ಬಾಲ್ಕನಿಯಿಂದವಿಡಿಯೋಗಳು

“ಕುಚ್ಚಿಕೂ ಕುಚ್ಚಿಕು” ಚಿತ್ರದ ಎಕ್ಸಕ್ಲೂಸಿವ್ ವಿಡಿಯೋ ಹಾಡುಗಳು ನಿಮಗಾಗಿ

ಇದೇ ಜುಲೈ 6 ರಂದು ಶ್ರೀ ಜಯಣ್ಣ-ಭೋಗೇಂದ್ರ ಅವರ ಹಂಚಿಕೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ದವಾಗಿರುವ ಚಿತ್ರ “ಕುಚ್ಚಿಕೂ ಕುಚ್ಚಿಕು”. ಇದು ದಿವಂಗತ ಡಿ. ರಾಜೇಂದ್ರ ಬಾಬು ಅವರ ಕೊನೆಯ ಚಿತ್ರವಾಗಿದ್ದು, ಚಿತ್ರದಲ್ಲಿ ಜಯರಾಮ್ ಕಾರ್ತಿಕ್, ಪ್ರವೀಣ್ ಕುಮಾರ್ ಹಾಗೂ ನಕ್ಷತ್ರಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ರಮೇಶ್ ಭಟ್, ಸುಮಿತ್ರಾದೇವಿ ಸೇರಿದಂತೆ ಅನೇಕರು ಕಲಾವಿದರು ಚಿತ್ರದಲ್ಲಿದ್ದಾರೆ. ಹಾಗೂ ಈ ಚಿತ್ರವು ನೆಗೆಟಿವ್ ರೀಲ್ ನಲ್ಲಿ ಚಿತ್ರಿತಗೊಂಡ ಕೊನೆಯ ಚಿತ್ರವಾಗಿದೆ.

ನಟಿ ನಕ್ಷತ್ರಾ ಅವರು ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಮಗಳಾಗಿದ್ದಾರೆ. ರಿಯಲ್ ನಲ್ಲಿ ಇರುವಂತೆ ಚಿತ್ರದಲ್ಲಿಯೂ ಸುಮಿತ್ರಾ ದೇವಿಯವರ ಮಗಳಾಗಿ ಕಾಣಿಸಿಕೊಂಡಿದ್ದು, ಚಿತ್ರದ ಹಾಡುಗಳು ಗಮನ ಸೆಳೆಯುತ್ತವೆ.

ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಎಮ್.ಯೂ ನಂದಕುಮಾರ್ ಅವರ ಛಾಯಾಗ್ರಹಣವಿದೆ. ಶ್ರೀ ಚಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿ “ಕುಚ್ಚಿಕೂ ಕುಚ್ಚಿಕು” ಚಿತ್ರವನ್ನು ಎನ್.ಕೃಷ್ಣಮೂರ್ತಿ ಅವರು ನಿರ್ಮಾಣ ಮಾಡಿದ್ದಾರೆ.

1 ಆಯಾಬುಸ.. ಐ ಲವ್ ಯೂ ..

ಈ ಹಾಡನ್ನು ಸ್ನೇಹ ಅವರು ಹಾಡಿದ್ದಾರೆ.

2 ಬ್ಯಾಡ್ರೋಲೇಯ್…

ಈ ಹಾಡನ್ನು ಟಿಪ್ಪು ಅವರು ಹಾಡಿದ್ದಾರೆ.

3 ಓಯೆ ಪ್ರೇಯಸಿ

ಈ ಹಾಡನ್ನು ಹೇಮಂತ್ ಅವರು ಹಾಡಿದ್ದಾರೆ.

4 ರೆಕ್ಕೆ ಸೋತ ಮೇಲೆ ತಾನೇ..

ಈ ಹಾಡನ್ನು ಹೇಮಂತ್ ಹಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *