ಬಾಲ್ಕನಿಯಿಂದಸಂದರ್ಶನ

ಕಿನ್ನರಿಯಲೊಬ್ಬ ಸಾಗರ್ …

ಕಿನ್ನರಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನ ಮೆಚ್ಚಿದ ಧಾರಾವಾಹಿ ಕಿನ್ನರಿಯನ್ನು ಇಷ್ಟ ಪಡದವರೇ ಇಲ್ಲ. ಪ್ರತಿ ಪಾತ್ರವೂ ತನ್ನದೇ ಆದ ಅಭಿಮಾನಿಗಳನ್ನು ಒಳಗೊಂಡಿದೆ ಎಂಬುದು ಸುಳ‍್ಳಲ್ಲ. ಕಿನ್ನರಿ ಧಾರಾವಾಹಿಯ ‘ನಂದು’ ಪಾತ್ರಧಾರಿಯಾಗಿ ಮಿಂಚಿ ಕಿರುತೆರೆ ವೀಕ್ಷಕರ ಮನಗೆದ್ದಿರುವ ಸಾಗರ್ ಗೌಡ ಮೂಲತಃ ಬೆಂಗಳೂರಿನವರು.

ಲಂಡನ್ ನಲ್ಲಿ ಎಂಬಿಎ ಪದವೀ ಮುಗಿಸಿ ನಂತರ ಬೆಂಗಳೂರಿನಲ್ಲಿ ಉನ್ನತ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಗೆ ಇವರ ಗೆಳೆಯರು ನಾಗಾಭರಣರವರು ನಡೆಸುತ್ತಿದ್ದ ನಟನಾ ತರಬೇತಿ ಕೇಂದ್ರದ ಬಗ್ಗೆ ಮಾಹಿತಿ ನೀಡಿದರಂತೆ ಹಾಗಾಗಿ ನಟನಾ ತರಬೇತಿ ಸೇರಿಕೊಂಡೆ. ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿಯಿಲ್ಲದ ನನಗೆ ನಟನಾ ತರಬೇತಿಗೆ ಸೇರಿದ ಮೇಲೆ ನನ್ನಲ್ಲಿ ಅನೇಕ ಬದಲಾವಣೆಗಳಾದವು ಅಷ್ಟೇ ಅಲ್ಲದೆ ಒಂದು ಹೊಸ ಜಗತ್ತೇ ಸಿಕ್ಕಿತು ಎಂದು ತಮ್ಮ ಮನದಾಳದ ಮಾತುಗಳನ್ನು ಆಡುತ್ತಾರೆ ಸಾಗರ್.

ಕಿನ್ನರಿ ಧಾರಾವಾಹಿಗೆ ಆಯ್ಕೆ ಆಗುವ ಮುನ್ನ ನಾನು ಬೈ2 ಬೆಂಗಳೂರು ಎಂಬ ಅಂತರ್ಜಾಲ ಧಾರಾವಾಹಿಯಲ್ಲಿ ನಟಿಸಿದ್ದೆ ಹಾಗೂ 2 ಅಂತರ್ಜಾಲ ಇಂಗ್ಲೀಷ್ ಧಾರವಾಹಿಯಲ್ಲೂ ನಟಿಸಿದ ಅನುಭವವಿದೆ ಎನ್ನುತ್ತಾರೆ. ಶಾಲಾ ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಹಾಗೂ ಇಂಗ್ಲೀಷ್ ನಾಟಕದಲ್ಲಿ ಅಭಿನಯಿಸುತ್ತಿದ್ದೆ ಎನ್ನುವ ಸಾಗರ್ ಗೆ ಯ‍‍ಶ್, ದರ್ಶನ್, ಸುದೀಪ್ ಅವರ ಅಭಿನಯವೇ ನನ್ನನ್ನು ನಟನಾ ಕ್ಷೇತ್ರಕ್ಕೆ ಸೆಳೆದಿದ್ದು ಅದಲ್ಲದೆ ಎಸ್ ಕ್ಯೂಸ್ ಮೀ ಸಿನಿಮಾ ನಟ ಸುನಿಲ್ ಹಾಗೂ ಡಾ|| ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಎನ್ನುತ್ತಾರೆ. ಕ್ಯಾಮರಾ ಮುಂದೆ ಮೊದಲ ಬಾರಿ ಅಭಿನಯಿಸಿದಾಗ ಯಾವುದೇ ರೀತೀಯ ಭಯವಾಗಲಿಲ್ಲ , ಕ್ಯಾಮರಾ ನನ್ನ ಗೆಳೆಯನಿದ್ದಂತೆ ಎನ್ನುವ ಇವರಿಗೆ ಡೈರೆಕ್ಟರ್ ಪ್ರೊಡಿಯೂಸರ್ ಹಾಗೂ ಹಲವಾರು ನಟರು ನನಗೆ  ಸ‍್ಫೂರ್ತಿ ಎನ್ನುತ್ತಾರೆ ಸಾಗರ್.

ಸಾಗರ್ ಗೆ ನಟನೆ ಜೀವನವೇನೆಂಬುದನ್ನು ಕಲಿಸಿದೆಯಂತೆ . ಮುಂದೆ ನನಗೆ  ಒಳ‍್ಳೆಯ ಅವಕಾಶಗಳು ಸಿಕ್ಕರೆ ನಾನು ಸಿನಿಮಾ, ಹಾಗೂ ಧಾರವಾಹಿಯಲ್ಲೇ ಮುಂದುವರಿಯಲು ಬಯಸುತ್ತೇನೆ ಎನ್ನುವ ಇವರು ಕಿನ್ನರಿಯಲ್ಲಿ ನಟಿಸಿದ ನಂದು ಪಾತ್ರಕ್ಕೂ ನಿಜ ಜೀವನದ ಸಾಗರ್ ಗೂ ಹೆಚ್ಚೇನು ವ್ಯತ್ಯಾಸವಿಲ್ಲ ಎಂದು ನಕ್ಕು ಹೇಳುತ್ತಾರೆ. ಕಿನ್ನರಿ ಸೆಟ್ನಲ್ಲಿ ನನಗೆ ದಿನ ಒಂದೊಂದು ಒಳ‍್ಳೆಯ ಅನುಭವಗಳು ಆಗುತ್ತಲೇ ಇರುತ್ತದೆ ಅದಲ್ಲದೆ ಕಿರಣ್ ರಾಜ್ ನನ್ನ ಆಪ್ತ ಗೆಳೆಯನೆಂದು ಅವರೊಂದಿಗೆ ನಟಿಸಿದಾಗ ಒಳ‍್ಳೊಳ‍್ಳೆಯ ಅನುಭವಗಳಾಗುತ್ತದೆ. ನಮ್ಮ ಕಿನ್ನರಿ ಟೀಮ್ನಲ್ಲಿ ಎಲ್ಲರೊಂದಿಗೂ ಒಳ‍್ಳೆಯ ಸ್ನೇಹ ಭಾವವಿದೆ ಎಂದು ಹೇಳಲು ಮರೆಯಲಿಲ್ಲ ಸಾಗರ್. ಬಿಡುವು ಸಿಕ್ಕಾಗಲೆಲ್ಲಾ ಜಿಮ್ ಗೆ ಹೋಗುವುದು, ಡ್ಯಾನ್ಸ್, ಮ್ಯೂಸಿಕ್, ಪುಸ್ತಕ, ಕ್ರಿಕೆಟ್ ಆಡುವುದು ಇವರ ಹವ್ಯಾಸ. ಫಿಟ್ನೆಸ್ ಅನ್ನುವುದು ಜೀವನಶೈಲಿ ಎನ್ನುತ್ತಾರೆ. ನನ್ನ ತಂದೆ ಸರಕಾರಿ ಉದ್ಯೋಗಸ್ಥರು ಅವರಿಗೆ ನಾನು ಮುಂದೆ ಸರಕಾರಿ ಉದ್ಯೋಗದಲ್ಲೇ ಮುಂದುವರಿಯಬೇಕೆಂಬ ಕನಸಿತ್ತು ಹಾಗಾಗಿ ಅವರಿಗೆ ಈಗಲೂ ನಾನು ನಟನಾ ಕ್ಷೇತ್ರದಲ್ಲಿರುವುದು ಮನಸ್ಸಿಲ್ಲ. ಆದರೆ ನನ್ನ ತಾಯಿಯ ಬೆಂಬಲವಿದೆ ಎನ್ನುವ ಸಾಗರ್ ಅವರಿಗೆ ಮುಂದೆ ಬಣ‍್ಣದ ಲೋಕದಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸೋಣ.

 ಸುಹಾನಿ.ಬಡೆಕ್ಕಿಲ

 

Tags