ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಮನರಂಜಿಸುವ ಎಡವಟ್ಟು ನಾಯಕನ ಸಂಕಷ್ಟಗಳು

ಚಂದನವನದ ಮಟ್ಟಿಗೆ ಸಂಕಷ್ಟಕರ ಗಣಪತಿ ಚಿತ್ರವು ಒಂದು ಪ್ರಯೋಗಾತ್ಮಕ ಚಿತ್ರವೆಂದು ಧಾರಾಳವಾಗಿ ಕರೆಯಬಹುದು. ಈ ಹಿಂದೆ ‘ಪನ್ಮಂಡ್ರಿ ಕ್ರಾಸ್’ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ ಹಾಗೂ ಉತ್ತಮ ಚಿತ್ರವನ್ನು ನೀಡಿದ್ದಾರೆ.

ಹೆಸರು ನೋಡಿ ಏನಿದು ಭಕ್ತಿಪ್ರಧಾನ ಚಿತ್ರವೆ? ಎಂದು ತಿಳಿದವರು ಇದ್ದಾರೆ ಆದರೆ ಇದೊಂದು ಪಕ್ಕಾ ಎಂಟರ್ಟೈನ್ಮೆಂಟ್ ಮಾಡುವಂತಹ ಒಂದು ಕಾಮಿಡಿ ಮತ್ತು ರೋಮ್ಯಾಂಟಿಕ್ ಲವ್ ಸ್ಟೋರಿಯಿಂದ ಕೂಡಿರುವ ಚಿತ್ರ.

ಚಿತ್ರದ ನಾಯಕ ಗಣಪತಿ (ಲಿಖಿತ್ ಶೆಟ್ಟಿ) ಎಂಬಿಎ ಓದಿದ್ದರು ಕಾರ್ಟೂನಿಷ್ಟ್ ಆಗಬೇಕು ಎಂಬುದು ಆತನ ಆಸೆ. ಅಪ್ಪ ಸುಧಾಕರ್ (ಅಚ್ಯುತ್) ಇಷ್ಟಕ್ಕೆ ವಿರುದ್ಧವಾಗಿ ಒಂದು ಪತ್ರಿಕೆಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲೇ ನಾಯಕಿ ಶೃತಿ (ಶೃತಿ) ಯನ್ನು ಭೇಟಿ ಮಾಡಿ ಪ್ರೀತಿಗೆ ಬೀಳುತ್ತಾನೆ. ಆದರೆ ಆಕೆ ಬೇರೆಯವನ ಜೊತೆ ಎಂಗೇಜ್ ಆಗಿರುತ್ತಾಳೆ. ಕಥೆ ಹೀಗೆ ಸಾಗುವಾಗಲೇ ಕಥೆಗೆ ಬಿಗ್ ಟ್ವಿಸ್ಟ್ ಸಿಗುತ್ತದೆ. ಜೊತೆಗೆ ಎಲಿಯನ್ ಹಾಂಡ್ ಸಿನ್ಡ್ರೋಂ ಅಂದರೆ ತನ್ನ ಎಡಗೈ ನಿಯಂತ್ರಣವಿಲ್ಲದೆ ಬಳಲುವ ಸಮಸ್ಯೆಗೆ ನಾಯಕ ತುತ್ತಾಗುತ್ತಾನೆ. ಹೀಗೆ ಚಿತ್ರದ ಕಥೆ ಸಾಗುತ್ತದೆ.

ಇದೇ ಮೊದಲ ಬಾರಿಗೆ ನಟರಾಗಿ ಅಭಿನಯಿಸಿರುವ ಲಿಖಿತ್ ಶೆಟ್ಟಿ ಹಾಗೂ ಶೃತಿ ಗೊರಾಡಿಯಾ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ದೊಡ್ಡ ಪ್ಲಸ್ ಎಂದರೆ ನಾಯಕನ ಗೆಳೆಯನಾಗಿ ಬರುವ ನಾಗಭೂಷನ್ , ಮಂಜುನಾಥ್ ಹೆಡ್ಗೆ, ಅಚ್ಯುತ್ ಕುಮಾರ್ .

ಈಗಾಗಲೇ ಖಾಯಿಲೆಯ ಕುರಿತಾದ ಚಿತ್ರಗಳು ಬಂದು ಹೊಗಿದ್ದರೂ ಈ ಚಿತ್ರದಲ್ಲಿನ ನಾಯಕನ ಖಾಯಿಲೆಯ ಸಂಕಷ್ಟಗಳು ಮನರಂಜಿಸುತ್ತವೆ. ಜೊತೆಗೆ ಲಘು ಹಾಸ್ಯದ ಸ್ಪರ್ಶ ನೀಡಿರುವ ನಿರ್ದೇಶಕರು ಈ ಮೂಲಕವೇ ಖಾಯಿಲೆಯ ಸ್ವರೂಪವನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ. ಜೊತೆಗೆ ಋತ್ವಿಕ್ ಮುರಳೀಧರ್ ಅವರ ಸಂಗೀತದ ಹಾಡುಗಳು ಚಂದ ಅನಿಸುತ್ತವೆ. ಹಾಗಾಗಿ ಗಣಪತಿ ದೃಶ್ಯದಿಂದ ದೃಶ್ಯಕ್ಕೆ ಇಷ್ಟವಾಗುತ್ತಾ ಸಾಗುತ್ತದೆ.

‘ಸಂಕಷ್ಟಕರ’ ಹೆಸರೇ ಹೇಳುವಂತೆ ಕೈ ಹಿಡಿತ ತಪ್ಪಿದ ಗಣಪತಿ ಎಂಬ ಕಥಾ ನಾಯಕನ ಜೀವನದಲ್ಲಿ ಏನೆಲ್ಲ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುವುದೇ ಸಿನಿಮಾ. ಆ ಆವಾಂತರಗಳು ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಹಾಗೇನೇ ಇದೊಂದು ಮನೆ ಮಂದಿಯೆಲ್ಲಾ ನೋಡಬಹುದಾದ ಸಿನಿಮಾವಾಗಿದೆ.

Tags

Related Articles

Leave a Reply

Your email address will not be published. Required fields are marked *