ಬಾಲ್ಕನಿಯಿಂದಸಂದರ್ಶನ

ಚಂದನವನದ ಚೆಂದುಳ್ಳಿ ಚೆಲುವೆ ಕಾರುಣ್ಯಾ ರಾಮ್!!!

ವಜ್ರಕಾಯ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಕಾರುಣ್ಯಾ ರಾಮ್ ಮೇಲುಕೋಟೆಯ ಬಿ.ಸಿ. ಚಂದ್ರಶೇಖರ್ ಮತ್ತು ಪ್ರೇಮಾ ದಂಪತಿಯ ಮಗಳು. ವಜ್ರಕಾಯ ಚಿತ್ರದಲ್ಲಿ ನಾಯಕಿ ನಂದಿನಿಯ ಪಾತ್ರಕ್ಕೆ ಜೀವ ತುಂಬಿದ ಕಾರುಣ್ಯಾ ಮುಂದೆ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ – 4  ರ ಸ್ಫರ್ಧಿಯಾಗಿ ಬಿಗ್ ಹೌಸ್ ನೊಳಗೆ ಕಾಲಿಟ್ಟರು. ಬಿಗ್‌ಬಾಸ್‌ ಮನೆಯೊಳಗೆ ಪ್ರತಿಸ್ಪರ್ಧೆಗಳಿಗೆ ಉತ್ತಮ ಸ್ಪರ್ಧೆ ನೀಡಿ ಹೊರಬಂದ ಕಾರುಣ್ಯಾರನ್ನು ಒಂದಷ್ಟು ಅವಕಾಶಗಳು ಅರಸಿ ಬಂದವು.

ಸಂತಸದ ಸಂಗತಿಯೆಂದರೆ ಬಿಗ್‌ಬಾಸ್‌ ರಿಯಾಲಿಟಿ ಶೋ ನಿಂದ ಕಾರುಣ್ಯಾ ಹೊರಬರುತ್ತಿದ್ದಂತೆ ಅವರ ಅಭಿನಯಿಸಿದ ಎರಡು ಕನಸು ಸಿನಿಮಾದ “ಕಿರಗೂರಿನ ಗಯ್ಯಾಳಿಗಳು” ತೆರೆಗೆ ಬರಲು ತಯಾರಾಗಿದ್ದವು. ಜೊತೆಗೆ ಎರಡು ಕನಸು ಚಿತ್ರದ ಸ್ವಾತಿ ಮತ್ತು ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಭಾಗ್ಯ ಪಾತ್ರಗಳು ಕಾರುಣ್ಯಾಗೆ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ತಂದುಕೊಟ್ಟವು.

ಕನ್ನಡದ ಭರವಸೆಯ ನಟಿ ಯರ ಸಾಲಿನಲ್ಲಿ ಹೆಸರು ಗಿಟ್ಟಿಸಿಕೊಂಡ ಕಾರುಣ್ಯಾ ಇನ್ನೇನು ಕಾರುಣ್ಯಾ ರಾಮ್‌ ನಟನಾ ಲೋಕದಲ್ಲಿ ಸಂಪೂರ್ಣ ಬ್ಯುಸಿ ಯಾಗಲಿದ್ದಾರೆ ಎಂದು ಎಲ್ಲರೂ ಆಲೋಚಿಸಿದ್ದರು. ಆದರೆ ಕಾರುಣ್ಯಾ ನಟನಾ ಲೋಕದಿಂದ ಕಾರುಣ್ಯಾ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು.

ಮುಂದೆ ರಂಗಭೂಮಿ, ಕೆಫೆ ಗ್ಯಾರೇಜ್ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ” ಒಬ್ಬ ಒಳ್ಳೆಯ ನಟಿಯಾಗಬೇಕು ಎಂಬುದು ನನ್ನ ಕನಸು. ಅದೇ ಕಾರಣದಿಂದ ನಾನು ಪಾತ್ರ ಆಯ್ಕೆ ಮಾಡುವಾಗ ಸಾಕಷ್ಟು ಆಲೋಚನೆ ಮಾಡುತ್ತೇನೆ. ನನ್ನ ಮಟ್ಟಿಗೆ ಪ್ರತಿ ಸಿನಿಮಾ ಪ್ರತಿ ಪಾತ್ರ ಕೂಡ ಹೊಸದಾಗಿರುತ್ತದೆ. ನನಗೆ ಕೇವಲ ನಾಯಕಿ ಪಾತ್ರಗಳು ಮಾತ್ರ ನನಗೆ ಸಿಗಬೇಕು ಎಂಬ ಆಸೆ ಇಲ್ಲ. ಯಾಕೆಂದರೆ ನಾನು ಎಲ್ಲ ತರದ ಪಾತ್ರಗಳನ್ನು ಮಾಡಬೇಕು ಎಂದು ಬಯಸುತ್ತೇನೆ. ನಾನು ಇಲ್ಲಿಯ ತನಕ ಅಭಿನಯಿಸಿದ ಮಾಡಿದ ಎಲ್ಲ ಚಿತ್ರಗಳಲ್ಲೂ ನನ್ನ ಜೊತೆಗೆ ಸಹ ಪಾತ್ರಗಳಿದ್ದರೂ, ನನ್ನ ಪಾತ್ರಗಳಿಗೆ ಅದರದ್ದೇ ಆದ ಮಹತ್ವವಿತ್ತು. ಸಿಗುವ ಪಾತ್ರಗಳಿಗಿಂತ ಅದಕ್ಕಿರುವ ಮಹತ್ವವಷ್ಟೇ ನನಗೆ ಮುಖ್ಯ”  ಎಂದು ಸಿನಿ ಪಯಣವನ್ನು ವಿವರಿಸುತ್ತಾರೆ ಕಾರುಣ್ಯಾ.

ಇಂತಿಪ್ಪ ಚಂದನವನದ ಚೆಲುವೆ ಕಾರುಣ್ಯಾ ಇದೀಗ ಕಿರುತೆರೆಯ ಅತಿ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋ ವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು. ಪ್ರತಿ ವಾರಾಂತ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತ ದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

  – ಅನಿತಾ ಬನಾರಿ

ಬಾಲಿವುಡ್ ಬ್ಯಾಡ್ ಬಾಯ್ ವಿರುದ್ಧ ಮತ್ತೆ ಗುಡುಗಿದ ಸೋನಾ ಮೋಹಪತ್ರ

Tags