ಬಾಲ್ಕನಿಯಿಂದಸಂದರ್ಶನ

ಕುಲವಧುವಿನಲ್ಲಿ ಅರಳಿದ ಸೂರಜ್..

ಹೆಚ್.ಎ. ಯೋಗೇಶ್ ಹಾಗೂ ಪ್ರಭಾ ಯೋಗೇಶ್ ದಂಪತಿಗಳ ಪುತ್ರನಾದ ಸೂರಜ್ ಅವರು ಹುಟ್ಟಿ ಬೆಳೆದಿದ್ದು ಸಕಲೇಶಪುರದಲ್ಲಿ. ಬಾಲ್ಯದಲ್ಲಿ ಇಂಜಿನಿಯರಿಂಗ್ ಆಗಬೇಕೆನ್ನುವ ಕನಸು. ಮಲ್ನಾಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ‘ಸೂರಜ್’ ಈಗ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರವಾಹಿಯಲ್ಲಿ ‘ಗೌರವ್’ ಆಗಿ ಅಭಿನಯಿಸುತ್ತಿದ್ದಾರೆ.

ಸೂರಜ್ ಅವರಿಗೆ ಹೀರೋ ಆಗಬೇಕೆನ್ನುವ ಆಸೆ ಮೂಲೆಯೊಲ್ಲೊಂದೆಡೆ ಚಿಗುರೊಡೆಯಿತು. ಮುಂದೊಂದು ದಿನ ನಾನೂ ಒಳ‍್ಳೆಯ ಕಲಾವಿದನಾಗಿ  ಹೆಸರು ಮಾಡಬೇಕೆಂಬ ಹಂಬಲದೊಂದಿಗೆ ಸೂರಜ್ ಅವರು’ ಲೈಮ್ ಲೈಟ್’ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ನಟನಾ ತರಬೇತಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಲಕ್ಷೀ ಬಾರಮ್ಮ ಧಾರವಾಹಿಯ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಲೈಮ್ ಲೈಟ್ ತಂಡದವರು ಕರೆದುಕೊಂಡು ಹೋಗಿದ್ದರಂತೆ. ಇವರನ್ನು ನೋಡಿದ ಡೈರೆಕ್ಟರ್ ಧಾರವಾಹಿಯಲ್ಲಿ ಅಭಿನಯಿಸುತ್ತೀರ ಎಂದು ಪ್ರಶ್ನಿಸಿದಾಗ ಇವರು ಒಲ್ಲೆ ಎನ್ನದೆ ತಕ್ಷಣ ಒಪ್ಪಿಕೊಂಡು ಮುಂದಿನ ಆಡಿಷನ್ ನಲ್ಲಿ ಆಯ್ಕೆಯಾದರು. ಸೂರಜ್ ಅವರಿಗೆ ಇದು ಮೊದಲನೆಯ ಧಾರವಾಹಿ. ಮೊದಲ ಬಾರಿ ಬಣ‍್ಣ ಹಚ್ಚಿ ಕ್ಯಾಮರಾ ಎದುರಿಸಿದಾಗ ತುಂಬಾ ಗಾಬಾರಿಗೊಂಡಿದ್ದರಂತೆ ಆದರೆ ನಿರ್ದೇಶಕರ ಸಹಾಯ ಹಾಗೂ ಹಿರಿಯ ಕಲಾವಿದರ ಪ್ರೋತ್ಸಾಹ  ಮಾರ್ಗದರ್ಶನದಿಂದ ಅಭಿನಯಿಸಲು ತೊಂದರೆ ಎನಿಸಲಿಲ್ಲ ಈಗ ಜನರು ನನ್ನನ್ನು ಗರುತಿಸಿದ್ದಾರೆ ಹಾಗಾಗಿ ನನ್ನ ಶ್ರಮ ಸಾರ್ಥಕವಾಯಿತು ಎಂದು ವಿವರಿಸುವ ಸೂರಜ್ ಅವರ ಕಣ‍್ಣಲ್ಲಿ ಕುತೂಹಲದ ಬೆಳಕು.

ಸೂರಜ್ ಅವರಿಗೆ ಸಿನಿಮಾದಲ್ಲಿ  ನಟಿಸಲು ಅವಕಾಶವೂ ಬಂದಿದೆ . ಸದ್ಯಕ್ಕೆ ಅವರು ಏನೆಂದು ಹೆಸರಿಡಲಿ ಸಿನಿಮಾದಲ್ಲಿ ಅಥಿತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗೂ ಇನ್ನೊಂದು ಸಿನಿಮಾ ಕೂಡ ಅವರ ಕೈಯಲ್ಲಿದೆ. ಇವರಿಗೆ ಇವರ ಸ್ವಂತ ಶ್ರಮ ಹಾಗೂ ಛಲವೇ ಇವರ ಬೆನ್ನೆಲುಬಂತೆ. ಇವರು ಕಿಚ್ಚ ಸುದೀಪ್ ಅವರ ಅಭಿಮಾನಿ ಹಾಗೂ ಇವರಿಗೆ ಅವರೇ ಪ್ರೇರಣೆ. ಬರುವ ದಿನಗಳಲ್ಲಿ ಒಳ‍್ಳೆಯ ಸಿನಿಮಾ ನಟನಾಗಬೇಕು ಇದೇ ಕ್ಷೇತ್ರದಲ್ಲೇ ಗರುತಿಸಿಕೊಳ‍್ಳಬೇಕೆಂಬದೇ ಇವರ ಮುಂದಿನ ಗುರಿ. ಇವರ ನಿಜ ಜೀವನದಲ್ಲೂ  ಹಾಗೂ ಇವರು ನಟಿಸುತ್ತಿರುವ ಪಾತ್ರಕ್ಕೂ ಕೊಂಚ ವ್ಯತ್ಯಾಸವಿದೆಯಂತೆ ಗೌರವ್ ಮನೆಯವರ ಕಷ್ಟ ಪರಿಹರಿಸುದರಲ್ಲೇ ಕಾಲ ಕಳೆಯುತ್ತಾನೆ ಆದರೆ ಸೂರಜ್ ಹಾಗಲ್ಲ ಗೆಳೆಯರ ಜೊತೆಯಲ್ಲಾ ಹೋಗಿ ಮಜಾ ಮಾಡುತ್ತಾನೆ ಎಂದು ಮುಗುಳ್ನಗುತ್ತಾ ಹೇಳುತ್ತಾರೆ. ಇವರು ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು, ಕ್ರಿಕೆಟ್ ಆಡುವುದು ಹಾಗೂ ದೂರ ಪಯಾಣ ಮಾಡುವುದು ಇವರಿಗೆ ತುಂಬಾ ಖುಷಿ.

ಸುಹಾನಿ.ಬಡೆಕ್ಕಿಲ

 

Tags

Related Articles

Leave a Reply

Your email address will not be published. Required fields are marked *