ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಅಮೃತ ಘಳಿಗೆಯಲ್ಲಿ ‘ಮನಸಾರೆ’ ಮಿಂಚಿದ ‘ಕರಾವಳಿ ಹುಡುಗಿ’

ಬೆಂಗಳೂರು, ಮೇ.26:

02 ಸೆಪ್ಟೆಂಬರ್ 1988 ರಂದು ಕಡಲತಡಿಯ ನಗರಿ ಮಂಗಳೂರಿನಲ್ಲಿ ಜನಿಸಿದ ಮುದ್ದು ಮುಖದ ಚೆಲುವೆಯ ಹೆಸರು ನೀತು ಶೆಟ್ಟಿ . ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಪುಣ್ಯ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಂಗಳೂರಿನ ಕುವರಿ ಮುಂದೆ ‘ಯಾಹೂ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಅಶೋಕ್ ಪಾಟೀಲ್ ನಿರ್ದೇಶನದ ‘ಜೋಕ್ ಫಾಲ್ಸ್’ ನಲ್ಲಿ ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ನಟಿಸಿದ ನೀತು ಅದರಲ್ಲಿ ಸುಲೇಖಾ ಪಾತ್ರಧಾರಿಯಾಗಿ ಮಿಂಚಿದರು. ಮಾತ್ರವಲ್ಲ ಆ ಚಿತ್ರದ ಮೂಲಕ ಹೆಸರು ಗಳಿಸಿದರು. ಮುಂದೆ ಪಿ.ಶೇಷಾದ್ರಿ ನಿರ್ದೇಶನದ ‘ಬೇರು’ ಚಿತ್ರದಲ್ಲಿ ಅಭಿನಯಿಸಿದ್ದ ನೀತು.

ಮುಂದೆ  ‘ಪೂಜಾರಿ’, ‘ಈಶ’,  ‘ಕರಾವಳಿ ಹುಡುಗಿ’, ‘ಗೋವಿಂದ ಗೋಪಾಲ’, ‘ಗಣೇಶ ಮತ್ತೆ ಬಂದ’, ‘ಕೃಷ್ಣ ನೀ ಲೇಟ್ ಆಗಿ ಬಾರೋ’, ‘ಮನಸಾರೆ’, ‘ಐತಲಕ್ಕಡಿ’,  ;ಪಂಚಾಮೃತ’, ,ಜೀವನ ಜೋಕಾಲಿ,, ,ದೇವ್ರಾಣೆ,, ,ಅಭಿನೇತ್ರಿ,, ,ಪಾರು ಐ ಲವ್ ಯೂ,, ,ರಿಂಗ್ ರೋಡ್, ,ಸಿತಾರ,, ಮೊಂಬತ್ತಿ, ಮರಿ ಟೈಗರ್, ಅಮೃತ ಘಳಿಗೆ ಚಿತ್ರದಲ್ಲಿಯೂ ನೀತು ನಟಿಸಿದ್ದರು.

Image may contain: 1 person, closeupಇದರ ಜೊತೆಗೆ ಜೀತು ಚಿತ್ರದ ‘ಇಡ್ಲಿ ವಡೆ’, ಕ್ರೇಜಿ ಸ್ಟಾರ್ ಚಿತ್ರದ ‘ಈ ಹೆಣ್ಣು ಅವಳ ವೀಕ್ನೆಸ್ಸು’, ಜಗ್ಗಿ ಚಿತ್ರದ ‘ನೆಲ ಗುಡಿ ನೀರು’, ಚಿತ್ರದಲ್ಲಿ ಹೆಜ್ಜೆ ಹಾಕಿದ ಮಂಗಳೂರಿನ ಬೆಡಗಿ ನೀತು ಫೇರ್ ಆಂಡ್ ಲವ್ಲಿ ಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು.

ಇಂತಿಪ್ಪ ಕರಾವಳಿ ಕುವರಿಗೆ ಖ್ಯಾತಿ ತಂದುಕೊಟ್ಟದ್ದು ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಚಿತ್ರ! ಅದರಲ್ಲಿನ ಬಜಾರಿ ಪಾತ್ರದ ಮೂಲಕ ನೀತು ಮನೆ ಮಾತಾಗಿದ್ದರು.

ಮಲಯಾಳಂ ಚಿತ್ರ ಫೋಟೋಗ್ರಾಫರ್ ನಲ್ಲಿ ಅಭಿನಯಿಸಿದ ನೀತು ಕೊಂಕಣಿ ಭಾಷೆಯ ಚಿತ್ರ ಉಜ್ವಾಡು, ತುಳು ಭಾಷೆಯ ಚಿತ್ರ ಕೋಟಿ ಚೆನ್ನಯ, ಏರೆಗ್ಲಾ ಪನೋಡ್ಚಿ ಯಲ್ಲಿ ನಟಿಸುವ ಮೂಲಕ ಪರ ಭಾಷೆಯಲ್ಲಿಯೂ ತಮ್ಮ ನಟನೆಯ ರಸದೌತಣವನ್ನು ಉಣಬಡಿಸಿದ್ದರು.

Image may contain: 1 person, hatಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ರ ಸ್ಫರ್ಧಿಯಾಗಿ ನೀತು ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಸೂಪರ್ ಮಿನಿಟ್ ನಲ್ಲಿಯೂ ಭಾಗವಹಿಸಿದ್ದ ನೀತು ಬೆಂಗಳೂರು ಬೆಣ್ಣೆ ದೋಸೆ, ಸೂಪರ್ ಟಾಕ್ ಟೈಮ್ ನಲ್ಲಿ ಅವರು ಭಾಗವಹಿಸಿದ್ದರು.

ಇದೀಗ ವಜ್ರಮುಖಿ, ಹ್ಯಾಂಗೋವರ್, ಐಸ್ ಪೈಸ್, ಬೆಂಗಳೂರು ಮೆಟ್ರೋ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನೀತು ಸುಮಾರು ದಶಕದಿಂದಲೂ ಜಾಸ್ತಿ ಚಂದನವನದಲ್ಲಿ ಮಿಂಚುತ್ತಿದ್ದಾರೆ. ಅವರ ಬಣ್ಣದ ಪಯಣ ಸದಾ ಕಾಲ ಹೀಗೆ ಸಾಗುತ್ತಿರಲಿ ಎಂಬುದೇ ನಮ್ಮ ಬಾಲ್ಕನಿ ನ್ಯೂಸ್ ಹಾರೈಕೆ.

– ಅನಿತಾ ಬನಾರಿ

Image may contain: 1 person, smiling, fire and night

ಕುಂದಾಪುರದ ಬೆಡಗಿಯ ಬಣ್ಣದ ಲೋಕ

#neetushetty #neetushettymovies #neetushettyhits #neetusheetyfacebook

 

Tags