ಬಾಲ್ಕನಿಯಿಂದವಿಡಿಯೋಗಳು

‘ಕುಚ್ಚಿಕೂ ಕುಚ್ಚಿಕು’ ಚಿತ್ರದ ಮನಮೋಹಕ ಟ್ರೈಲರ್ …!

ದಿವಂಗತ ಡಿ. ರಾಜೇಂದ್ರ ಬಾಬು ಅವರ ಕೊನೆಯ ಚಿತ್ರವಾದ ‘ಕುಚ್ಚಿಕೂ ಕುಚ್ಚಿಕು’ ಚಿತ್ರವು ನಿರೀಕ್ಷೆಯನ್ನು ಹುಟ್ಟಿಸಿದ್ದು, ಜುಲೈ 6 ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂದು ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ.

ನಾದಬ್ರಹ್ಮ ಹಂಸಲೇಖ ಅವರು ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ನೇಹವನ್ನು ಕಂಡು ಅವರಿಬ್ಬರು ಜೊತೆಯಾಗಿ ಅಭಿನಯಿಸಿದ್ದ ದಿಗ್ಗಜರು ಚಿತ್ರಕ್ಕೆ ಕುಚ್ಚಿಕೂ ಕುಚ್ಚಿಕು ಹಾಡನ್ನು ಬರೆದಿದ್ದರು. ಈ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದರು.

ನಂತರ ಡಿ. ರಾಜೇಂದ್ರ ಬಾಬು ಅವರೇ ಕುಚ್ಚಿಕೂ ಕುಚ್ಚಿಕು ಎಂಬ ಸಾಲನ್ನು ಶೀರ್ಷಿಕೆಯನ್ನಾಗಿ ಬಳಸಿಕೊಂಡು ಚಿತ್ರವೊಂದನ್ನುನಿರ್ದೇಶನ ಮಾಡಿದ್ದರು. ಇದೀಗ ಈ ಚಿತ್ರವು ತೆರೆ ಕಾಣಲು ಸಿದ್ದತೆ ನಡೆಸಿದೆ.

ಚಿತ್ರದಲ್ಲಿ ಪ್ರವೀಣ್ ಮತ್ತು ಜೆಕೆ ನಾಯಕರಾಗಿ ಕಾಣಿಸಿಕೊಂಡಿದ್ದು, ಡಿ.ರಾಜೇಂದ್ರಬಾಬು ಅವರ ಮಗಳು ನಕ್ಷತ್ರಾ ಅವರು ಜೋಡಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರೇ ಸಾಹಿತ್ಯ ಬರೆದು ಸಂಗೀತ  ಸಂಯೋಜನೆ ಮಾಡಿದ್ದು, ಎಮ್.ಯೂ ನಂದಕುಮಾರ್ ಅವರ ಛಾಯಾಗ್ರಹಣವಿದೆ.

ಶ್ರೀ ಚಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿ ಕುಚ್ಚಿಕೂ ಕುಚ್ಚಿಕು ಚಿತ್ರವನ್ನು   ಎನ್.ಕೃಷ್ಣಮೂರ್ತಿ ಅವರು ಈ ಚಿತ್ರವನ್ನುನಿರ್ಮಾಣ ಮಾಡಿದ್ದು, ಜಯಣ್ಣ ಕಂಬೈನ್ಸ್ ನವರು ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.

Tags