ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

‘ರಾಧಾ ಮಿಸ್’ ಮನೆಯಲ್ಲಿ ಹೇಗಿದೆ ಗಣೇಶ ಹಬ್ಬದ ಆಚರಣೆ?

ಸಿಲಿಕಾನ್ ಸಿಟಿ ಗೊಂಬೆ ಕಾವ್ಯ ಗೌಡ ಟಾಕಿಂಗ್

*ಶ್ರುತಿ ನಾಯಕ್

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಎಂಬ ರಿಯಾಲಿಟಿ ಶೋನಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರತಿಭೆ. ಟೀನೇಜ್ ಹುಡುಗರ ಪಾಲಿನ ಪ್ರೀತಿಯ ಮೀರಾ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯ ‘ಬಕಾಸುರ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಯಾರಿವರು ಅಂತೀರಾ?

ಸದಾ ಮುಗುಳುನಗೆಯೊಂದಿಗೆ ಎಲ್ಲರ ಮೊಗದಲ್ಲೂ ನಗು ಮೂಡಿಸುವ ಕಾವ್ಯ ಗೌಡ ಪ್ರಸ್ತುತ ‘ರಾಧಾ ರಮಣ’ ಸೀರಿಯಲ್ ನ ನಾಯಕಿ ರಾಧಾ ಮಿಸ್.ಈ ಬಾರಿ ಹಬ್ಬದ ಪ್ರಯುಕ್ತ ಗೌರಿ ಗಣೇಶ ಹಬ್ಬದ ಆಚರಣೆಯ ಬಗ್ಗೆ ರಾಧಾ ಮಿಸ್ ಅಲಿಯಾಸ್  ಕಾವ್ಯ ಗೌಡ  ನಮ್ಮ ಬಾಲ್ಕನಿ ನ್ಯೂಸ್ ನಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಓದಿ…

‘ರಾಧಾ ರಮಣ’ ದಲ್ಲಿ ಗಣೇಶನನ್ನು ತುಂಬಾ ನಂಬತ್ತೀರಾ, ಪೂಜಿಸುತ್ತೀರಾ…ರಿಯಲ್ ಬದುಕಿನಲ್ಲಿ? 

ನಾನು ಎಲ್ಲಾ ದೇವರನ್ನು ತುಂಬಾ ನಂಬುತ್ತೇನೆ ಪೂಜಿಸುತ್ತೇನೆ. ಆದರೆ, ಶಿರಡಿ ಸಾಯಿ ಬಾಬಾ ದೇವರ ನಂಬಿಕೆ ಹೆಚ್ಚು. ಹಾಗೆಯೇ ಶಿರಡಿ ದೇವಸ್ಥಾನಕ್ಕೆ ಬಹಳ ಸಲ ಕುಟುಂಬದೊಂದಿಗೆ ಹೋಗಿ ಬಂದಿದ್ದೇನೆ.

ನಿಮ್ಮ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ ಹೇಗಿರುತ್ತೆ? 

ಹೌದು, ನಮ್ಮ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ ಸಿಂಪಲ್ ಆಗಿ ಚೆನ್ನಾಗಿಯೇ ಇರುತ್ತದೆ. ಮನೆ ತುಂಬ ಜನ, ಪುಟ್ಟ ಪುಟಾಣಿ ಮಕ್ಕಳು, ಗಣೇಶನಿಗಾಗಿಯೇ ಮೋದಕ ಮತ್ತು ಹಲವು ಬಗೆಯ ತಿಂಡಿಗಳು. ಮನೆಯಲ್ಲಿ ಒಂದೇ ದಿನ ನಾವು ಗಣೇಶ ನನ್ನು ಇಡುವುದು ಪೂಜೆಯ ವಿಧಾನದ ಪ್ರಕಾರ ವಿಸರ್ಜನೆ ಮಾಡುತ್ತೇವೆ. ಪರಿಸರ ಸ್ನೇಹಿ ಗಣೇಶ  ಬಗ್ಗೆ ನಿಮ್ಮ ಅಭಿಪ್ರಾಯ? 

ದಯವಿಟ್ಟು ಬಣ್ಣ ಲೇಪಿತ ಮೂರ್ತಿಗಳನ್ನು ಬಳಸಬೇಡಿ,ಕೆರೆ ಮತ್ತಿತರ ಜಲ ಮೂಲಗಳಲ್ಲಿ ವಿಸರ್ಜನೆ ಮಾಡಬೇಡಿ. ವಿಜೃಂಭಣೆಯ ಹೆಸರಿನಲ್ಲಿ ಪರಿಸರ ಮಾಲಿನ್ಯ ಉಂಟು ಮಾಡದೇ ಮಣ್ಣಿನ ಮೂರ್ತಿಗಳನ್ನು ಇಡುವುದು ಹೆಚ್ಚು ಸೂಕ್ತ ಅಲ್ಲವೇ.. ಅದನ್ನು ಪಾಲಿಸಿ ಎಂದು ಜನರಲ್ಲಿ ಕೇಳುತ್ತೇನೆ.ಬಾಲ್ಯದಲ್ಲಿ ಗಣೇಶ್ ಹಬ್ಬದ ಆಚರಣೆಗೂ ಈಗೀನ ಆಚರಣೆಗೂ ಎನು ವ್ಯತ್ಯಾಸ? 

ಚಿಕ್ಕಂದಿನಲ್ಲಿ ನಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸಲು ದುಡ್ಡು ಕಲೆಕ್ಟ್ ಮಾಡುವುದು. ಹಬ್ಬದಲ್ಲಿ ಕುಣಿಯುವುದು, ಆಗ ಮನೆಯಲ್ಲಿ ಹಬ್ಬ ಎಂದರೆ ಹೆಚ್ಚು ಜವಾಬ್ದಾರಿ ಇರಲಿಲ್ಲ. ಇದೀಗ ಎಲ್ಲವೂ ಬದಲಾಗಿದೆ.

ಹಬ್ಬದ ತಯಾರಿ ಹೇಗಿದೆ? 

ಬಾಲ್ಯದಲ್ಲಿ ನನಗೆ ಅಷ್ಟಾಗಿ ಮನೆಯಲ್ಲಿ ಜವಾಬ್ದಾರಿ ಇರುತ್ತಿರಲಿಲ್ಲ. ಶೂಟಿಂಗ್ ಬ್ಯೂಸಿಯಲ್ಲಿ ಹಬ್ಬದ ಕಾರ್ಯಕ್ರಮದಲ್ಲಿ ಅಷ್ಟಾಗಿ ಸಮಯ ಮೀಸಲಿಡಲಾಗುತ್ತಿಲ್ಲ.  

ಪಾತ್ರದ ನಾಯಕಿ ಬದಲಾಗಿದ್ದರು ಹೊಸ ‘ರಾಧಾಮಿಸ್’ ಅನ್ನು ಜನ ಒಪ್ಪಿಕೊಂಡಿದ್ದಾರೆ ಈ ಬಗ್ಗೆ? 

ಹಾರ್ಡ್ ವರ್ಕ್ ಮತ್ತು ಡೆಡಿಕೇಷನ್ ಇದ್ರೆ ಲೈಫ್ ಅಲ್ಲಿ ಎನು ಬೇಕಾದರೂ ಸಾಧಿಸಬಹುದು. ಹಾಗಾಗಿಯೇ ಕಡಿಮೆ ಸಮಯದಲ್ಲಿ ನನ್ನನ್ನು ಜನ ರಾಧಾ ಆಗಿ ಒಪ್ಪಿಕೊಂಡಿರುವುದು. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ಖುಷಿ ಇದೆ. ಹೀಗೆ ನಿಮ್ಮ ಪ್ರೀತಿ ಮತ್ತು ಸರ್ಪೋಟ್ ನನ್ನ ಮೇಲೆ ಇರಲಿ ಎಂಬುವುದು ನನ್ನ ಆಶಯ.

ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ?

ಇದೀಗ ‘ರಾಧಾ ರಮಣ’ ದಲ್ಲಿ ನಾಯಕಿ ಆಗಿ ನಟಿಸುತ್ತಿದ್ದೇನೆ ಜೊತೆಗೆ ಆಡ್ ಶೂಟ್ ಗಳಲ್ಲಿಯೂ ಬ್ಯೂಸಿ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಬಕಾಸುರ’ ಚಿತ್ರದ ಬಳಿಕ ಇದೀಗ ಇನ್ನಷ್ಟು ಸಿನಿಮಾ ಅವಕಾಶಗಳು ಬರುತ್ತಿದೆ ಒಂದೊಂದೇ ಕಥೆಗಳನ್ನು ಕೇಳುತ್ತಿದ್ದೇನೆ ಸೂಕ್ತ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು… ಧನ್ಯವಾದಗಳು. ಕನ್ನಡ ಇಂಡಸ್ಟ್ರಿಯ ಈ ಅದ್ಬುತ ಕಲಾವಿದೆಗೆ ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಎರಲಿ ಎಂಬುದೇ ನಮ್ಮ ಬಾಲ್ಕನಿ ನ್ಯೂಸ್ ತಂಡದ ಶುಭ ಹಾರೈಕೆ.

#radharamana #radhamiss #kavyagowda #radha #colorskannada #sandalwood #ganeshfestival

Tags