ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಮನರಂಜಿಸುವ ‘ರಾಮಾಚಾರಿ’

2016 ನವ್ಹಂಬರ್ 8 , ನಮ್ಮ ದೇಶದಲ್ಲಿ ನೋಟುಗಳು ಬ್ಯಾನ್ ಆದ ದಿನ. ಆ ಸಮಯದಲ್ಲಿ ನಡೆದಂತಹ ಹಲವಾರು ವಿದ್ಯಮಾನಗಳಲ್ಲಿ ಬ್ಲಾಕ್ ಮನಿ ಇದ್ದಂತಹ ನೂರಾರು ಜನರು ಅದನ್ನು ವೈಟ್ ಮಾಡಿಕೊಳ್ಳಲು ಕಂಡು ಹಿಡಿದುಕೊಂಡ ಹಣದ ಬದಲಾವಣೆಯ ಐಡಿಯಾ ಮತ್ತು ಅಂತಹ ಸಂದರ್ಭದಲ್ಲಿ ಉಳ‍್ಳವರ ಮತ್ತು ಕೊಡುವವರ ನಡುವೆ ಒಬ್ಬ ವ್ಯಕ್ತಿ ಹುಟ್ಟಿಕೊಳ್ಳುತ್ತಾನೆ, ಅವನೇ ಚೀಟರ್..

ಈ ಚೀಟರ್ ಮೋಸ ಮಾಡುವವರ ದುಡ್ಡನ್ನು ಕದ್ದು ಏನ್ ಮಾಡ್ತಾನೆ.. ಅದರಿಂದ ಸಮಾಜಕ್ಕೆ ಏನೆಲ್ಲಾ ಅನುಕೂಲಗಳಾಗುತ್ತವೆ ಅದರ ಜೊತೆಗೆ ಬಡವರ ಬವಣೆ, ಫೈನಾನ್ಸರ್ಸ್ ಗಳ ಅಧಿಕ ಬಡ್ಡಿಯ ಕರಾಳತೆ, ಬದುಕಲು ಮೈ ಮಾರಿಕೊಳ್ಳುವ ಹೆಣ್ಣು ಮಕ್ಕಳ ಜೀವನಗಾಥೆ, ಈ ಎಲ್ಲಾ ಅಂಶಗಳನ್ನು ನಿರ್ದೇಶಕರು ‘ಮಿಸ್ಟರ್ ಚೀಟರ್ ರಾಮಾಚಾರಿ’ ಚಿತ್ರದಲ್ಲಿ ಹೇಳಿದ್ದಾರೆ.

ತಂಡ ಹೊಸದಾದರೂ ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮೌಲ್ಯವುಳ‍್ಳವಂತದ್ದು. ಇವತ್ತಿನ ವಾಸ್ತವಿಕ ಸಮಸ್ಯೆಗಳ ಸುತ್ತ, ಅದನ್ನು ಜನರಿಗೆ ಅರ್ಥ ಮಾಡಿಸುವ ಉದ್ದೇಶವನ್ನು ನಿರ್ದೇಶಕರು ಹೊಂದಿರುವಂತಿದೆ. ಆದ್ದರಿಂದ 2 ಘಂಟೆಯ ಅವಧಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಹೇಳಿ ಪರಿಹಾರವನ್ನು ಹೇಳುವ ಪ್ರಯತ್ನ ಮಾಡಿರುವುದು ಉಲ್ಲೇಖಾರ್ಯ.

ಒಟ್ಟಿನಲ್ಲಿ ಹೊಸಬರಾದರೂ ಅದರ ಸುಳಿವು ಕಾಣದಂತೆ ಒಳ್ಳೆಯ ಕಥಾವಸ್ತುವಿನಿಂದ ಸಿನಿಮಾ ನೋಡಿಕೊಂಡು ಹೋಗುತ್ತದೆ. ಅದ್ದೂರಿ ಮೇಕಿಂಗ್ ನ ಕೊರತೆಯಿದ್ದರೂ ಇದ್ದುದರಲ್ಲಿಯೇ ನೀಟಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಎಲ್ಲಾ ಕಲಾವಿದರೂ ಉತ್ತರ ಕರ್ನಾಟಕ ಮೂಲಕದವರಾದ್ದರಿಂದ ಭಾಷಾ ಸಮಸ್ಯೆ ಅನಿಸಿದರೂ ಅದನ್ನು ಗೊತ್ತಾಗದಂತೆ ಹೊಂದಿಸಿಕೊಂಡು ಚೆನ್ನಾಗಿ ನಟಿಸಿದ್ದಾರೆ.

ಇಡೀ.. ಫ‍್ಯಾಮಿಲಿ ಒಟ್ಟಿಗೆ ಕುಳಿತು ನೋಡಬಹುದಾದಂತಹ ಸಿನಿಮಾ ಆಗಿದೆ, ಹೊಸಬರ ಪ್ರಯತ್ನವಾದ್ದರಿಂದ ಸಣ್ಣಪುಟ್ಟ ಲೋಪದೋಷಗಳಿರಬಹುದು. ಆದರೆ ಉತ್ತಮ ಪ್ರಯತ್ನ.. ಎಲ್ಲರೂ ನೋಡಬಹುದಾದಂತಹ ಸಿನಿಮಾ.. ನೋಡಿ, ಚಿತ್ರತಂಡದ ಗೆಲುವಿನಲ್ಲಿ ಭಾಗಿಯಾಗಿ.

Tags