ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ನಿಧಾನವಾಗಿ ಆವರಿಸಿಕೊಳ‍್ಳುವ ‘ಸಮರ್ಥ’

ಬೆಂಗಳೂರು, ಜು 21: ಸಾಕಷ್ಟು ಹೊಸ ಪ್ರತಿಭೆಗಳೇ ತುಂಬಿಕೊಂಡಿರುವ ಸಮರ್ಥ ಚಿತ್ರವು ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಚಿತ್ರವು ಸರ್ವ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದೆ. ತಾರಾಗಣದಲ್ಲಿ ರವಿ ಶಿರೂರ್ ಮತ್ತು ರಚನಾ ದರ್ಶತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಗೋವಿಂದರಾಜ್ ಎಸ್.ಜಿ.ಆರ್ ಆಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಚಿತ್ರದ ನಾಯಕ ತನ್ನ ಜೀವನದಲ್ಲಿ ಏನು ಬೇಕಾದ್ರೂ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಎಂಥ ಸಮಸ್ಯೆ ಗಳನ್ನು ಎದುರಿಸುವ ಸಾಮರ್ಥ್ಯ ಅವನಿಗಿರುತ್ತದೆ. ಪ್ರತಿಯೊಂದು ಸಮಯ, ಅರಿತು ಅದಕ್ಕೆ ತಕ್ಕಂತೆ ವ್ಯವಹರಿಸುತ್ತಾನೆ. ತನಗೆ ಎದುರಾಗುವ ಪ್ರತಿ ಸವಾಲು ಗಳನ್ನು ಹೇಗೆ ಎದುರಿಸಿ ನಿಲ್ಲುತ್ತಾನೆ ಎನ್ನುವುದರ ಮೇಲೆ ಇಡೀ ಸಿನಿಮಾದ ಕಥೆ ಟ್ರಾವೆಲ್ ಆಗುತ್ತದೆ. ಅದಕ್ಕಾಗಿ ನಮ್ಮ ಸಿನಿಮಾಕ್ಕೆ ಸಮರ್ಥ ಎಂಬ ಟೈಟಲ್ ಇಟ್ಟಿದ್ದು ನಿಜಕ್ಕೂ ‘ಸಮರ್ಥ’ಕತೆ ಅನಿಸುತ್ತದೆ.

ನಾಯಕ ಸಮರ್ಥ ಒಬ್ಬ ಕಾಲೇಜು ಪ್ರೊಪೇಸರ್ ಆಗಿರುತ್ತಾನೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ತನ್ನ ವಿದ್ಯಾರ್ಥಿನಿಯನ್ನೇ ಲವ್ವು ಸಹ ಮಾಡುತ್ತಾನೆ. ಜೊತೆಗೊಂದು ಟ್ವಿಸ್ಟ್ ಸಹ ಇದೆ. ಅಷ್ಟಕ್ಕೂ ನಾಯಕ ಹೀಗೆಲ್ಲಾ ಯ್ಯಾಕೆ ಎಂಬ ಕುತೂಹಲವಿದ್ದರೆ ಅದನ್ನು ಥಿಯೇಟರ್ ನಲ್ಲಿಯೇ ನೋಡಿ ಸವಿಯಬೇಕು.

ಇನ್ನು ಉಳಿದಂತೆ ಹನುಮಂತೇ ಗೌಡ, ಕಾಮಿಡಿ ಕಿಲಾಡಿಗಳು ನಯನಾ, ಸಂಗೀತಾ, ಪುರುಷೋತ್ತಮ ಅಂಚನ್, ವಿಜಯ ಕುಮಾರ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎ.ಸಿ ಮಹೇಂದ್ರನ್ ಅವರ ಕ್ಯಾಮರಾ ವರ್ಕ್ ಆಹ್ಲಾದಕರವಾಗಿದ್ದು, ಅಭಿಮಾನ್ ರಾಯ್ ಸಂಗೀತದಲ್ಲಿ ಹಾಡುಗಳು ಗುನುಗುವಂತಿವೆ.

Tags

Related Articles

Leave a Reply

Your email address will not be published. Required fields are marked *