ಜೀವನ ಶೈಲಿಫ್ಯಾಷನ್ಸಂದರ್ಶನಸೌಂದರ್ಯ

ಭಾವಿ ಪತಿಯೊಂದಿಗೆ ಗಣೇಶ ಹಬ್ಬ ಆಚರಿಸ್ತಾರಂತೆ ನಟಿ ದೀಪಿಕಾ

ಆಕಷ೯ ಮನೆಯ ‘ಕುಲವಧು’ ನಮ್ಮ ಈ ಧನ್ಯ..

*ಶ್ರುತಿ ನಾಯಕ್

ಸಂಜೆಯಾಗುತ್ತಲೇ ಟಿವಿ ಮುಂದೆ ಕೂತರೆ ಬರುವಳು ಒಬ್ಬಳು ಮೌನ ಗೌರಿ. ಎಲ್ಲರನ್ನು ನಗಿಸಿ ಅಳಿಸುವ ವಧು. ಯಾರಿವಳು ಅಂತೀರಾ? ಮನೆಗೆ ದೀಪ ಬೆಳಗುವ ವೇಳೆಯಲ್ಲಿ ಮನೆ ಮನಗಳನ್ನು ದೀಪ ಬೆಳಗಲು ಬರುತ್ತಾರೆ ‘ಕುಲವಧು’ ಧನ್ಯ ಅಲಿಯಾಸ್ ದೀಪಿಕಾ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಸೀರಿಯಲ್ ಎಷ್ಟೋಂದು ಖ್ಯಾತಿ ಪಡೆದಿದೆ ಎಂದರೆ ಮನೆಯ ನಾರಿಯರು ನಮ್ಮ ಮನೆಯಲ್ಲಿ ಇಂತಹ ಜವಬ್ದಾರಿಯುತ ಸೊಸೆ ಇರಬಾರದ ಎಂದು ಅಂದುಕೊಳ್ಳುವಷ್ಟು ಧನ್ಯ ಪಾತ್ರಧಾರಿ ದೀಪಿಕಾ ಮೋಡಿ ಮಾಡಿದ್ದಾರೆ. ಕಿರುತೆರೆ ಅಲ್ಲದೇ ಹಿರಿತೆರೆಯಲ್ಲೂ ‘ನನ್ ಮಗಳೇ ಹೀರೋಯಿನ್’ ಮತ್ತು ‘ಚಿಟ್ಟೆ’ ಚಿತ್ರದಲ್ಲಿಯೂ ಮಿಂಚಿದ್ದಾರೆ.ಗೌರಿ ಗಣೇಶ ಹಬ್ಬದ ಆಚರಣೆಯ ಬಗ್ಗೆ ದೀಪಿಕಾ ನಮ್ಮ ಬಾಲ್ಕನಿ ನ್ಯೂಸ್ ನಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್ ಸ್ಟೋರಿ..

 ನಿಮ್ಮ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ ಹೇಗಿರುತ್ತೆ? 

ನಮ್ಮ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ ಸಿಂಪಲ್ ಆಗಿ ಚೆನ್ನಾಗಿಯೇ ಇರುತ್ತದೆ. ಮನೆಗೆ ಗಣೇಶ ತರುತ್ತೀವಿ ಮುಂಚೆ ಮನೆಗೆ ಜನ ಬರುತ್ತಿದ್ದರು, ಈಗ ಕಾಲ ಬದಲಾಗಿದೆ ಸೇರುವುದು ಕಡಿಮೆ. ಗಣೇಶನಿಗಾಗಿಯೇ ಮೋದಕ ಮತ್ತು ಹಲವು ಬಗೆಯ ತಿಂಡಿಗಳು ತಯಾರಿಸುತ್ತೀವಿ. ಮನೆಯಲ್ಲಿ ಒಂದೇ ದಿನ ನಾವು ಗಣೇಶ ನನ್ನು ಇಡುವುದು ಮರುದಿನವೇ ಪೂಜೆಯ ವಿಧಾನದ ಪ್ರಕಾರ ವಿಸರ್ಜನೆ ಮಾಡುತ್ತೇವೆ.

ಬಾಲ್ಯದಲ್ಲಿ ಗಣೇಶ್ ಹಬ್ಬದ ಆಚರಣೆಗೂ ಈಗೀನ ಆಚರಣೆಗೂ ಏನು ವ್ಯತ್ಯಾಸ..?

ಚಿಕ್ಕಂದಿನಿಂದನೂ ನನಗೆ ಗಣೇಶ ಎಂದರೆ ತುಂಬಾ ಇಷ್ಟ. ಆಗ ಹೊಸ ಬಟ್ಟೆಗಳನ್ನು ಹಾಕಿ ಸಂಭ್ರಮಿಸುವುದರಲ್ಲಿ ಅದೇನೋ ಖುಷಿ. ಆದರೆ ಈ ಬಾರಿ ಬದಲಾವಣೆ ಎನೆಂದರೆ ನಾನು ಮದುವೆ ಆಗುವ ಹುಡುಗ ಆಕಷ೯ ಅವರ ಕುಟುಂಬದೊಂದಿಗೆ ಮಧುಗಿರಿಯಲ್ಲಿ ಆಚರಿಸುತ್ತೇನೆ.

ಇದೀಗ ಸೆಲೆಬ್ರಿಟಿ ಲೈಫ್ ನಡುವೆ ಹಬ್ಬದ ತಯಾರಿ ಹೇಗಿದೆ..?

ಸೆಲೆಬ್ರಿಟಿ ಆಗಿದ್ದೀನಿ ಅಂತ ಎನು ಬದಲಾವಣೆ ಆಗಿಲ್ಲ ಯಾಕೆಂದರೆ, ನಾನು ಎಷ್ಟೇ ಬ್ಯೂಸಿ ಇದ್ದರು ಗಣೇಶ ನ ಹಬ್ಬ ಆಚರಿಸುತ್ತೇನೆ. ಈ ಬಾರಿ ಎರಡು ಕುಟುಂಬ ಸೇರುವ ಕಾರಣ ಇನ್ನಷ್ಟು ಜೋರಾಗಿಯೇ ಇರುತ್ತದೆ.

ಪರಿಸರ ಸ್ನೇಹಿ ಗಣೇಶ  ಬಗ್ಗೆ ನಿಮ್ಮ ಫ್ಯಾನ್ಸ್ ಗೆ ಏನು ಮೆಸೇಜ್ ಕೊಡೋಕೆ ಇಷ್ಟಪಡತ್ತೀರಾ..?

ಮುಂಚೆ ನಾವು ಚಿಕ್ಕವರು ಇರಬೇಕಾದರೆ ಕಲರ್ ಕಲರ್ ಗಣೇಶ ತರುತ್ತೀದ್ದೀವಿ. ಆದರೆ ಈಗ ಮಣ್ಣಿನ ಗಣೇಶ ಇಡತ್ತೀವಿ. ನೀರಿಗೆ ಬಿಟ್ಟ ಮೇಲೆ ನೀರು ಕೊಳಕು ಆಗಬಾರದು ಇದರಿಂದ ಪರಿಸರ ಮಾಲಿನ್ಯ ಆಗಬಾರದು. ಇದರಿಂದ ನಾನು ಜನಗಳಿಗೆ ಕೇಳಿಕೊಳ್ಳುವುದು ಇಷ್ಟೇ ಎಲ್ಲರೂ ಮಣ್ಣಿನ ಗಣೇಶ ಇಡಿ ನಮ್ಮ ತರನೇ ಪ್ರಾಣಿ ಪಕ್ಷಿಗಳು ಇವೆ ಅವುಗಳು ಕೂಡ ಸೇಫ್ ಆಗಿ ಬದುಕಲಿ ಅಂತ ಅಷ್ಟೇ.

ಗಣೇಶ ಹಬ್ಬದ ಈ ಖುಷಿ ನಡುವೆ ನಿಮ್ಮ ಮದುವೆ ಬಗ್ಗೆ ಹೇಳಿ? 

ಹೌದು.. ನಾನು ಮತ್ತು ಆಕಷ೯ ಪ್ರೀತಿಸಿ ಮನೆಯವರ ಒಪ್ಪಿಗೆಯೊಂದಿಗೆ ನವೆಂಬರ್ ನಲ್ಲಿ ಮದುವೆಯಾಗುತ್ತಿದ್ದೇವೆ. ಹಬ್ಬ ಕೂಡ ಈ ಬಾರಿ ಅವರ ಕುಟುಂಬದೊಂದಿಗೆ ಆಚರಿಸುತ್ತೀರುವುದು ಖುಷಿ ಇದೆ.

ನೀವು ಮತ್ತು ಭಾವಿ ಪತಿ ಆಕಷ೯ ಜೋಡಿಯಾಗಿ ತೆರೆ ಮೇಲೆ ಬರುವ ಯೋಚನೆ ಇದ್ಯಾ..?

ಈಗಾಗಲೇ ‘ಕುಲವಧು’ ಸೀರಿಯಲ್ ನಲ್ಲಿ ಒಟ್ಟಿಗೆ ನಟಿಸಿದ್ದೇವೆ. ಒಳ್ಳೆಯ ಕಥೆ, ಪಾತ್ರ, ಅವಕಾಶ ಸಿಕ್ಕರೆ ಖಂಡಿತವಾಗಿ….. ಜೋಡಿಯಾಗಿ ನಟಿಸುತ್ತೇವೆ.

ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ..?

ಈಗಾಗಲೇ ಕಥೆ ಕೇಳಿದ್ದೇನೆ. ಖಾಸಗಿ ವಾಹಿನಿಯಲ್ಲಿ ಕಿರುತೆರೆ ಮೂಲಕ ಮತ್ತೆ ಜನರಿಗೆ ಮನರಂಜಿಸಲಿದ್ದೇನೆ. ಇನ್ನಷ್ಟೇ ಶೂಟಿಂಗ್ ಶುರು ಆಗಲಿದೆ. ಹಾಗೆಯೇ ಸಿನಿಮಾ ಅವಕಾಶಗಳು ಬರುತ್ತಿದೆ. ಒಂದೊಂದೇ ಕಥೆಗಳನ್ನು ಕೇಳುತ್ತಿದ್ದೇನೆ ಸೂಕ್ತ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು… ಧನ್ಯವಾದಗಳು.

ನಟಿ ದೀಪಿಕಾ ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಎರಲಿ ಎಂಬುದೇ ನಮ್ಮ ಬಾಲ್ಕನಿ ನ್ಯೂಸ್ ತಂಡದ ಆಶಯ ಆಲ್ ದಿ ಬೆಸ್ಟ್.

ಮದುವೆಯ ಬಳಿಕ ಮೊದಲ ಚತುರ್ಥಿ ಆಚರಿಸುತ್ತಿರುವ ಸೆಲೆಬ್ರಿಟಿಗಳು

#kulavadhu #colorskannada #dhanya #deepika #festivalinterview #sandalwood

Tags