ಬಾಲ್ಕನಿಯಿಂದಸಂದರ್ಶನ

ಕಿರುತೆರೆ ವೀಕ್ಷಕರ ಮನಗೆದ್ದ ಸ್ಮೈಲ್ ಗುರು ರಕ್ಷಿತ್…

ಕಿರುತೆರೆ ವೀಕ್ಷಕರ ಮನಗೆದ್ದ ಧಾರಾವಾಹಿ ಪೈಕಿಯಲ್ಲಿ ಪದ್ಮಾವತಿಯೂ ಒಂದು. ಅಜ್ಜಿಯನ್ನು ಕಂಡರೆ ಸಾಕು ಗಡಗಡ ಎಂದು ನಡುಗುವ ಈ ವಿಕ್ರಮನ ಮುಗ್ದ ಮುಖ ಯಾರಿಗೆ ನೆನಪಿಲ್ಲ ಹೇಳಿ? ಕಥೆಯ ಮೂಲ ಕೊಂಡಿಯೇ ವಿಕ್ರಮ ಯಾಕೆಂದರೆ ಮನೆಯಲ್ಲಿ ಅಜ್ಜಿಯ ಕುತಂತ್ರಗಳನ್ನು ಬಲ್ಲ ಏಕೈಕ ವ್ಯಕ್ತಿ ಈತನೇ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ರಕ್ಷಿತ್ ಹುಟ್ಟಿ ಬೆಳೆದಿದ್ದು ಚಿಕ್ಕಮಗಳೂರಿನಲ್ಲಿ.

ಬಿಯಸ್ಸಿ ಇನ್ ಆ್ಯನಿಮೇಶನ್ ನಲ್ಲಿ ಪದವೀ ಪಡೆದ ನಂತರ ತನ್ನದೇ ಆದ ಸ್ವಂತ ಕಿರು ಚಿತ್ರ ಸ್ಮೈಲ್ ಗುರು ಎಂಬ ತಂಡವನ್ನು ರಚಿಸಿ ಹೊಸ ರೀತೀಯಲ್ಲಿ ಏನಾದರೂ ತಯಾರಿಸಬೇಕಂಬ ಛಲ ತೊಟ್ಟ ರಕ್ಷಿತ್ ಸ್ಯಾಂಡಲ್ ವುಡ್ ಗೆ ಸ್ಮೈಲ್ ಗುರು ಎಂಬ ಕಿರು ಚಿತ್ರ ಮೂಲಕ ಸ್ಟಾಪ್ ಮೋಷನ್ ಗ್ರಾಫಿಕಸ್ ನನ್ನು ಪರಿಚಯಿಸುವುದರಲ್ಲಿ ಯಶಸ್ವಿಯಾದರಲ್ಲದೆ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್. ಕಾಲಿವುಡ್ನ ಎಲ್ಲಾ ಕಿರು ಚಿತ್ರಗಳ ಟ್ರೈಲರ್ ನ ದಾಖಲೆಗಳನ್ನು ಮುರಿದು ಸ್ಮೈಲ್ ಗುರು ಕಿರು ಚಿತ್ರ 2 ಲಕ್ಷ ವೀಕ್ಷಕರು ವೀಕಿಸುವುದರ ಮೂಲಕ ಕನ್ನಡದಲ್ಲಿ ಹೊಸ ದಾಖಲೆಯ ಸಂಚಲವನ್ನೇ ಸೃಷ್ಟಿಸಿದಲ್ಲದೆ ಇನ್ನೇನು ಸದ್ಯದಲ್ಲೇ ಬಿಡುಗಡೆ ಹಂತಕ್ಕೂ ಸಜ್ಜಾಗಿದೆ.

ಹತ್ತನೇ ತರಗತಿಯಿಂದಲೇ ನಾಟಕದಲ್ಲಿ ಆಸಕ್ತಿ ಹೊಂದಿದ್ದ ರಕ್ಷಿತ್ ಸಿನಿಮಾ ನಿ‍ರ್ಮಾಣ ಮಾಡುವುದರಲ್ಲಿ ಹೆಚ್ಚು ಅಭಿರುಚಿ ಹೊಂದಿದ್ದರಂತೆ. ಹಾಗಾಗಿ 2 ವರ್ಷ ಡೈರೆಕ್ಟರ್ ಅಲೆಮಾರಿ ಸಂತು ಅವರ ಜೊತೆ ಸಿನಿಮಾ ಮೇಕಿಂಗ್ ಬಗ್ಗೆ ಕಲಿತು ತಾನೂ ಕೂಡ ಸಿನಿಮಾದಲ್ಲಿ ನಟಿಸಬೇಕೆನ್ನುವಷ್ಟರಲ್ಲಿ ಪದ್ಮಾವತಿ ನನ್ನ ಕೈ ಹಿಡಿಯಿತು ಎಂದು ಮುಗುಳ್ನಗೆಯೊಂದಿಗೆ ಹೇಳುತ್ತಾರೆ ರಕ್ಷಿತ್. ಕಿರುತರೆಯ ಮೂಲಕ  ಮೊಟ್ಟ ಮೊದಲ ಬಾರಿಗೆ ಎಂಟ್ರಿ ಕೊಟ್ಟ ನನಗೆ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸುವಾಗ ಗಾಬರಿಯಾಯಿತು ಎನ್ನುವ ರಕ್ಷಿತ್ ನಿಜ ಜೀವನದಲ್ಲಿ ತುಂಬಾ ಕೇರಿಂಗ್ ಹಾಗೂ ಲವಿಂಗ್ ನೇಚರಂತೆ ಹಾಗಾಗಿ ನನ್ನ ನಿಜ ಜೀವನದಲ್ಲಿ ನಾನು ಹೇಗೆ ಇದ್ದೇನೋ ಅದೇ ರೀತೀಯ ಪಾತ್ರ ಸಿನಿಮಾದಲ್ಲೂ ಸಿಕ್ಕಬೇಕು ಅದೇ ನನ್ನ ಕನಸಿನ ಪಾತ್ರ ಎನ್ನುತ್ತಾರೆ.

ಕಿರುತೆರೆಯಿಂದ ಹಿರಿತೆರೆಗೂ ಕಾಲಿಟ್ಟಿರುವ ರಕ್ಷಿತ್ ಈಗಾಗಲೇ ಭರ್ಜರಿ, ಹಾಗೂ ಕಾಲೇಜ್ ಕುಮಾರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮೊದಲಿನಿಂದಲೂ ಇವರಿಗೆ ಲೂಸ್ ಮಾದ ಯೋಗೇಶ್ ಅಂದರೆ ತುಂಬಾ ಇಷ್ಟವಂತೆ ಹಾಗೂ ಆ್ಯಕ್ಟಿಂಗ್ ನನಗೆ ತುಂಬಾ ಖುಷಿ ಕೊಟ್ಟಿದಲ್ಲದೆ ಈಗ ಅಭಿನಯಿಸುತ್ತಿರುವ ಪದ್ಮಾವತಿ ಧಾರಾವಾಹಿಯಲ್ಲಿ ವಿಕ್ರಮನ ಪಾತ್ರ ನನಗೆ ತುಂಬಾ ಖುಷಿ ನೀಡಿದೆ ಎನ್ನುತ್ತಾರೆ . ಹಿರಿಯ ಕಲಾವಿದರೊಂದಿಗೆ ನಟಿಸಲು ಸಿಕ್ಕಿದ ಅವಕಾಶವೇ ಒಂದು ಮರೆಯಲಾಗದ ಸಿಹಿ ನೆನಪು ಎನ್ನುವ ರಕ್ಕಿತ್ ನನ್ನ ಪ್ರತಿಭೆಯನ್ನು ಗರುತಿಸಿ ಇಂತಹ ಒಳ‍್ಳೆಯ ಅವಕಾಶವನ್ನು ಕಲ್ಪಿಸಿ ಕೊಟ್ಟ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಹಾಗೂ ಸತ್ಯ ಅವರಿಗೆ ಧನ್ಯವಾದ ಹೇಳಲು ಮರೆಯಲಿಲ್ಲ.

ಹಿಪ್ಪಾಪ್, ಕಾಂಟ್ಟೆಂಪ್ಪರರಿ, ಫ್ರೀ ಸ್ಟೈಲ್ ಹೀಗೆ ಹಲವಾರು ನೃತ್ಯವನ್ನು ಮಾಸ್ಟರ್ ಜಗದೀಶ್ ಅವರಿಂದ ಕಲಿತಿರುವ ರಕ್ಷಿತ್ ಅಂಬಿ ಉತ್ಸವ, ಸುವರ್ಣ ಚಾನೆಲ್ ಹೀಗೆ ಅನೇಕ ಚಾನೆಲ್ ಗಳಲ್ಲೂ ಶೋ ನೀಡಿದ್ದಲ್ಲದೆ ಕಾರ್ಪರೇಟ್ ಶೋಗಳನ್ನು ಕೂಡ ನೀಡಿದ್ದಾರೆ, ಅದಲ್ಲದೆ ಇವರದ್ದೇ ಆದ  ಸುಪೀರಿಯರ್ ಡ್ಯಾನ್ಸ್(ಸ್ಯಾಡ್) ಅಕಾಡೆಮಿ ನೃತ್ಯ ಶಾಲೆಯೂ ಇದೆ. ಸಂಜು ವೆಡ್ಸ್ ಗೀತಾ ಸಿನಿಮಾ ಬರಹಗಾರರಾದ ಮಂಜುನಾಥ್ ಸಂಜೀವ್  ಇವರ ಗಾಡ್ ಫಾದರ್. ಇವರ ಈ ಮಟ್ಟಗಿನ ಬೆಳವಣಿಗೆಯನ್ನು ಕಂಡ ಇವರ ತಂದೆ ತಾಯಿ ಮೊದಲಿಗೆ ಅಸಮಧಾನ ವ್ಯಕ್ತ ಪಡಿಸಿದರೂ ಈಗ ತುಂಬಾ ಸಂತಸ ವ್ಯಕ್ತ ಪಡಿಸುತ್ತಾರಂತೆ. ಈ ಕ್ಷೇತ್ರದಲ್ಲೇ ಮುಂದೆ ಬೆಳೆಯಬೇಕೆಂದು ಸಾವಿರ ಕನಸನ್ನು ಹೊತ್ತು ಸಾಗುತ್ತಿರುವ ರಕ್ಷಿತ್ ಗೆ ಮುಂದೆ ಸಕ್ಸಸ್ ಸಿಗಲಿ

 ಸುಹಾನಿ. ಬಡೆಕ್ಕಿಲ

 

 

Tags

Related Articles

Leave a Reply

Your email address will not be published. Required fields are marked *