ಉದಯೋನ್ಮುಖರುಬಾಲ್ಕನಿಯಿಂದಸುದ್ದಿಗಳು

‘ರಾಯಣ್ಣನ ನಂತರ ಭರಮಣ್ಣ’

ಬಾಹುಬಲಿ,ಸೈರಾಗೆ ಸೆಡ್ಡು ಹೊಡೆವ ಬಿಚ್ಚುಗತ್ತಿ..!!

ಕನ್ನಡದ ಐತಿಹಾಸಿಕ ಸಿನಿಮಾ ‘ಬಿಚ್ಚುಗತ್ತಿ’ಯ ಚಿತ್ರೀಕರಣ ಭರದಿಂದ ಸಾಗಿದ್ದು ಸದ್ಯದಲ್ಲೇ ತೆರೆಗೆ ತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈ ಚಿತ್ರವು ಎರಡು ಭಾಗಗಳಾಗಿ ಮೂಡಿ ಬರಲಿದ್ದು ಮೊದಲ ಭಾಗದಲ್ಲಿ ದಳವಾಯಿ ದಂಗೆಯ ಬಗ್ಗೆ ಇರಲಿದೆ. ಈ ಚಿತ್ರವು ಸಾಹಿತಿ B.L ವೇಣು ಅವರ ಐತಿಹಾಸಿಕ ಕಾದಂಬರಿ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಇದರ ಆಧಾರಿತವಾಗಿದ್ದು ವೇಣು ಅವರೇ ಈ ಚಿತ್ರಕ್ಕೆ ಚಿತ್ರಕತೆಯನ್ನು ಬರೆದಿದ್ದಾರೆ.

 

Image result for bicchugatti trailer

ಇನ್ನು ಈ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಅವರ ಮಗ ‘ರಾಜವರ್ಧನ್’ ಭರಮಣ್ಣನಾಯಕನಾಗಿ ಅಭಿನಯಿಸುತ್ತಿದ್ದು, ಹರಿಪ್ರಿಯಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದು ರಾಜವರ್ಧನ್ ಗೆ ಮೊದಲ ಸಿನೆಮಾವಾಗಿದ್ದು, ಈ ಚಿತ್ರಕ್ಕಾಗಿ ರಾಜವರ್ಧನ್ ಅವರು ಒಂದು ವರ್ಷಗಳ ಕಾಲ ಕಳರಿ ಹಾಗೂ ಕತ್ತಿವರಸೆಗಳನ್ನು ಕಲಿತಿದ್ದಾರೆ. ರಾಜವರ್ಧನ್ ಗೆ ಹಂಸಲೇಖ ಅವರು ರಾಜ್‌ಕುಮಾರ್ ಅವರ ಮೊದಲ ಪದ ಹಾಗೂ ವಿಷ್ಣುವರ್ಧನ್ ಅವರ ಕೊನೆಯ ಪದಗಳನ್ನು ಸೇರಿಸಿ ರಾಜವರ್ಧನ್ ಎಂದು ಹೊಸ ನಾಮಕರಣ ಮಾಡಿದ್ದು ಮೊದಲ ಸಿನೆಮಾದಲ್ಲಿಯೇ ಗಾಂಧಿನಗರದ ಗಮನ ಸೆಳೆದಿದ್ದಾರೆ. ಇಲ್ಲಿಯವರೆಗೆ ಕಮರ್ಷಿಯಲ್ ಸಿನೆಮಾಗಳಲ್ಲೇ ನಟಿಸಿದ್ದ ಹರಿಪ್ರಿಯಾಗೆ ಪೌರಾಣಿಕ ಕುರುಕ್ಷೇತ್ರ ಚಿತ್ರದ ನಂತರ ಇದು ಮೊದಲ ಐತಿಹಾಸಿಕ ಚಿತ್ರವಾಗಿದ್ದು, ಸಾಹಸ ದ್ರಶ್ಯಗಳಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. .

ಚಿತ್ರದ ನಿರ್ದೇಶನದ ಹೊಣೆಯನ್ನುಹರಿಸಂತೋಷ್ ಅವರು  ಹೊತ್ತಿದ್ದು, ಸಂಗೀತವನ್ನು ನಾದಬ್ರಹ್ಮ ಹಂಸಲೇಖ ನೀಡುತ್ತಿದ್ದಾರೆ. ಫೆಬ್ರವರಿ 15ರಂದು ಚಿತ್ರತಂಡ ಸಿನಿಮಾದ ಮೊದಲ ಭಾಗದ ಟ್ರೈಲರ್ ರಿಲೀಸ್ ಮಾಡಿದ್ದು ಅದರಲ್ಲಿ ದಳವಾಯಿ ದಂಗೆಯ ಬಗ್ಗೆ ಆಸಕ್ತಿಕರ ವಿವರಗಳನ್ನು ತೋರಿಸಲಾಗಿದೆ. ಸಿನೆಮಾವು ಅದ್ದೂರಿಯಾಗಿ ತಯಾರಾಗಿದ್ದು ಕನ್ನಡದ ಚಿತ್ರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ. ಚಿತ್ರದ ಟ್ರೇಲರ್ ನಲ್ಲಿ ಹುಲಿಯ ಗ್ರಾಫಿಕ್ಸ್ ಫೈಟ್ ದ್ರಶ್ಯವು ಎಲ್ಲರ ಗಮನ ಸೆಳೆಯುತ್ತಿದೆ. ತೆಲುಗಿನ ಚಿತ್ರಗಳಾದ ಬಾಹುಬಲಿ,ಸೈರಾ ನರಸಿಂಹ ರೆಡ್ಡಿಯ ಮಟ್ಟಕ್ಕೆ ಮೂಡಿ ಬಂದಿದ್ದು, ಸಿನಿಮಾವನ್ನು ತೆರೆಯ ಮೇಲೆ ನೋಡಲು ಕಾತರಿಸುವಂತೆ ಮಾಡಿದೆ.

#bicchugattitrailer #kannadafilmnews #sandalwoodnews #kannadacinema #balkaninews # bicchugatti

Tags