ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

‘ಡಬಲ್ ಇಂಜನ್’ ಸಿನಿಮಾ ರಿವ್ಯೂವ್!

ವೀಕೆಂಡ್‌ನ ಮಜಾ ಮಾಡ್ಬೇಕು ಅಂದ್ರೆ ನಾವ್ ನಿಮಗೊಂದು ಸುದ್ದಿ ಕೊಡ್ತಿವಿ, ನಮ್ಮ ಚಿತ್ರವನ್ನ ನೋಡಿ ಮಸ್ತ್ ಎಂಜಾಯ್ ಮಾಡಬಹುದು ಎನ್ನುತ್ತಿದೆ ಈ ಡಬಲ್ ಎಂಜಿನ್ ಚಿತ್ರತಂಡ. ನಿಜಾ ಕಣ್ರೀ ನಿಮ್ಮನ್ನ ನಕ್ಕು ನಗಿಸಲು ಒಂದೋಳ್ಳೆ ಸಂದೇಶದೊಂದಿಗೆ ರಾಜ್ಯಾದ್ಯಂತ ಥಿಯೇಟರ್‌ಗೆ ಹೆಜ್ಜೆ ಇಟ್ಟಿರುವ ಈ ಡಬಲ್ ಎಂಜಿನ್ ಚಿತ್ರವನ್ನ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಏನಂದ್ರು ಅಂತಾ ಹೇಳ್ತಿವಿ ಈ ಸ್ಟೋರಿ ನೋಡಿ,

ಟ್ರೇಲರ್ ಬಿಡುಗಡೆಯಾದಾಗಿನಿಂದ ಪ್ರೇಕ್ಷಕರ ಗಮನವನ್ನ ಸೆಳೆದು ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವಂತೆ ಮಾಡಿದ ಚಿತ್ರ ಈ ಡಬಲ್ ಇಂಜನ್, ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಸಿನಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ, ಚಿಕ್ಕಣ್ಣ, ಅಶೋಕ್, ಮತ್ತು ಪ್ರಭು ಅವರ ನಟನೆಗೆ ಚಿತ್ರಮಂದಿರದಲ್ಲಿ ಶೀಳ್ಳೆ ಚಪ್ಪಾಳೆ ಬೀಳುವುದರಲ್ಲಿ ಡೌಟೇ ಇರಲಿಲ್ಲ ಅಷ್ಟರ ಮಟ್ಟಿಗೆ ಮೆಚ್ಚಿಕೊಂಡಿದ್ದಾನೆ ಚಿತ್ರ ನೋಡಿದ ಪ್ರೇಕ್ಷಕ ಪ್ರಭು.

ನಾವು ದುಡಿದ ದುಡ್ಡೆ ನಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಇನ್ನೂ ಅನ್ಯ ಮಾರ್ಗದಲ್ಲಿ ಗಳಿಸಿದ ಹಣ ಉಳಿಯುತ್ತದೆಯೇ? ಎಂಬ ಸಂದೇಶವನ್ನ ನಿರ್ದೇಶಕ ಚಂದ್ರ ಮೋಹನ್ ಬಹಳ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ, ಇನ್ನೂ ಈ ಅನ್ಯ ಮಾರ್ಗ ಅನುಸರಿಸುವಾಗ ಯಾವೆಲ್ಲ ರೀತಿಯ ಜನರು ಎದುರಾಗ್ತಾರೆ. ಹೇಗೆ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ ಎಂಬುದು ಕಥೆಯ ತಿರುಳು.

ಇನ್ನೂ ಚಿತ್ರದ ಪ್ರಾರಂಭದಿಂದ ಮುಗಿಯುವವರೆಗೂ ಚಿಕ್ಕಣ್ಣ ಎಂದಿನಂತೆ ಪ್ರೇಕ್ಷಕರಿಗೆ ತಮ್ಮ ಕಾಮಿಡಿಯ ಮೂಲಕ ಅಚ್ಚುಮೆಚ್ಚು ಎನಿಸಿಕೊಳ್ಳುತ್ತಾರೆ, ಚಿಕ್ಕಣ್ಣನ ಜೊತೆಗೆ ಅಶೋಕ್ ಮತ್ತು ಪ್ರಭು ಕೂಡಾ ಪಂಚಿಂಗ್ ಡೈಲಾಗ್ಸ್ ಮೂಲಕ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ, ನೀರ್‌ದೋಸೆ ನಂತ್ರ ಮತ್ತೊಮ್ಮೆ ಮನಸಾರೆಯಾಗಿ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಪಾತ್ರವನ್ನ ನಿರ್ವಹಿಸಿದ ಸುಮನ್ ರಂಗನಾಥ್ ತಮ್ಮ ಪಾತ್ರಕ್ಕೆ ಪೂರ್ಣ ಪ್ರಮಾಣದ ಜೀವ ತುಂಬುವಲ್ಲಿ ಯಶಸ್ವಿಯಾಗುತ್ತಾರೆ,

ಚಿಕ್ಕಣ್ಣ, ಅಶೋಕ್, ಪ್ರಭು ಕಾಮಿಡಿಯಲ್ಲಿ ಡಬಲ್ ಮೀನಿಂಗ್ ಇದೆ. ಆದ್ರೆ ಓವರ್ ಆಗಿ ಟಾರ್ಚರ್ ಕೊಡಲ್ಲ. ಸುಮನ್ ರಂಗನಾಥ್ ತೆಳು ಸೀರೆಯಲ್ಲಿ ಗ್ಲಾಮರ್ ಇದೆ. ಆದ್ರೆ ವಲ್ಗರ್ ಅನ್ನಿಸೋದಿಲ್ಲ, ಬಂದು ಹೋಗೋ ಸೀನ್‌ ಗಳಲ್ಲಿ ಪೋಲಿತನವಿದೆ, ಆದ್ರೆ ವಾಸ್ತವತೆಗೆ ದೂರವಿಲ್ಲ. ಕೊಟ್ಟ ಕಾಸಿಗೆ ಏನಪ್ಪ ಕೊಡ್ತಾರೆ ಅಂತ ಕೇಳೋದಾದ್ರೆ ಒನ್ ಟು ಡಬಲ್ ಮಜಾ ಕೊಡ್ತಾರೆ ಅಂತ ಹೇಳಬಹುದಾದ ಸಿನಿಮಾ ಅಂತ ಹೇಳಬಹುದು. ಕಥೆಯನ್ನ ಲೆಕ್ಕಕ್ಕಿಟ್ಟುಕೊಂಡ್ರೆ ಒಂದು ಸಲ ನೋಡಬಹುದಾದ ಸಿನಿಮಾ, ಆದ್ರೆ ಡೈಲಾಗ್‌ಗಳು ಕಾಮಿಡಿಯನ್ನ ನೋಡಿದ್ಮೆಲೆ ಮತ್ತೊಮ್ಮೆ ಥಿಯೇಟರ್‌ನಲ್ಲಿ ಡಬಲ್ ಇಂಜನ್ ಎಳೆಯೋಕೆ ಹೋಗೆ ಹೋಗ್ತೀರಾ. ಕಾಲೇಜು ಹೈಕ್ಳಿಗೆ ಪಕ್ಕಾ ಇಷ್ಟ ಆಗೋ ಸಿನಿಮಾ.

ಒಟ್ಟಿನಲ್ಲಿ ಈ ವಾರ ವೀಕೆಂಡ್ ಹೇಗೆ ಕಳೆಯೋದು? ಎಲ್ಲಿ ಹೋಗೋದು ? ಏನ್ ಮಾಡೋದು? ಅನ್ನೋರಿಗೆ ಈ ಡಬಲ್ ಇಂಜನ್ ಚಿತ್ರ ಒಂದು ಒಳ್ಳೆಯ ಮನರಂಜನೆಯನ್ನ ಕೊಡುತ್ತದೆ, ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಈಗಾಗ್ಲೆ ಚಿತ್ರವನ್ನ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು.

 

Tags