ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಚಿತ್ರ ವಿಮರ್ಶೆ: ಕುಸ್ತಿ ಅಖಾಡದಲ್ಲಿ ಅಬ್ಬರಿಸುತ್ತಲೇ ಆಪ್ತವಾಗುವ ‘ಪೈಲ್ವಾನ್’!

ಚಿತ್ರ                  : ಪೈಲ್ವಾನ್
ನಿರ್ಮಾಪಕರು  : ಸ್ವಪ್ನಾ ಕೃಷ್ಣ
ನಿರ್ದೇಶಕ         : ಕೃಷ್ಣ
ಸಂಗೀತ            : ಅರ್ಜುನ್ ಜನ್ಯ
ತಾರಾಗಣ        :  ಸುದೀಪ್, ಆಕಾಂಕ್ಷ ಸಿಂಗ್, ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್  ಮುಂತಾದವರು

ಸಿನಿಮಾ ಪರಿಭಾಷೆಯನ್ನು ನೂರಕ್ಕೆ ನೂರರಷ್ಟು ಅರಗಿಸಿಕೊಂಡ ನಿರ್ದೇಶಕ ಎಲ್ಲ ಪ್ರೇಕ್ಷಕ ವರ್ಗಕ್ಕೂ ಇಷ್ಟವಾಗುವಂಥಾ ದೃಶ್ಯಕಾವ್ಯವನ್ನು ಕಟ್ಟಿಕೊಡಬಲ್ಲ. ನಿನ್ನೇಯಷ್ಟೇ ( ಸೆ .12)ತೆರೆ ಕಂಡಿರೋ ‘ಪೈಲ್ವಾನ್’ ಚಿತ್ರ ಕೂಡಾ ನಿಸ್ಸಂದೇಹವಾಗಿ ಅದೇ ಸಾಲಿಗೆ ಸೇರುವಂಥಾದ್ದು. ಪೈಲ್ವಾನ್ ಆರಂಭದಿಂದ ಇಲ್ಲಿಯವರೆಗೂ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿರೋ ರೀತಿ ಇದೆಯಲ್ಲಾ? ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಪ್ರೇಕ್ಷಕರನ್ನು ಮುಖಾಮುಖಿಯಾಗಿರೋ ಪೈಲ್ವಾನ್‍ ನನ್ನು ಕಂಡು ಪ್ರೇಕ್ಷಕರೆಲ್ಲ ಫಿದಾ ಆಗಿಬಿಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಈ ಸಿನಿಮಾ ಬಗ್ಗೆ ಇಂಥಾದ್ದೇ ಸದಾಭಿಪ್ರಾಯವೇ ಮೂಡಿಕೊಂಡಿದೆ.ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ನಿನಲ್ಲೊಂದು ಕಮಾಲ್ ನಡೆದೇ ತೀರುತ್ತದೆಂಬ ನಂಬಿಕೆ ಅಭಿಮಾನದಾಚೆಗೂ ಹರಡಿಕೊಂಡಿತ್ತು. ಇದೀಗ ಅಕ್ಷರಶಃ ನಿಜವಾಗಿದೆ. ಒಂದು ಗಟ್ಟಿ ಕಥೆ, ಯಾವ ನಿಲುಕಿಗೂ ಸಿಗದಂಥಾ ತಿರುವುಗಳು, ಕಥೆಗಿರೋ ಅಚಾನಕ್ ಆದ ಹೊರಳುಹಾದಿ ಮತ್ತು ಕಿಚ್ಚನ ಪಾತ್ರಕ್ಕಿರೋ ನಾನಾ ಶೇಡುಗಳು… ಇವಿಷ್ಟು ಅಂಶಗಳ ಮೂಲಕ ಪೈಲ್ವಾನ್ ಎಲ್ಲರನ್ನೂ ಥ್ರಿಲ್ ಆಗಿಸಿದ್ದಾನೆ. ಈ ಮೂಲಕವೇ ಇಡೀ ಚಿತ್ರತಂಡದ ಶ್ರಮವೂ ಸಾರ್ಥಕ್ಯ ಕಂಡಿದೆ.ಹುಟ್ಟಿ ಕಣ್ಣು ತೆರೆಯುತ್ತಲೇ ತಬ್ಬಲಿತನವನ್ನು ಹೊದ್ದುಕೊಂಡು ಕಂಗೆಟ್ಟ ನತದೃಷ್ಟ ಹುಡುಗ ಕೃಷ್ಣ. ಆತನನ್ನು ಕರೆತಂದು ತನ್ನ ಮಗನಂತೆಯೇ ಬೆಳೆಸೋ ಪೈಲ್ವಾನ್ ಮನೆತನದ ಸರ್ಕಾರ್. ಆ ಬಳಿಕ ಈ ವಾತಾವರಣದಲ್ಲಿ ಎಲ್ಲರ ಪ್ರೀತಿಯ ಕಿಚ್ಚನಾಗಿ ಕೃಷ್ಣ ಬೆಳೆದು ನಿಲ್ಲುತ್ತಾನೆ. ಸರ್ಕಾರ್ ಪಾಲಿಗೆ ಕಿಚ್ಚ ಕುಸ್ತಿ ಪಟುವಾಗಿ ಅಖಾಡಕ್ಕಿಳಿದು ಗೆಲ್ಲಬೇಕನ್ನೋದೇ ಉದ್ದೇಶ. ಕಿಚ್ಚನ ಪಾಲಿಗೆ ಕುಸ್ತಿಯ ಅಖಾಡ ಮತ್ತು ತಂದೆಯಂತೆಯೇ ಆಗಿ ಹೋದ ಸರ್ಕಾರ್ ಬಿಟ್ಟರೆ ಬೇರೆ ಜಗತ್ತಿಲ್ಲ. ಕಿಚ್ಚನ ಮುಂದೆ ಕುಸ್ತಿಯಲ್ಲದೆ ಮತ್ಯಾವ ವಿಚಾರವೂ ಸುಳಿಯ ಕೂಡದೆಂಬುದು ಸರ್ಕಾರ್ ನ ಶಿಸ್ತುಬದ್ಧ ಆದೇಶ.Image may contain: 2 people, people smiling, people dancing, people standing, night and indoorಆದರೆ ಇಂಥಾ ಕಿಚ್ಚನ ಜಗತ್ತಿಗೆ ದೇವತೆಯಂಥಾ ಹುಡುಗಿಯೊಬ್ಬಳ ಆಗಮನವಾಗುತ್ತದೆ. ಅದುವರೆಗೆ ಕುಸ್ತಿ ಮತ್ತು ಸರ್ಕಾರ್ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಅಂದುಕೊಂಡಿದ್ದ ಕಿಚ್ಚನ ಪಾಲಿಗೆ ಆ ಹುಡುಗಿ ಮತ್ತು ಪ್ರೀತಿಯೇ ಜಗತ್ತಾಗುತ್ತದೆ. ತಬ್ಬಲಿತನ ಹೊದ್ದು ಬೆಳೆದ ಆತ ತನಗಾಗಿ ಒಲಿದ ಜೀವದ ಧ್ಯಾನದಲ್ಲಿಯೇ ಕಳೆದು ಹೋಗಿ ಬಿಡುತ್ತಾನೆ. ಇದರ ವಿರುದ್ಧ ಸಹಜವಾಗಿ ಸರ್ಕಾರ್ ಅಸಹನೆಗೊಳ್ಳುತ್ತಲೇ ಕಿಚ್ಚ ಪ್ರೀತಿಯನ್ನೇ ಮುಖ್ಯವೆಂದುಕೊಂಡು ಹೊರಡುತ್ತಾನೆ. ಆ ನಂತರ ಅರಳಿಕೊಳ್ಳೋದು ಭಾವತೀವ್ರತೆಯ ಕಥೆ. ಇಲ್ಲಿ ಕಿಚ್ಚ ತಬ್ಬಲಿ ಹುಡುಗನಾಗಿ, ಸರ್ಕಾರ್‍ನ ಪ್ರೀತಿ ಪೈಲ್ವಾನ್ ಆಗಿ ಮತ್ತು ಪ್ರೇಮಿಯಾಗಿ ಅಮೋಘ ಅಭಿನಯ ನೀಡಿದ್ದಾರೆ. ಪರಭಾಷಾ ಹುಡುಗಿಯಾದರೂ ನಾಯಕಿ ಆಕಾಂಕ್ಷ ಸಿಂಗ್ ಕೂಡಾ ಪರಿಪೂರ್ಣ ನಟಿಯಂತೆ ಕಿಚ್ಚನಿಗೆ ಸಾಥ್ ಕೊಟ್ಟಿದ್ದಾರೆ.ಇದು ಗಟ್ಟಿ ಕಥೆಯ ಚಿತ್ರ. ನಾನಾ ತಿರುವು, ಎಚ್ಚರ ತಪ್ಪಿದರೆ ಗೋಜಲಾಗುವಂಥಾ ಎಲ್ಲ ಕಂಟಕಗಳನ್ನು ನೀಗಿಕೊಂಡು ಅದ್ಭುತ ಚಿತ್ರ ರೂಪಿಸುವಲ್ಲಿ ನಿರ್ದೇಶಕ ಕೃಷ್ಣ ಯಶಸ್ಸನ್ನು ಕಂಡಿದ್ದಾರೆ. ಹಿನ್ನೆಲೆ ಸಂಗೀತ, ಕ್ಯಾಮೆರಾ, ಸಂಕಲನ ಸೇರಿದಂತೆ ಎಲ್ಲವೂ ಪೈಲ್ವಾನನ ಖದರ್ ಹೆಚ್ಚಿಸುವಂತೆಯೇ ಮೂಡಿ ಬಂದಿವೆ. ಯಾವ ಬಾಲಿವುಡ್ ಸಿನಿಮಾಗಳಿಗೂ ಸೆಡ್ಡು ಹೊಡೆಯುವಂತಿರೋ ‘ಪೈಲ್ವಾನ್’ ಎಲ್ಲ ವರ್ಗದ ಪ್ರೇಕ್ಷಕರಿಗೂ ಆಪ್ತವಾಗುವಂತೆ ಮೂಡಿ ಬಂದಿದ್ದಾನೆ.

ಇನ್ನೇಕೆ ತಡ ಈ ಕೂಡಲೇ ನಿಮ್ಮ ಕುಟುಂಬದವರೊಡನೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಣೆ ಮಾಡಿ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹಿಸಿ.

ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡ ‘ಗಟ್ಟಿ ಮೇಳ’

#pailwan #pailwanmovie #pailwancollection #pailwanstarcast #pailwanpiracy #pailwanteam #sudeep #pailwanreview

 

Tags