ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ನೀತಿಯಾಚೆಗೆ ಸಂಬಂಧಗಳ ಪ್ರೀತಿ….

ಮದುವೆಯಾದ ಕೆಲ ವರ್ಷಗಳಲ್ಲೇ ವಿಧವೆಯಾದ ಮಗಳಿಗೆ ಮತ್ತೊಂದು ಮದುವೆ....

ಚಿತ್ರ:ನಾತಿಚರಾಮಿ

ತಾರಾಗಣ: ಸಂಚಾರಿ ವಿಜಯ್, ಶ್ರುತಿಹರಿಹರನ್

ನಿರ್ದೇಶಕರು: ಮಂಸೋರೆ

ನಿರ್ಮಾಪಕರುಜಗನ್ ಮೋಹನ್ ರೆಡ್ಡಿ, ಶಿವಕುಮಾರ್ ರೆಡ್ಡಿ

ರೇಟಿಂಗ್: 4

ಮದುವೆಯಾಗಿ ಐದು ವರ್ಷ ದಾಟಿದ ಯುವ ದಂಪತಿ ಮತ್ತು ಒಬ್ಬಾಕೆ ವಿಧವೆ ಎಂಬ ಮೂರು ಪಾತ್ರಗಳನ್ನು ಇರಿಸಿ ಸಮಸ್ಯೆ ಮತ್ತು ಸಂಬಂಧಗಳ ನಡುವಿನ ಚಿತ್ರ ನೀಡಿದ್ದಾರೆ ನಿರ್ದೇಶಕ ಮಂಸೋರೆ.

ಮದುವೆಯಾದ ಕೆಲ ವರ್ಷಗಳಲ್ಲೇ ವಿಧವೆಯಾದ ಮಗಳಿಗೆ ಮತ್ತೊಂದು ಮದುವೆಯ ಅವಸರ ಹೊಂದಿರುವ ತಂದೆತಾಯಿ ಮತ್ತು ಗಂಡನ ನೆನಪಲ್ಲೇ ಬದುಕಬಯಸುವ ವಿಧವೆ ಮತ್ತು ಅದಕ್ಕೆ ಅವಕಾಶ ನೀಡದ ಆಕೆಯ  ಭೋಗ ಬಯಕೆಗಳ ತೊಳಲಾಟವನ್ನು ಚಿತ್ರ ಹಿಡಿದಿಡುತ್ತದೆ.

Related image

ಪುರುಷಾಧಿಪತ್ಯದ ಸಂಪ್ರದಾಯದಲ್ಲಿ ಹೆಣ್ಣಿನ ಮೇಲೆ ಸಹಜವೆಂಬಂತೆ ನಡೆಯುವ ದೌರ್ಜನ್ಯವನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಅಂಥದೇ ನಿರ್ಧಾರಕ್ಕೆ ವಿಧವೆಯೊಬ್ಬಳು ಮುಂದಾದಾಗ ಎಲ್ಲೋ ಸಣ್ಣ ಸಂಚಲನದ ಆರಂಭವಾಗುತ್ತದೆ. ಅದ ಪರಿಣಾಮ ಯಾರ ಬಾಳಲ್ಲಿ  ಹೇಗೆಲ್ಲ ಇರುತ್ತದೆ ಎನ್ನುವುದನ್ನು ಪರದೆಯ ಮೇಲೆ ನೋಡಬಹುದು.

ವಿಧವೆ ಗೌರಿಯಾಗಿ ಶ್ರುತಿ ಹರಿಹರನ್ ಅಮೋಘ ಅಭಿನಯ ನೀಡಿದ್ದಾರೆ. ‌ಪಂಚವಾರ್ಷಿಕ ದಾಂಪತ್ಯದ ವಿರುದ್ಧಮುಖಿಗಳಾಗಿ ಸಂಚಾರಿ ವಿಜಯ್ ಮತ್ತು ಶರಣ್ಯ ನಟಿಸಿದ್ದಾರೆ. ‌ನಾಯಕನಲ್ಲದ ನಾಯಕನ ಭಾವಗಳಿಗೆ ಜೀವವಾಗಿರುವ ವಿಜಯ್ ಗೆ ಮತ್ತೊಮ್ಮೆ ಪ್ರಶಸ್ತಿಗಳ‌ ಮಳೆಯಾದರೆ ಅಚ್ಚರಿಯಿಲ್ಲ. ಚಿತ್ರ ಬೆಡ್ ರೂಮಿನ ಕತೆ ಹೇಳುವುದರಿಂದ ಎ ಸರ್ಟಿಫಿಕೇಟ್ ಪಡೆದಿದೆ. ಆದರೆ ನೋಡಿದ ಪ್ರತಿಯೊಬ್ಬ ವಯಸ್ಕರು ಮಹಿಳೆಯ ಮೇಲೆ ಎಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಅರ್ಥಮಾಡಿಕೊಂಡರೆ ನಿರ್ದೇಶಕರು ಗೆದ್ದ ಹಾಗೆ.

ಶಶಿಕರ ಪಾತೂರು

Tags