ಬಾಲ್ಕನಿಯಿಂದಸಂದರ್ಶನ

ಹಳ್ಳಿ ಹುಡುಗಿ ‘ಕಮಲಿ’ ಕಥೆ

ಕಮಲಿ ಎಂಬ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಲಿ ಪಾತ್ರದಲ್ಲಿ ಮಿಂಚುತ್ತಿರುವ ಮೈಸೂರಿನ ಬೆಡಗಿ ಅಮೂಲ್ಯ ನಮ್ಮೊಂದಿಗೆ ಮಾತಿಗೆ ಸಿಕ್ಕಾಗ…

 • ಅಭಿನಯದ ನಂಟು ಬೆಳೆದಿದ್ದು ಹೇಗೆ?

ನಾನು ಯಾರಿಗುಂಟು ಯಾರಿಗಿಲ್ಲ ಜೀ ಕನ್ನಡ ವಾಹಿನಿಯವರು ನಡೆಸಿಕೊಡುತ್ತಿದ್ದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮದ ನಂತರ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಒದಗಿ ಬಂತು.

 • ಅಭಿನಯಿಸಿದಂತಹ ಧಾರಾವಹಿಗಳು?

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸ್ವಾತಿಮುತ್ತು ನಾನು ಅಭಿನಯಿಸಿದ ಮೊದಲ ಧಾರಾವಾಹಿ. ನಂತರ ಪುರ್ನವಿವಾಹ ಜೀ ಕನ್ನಡ ವಾಹಿನಿಯಲ್ಲಿ, ಉದಯವಾಹಿನಿಯಲ್ಲಿ ಅರಮನೆ ಈಗ ಪ್ರಸ್ತುತ ಕಮಲಿ  ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ.

  • ನಿಮ್ಮ ಪಾತ್ರ ಹೇಗಿದೆ?

ತುಂಬಾ ಮುಗ್ದೆ ಹಾಗೂ ಹಳ್ಳಿ ಹುಡುಗಿಯ ಪಾತ್ರ. ವಿದ್ಯಾಭ್ಯಾಸದ ಕನಸನ್ನು ಹೊತ್ತು ತನ್ನ ಗುರಿ ಮುಟ್ಟುವಲ್ಲಿ ಯಶಸ್ಸು ಹೊಂದುತ್ತಾಳಾ ಎಂಬುದೇ ಕಥೆ.

 

 • ಭವಿಷ್ಯದಲ್ಲಿ ಎಂತಹ ಪಾತ್ರಗಳನ್ನು ಮಾಡುವ ಕನಸಿದೆ?

 

ನಟನೆಯನ್ನು ಚೆನ್ನಾಗಿ ಜನರಿಗೆ  ಮನಮುಟ್ಟುವಂತೆ ಮಾಡುವುದರ ಜೊತೆಗೆ ಎಲ್ಲಾ ರೀತಿಯ ಪಾತ್ರಗಳು ಇಷ್ಟ ಅದರಲ್ಲೂ ವಿಭಿನ್ನ ರೀತಿಯ ಪಾತ್ರಗಳು ಮಾಡಬೇಕೆಂಬ ಕನಸಿದೆ.

 • ಸಿನಿಮಾ ಆಫರ್?

ಬಂದಿದೆ. ಆದರೆ ಧಾರಾವಾಹಿಯಲ್ಲೇ ಬ್ಯುಸಿಯಾಗಿರುವುದರಿಂದ ಎರಡು ಕಡೆ ಗಮನ ಕೊಡಲು ಕಷ್ಟವಾಗುತ್ತೆ. ಮುಂದೆ ಒಳ‍್ಳೆಯ ಸಿನಿಮಾ ಆಫರ್ ಗಳು ಸಿಕ್ಕರೆ ಖಂಡಿತಾ ನಟಿಸುವೆ.

 • ನಿಮ್ಮ ಈ ಸಾಧನೆಗೆ ಬೆನ್ನೆಲುಬು ಯಾರು?

ನನ್ನ ಕುಟುಂಬವೇ ನನಗೆ ಬೆನ್ನೆಲುಬು. ತಾಯಿಗೆ ನಾನು ರಂಗಭೂಮಿಗೆ ಬಂದಿದ್ದು ತುಂಬಾ ಖುಷಿಯಾಯಿತು ಅಲ್ಲದೆ ನನ್ನ ಸ್ನೇಹಿತರು ಕೂಡ ಪ್ರೋತ್ಸಹಿಸಿದ್ದರು.

 • ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ?

ನಾವು ನಟಿಸುತ್ತಿದ್ದೇವೆ ಎನ್ನುವ ಬದಲು ಕೊಟ್ಟ ಪಾತ್ರಕ್ಕೆ ನಾವು ಜೀವ ತುಂಬ ಬೇಕು. ಜನರಿಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾಡಬೇಕು. ರಂಗಭೂಮಿಯಲ್ಲಿದ್ದು ಏನಾದರೂ ಸಾಧಿಸಿ ತೋರಿಸಬೇಕು.

 • ನಟನೆಯಿಂದ ಏನು ಕಲಿತಿರಿ?

ನಾನು ಮೊದಲು ತುಂಬಾ ನಾಚಿಕೆ ಸ್ಬಭಾವದವಳಾಗಿದ್ದೆ. ನಟನೆಗೆ ಕಾಲಿಟ್ಟ ಮೇಲೆ ಜನರ ಜೊತೆ ಬೆರೆಯುವದನ್ನು ಕಲಿಯುವದರೊಂದಿಗೆ ಧೈರ್ಯವಾಗಿ ಸಮಾಜವನ್ನು ಎದುರಿಸುವುದನ್ನು ಕಲಿತೆ.

 • ಧಾರಾವಾಹಿಗೆ ಬರುವ ಮುನ್ನ ನಟನಾ ತರಬೇತಿ ಪಡೆದುಕೊಂಡಿದ್ರಾ?

ಇಲ್ಲಾ. ಯಾವುದೇ ತರಬೇತಿ ಪಡೆದುಕೊಂಡಿಲ್ಲ.

 • ಕಲಾವಿದೆಯಾಗಿ ನಿಮ್ಮ ಗುರಿ?

ಧಾರಾವಾಹಿ ಅಥವಾ ಯಾವುದೇ ಮೂವಿ ಮಾಡಿದ್ರೂ ಒಳ‍್ಳೆಯ ಪಾತ್ರಗಳನ್ನ ಮಾಡಿ ಜನರಿಗೆ ಮನರಂಜಿಸಬೇಕೆನ್ನುವುದೇ ನನ್ನ ಆಸೆ.

 • ಜನರು ನಿಮ್ಮನ್ನು ಹೊರಗೆ ಹೇಗೆ ಗುರತಿಸುತ್ತಾರೆ?

ಹೆಚ್ಚಾಗಿ ಅರಮನೆ ಧಾರಾವಾಹಿಯ ಹಿತ ಎಂದೇ ಗುರುತಿಸುವರು ಹಾಗೂ ಇನ್ನೂ ಕೆಲವರು ಪುರ್ನವಿವಾಹದ ಸ್ವಾತಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ಈಗ ಕಮಲಿ ಎಂದು ಕರೆಯಲು ಶುರು ಮಾಡಿದ್ದಾರೆ

 • ನಿಮಗೆ ತುಂಬಾ ಖುಷಿ ಕೊಡೋ ನೆನಪು?

ಅತ್ಯುತ್ತಮ ನಟರು ಹಾಗೂ ನಿರ್ದೇಶಕರೊಂದಿಗೆ ಕೆಲಸ ಮಾಡುವುದೇ ತುಂಬಾ ಖುಷಿ . ಅದರಲ್ಲೂ ಹಿರಿಯ ನಟರಾದ ಪ್ರಣಯ ರಾಜ ಶ್ರೀನಾಥ್, ಜೈರಾಜ್ ಇವರೊಂದಿಗೆ ನಾನೂ ಅಭಿನಯಿಸಿದ್ದು ಮರೆಯಲಾಗದ ನೆನಪು.

ಸುಹಾನಿ.ಬಡೆಕ್ಕಿಲ

Tags