್ಕಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಅಥವಾ ಉನ್ನತ ಉದ್ಯೋಗದಲ್ಲಿರುವ ವ್ಯಕ್ತಿಗಳ ಒಡನಾಟ ಅಥವಾ ಪರಿಚಯವಾಗಲಿದೆ. ಜ್ಞಾನ, ಬುದ್ಧಿ, ಶಕ್ತಿಯ ಸಮ್ಮಿಲನದಿಂದ ನಿಮ್ಮ-ನಿಮ್ಮ ಕ್ಷೇತ್ರಗಳಲ್ಲಿ ಒಂದು ಹೆಜ್ಜೆ ಮೇಲಕ್ಕೆ ಏರುವಿರಿ. ಇದಾಗಿಯೂ ನಿಮ್ಮ ಮೇಲಾಧಿಕಾರಿಗಳ ಮನ ಗೆಲ್ಲಲಾಗದು. ಸೂರ್ಯ ಅಥವಾ ವಿಷ್ಣುವಿನ ಆರಾಧನೆ – ದರ್ಶನದಿಂದ ಒಳಿತು ಕಾಣಬಹುದು.

ಧನಸ್ಸುವಾರದ ಆರಂಭದಲ್ಲಿ ಮೌನವಾಗಿ ನಿಮ್ಮ-ನಿಮ್ಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೆ ಒಳಿತು. ಇತರರ ಮಾತಿಗೆ ಮತ್ತು ಪ್ರಶ್ನೆಗಳಿಗೆ ತಲೆಕೆಡಿಸಿಕೊಳ್ಳದಿರಿ. ಎಡ ಕಿವಿ ಅಥವಾ ಎಡ ಕಣ್ಣಿನ ತೊಂದರೆಯಿಂದ ವೈದ್ಯರನ್ನು ಕಾಣಬಹುದು. ವಾರಾಂತ್ಯದಲ್ಲಿ ಆತ್ಮ ಬಲ ಹೆಚ್ಚು. ಧೈರ್ಯದಿಂದ ಮುನ್ನುಗ್ಗುವಿರಿ. ಷೇರು ವ್ಯವಹಾರ ಹಾಗು ಇನ್ನಿತರೆ ಹೂಡಿಕೆಗಳಿಂದ ದೂರವಿರಿ. ಚರ್ಮದ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಇತರರನ್ನು ನಂಬಿ ಹಣಹೂಡುವುದು ಅಥವಾ ನೌಕರರಿಗಾಗಿ ಹಣ ಕೊಡುವುದು ಸಲ್ಲದು. ಹನುಮನ ದರ್ಶನದಿಂದ ಒಳಿತು.

ಮಕರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಾರ. ವಾರದ ಆರಂಭದಲ್ಲಿ ಕೊಂಚ ಹಿನ್ನಡೆಯಾಗಿ, ನಿದ್ರಾಹೀನತೆಯೂ ಕಾಡಬಹುದು. ಆದರೆ ದಿನ ಕಳೆದಂತೆ ಸರಿಹೋಗುವುದು. ಉದ್ಯೋಗದಲ್ಲಿ ಇದ್ದ ಕಿರಿಕಿರಿ ಮುಂದುವರೆಯುವುದಾದರೂ ವಾರಾಂತ್ಯಕ್ಕೆ ಬದಲಾದ ಸನ್ನಿವೇಶವನ್ನು ನೋಡುವಿರಿ. ನಿಮ್ಮ ಕನಸ್ಸಿಗೆ ರೆಕ್ಕೆ-ಪುಕ್ಕ ಬೆಳೆಯುವ ವಾರ. ಉದ್ಯೋಗದ ಜೊತೆಗೆ ಬೇರೆಯ ವ್ಯವಹಾರಕ್ಕೆ ಕೈಹಾಕಲು ಆಲೋಚಿಸುತ್ತಿರುವ ನಿಮಗೆ ಇದು ಚರ್ಚೆಯ ವಿಷಯವಾಗಲಿದೆ. ಹಾಗಾಗಿಯೂ ನಿಮ್ಮ ಕಾರ್ಯ ದಕ್ಷತೆಯಿಂದ ನಿಮ್ಮ ಘನತೆಯನ್ನು ನಿಮ್ಮ ಕ್ಷೇತ್ರಗಳಲ್ಲಿ ಕಾಪಾಡಿಕೊಳ್ಳುವಿರಿ. ಹನುಮ ಹಾಗು ನರಸಿಂಹನ ಪ್ರಾರ್ಥನೆ ಒಳಿತು.

ಕುಂಭ ವಾರದ ಆರಂಭದಲ್ಲಿ ಎಲ್ಲವೂ ಸರಿಯಿದ್ದರೂ ನಿಮ್ಮ ಎಡವಟ್ಟಿನಿಂದ ಕಿರಿಕಿರಿ ಅನುಭವಿಸುವಿರಿ ಹಾಗು ವಾಸ್ತವ ಬದುಕಿನಿಂದ ದೂರವಿರುವಿರಿ. ಹಾಗಾಗಿಯೂ ವಾರದಲ್ಲಿ ಸ್ತ್ರೀಯರಿಂದ ಭಾಗ್ಯ. ಸಿನಿಮಾ, ಮನೋರಂಜನೆ, ಪ್ರಯಾಣ ಹಾಗು ಸುಗಂಧ ದ್ರವ್ಯ, ವಸ್ತ್ರಗಳಿಗೆ ಹಣ ಖರ್ಚು ಮಾಡುವಿರಿ. ವಾರಾಂತ್ಯಕ್ಕೆ ದೂರದ ಊರಿನಲ್ಲಿರುವ ಮೇಲಧಿಕಾರಿಗಳನ್ನು ಭೇಟಿ ಮಾಡುವಿರಿ. ಹೊಸ ಪ್ರಾಜೆಕ್ಟ್ ಒಂದಕ್ಕೆ ಸಹಿ ಹಾಕುವಿರಿ ಅಥವಾ ಚರ್ಚೆ ಆಗಲಿದೆ. ಮಕ್ಕಳ ವಿಷಯವಾಗಿ ಸಂತಸ ಅಥವಾ ಅವರ ಏಳಿಗೆ ಕಂಡು ಖುಷಿ ಪಡುವಿರಿ. ಹಾಗಾಗಿಯೂ ಅವರಿಗೆ ಶಿಸ್ತಿನ ಭೊಧನೆ ಮಾಡುವಿರಿ. ಕೈ ಕಾಲು ಬೇನೆಯಿಂದ ಬಳಲುವಿರಿ.

ಮೀನ ಉದ್ಯೋಗದಿಂದ ಉತ್ತಮ ಆದಾಯವಿದ್ದರೂ, ಉನ್ನತ ಹುದ್ದೆ ದೊರೆತರೂ ನಿಮ್ಮ ಕ್ಷೇತ್ರಗಳಲ್ಲಿ ಕಿರಿಕಿರಿ ಅನುಭವಿಸುವಿರಿ. ದಿನಕಳೆದಂತೆ ಸರಿ ಹೋಗುವುದು. ಕೆಲಸದ ಒತ್ತಡ ಹೆಚ್ಚಿದ್ದರೂ ಅದನ್ನು ನಿಭಾಯಿಸುವ ಚಾಣಾಕ್ಯತನ ನಿಮ್ಮಲ್ಲಿದೆ. ದೇಹದ ತೂಕ ಹೆಚ್ಚುತ್ತಿರುವುದರಿಂದ ಕೊಂಚ ಚಿಂತಾಕ್ರಾಂತರಾಗುವಿರಿ ಹಾಗು ಅದರ ಚರ್ಚೆಯಾಗುವುದು. ವಾರದ ಮಧ್ಯಬಾಗದಲ್ಲಿ ಮಕ್ಕಳ ವಿಷಯವಾಗಿ ಚಿಂತಾಕ್ರಾಂತರಾಗುವಿರಿ, ಸ್ವಲ್ಪ ಹೆಚ್ಚು ಸಮಯ ಅವರೊಡನೆ ಕಳೆಯುವುದು ಸೂಕ್ತ. ಸ್ನೇಹ ಹಾಗು ಸಂಬಂಧಗಳ ನಡುವೆ ಸಿಕ್ಕಿ ಅಧಿಕ ಕಾರ್ಯ ಒತ್ತಡಕ್ಕೆ ಸಿಲಿಕುವಿರಿ ಮತ್ತು ಅದರಿಂದ ಹೊರ ಬರಲಾರದೆ ಒದ್ದಾಡುವಿರಿ. ವಾಹನ ಚಾಲನೆ ಮಾಡುವಾಗ ಅತಿಯಾದ ವೇಗ ಒಳ್ಳೆಯದಲ್ಲ.

ಜ್ಯೋತಿಷ: ರವಿ ಕೃ, ಬೆಂಗಳೂರು

Tags