ಸಂದರ್ಶನ

ಯಾವುದೇ ಪಾತ್ರಕ್ಕೂ ಜೀವ ತುಂಬುವ ಸಪ್ನ ರಾಜ್

ಪರದೆಯ ಮೇಲೆ ಸ್ಪಪ್ನ ರಾಜ್ ಅವರ ಮುಖ ಕಂಡೊಡನೆ ವೀಕ್ಷಕರಿಗೆ ನೆನಪಾಗುವ ಧಾರಾವಾಹಿ ಪದ್ಮಾವತಿ.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪದ್ಮಾವತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ? ಅಮೋಘ ಅಭಿನಯದಿಂದ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಇವರಿಗೆ ನಟನೆ ಪ್ರೌಢ ವಯಸ್ಸಿನಿಂದಲೂ ಕರಗತ. ಪದ್ಮಾವತಿಯಲ್ಲಿ ಪ್ರಭಾ ಪಾತ್ರದಲ್ಲಿ ಮಿಂಚುತ್ತಿರುವ ಇವರು ಈಗಾಗಲೇ ಸುವರ್ಣ ವಾಹಿನಿಯಲ್ಲಿ ದುರ್ಗಾ ಧಾರಾವಾಹಿ ಹಾಗೂ ತೆಲುಗಿನಲ್ಲಿ ನಾ ಪೇರು ಮೀನಾಕ್ಷಿ ಎನ್ನುವುದರಲ್ಲೂ ಅಭಿನಯಿಸಿ ತಮ್ಮ ನಟನೆಯ ಛಾಪನ್ನು ಮೂಡಿಸಿ ದಕ್ಷಿಣ ಭಾರತಾದ್ಯಂತ ಮನೆ ಮಾತಾಗಿದ್ದಾರೆ .

ಕಾಲೇಜು ದಿನಗಳಲ್ಲಿ ಅಂತ್ಯಾಕ್ಷರಿ ಕಾರ್ಯಕ್ರಮನ್ನು ನೀಡಿದ್ದರು. ನಂತರ ಇವರ ಪ್ರತಿಭೆಯನ್ನು ಕಂಡ ಕ್ಯಾಮರಾಮೆನ್ ನಾಗ ಅವರು ಕೇಬಲ್ ನೆಟ್ವರ್ಕ್ ಕಾರ್ಯಕ್ರಮವನ್ನು ನೀಡುವಿರಾ ಎಂದು ಕೇಳಿದ್ದಕ್ಕೆ ಒಲ್ಲೆ ಎನ್ನದ ಸ್ವಪ್ನ ಅವರು ನಂತರ ಉದಯ ಟಿವಿಯಲ್ಲಿ ನಿರೂಪಕಿಯಾಗಿ ಬಣ‍್ಣದ ಬದುಕಿಗೆ ಬಂದರು. ಬಿ ಆರ್ ಕೇಶವ್ ರವರ ಪ್ರಾಯಶ್ಚಿತ ಎನ್ನುವ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಹೀಗೆ ರಂಗಭೂಮಿಗೆ ಕಾಲಿಟ್ಟ ಇವರು ಮತ್ತೆ ಹಿಂದುರುಗಿ ನೋಡಲೇ ಇಲ್ಲ.  ಡಿಡಿ ಚಂದನ ವಾಹಿನಿಯಲ್ಲಿ ಜನನಿ , ಉದಯ ಟಿವಿಯಲ್ಲಿ ಶಕ್ತಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಎಲ್ಲರ ಮನೆ ಮಾತಾಗಿ 75 ಕ್ಕಿಂತಲೂ ಮಿಗಿಲಾದ ಧಾರಾವಾಹಿಯಲ್ಲಿ ಅಭಿನಯಿಸಿದ ಅನುಭವ ಇವರದಾಗಿದೆ.

ಯಾವುದೇ ಪಾತ್ರವನ್ನು ನೀಡಿದರೂ ಸರಿ ನಾನು ಶ್ರದ್ಧೆ, ಭಕ್ತಿಯಿಂದ ನಟಿಸುವೆ ಎನ್ನುವ ಇವರು ರನ್ನ, ರಂಗಿತರಂಗ, ಕೃಷ್ಣ ರುಕ್ಕು, ನಿಜ, ಪ್ರೀತಿಯ ಲೋಕ, ಶಿವಲಿಂಗ, ಭರ್ಜರಿ ಹೀಗೆ 10 ಕ್ಕಿಂತಲೂ ಮಿಗಿಲಾದ ಸಿನಿಮಾದಲ್ಲಿ ಅಭಿನಯಿಸಿ ಅಲ್ಲೂ ತಮ್ಮ ಪ್ರತಿಭೆಯ ಹೊಳಪನ್ನು ಮೂಡಿಸಿದ್ದಾರೆ. ಅಲ್ಲದೆ ಅನೇಕ ಅಡುಗೆ ಕಾರ್ಯಕ್ರಮದ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದಾರೆ ಕೇಬಲ್ ನೆಟ್ವರ್ಕ್ ನವರು ನಡೆಸಿದಂತಹ ಮಾಧ್ಯಮ ಸನ್ಮಾನ ಆವರ್ಡ್ಸ್ ನಲ್ಲಿ ವರ್ಸಟೈಲ್ ಪ್ರಶಸ್ತಿ ಸ್ವಪ್ನ ರವರಿಗೆ ಲಭಿಸಿದೆ.

ಹಿಂದೆಲ್ಲಾ ಡೈರೆಕ್ಟರ್ ನವರು ಇಂತಹ ಪಾತ್ರಗಳಿಗೆ ಇಂತಹ ವ್ಯಕ್ತಿಗಳೇ ಸೂಕ್ತ ಎಂದು ಅಭಿಪ್ರಾಯ ಪಡುತ್ತಿದ್ದರು, ಆದರೆ ಈಗ ಹಾಗಿಲ್ಲ ಯಾರೂ ಬೇಕಾದರೂ ಯಾವ ಪಾತ್ರವನ್ನೂ ಮಾಡಬಹುದು ಹಾಗೂ ನಾವು ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ಭಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವ ಸ್ವಪ್ನ ರಾಜ್ ಅವರಿಗೆ ಗಿರಿಜಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ ತಾಯಿಯ ಪಾತ್ರ ಹಾಗೂ ನಾನು ಹಿಂದೆ ಮಾಡಿದ ಆಸೆಗಳು ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ ಪಾತ್ರಗಳು ನನಗೆ ತುಂಬಾ ಹತ್ತಿರವಾದವು ಮತ್ತೆ ತುಂಬಾ ಖುಷಿ ಕೊಟ್ಟಿದೆ ಎಂದು ತಮ್ಮ ಅಂತರಾಳಾದ ಮಾತನ್ನು ಹೇಳುತ್ತಾರೆ.

ಮನೆಯಲ್ಲಿ ಎಲ್ಲರೂ ನನಗೆ ತುಂಬಾ ಸಹಕಾರ ನೀಡುತ್ತಾರೆ. ಹಿಂದೆಲ್ಲಾ ಸಿನಿಮಾ ಹಾಗೂ ಧಾರಾವಾಹಿ ವಿಭಿನ್ನವಾಗಿ ಇರುತ್ತಿತ್ತು ಆದರೆ ಈಗ ಹಾಗಿಲ್ಲ ಧಾರಾವಾಹಿಯನ್ನು ಸಿನಿಮಾದ ತರಹ ತೋರಿಸುತ್ತಾರೆ ಎಂದು ಧಾರವಾಹಿಗಳಲ್ಲಿ ಆದ ಅನೇಕ ಬದಲಾವಣೆಗಳನ್ನು ಬಿಚ್ಚಿಡುತ್ತಾರೆ ಸ್ವಪ್ನ ರಾಜ್

ಇವರಿಗೆ ಮಾಧುರಿ ದೀಕ್ಷಿತ್ ಎಂದರೆ ಬಲು ಇಷ್ಟ. ಈಗಿನ ಸಿನಿಮಾದಲ್ಲಿ ಮಧುರವಾದ ಗಾಯನಗಳ ಬದಲು ಜೋಶ್ ಮತ್ತು ಪಾಶ್ಚಿಮಾತ್ಯ ಸಂಗೀತಗಳು ಜಾಸ್ತಿ ಮೇಳೈಸಿವೆ ಹಾಗೂ ಹಳೆಯ ಮತ್ತು ಹೊಸ ಯುವ ಜನಾಂಗಗಳು ಇಷ್ಟ ಪಡುವ ಸಾಹಿತ್ಯ, ಸಂಗೀತ ಇತ್ಯಾದಿಗಳಲ್ಲಿ ವ್ಯತ್ಯಾಸಗಳಿವೆಯೆಂದು ಅವರ ಖಚಿತ ಅಭಿಪ್ರಾಯ.

ಸುಹಾನಿ.ಬಡೆಕ್ಕಿಲ

Tags