ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ನೆಗೆಟಿವ್ ಪಾತ್ರದಲ್ಲಿ ನಟಿಸುವ ಅಭಿಲಾಷೆ ನನ್ನದು : ವರ್ಷಿತಾ

ಮಹಾನಗರಿಯ ಚೆಲುವೆ ವರ್ಷಿತಾಗೆ ನಟನೆಯೇ ಜೀವಾಳ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಇದ್ದುದ್ದರಿಂದ ಕಾಲೇಜು ದಿನಗಳಲ್ಲೇ ರಂಗ ಸೌರಭ ರಂಗ ತಂಡ ಸೇರಿಕೊಂಡರು. ರಾಜೇಂದ್ರ ಆಕೆಗೆ ನಟನೆ ಕರಗತವಾಯಿತು. ಮುಂದೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಾಗ ಬಂದ ಅವಕಾಶವನ್ನು ಅಲ್ಲಗಳೆಯದೇ ಬಾಚಿ ತಬ್ಬಿಕೊಂಡರು.

Image may contain: 8 people

ಕಲರ್ಸ್ ಕನ್ನಡ ವಾಹಿನಿಯ ಮನೆದೇವ್ರು ಧಾರಾವಾಹಿಯ ಅನು ಪಾತ್ರಧಾರಿಯಾಗಿ ನಟಿಸುತ್ತಿದ್ದ ವರ್ಷಿತಾ ಹೊಸದಾಗಿ ಕಿರುತೆರೆಗೆ ಪರಿಚಯವಾಗಿದ್ದರೂ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ತಿಂಡಿಪೋತಿ ಉಮಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ವರ್ಷಿತಾ.

Image may contain: 1 person, closeup

ಮಹಾನಗರಿಯ ಚೆಂದುಳ್ಳಿ ಚೆಲುವೆ ವರ್ಷಿತಾಗೆ ಮೊದಮೊದಲು ನಟನಾ ಕ್ಷೇತ್ರದಲ್ಲಿ ಸ್ವಲ್ಪ ಕಷ್ಟವಾಯಿತಂತೆ. ನಟನೆ ಅವರಿಗೆ ಹೊಸತಲ್ಲವಾದರೂ ತಂತ್ರಜ್ಞಾನದ ಅರಿವು ಅವರಿಗೆ ಅಷ್ಟೊಂದು ಇಲ್ಲದ ಕಾರಣ ಟೇಕ್, ಮಾನಿಟರ್, ಕಟ್ ಎನ್ನುವಾಗ ಕನ್ ಫ್ಯೂಸ್ ಆಗುತ್ತಿತ್ತಂತೆ. ಆದರೆ ಇದೀಗ ಅಭ್ಯಾಸವಾಯಿತು ಎಂದು ನಗುತ್ತಾ ಹೇಳುತ್ತಾರೆ.

ಮನೆದೇವ್ರು ಧಾರಾವಾಹಿಯೂ ಕುಟುಂಬ ಪ್ರಧಾನವಾದುದು. ಇದರಿಂದ ನಾನು ಕುಟುಂಬ ಮಹತ್ವ ಏನೆಂಬುದನ್ನು ಕಲಿತೆ. ಅಷ್ಟೇ ಅಲ್ಲ ನಾನು ಬೆಳಗ್ಗೆ ಬೇಗ ಏಳುವವಳೇ ಅಲ್ಲ. ಆದರೆ ಇದೀಗ ಶೂಟಿಂಗ್ ನಿಂದ ಆಗಿ ಬೇಗ ಏಳುವುದು ಅಭ್ಯಾಸವಾಗಿದೆ. ಶೂಟಿಂಗ್ ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಕಾರಣ ಬೇಗ ಎದ್ದು ಹೊರಡಬೇಕಾದುದು ಅನಿವಾರ್ಯ. ಅನು ಪಾತ್ರ ತನ್ನ ಜೀವನದಲ್ಲಿ ಅಷ್ಟು ಬದಲಾವಣೆ ಮಾಡಿದೆ ಎಂದು ತಮ್ಮ ಬಣ್ಣದ ಪಯಣವನ್ನು ವಿವರಿಸುತ್ತಾರೆ ಈ ಚೆಂದುಳ್ಳಿ ಚೆಲುವೆ.

Image may contain: 6 people, people smiling, people standing and indoor

ವರ್ಷಿತಾ ಇಂದು ಬಣ್ಣದ ಲೋಕದಲ್ಲಿ ಮನೆ ಮಾತಾಗುವುದಕ್ಕೆ ರಂಗಭೂಮಿ ಹಿನ್ನಲೆಯೇ ಕಾರಣ. ರಂಗಭೂಮಿಯಲ್ಲಿ ಇದ್ದುದ್ದರಿಂದ ನಟನೆಯ ರೀತಿ ನೀತಿಗಳೂ ಅವರಿಗೆ ಸಲೀಸಾಗಿ ತಿಳಿದಿತ್ತು. “ಮನೆದೇವ್ರು ನನಗೆ ಮೊದಲ ಧಾರಾವಾಹಿ. ಜನ ನನ್ನನ್ನು ಇಂದು ಅನು ಎಂದು ಗುರುತಿಸುವಾಗ ತುಂಬಾ ಖುಷಿಯಾಗುತ್ತದೆ ಎನ್ನುವ ವರ್ಷಿತಾ ರಂಗಭೂಮಿಗೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ.

‘’ರಂಗಭೂಮಿಯಲ್ಲಿ ಕಿರುತೆರೆಯಂತೆ ರಿಟೇಕ್ ಗಳಿಲ್ಲ, ಸ್ಟೇಜ್ ಮೇಲೆ ಹೋಗಿ ನಟಿಸಬೇಕು. ಆದರೆ ಕಿರುತೆರೆಯಲ್ಲಿ ಹಾಗಲ್ಲ. ತಪ್ಪಾದರೆ ತಿದ್ದಲೂ ಅವಕಾಶವಿರುತ್ತದೆ. ಇನ್ನು ಉಳಿದ ಕಲಾವಿದರನ್ನು ನೋಡಿ ಅವರಂತೆ ಅನುಕರಣೆ ಮಾಡುವುದಕ್ಕಿಂದ ಅವರಲ್ಲಿರುವ ಕಲೆಯನ್ನು ನಮ್ಮಲ್ಲಿ ಹೇಗೆ ಅಭಿವೃದ್ದಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯಬೇಕು ಎನ್ನುವ ಚೆಂದುಳ್ಳಿ ಚೆಲುವೆ ನಾಟಕ ತಂಡದೊಂದಿಗೆ ಇಡೀ ರಾಜ್ಯ ಸುತ್ತಿದ್ದಾರೆ. ಮೈಸೂರು ಮಲ್ಲಿಗೆ ನಾಟಕ ಮಾಡುವಾಗ ಸಣ್ಣ ತಪ್ಪು ಮಾಡಿದ್ದಕ್ಕೆ ನಿರ್ದೇಶಕರಿಂದ ಬೈಸಿಕೊಂಡಿದ್ದೆ ಎಂದು ಕಳೆದುಹೋದ ಕ್ಷಣಗಳನ್ನು ಮೆಲುಕುಹಾಕುತ್ತಾರೆ.

Image may contain: 1 person, standing

ನೆಗೆಟಿವ್ ಪಾತ್ರದಲ್ಲಿ ನಟಿಸುವ ಅಭಿಲಾಷೆ ನನ್ನದು ಎನ್ನುವ ವರ್ಷಿತಾಗೆ ಸುದೀಪ್ ಅವರ ಜೊತೆ ನಟಿಸುವ ಕನಸು. ಅವರಲ್ಲಿರುವ ವರ್ಸಿಟಾಲಿಟಿ ಎಲ್ಲರಲ್ಲೂ ಇಲ್ಲ. ಯಾವುದೇ ಪಾತ್ರವಾದರೂ ಸರಿ, ಅದಕ್ಕೆ ಅವರು ಬಹುಬೇಗನೇ ಹೊಂದಿಕೊಳ್ಳುತ್ತಾರೆ. ನಾನು ಕೂಡಾ ಅವರಂತೆ ಬೆಳೆಯಬೇಕು ಎನ್ನುವ ಬೆಂಗಳೂರು ಬೆಡಗಿಗೆ ಸುದೀಪ್ ಗೆ ನಾಯಕಿಯಾಗಿ ನಟಿಸುವ ಮಹದಾಸೆ. ಇನ್ನು ಮುಂದೆ ನಾಯಕಿ ಪ್ರಧಾನ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತೇನೆ ಎನ್ನುವ ವರ್ಷಿತಾಗೆ ಸಿನಿಮಾ, ಕಿರುತೆರೆಯಲ್ಲಿ ಮುಂದುವರಿಯುವ ಬಯಕೆ.

ಇಂತಿಪ್ಪ ಮುದ್ದು ಚೆಲುವೆಯ ಎಲ್ಲಾ ಕನಸುಗಳು ಆದಷ್ಟು ಬೇಗ ಈಡೇರಲಿ, ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಬರಲಿ ಎಂದು ನಮ್ಮ ಬಾಲ್ಕನಿ ನ್ಯೂಸ್ ಹಾರೈಸುತ್ತದೆ.

ಅನಿತಾ ಬನಾರಿ

‘ಅಂಬಾರಿ’ ಯೇರಿದ ‘ಖುಷಿ’ಯಲ್ಲಿ ‘ ಹುಲಿರಾಯ’ನ ಹುಡುಗಿ ದಿವ್ಯ

#varshitha #manedevrukannadaserial #paarukannadaserial #varshitha #serialactressvarshitha #interview

Tags