ಬಾಲ್ಕನಿಯಿಂದಸುದ್ದಿಗಳು

ಟೀಸರ್ ರಿಲೀಸ್ ಗೆ ಡೇಟ್ ಫಿಕ್ಸ್ – ಕಿಚ್ಚನ ಹೊಸ ಸಿನಿಮಾ ಕೋಟಿಗೊಬ್ಬ-3..

ಸದ್ಯದಲ್ಲೇ ಸಿನಿಮಾ ತೆರೆಯ ಮೇಲೆ ಬರಲಿರುವ ಕೋಟಿಗೊಬ್ಬ-3

ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳಿಗೆ ಒಂದೊಳ್ಳೆ ಸಂತಸದ ಸುದ್ದಿ ಕೋಟಿಗೊಬ್ಬ-3 ಚಿತ್ರತಂಡದಿಂದ ಸಿಕ್ಕಿದೆ. ಬಹು ನಿರೀಕ್ಷೆ ಹುಟ್ಟಿಸಿರುವ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಟೀಸರ್ ಅನ್ನುಇದೇ ಫೆಬ್ರವರಿ 21ರಂದು ಚಿತ್ರತಂಡ ರಿಲೀಸ್ ಮಾಡಲಿದ್ದು, ಟೀಸರ್ ನಲ್ಲಿ ಸುದೀಪ್ ರೇಸ್ ಬೈಕ್ ಮೇಲೆ ಕುಳಿತುಕೊಂಡು ಬರಲಿದ್ದಾರೆ.

ಚಿತ್ರತಂಡವು ಸುದೀಪ್ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ಸೆಪ್ಟೆಂಬರ್ 1ರಂದು ಬರ್ತ್ ಡೇ ಟೀಸರ್ ಅನ್ನು ರಿಲೀಸ್ ಮಾಡಿದ್ದರು . ಹಾಗೆಯೇ ಸಂಕ್ರಾಂತಿಯಂದು ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು.

 

ಕೋಟಿಗೊಬ್ಬದಲ್ಲಿ ಸುದೀಪ್​ ಗೆ ನಾಯಕಿಯಾಗಿ ಮಲ​ಯಾಳಿ ನಟಿ ಮಡೋನ್ನಾ ಸೆಬಾ​ಸ್ಟಿಯನ್‌ ಜೊತೆಯಾಗಿದ್ದೂ, ತೆಲು​ಗಿನ ಶ್ರದ್ಧಾ ದಾಸ್‌ ಬಹು ಮುಖ್ಯ​ವಾದ ಪಾತ್ರ ಮಾಡಿ​ದ್ದಾರೆ. ಶಿವಕಾರ್ತಿಕ್​ ನಿರ್ದೇಶಿಸಿರುವ ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ. ಚಿತ್ರದ ಅಂತಿಮ ಕೆಲಸಗಳು ಭರದಿಂದ ಸಾಗಿದ್ದು, ಸದ್ಯದಲ್ಲೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಶ್ರಮಿಸುತ್ತಿದೆ.

#kichasudeep #kotigobba3 #balkaninews #sudeepnewmovie #sandalwoodstory #sandalwoodnews

Tags