ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

‘ರಾಧ ರಮಣ’ ಸುಮೇಧ ಸಿನಿ ಜರ್ನಿ

ಕರಾವಳಿ ಕುವರ ಶ್ರೀರಾಮ್ ಸ್ಪೀಕಿಂಗ್

ಜನ ಚಿತ್ರಮಂದಿರಕ್ಕೆ ಹೋಗೋದಕ್ಕಿಂತ ಮನೆಯಲ್ಲಿಯೇ ಟಿವಿ ನೋಡುವುದು ಸರ್ವೇ ಸಾಮಾನ್ಯವಾಗಿದೆ. ಸಿನಿಮಾಗಿಂತ ಸಿರೀಯಲ್ ಅಡಿಕ್ಷನ್ ತುಸು ಜಾಸ್ತಿಯೇ ಎಂದರೆ ತಪ್ಪಾಗಲಾರದು. ಕಲರ್ಸ್ ಕನ್ನಡ ವಾಹಿನಿಯ ಜನ ಮೆಚ್ಚಿದ ಸಿರೀಯಲ್ ಎಂದರೆ ‘ರಾಧ ರಮಣ’.

ಇಂದಿನ ನಮ್ಮ ಕಿರುತೆರೆ ಸ್ಟಾರ್ ರಮಣನ ಕುಚಿಕು ಲಾಯರ್ ಸುಮೇಧ ಅಲಿಯಾಸ್ ಶ್ರೀರಾಮ್. ರಾಧ ರಮಣ ಜೋಡಿಗೆ ಟರ್ನಿಂಗ್ ಪಾಯಿಂಟ್ ಕೊಡೊ ಪಾತ್ರ ಎಂದರೆ ಸುಮೇಧ. ತನಗೆ ಕೊಟ್ಟಿರುವ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿರೋ ಶ್ರೀರಾಮ್ ಇದೀಗ ‘ರಿಪ್ಪರ್’ ಚಿತ್ರದಲ್ಲಿ ಬ್ಯೂಸಿ. ಕರಾವಳಿ ಕುವರ ಬೆಕ್ಕಿನ ಕಂಗಳ ಚೆಲುವ ನಟನಾಗಿದ್ದು ಹೇಗೇ..? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ..

ನಿಮ್ಮ ಬಾಲ್ಯದ ದಿನಗಳು ಮತ್ತು ಫ್ಯಾಮಿಲಿ ಬಗ್ಗೆ?

ನಾನು ಮಧ್ಯಮ ಕುಟುಂಬದ ಬ್ರಾಹ್ಮಣ ಹುಡುಗ. ತಂದೆ ಉದಯ್ ಕೃಷ್ಣ ಕೃಷಿಕರು, ತಾಯಿ ಗಾಯಿತ್ರಿ ಗೃಹಿಣಿ. ಬಾಲ್ಯದಲ್ಲಿ ತುಂಬಾ ತುಂಟನಾಗಿದ್ದು ಓದಿದ್ದು ಬೆಳೆದಿದ್ದು ಪುತ್ತೂರಿನಲ್ಲಿ. ಬಳಿಕ ಕೆವಿಜಿಸಿಇ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್  ಮುಗಿಸಿದೆ. ಚಿಕ್ಕಂದಿನಲ್ಲೇ ಡ್ಯಾನ್ಸ್ ತರಬೇತಿ ಪಡೆದಿದ್ದು ಅಥ್ಲಿಟ್ ಪ್ಲೇಯರ್ ಕೂಡ ಹೌದು..

ಫಸ್ಟ್ ಟೈಮ್ ಕ್ಯಾಮೆರಾ ಫೇಸ್ ಮಾಡಿದ ಅನುಭವ ಹೇಗಿತ್ತು ಮತ್ತು ನಟನೆಗೆ ಹೇಗೆ ಬಂದ್ರಿ?

ಫಸ್ಟ್ ಟೈಮ್ ಕ್ಯಾಮೆರಾ ಫೇಸ್ ಮಾಡಿದಾಗ ಭಯ ಆಯಿತು. ಆದರೆ ರೆಡ್ ಅನ್ನುವ ರಂಗಭೂಮಿಯಲ್ಲಿ ತರಬೇತಿ ಪಡೆದಿದ್ದು ನನಗೆ ಸಹಾಯ ಆಯಿತು. ಇಲ್ಲಿ ನನ್ನ ಆಕ್ಟಿಂಗ್ ನೋಡಿ ‘ಅಶ್ವಿನಿ ನಕ್ಷತ್ರ’ ಸಣ್ಣ ಪಾತ್ರ ನಿಭಾಯಿಸಿದೆ. 2015 ನಂತರ ‘ದಿ ಪ್ಲಾನ್’ ಅನ್ನುವ ಮೂರು ಜನ ನಟರಲ್ಲಿ ಒಬ್ಬನಾಗಿ ಪೂರ್ಣ ಪ್ರಮಾಣದ ನಟನಾಗಿ ಅನಂತನಾಗ್ ಸರ್ ಮಾರ್ಗದರ್ಶನದಲ್ಲಿ ಕಲಿತಿದ್ದು ತುಂಬಾ ಖುಷಿ ಕೊಟ್ಟಿದೆ.

ನೀವು ನಟನಾಗುವುದಕ್ಕೆ ಪಟ್ಟ ಕಷ್ಟದ ದಿನಗಳು? ರಾಧ ರಮಣ ತಂಡದ ಬಗ್ಗೆ?

ಸಿನಿಮಾ ಸಿರೀಯಲ್ ನಲ್ಲಿ ಅಭಿನಯಿಸಲು ಐವತ್ತಕ್ಕೂ ಹೆಚ್ಚು ಆಡಿಷನ್ ಗಳನ್ನು ಕೊಟ್ಟಿದ್ದೆ. ನಟನಾ ಕ್ಷೇತ್ರಕ್ಕೆ ಬರುವ ಮುನ್ನ ಕ್ಯಾಮೆರಾ ವರ್ಕ್ ಮಾಡುತ್ತಿದ್ದೆ. ಬಳಿಕ ಹೀಗೆ ಆಡಿಷನ್ ಮೂಲಕವೇ ‘ರಾಧ ರಮಣ’ ಸಿರೀಯಲ್ ಸೆಲೆಕ್ಟ್ ಆದೆ. ನಮ್ಮ ತಂಡ ಅದ್ಬುತವಾಗಿದೆ ಸುಮೇಧ ಪಾತ್ರ ಖುಷಿ ಕೊಟ್ಟಿದೆ. ಹಾಗೇಯೇ ನಟನೆಗೆ ನನ್ನ ಕುಟುಂಬದ ಬೆಂಬಲ ತುಂಬಾ ಇದೆ.

ರಂಗಭೂಮಿಗೂ, ಕಿರುತೆರೆಗೂ, ಹಿರಿತೆರೆಗೂ ಎನು ವ್ಯತ್ಯಾಸ..?

ರಂಗಭೂಮಿ ಆದರೆ ನೋ ರಿಟೇಕ್ ಒಂದೇ ಶಾರ್ಟ್ ಅಲ್ಲಿ ಅಭಿನಯಿಸುತ್ತೀವಿ. ಆದರೆ ಸಿನಿಮಾ ರಂಗದಲ್ಲಿ ಕೆಲವು ಟೇಕ್ ಗಳ ಬಳಿಕ ಸೀನ್ ಫೈನಲ್ ಆಗುತ್ತದೆ. ಆದರೆ ಅಭಿನಯ ಒಂದೇ.

ನಟನೆ ಬಿಟ್ಟು ನಿಮ್ಮ ಬೇರೆ ಆಕ್ಟಿವಿಟಿ ಬಿಡುವಿನ ವೇಳೆಯಲ್ಲಿ.?

ಕ್ಯಾಮೆರಾ ವರ್ಕ್, ಜೀಮ್ ವರ್ಕ್ ಔಟ್, ಸಿನಿಮಾ ವೀಕ್ಷಣೆ, ಪುಸ್ತಕ ಓದುವುದು ಇಷ್ಟ.

ಬೆಳ್ಳಿತೆರೆಯಲ್ಲೂ ವರ್ಕ್ ಮಾಡಿದ್ದೀರಾ? ಮುಂಬರುವ ಚಿತ್ರದ ಬಗ್ಗೆ?

ಹೌದು.. ಈಗಾಗಲೇ ‘ದಿ ಪ್ಲಾನ್’ , ‘ದರ್ಪಣ’, ‘ಪೆಟ್ ಕಮ್ಮಿ’ ಚಿತ್ರದಲ್ಲಿ ನಟನಾಗಿ ಅಭಿನಯಿಸಿದ್ದೀನಿ. ‘ಗಿಮಿಕ್’ ಈಗಾಗಲೇ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ನನ್ನ ಮುಂದಿನ ಚಿತ್ರ ‘ರಿಪ್ಪರ್’ ಸೈಕೋ ಕಿಲ್ಲರ್ ಲೀಡ್ ಪಾತ್ರದಲ್ಲಿ ಅಭಿನಯಿಸಿದ್ದು, ಚಿತ್ರಿಕರಣ ಮುಗಿದಿದ್ದು, ಕೆಲವೇ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.

ನಿಮಗೆ ಸ್ಪೂರ್ತಿ?

ನನಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯ, ಅವರು ಬೆಳೆದು ಬಂದ ದಾರಿ, ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ಫೈಟ್, ವಿಜಯ್ ರಾಘವೇಂದ್ರ ಅವರ ಹಂಬಲ್ ನೆಸ್ ತಮಿಳಿನ ವಿಕ್ರಮ್ ವರ್ಕ್ ಡೆಡಿಕೇಷನ್ ಇಷ್ಟ.

ಯಾವ ತರ ಪಾತ್ರ ಮಾಡಲು ಇಷ್ಟ..?

‘ಸ್ವಾತಿಮುತ್ತು’ ಚಿತ್ರದ ಸುದೀಪ್ ಪಾತ್ರ, ‘ನನ್ನ ಪ್ರೀತಿಯ ರಾಮು’ ದರ್ಶನ್ ಪಾತ್ರ ಇಷ್ಟ. ಕಮರ್ಷಿಯಲ್ ಹೀರೋ ಆಗಿ ನಟಿಸೋದರ ಜೊತೆಗೆ ಕಥಾ ನಾಯಕನಾಗಬೇಕೆಂಬ ಆಸೆ.

‘ಗಿಮಿಕ್’ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಅಭಿನಯಿಸಿರೋದರ ಬಗ್ಗೆ ಮತ್ತು ನಿಮ್ಮ ಪಾತ್ರ ಬಗ್ಗೆ?

ಗಣೇಶ್ ಸರ್ ಅವರೊಂದಿಗೆ ಅಭಿನಯಿಸಿದ್ದು ಬಹಳ ಖುಷಿ ಇದೆ. ಅವರಿಂದ ಬಹಳ ಕಲಿತಿದ್ದೇನೆ. ಅವರಿಗೆ ಹೊಸಬರನ್ನು ಬೆಳೆಸುವ ಮನಸ್ಸಿದೆ. ಬಹಳ ಸರಳ ವ್ಯಕ್ತಿ. ‘ಗಿಮಿಕ್’ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಟರ್ನಿಂಗ್ ಪಾಯಿಂಟ್ ಕೊಡುವ ಪಾತ್ರದಲ್ಲಿ ನಟಿಸಿದ್ದು,ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಚಿತ್ರ ವೀಕ್ಷಿಸಿ ಹರಸಿ.

ನಟನಾಗಿ ನಿಮ್ಮ ತಯಾರಿ? ನಿಮ್ಮನ್ನು ಇಷ್ಟ ಪಡುವ ಅಭಿಮಾನಿಗಳಿಗೆ ನಿಮ್ಮ ಮಾತು…?

ನಾನು ವಾರದಲ್ಲಿ ಮೂರರಿಂದ ನಾಲ್ಕು ಸಿನಿಮಾ ನೋಡುತ್ತೇನೆ. ಆ ಪಾತ್ರಗಳನ್ನು ನೋಡಿ ನಾನು ಮಾಡಿದರೆ ಹೇಗಿರುತ್ತದೆ ಎಂದು ಕಲ್ಪನೆ ಮಾಡುತ್ತೇನೆ. ಪುಸ್ತಕಗಳನ್ನು ಓದುವ ಹುಚ್ಚಿದೆ. ‘ರಾಧ ರಮಣ’ದ ಸುಮೇಧ ಪಾತ್ರವನ್ನು ಮೆಚ್ಚಿಕೊಂಡಿದ್ದೀರಿ ಈ ಬಗ್ಗೆ ಖುಷಿ ಇದೆ. ಹೀಗೇ ನಿಮ್ಮ ಪ್ರೀತಿ ನನ್ನ ಮುಂಬರುವ ಚಿತ್ರಗಳಿಗೂ ಇರಬೇಕೆಂದು ನಿರೀಕ್ಷಿಸುತ್ತೇನೆ. ಹೊಸಬರನ್ನು ಬೆಳೆಸಿ ಎಂದು ಕೇಳುತ್ತೇನೆ ಧನ್ಯವಾದಗಳು.

ಶ್ರೀರಾಮ್  ‘ರಿಪ್ಪರ್’ ಚಿತ್ರಕ್ಕೆ ಗುಡ್ ಲಕ್ ಹೇಳುತ್ತ ನಟನಾ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಎರಲಿ ಉತ್ತಮ ಕಲಾವಿದನಾಗಿ ಬೆಳಯಲಿ ಎಂಬುದೇ ಬಾಲ್ಕನಿ ನ್ಯೂಸ್ ಆಶಯ ಆಲ್ ದಿ ಬೆಸ್ಟ್ ಹೀರೋ.

ಸೈಮಾ ಪ್ರಶಸ್ತಿ 2019: ಯಶ್ ಅತ್ಯುತ್ತಮ ನಟ, ಪ್ರಶಾಂತ್ ನೀಲ್ ಅತ್ಯುತ್ತಮ ನಿರ್ದೇಶಕ

#Radharamana #sumedh #shreeram #ripperhero #putturutalent #colorskannada #sandalwoodfilms

Tags