ಬಾಲ್ಕನಿಯಿಂದಸಂದರ್ಶನ

ಶಿರಿನ್: ಚಂದನವನಕ್ಕೆ ಕಾಲಿಟ್ಟ ಚೆಂದದ  ಸುಕನ್ಯೆ..!

‘ವಿರಾಜ್’ ಎಂಬ ಹೊಸ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಡುವ ಕನಸಿವಳದು!

ಸಂದರ್ಶನ

ಯಾರನ್ನೇ  ನಮ್ಮ ಹೃದಯದಲ್ಲಿ ‘ವಿರಾಜ’ಮಾನವಾಗಿಸಲು  ಸಾಕಷ್ಟು ಸಮಯ ಬೇಕಾಗುತ್ತೆ ತಾನೆ..?! ಅಂಥಾದ್ದರಲ್ಲಿ ನಿನ್ನೆಯ ತನಕ ಫ್ಯಾಷನ್ ಲೋಕದ ಸುಂದರಿಯಾಗಿ ಮೆರೆದ  ಈ  ನೀರೆಗೆ ಕನ್ನಡಿಗರ ಮನಸ್ಸಿನೊಳಗೆ ಮನೆ ಮಾಡುವ  ಆಸೆಯಂತೆ ನೋಡಿ..! ಬನ್ನಿ ಪರಿಚಯಿಸುತ್ತಿದ್ದೇವೆ  ಈ ಮುಂಬೈ ಬೆಡಗಿಯನ್ನು…

ಶಿರಿನ್: ಚಂದನವನಕ್ಕೆ ಕಾಲಿಟ್ಟ ಚೆಂದದ  ಸುಕನ್ಯೆ..! ‘ವಿರಾಜ್’ ಎಂಬ ಹೊಸ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಡುವ ಕನಸಿವಳದು!

ನಿಮ್ಮ ಬಗ್ಗೆ ನೀವೇ ಏನೆಲ್ಲಾ ಹೇಳಿಕೊಳ್ಳುತ್ತೀರಿ…ಎಂದಾಗ.. ..ಈ  ಚಂದನದ ಮೈಹೊತ್ತು ಹೊಳಪುಕಂಗಳ, ಬೇಕಾದಷ್ಟು ಉಬ್ಬು-ತಗ್ಗುಗಳಿಂದ ಕಂಗೊಳಿಸುವ  ಎತ್ತರದ ನಿಲುವಿನ  ಸುಂದರಿ  ಮುತ್ತಿನ ನಗೆ ನಕ್ಕು ನುಡಿದಿದ್ದಿಷ್ಟು..!

ಮುಂಬೈನ ಜೈ ಹಿಂದ್ ಕಾಲೇಜಿನಲ್ಲಿ ನಾನು ನನ್ನ ಡಿಗ್ರಿ ಮುಗಿಸಿದ್ದೇನೆ. ನನಗೆ ಫೋಟೋಗ್ರಾಫಿ ಎಂದರೆ ತುಂಬಾ ಇಷ್ಟ. ಸಾಕಷ್ಟು ಫೋಟೋಗಳನ್ನು  ತೆಗೆಸಿಕೊಳ್ಳುತ್ತಿದ್ದೆ..!!!  ಅದಾದ   ನಂತರ ನಾನು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟೆ..ಈಗ ‘ವಿರಾಜ್’…!!!

 • ನೀವು ನಟನಾ ಕ್ಷೇತ್ರಕ್ಕೆ ಹೇಗೆ ಪಾದಾರ್ಪಣೆ ಮಾಡಿದಿರಿ?

ನಾನು ಮಾಡೆಲಿಂಗ್ ಕ್ಷೇತ್ರದಿಂದ ಬಂದವಳು. ಮೊದಲು ಮಾಡೆಲಿಂಗ್ ಮಾಡಿಕೊಂಡಿದ್ದೆ. ನನಗೆ ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ಇತ್ತು.. ಮುಂದೆ ಆಡಿಷನ್ ಕೊಡುವ ಮೂಲಕ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು..

 • ಇಲ್ಲಿಯವರೆಗೆ ಎಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೀರಾ?

ನಾನು ತಮಿಳು ,ತೆಲುಗು ಹಾಗೂ ಸದ್ಯ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ..ಮೊದಲು ತೆಲಗು ಚಿತ್ರಕ್ಕೆ ಸಹಿ ಹಾಕಿದೆ, ನಂತರ ತಮಿಳು ಕನ್ನಡ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು..

 • ನೀವು ಇದೇ ಮೊದಲ ಬಾರಿಗೆ ಕನ್ನಡ ಚಿತ್ರವಾದ ‘ವಿರಾಜ್’ ನಲ್ಲಿ ಅಭಿನಯಿಸಿದ್ದೀರೀ, ಹೇಗಿತ್ತು ನಿಮ್ಮ ಮೊದಲ ಅನುಭವ?

ತುಂಬಾ ಚೆನ್ನಾಗಿತ್ತು.. ನನಗೆ ಸೆಟ್ ನಲ್ಲಿ ಎಲ್ಲರೂ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ನಿರ್ದೇಶಕರು ಪ್ರತಿಯೊಂದನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ಶುರುವಿನಲ್ಲಿ ಕೊಂಚ ಕಷ್ಟವಾಗುತ್ತಿತ್ತು. ಆದರೆ ಕನ್ನಡಿಗರು ತುಂಬಾ ಒಳ್ಳೆ ಮನಸ್ಸಿನವರು ಹಾಗಾಗಿ ಏನು ತೊಂದರೆಯಾಗಿಲ್ಲ..

 • ಚಿತ್ರರಂಗಕ್ಕೆ ಹೊಸಬರಾದರೂ ನೀವು ಅಭಿನಯಿಸಿದ ಚಿತ್ರಗಳಲ್ಲಿ ನಿಮ್ಮ ಮನಸ್ಸಿಗೆ ಖುಷಿ ನೀಡಿದ ಪಾತ್ರಗಳಾವವು?

ಕನ್ನಡದಲ್ಲಿ ವಿರಾಜ್ ಚಿತ್ರ ನನಗೆ ಮನಸ್ಸಿಗೆ ಖುಷಿ ನೀಡಿದೆ.. ಇದೊಂದು ಕಂಪ್ಲೀಟ್ ಕೌಟುಂಬಿಕಾ ಮನೋರಂಜನಾ ಚಿತ್ರ. ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಸರ್ ಅಭಿನಯಿಸಿದ್ದಾರೆ. ಅವರೊಂದಿಗೆ ತೆರೆ ಹಂಚಿಕೊಳ್ಳುವುದು ನನ್ನ ಪುಣ್ಯ.. ಈ ಚಿತ್ರವನ್ನು ಎಲ್ಲರೂ ಖುಷಿ ಪಡುತ್ತಾರೆ ಎಂಬ ಭರವಸೆ ನನಗಿದೆ..

 • ಹಿರಿಯ ಕಲಾವಿದರೊಂದಿಗೆ ಅಭಿನಯಿಸಿ ಏನನ್ನು ಕಲಿತಿರಿ?

ನಾನು ಮೊದಲಿಗೆ ತುಂಬಾ ಗಾಬರಿಗೊಂಡಿದ್ದೆ. ಎಲ್ಲರೂ ಚಿತ್ರರಂಗದ ಹೆಸರಾಂತ ನಟರಿದ್ದರು. ದೇವರಾಜ್, ಟೆನ್ನಿಸ್ ಕೃಷ್ಣ, ವಿನಯ ಪ್ರಸಾದ್ ..ಆದರೆ ಎಲ್ಲರೂ ಅವರು ನನ್ನನ್ನು ಅವರಲ್ಲಿ ಒಬ್ಬಳಂತೆ ಕಂಡರು, ಹಾಗೂ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು, ಹಾಗೂ ಹೇಗೆ ಅಭಿನಯಿಸಬೇಕು ಎಂಬ ಕೆಲ ಪಾಠವನ್ನು ಅವರನ್ನು ನೋಡಿ ಕಲಿತೆ…

 • ನೀವು ಅಭಿನಯವನ್ನು ಎಲ್ಲಿ ಕಲಿತಿರಿ?

ನಾನು ಥೀಯೇಟರ್ ನಲ್ಲಿ ನಟನೆ ಕಲಿತು ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ.. ಮುಂಬೈನಲ್ಲಿ, ಮುಜಿದ್ ಖಾನ್ ಅವರಿಂದ ನಟನೆಯ  ತರಬೇತಿಯನ್ನು  ಪಡೆದೆ..

 • ಯಾವ ತರಹದ ಸಿನಿಮಾಗಳಲ್ಲಿ ಮುಂದೆ ಅಭಿನಯಿಸಲು ಇಚ್ಛಿಸುತ್ತೀರಾ?

ಪಾತ್ರಗಳು ಚೆನಾಗಿದ್ದರೆ ನಾನು ಅದಕ್ಕೆ ನ್ಯಾಯ ಒದಗಿಸಲು ಬಯಸುತ್ತೇನೆ, ಹೆಚ್ಚಾಗಿ ಬಬ್ಲಿ , ಹಾಗೂ ಹೋಮ್ಲೀ ಗರ್ಲ್ ಪಾತ್ರ ಮಾಡಲು ನನಗಿಷ್ಟ..

 • ನಟಿಯಾಗಿ ನಿಮ್ಮ ಪೊಸಿಟಿವಿಟಿ ಏನು?

ನಟಿಯಾಗಿ ನಾನು ಯಾವತ್ತೂ ಪೊಸಿಟಿವ್ ಆಗಿ ಆಲೋಚಿಸುತ್ತೇನೆ, ಇದರಿಂದ ನನಗೆ ಇನ್ನಷ್ಟು ಧೈರ್ಯ ಸಿಗುತ್ತದೆ..

 • ನಟನೆಯನ್ನು ಹೇಗೆ ಇನ್ನಷ್ಟು ಅಭಿವೃದ್ದಿ ಪಡಿಸುತ್ತೀರಿ?

ನಟನೆ ಸ್ವಾಭಾವಿಕವಾಗಿ ಬರಬೇಕು.. ನಾನು ಸಿಕ್ಕಾಪಟ್ಟೆ ಸಿನಿಮಾಗಳನ್ನು  ನೋಡುತ್ತೇನೆ. ಅದರಲ್ಲೂ ನಾನು ಇಂಗ್ಲೀಷ್ ಸಿನಿಮಾಗಳನ್ನು ಹೆಚ್ಚು ನೋಡುತ್ತೇನೆ,  ಹಾಗಾಗಿ ಅವರ ಹಾವಭಾವ, ಮಾತು, ಪ್ರತಿಯೊಂದನ್ನು ತಿಳಿದುಕೊಳ್ಳಬಹುದು. ನಾನು ಸಿನಿಮಾದಿಂದ ಹಲವಾರು ಕಲಿತಿದ್ದೇನೆ.. ಕಲಿಯುತ್ತಲೇ ಇದ್ದೇನೆ..

 • ಮುಂಬರುವ ಯುವ ನಟರಿಗೆ ಏನು ಸಂದೇಶ ನೀಡುವಿರಿ?

ಸತತ ಪರಿಶ್ರಮ ಹಾಗೂ ತಾಳ್ಮೆು ಮುಖ್ಯ.. ಎಲ್ಲವೂ ಆಗವುದು ಒಳ್ಳೆಯದಕ್ಕೆ .. ಏನೇ ಆದರು ತಾಳ್ಮೆ ಕಳೆದುಕೊಳ್ಳದೆ ಧೈರ್ಯದಿಂದ ಮುನ್ನುಗಿರಿ.. ಸರಿಯಾದ ಸಮಯ ಬಂದಾಗ ಎಲ್ಲವೂ ಒಳ್ಳೆಯದಾಗುತ್ತದೆ..

 • ನೆಚ್ಚಿನ ನಟಿ/ನಟ ಯಾರು?

ಆಲಿಯಾ ಭಟ್,ಹೃತಿಕ್, ಕರೀನಾ ತುಂಬಾ ಇಷ್ಟವಾದ ನಟರು..

 • ಸಿನಿಮಾ ಅಥವಾ ಥಿಯೇಟರ್ ಅಭಿನಯ ಇಷ್ಟವೋ?

ಸಿನಿಮಾದಲ್ಲಿ ಅಭಿನಯಿಸಲು ಆಸ್ತಕಿ .. ಥಿಯೇಟುರ್ ನಲ್ಲಿ ನಾನು ನಟನೆಯನ್ನು ಕಲಿತೆ ಹಾಗೂ ಸ್ಟೇಜ್ ಫಿಯರ್ ದೂರವಾಯಿತು.

 • ನಿಮ್ಮ ಬೆಸ್ಟ್ ಕ್ವಾಲಿಟಿ ಏನು?

ನನ್ನ ಪ್ರಕಾರ ನನ್ನ ಹಾವಾಭವ ಇರಬಹುದು.. ನಟನೆ ಬರೀ ನಟಿಸುವುದಲ್ಲ. ಅಲ್ಲಿ ಹಾವಭಾವ ಎಲ್ಲವೂ ಪರಿಗಣಿಸಲಾಗುತ್ತದೆ.. ಇನ್ನು ನಾನು ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದಾಗಲೂ ಹಾವಭಾವ ಅಲ್ಲಿ ಪ್ರಮುಖ ಪಾತ್ರವಹಿಸುತಿತ್ತು..

 • ವಿರಾಜ್ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಹೇಗಿತ್ತು?

ಸಿಕ್ಕಾಪಟ್ಟೆ ಖುಷಿಯಾಗಿತ್ತು. ನಾಯಕ ನಟನಿಂದ ಹಿಡಿದು ಎಲ್ಲರೂ ಅವರ ಕುಟುಂಬದಂತೆ ನನ್ನನ್ನು ಕಾಣುತ್ತಿದ್ದರು.. ನನ್ನ ಅಮ್ಮನ ಅನುಪಸ್ಥಿತಿಯಲ್ಲಿ ಅವರೆಲ್ಲರೂ ನನಗೆ ಕೊಟ್ಟ ಪ್ರೀತಿ ಮರೆಯಲಾರದು… ನಾನು ಒಬ್ಬಂಟಿ ಎಂದು ನನಗೆ ಅನಿಸಲಿಲ್ಲImage result for shirin kanchwala

 • ವಿರಾಜ್ ಚಿತ್ರ ಯಾವಾಗ ತೆರೆ ಮೇಲೆ ಬರುತ್ತೆ?

ಬಹುಶಃ ಇದೇ ದೀಪಾವಳಿಗೆ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಇನ್ನೂ ಖಚಿತಗೊಂಡಿಲ್ಲ..

ಇರಲಿ, ಈ ಸುಂದರಿಗೆ ಹೆಚ್ಚು ಅವಕಾಶಗಳು ಸಿಗಲಿ….! …ಶಿರಿನ್  ‘ಕಾಂಚಾವಾಲಾ’ ಈ ಹಿಂದೆ ಜೂಲಿ ಚಾವ್ಲಾಳಂತೆ, ಸ್ಯಾಂಡಲ್ ವುಡ್ ನ ಸಕಲ ಹೀರೊಗಳೊಡನೆ ತಲಾ ಒಂದೊಂದು ಸುನೆಮಾ ಮಾಡಲಿ…..ಆಮೇಲೆ  ನಸೀಬಿದ್ರೆ ಬಾಲಿವುಡ್ ತವರಿಗೇ ಸೇರಿಕೊಳ್ಳಲಿ ಎಂದು ಹಾರೈಸುವ ಬಾಲ್ಕನಿ..!

– ಸುಹಾನಿ ಬಡೆಕ್ಕಿಲ

Tags