ಬಾಲ್ಕನಿಯಿಂದಸಂದರ್ಶನ

ಡ್ಯಾನ್ಸ್ ಗೂ ಸೈ ನಟನೆಗೂ ಸೈ ಕಿರಣ್ ರಾಜ್!!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವತೆ ಧಾರಾವಾಹಿಯ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿ ಈಗ ಕಿನ್ನರಿ ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿರುವ ಈತನ ಹೆಸರು ಕಿರಣ್ ರಾಜ್. ಕಿರಣ್ ಅವರು ಕಿನ್ನರಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ, ಒಮ್ಮೆ ಕಂಪೆನಿಯ

ಬಾಲ್ಯದಿಂದಲೂ ಸಿನಿಮಾ ಡೈರೆಕ್ಷನ್ ಮಾಡಬೇಕೆಂಬ ಆಸಕ್ತಿಯಿದ್ದುದರಿಂದ ಬಿಸಿಎ ಮುಗಿದ ತಕ್ಷಣ ಮುಂಬಾಯಿ ಎಂಬ ಮಹಾನಗರಿಯಲ್ಲಿ ಫಿಲ್ಮ್ ಮೇಕಿಂಗ್ ಡಿಗ್ರಿ ಸೇರಿಕೊಂಡೆ ಆದರೆ ಮುಂದೆ ಅನೇಕ ಧಾರಾವಾಹಿ ಆಫರ್ ಗಳು ಬಂದಾಗ ಒಲ್ಲೆ ಎನ್ನದ ಕಿರಣ್ ರಾಜ್ ಜೀ ಟೀವಿ, ಸ್ಟಾರ್ ಪ್ಲಸ್, ಬಿಂದಾಸ್, ಜೀ ಕೆಫೆ ಹಿಂದಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ನಟಿಸಿ ಎಲ್ಲರ ಮನ ಗೆದ್ದ ಕಿರಣ್ ನಂತರ ಕನ್ನಡದಲ್ಲಿ ಲೈಫ್ ಸೂಪರ್ ಗುರು, ಡ್ಯಾನ್ಸ್ ಡ್ಯಾನ್ಸ್ ಹಾಗೂ ಅನೇಕ ಶೋಗಳಲ್ಲಿ ಭಾಗವಹಿಸಿ ಸೈ ಅನಿಸಿಕೊಂಡ ಕಿರಣ್ ಗೆ ಕನ್ನಡ ಧಾರಾವಾಹಿಗಳಲ್ಲೂ ನಟಿಸುವ ಅವಕಾಶ ಒದಗಿ ಬಂತು. ಅದಲ್ಲದೆ ಈಗ ಅವರು ಮೂರು ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಕಾಲೇಜ್ ದಿನಗಳಲ್ಲಿ ನಾನು ಡ್ಯಾನ್ಸ್ ಕೊರಿಯೋಗ್ರಾಫಿ ಮಾಡುತ್ತಿದ್ದೆ ಡ್ಯಾನ್ಸ್ ಎಂದರೆ ನನಗೆ ಬಹಳ ಇಷ್ಟ ಎನ್ನುತ್ತಾರೆ ಕಿರಣ್. ಮುಂದೆ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸಬೇಕೆಂಬ ಮಹದಾಸೆಯನ್ನು ಹೊಂದಿರುವ ಇವರಿಗೆ ಕಿನ್ನರಿ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಬಹಳಷ್ಟು ಖುಷಿ ನೀಡಿದೆಯಂತೆ. ಕಿರಣ್ ಅವರಿಗೆ ಎಚೀವ್ ಮೆಂಟ್ ಪ್ರಶಸ್ತಿ ಹಾಗೂ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯೂ ದೊರಕಿದೆ. ನನಗೆ ಧಾರಾವಾಹಿ ಹಾಗೂ ಸಿನಿಮಾ ಎರಡೂ ಒಂದೇ, ಧಾರಾವಾಹಿಯಲ್ಲೂ ಹಾಗೂ ಸಿನಿಮಾದಲ್ಲೂ ಅಭಿನಯಿಸಬೇಕಾದುದರಿಂದ ಜನಗಳು ನನ್ನನ್ನು ಯಾವುದರಲ್ಲಿ ಹೆಚ್ಚು ಕಾಣಲು ಇಷ್ಟ ಪಡುತ್ತಾರೋ ಅದರೆ ಮೇಲೆ ನನ್ನ ನಿಲುವು ನಿಂತಿದೆ ಎನ್ನುತ್ತಾರೆ. ಇವರು ನಟಿಸಿದ ಅಸತೋಮ ಸದ್ಗಮಯ ಚಿತ್ರ  ಜುಲೈ 6 ಕ್ಕೆ ಬಿಡುಗಡೆಯಾಗಲಿದೆ. ಹಾಗೂ ಹಿಂದಿಯಲ್ಲಿ ಪ್ರಸಾರವಾಗುವ ತೂ ಆಶಿಕಿ ಧಾರವಾಹಿಯಲ್ಲೂ ಅಭಿನಯಿಸುತ್ತದ್ದಾರೆ

ಬಿಡುವು ಸಿಕ್ಕಾಗಲೆಲ್ಲಾ ಕಿರಣ್ ಅವರ ತಂದೆ ತಾಯಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವುದಲ್ಲದೆ, ಅವರದ್ದೇ ಸಂಸ್ಥೆಯಾದ ಕಿರಣ್ ಫೌಂಡೇಶನ್ ನಲ್ಲಿ ತಮ್ಮ ಹೆಚ್ಚಿನ ಸಮಯನ್ನು ಕಳೆಯುತ್ತಾರೆ .ಇವರಿಗೆ ನಟನೆಯು ಜೀವನವೇನೆಂಬುದನ್ನು ಕಲಿಸಿದೆಯೆಂದು ನಗು ಮೊಗದಿಂದ ಹೇಳುತ್ತಾರೆ. ಕಿರಣ್ ಗೆ ಅವರ ತಂದೆಯೇ ಬೆನ್ನೆಲುಬಂತೆ ಅಲ್ಲದೆ ಇವರನ್ನು ಹೊರಗೆ ಕಿರಣ್ ರಾಜ್ ಎಂದೇ ಇವರನ್ನು ಜನರು ಗುರುತಿಸುತ್ತಾರೆ ಎನ್ನುವ ಕಿರಣ್ ರಾಜ್ ಅವರ ಕನಸು ನನಸಾಗಲಿ.

     ಸುಹಾನಿ.ಬಡೆಕ್ಕಿಲ

 

Tags