ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ಕಿರುತೆರೆಯ ಗುಬ್ಬಿ, ‘ಸೀತಾವಲ್ಲಭ’ ಧಾರಾವಾಹಿಯ ಮೈಥಿಲಿ ಈ ನಮ್ಮ ಬೆಡಗಿ…!

ಬೆಂಗಳೂರು, ಮೇ.08:

ಅರಮನೆ ನಗರಿ ಮೈಸೂರಿನ ಮುದ್ದು ಮುಖದ ಚೆಲುವೆ ಸುಪ್ರೀತಾ ಸತ್ಯನಾರಾಯಣ ಅವರಿಗೆ ಕಲಾ ಕ್ಷೇತ್ರವೆಂದರೆ ಅಚ್ಚುಮೆಚ್ಚು. ಎಂಜಿನಿಯರಿಂಗ್ ಪದವಿ ಪಡೆದಿರುವ ಸುಪ್ರೀತಾ ಬಾಲ್ಯದಿಂದಲೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಮುಂದು.

ಚಿಕ್ಕಂದಿನಿಂದಲೂ ಸುಪ್ರೀತಾ ಕಲಾ ರಂಗದಲ್ಲಿ ತಮ್ಮನ್ನು ತಾವು ಸಕ್ರಿಯಾವಾಗಿ ಗುರುತಿಸಿಕೊಂಡಿದ್ದರೂ ಬಣ್ಣದ ಲೋಕಕ್ಕೆ ಕಾಲಿಡುವ ಯಾವ ಯೋಚನೆಯನ್ನು ಮಾಡಲಿಲ್ಲ! ಅವರಿಗಿರುವ ವಿಭಿನ್ನ ಹವ್ಯಾಸದ ಮೂಲಕವೇ ಅವರಿಂದು ‘ಸೀತಾ ವಲ್ಲಭ’ ದ ಮೈಥಿಲಿಯಾಗಿ ನಿಮ್ಮ ಮುಂದೆ ಇದ್ದಾರೆ‌.

Related image

ಸುಪ್ರೀತಾಗೆ ಕಥೆ ಹೇಳುವ ಹುಚ್ಚು!! ತನ್ನ ಸ್ನೇಹಿತೆಯ ಒತ್ತಾಯದ ಮೇರೆಗೆ ಸ್ಕ್ರಿಪ್ಟ್ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದರು‌. ಆದರೆ ಅಲ್ಲಿ ಆದದ್ದೇ ಬೇರೆ.. ಇದಕ್ಕಿರಬಹುದು ಅದೃಷ್ಟ ಅನ್ನುವುದು. ಅಲ್ಲಿ ಇವರನ್ನು ನೋಡಿದ ನಿರ್ದೇಶಕರು ಆಡಿಶನ್ ನಲ್ಲಿ ಭಾಗವಾಹಿಸುವಂತೆ ಹೇಳಿದರು. ಆಡಿಶನ್ ನಲ್ಲಿ ಸೈ ಎನಿಸಿಕೊಂಡಿರುವ ಸುಪ್ರೀತಾ ಇದೀಗ ಮೈಥಿಲಿ ಆಗಿ ಪರಿಚಿತ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ’ಸೀತಾ ವಲ್ಲಭ’ಧಾರಾವಾಹಿಯಲ್ಲಿ ನಾಯಕಿಯ ಪಾತ್ರಕ್ಕೆ ಸುಪ್ರೀತಾ ಜೀವ ತುಂಬುತ್ತಿದ್ದಾರೆ. ಅಚ್ಚುವಿನ ಮನದನ್ನೆ ಗುಬ್ಬಿ ಯಾಗಿ ಮಿಂಚುತ್ತಿರುವ ಸುಪ್ರೀತಾ ಮ್ಮ ಮನೋಜ್ಞ ಅಭಿನಯದಿಂದ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

Image may contain: 1 person, smiling, sitting

“ಇಷ್ಟು ಒಳ್ಳೆಯ ಟೀಂ ನನಗೆ ದೊರೆತದ್ದು ನನ್ನ ಸೌಭಾಗ್ಯ ವೇ ಸರಿ. ಸೀತಾ ವಲ್ಲಭ ಧಾರಾವಾಹಿಯಿಂದ ನಾನು ನಟನೆಯ ರೀತಿ ನೀತಿಗಳನ್ನು ಚೆನ್ನಾಗಿ ಕಲಿತೆ” ಎನ್ನುವ ಸುಪ್ರೀತಾಗೆ ಸೀತಾ ವಲ್ಲಭ ಮೊದಲ ಧಾರಾವಾಹಿ.

ಮೈಥಿಲಿ ಪಾತ್ರವನ್ನು ಲವಲವಿಕೆಯಿಂದ ಮಾಡುತ್ತಿದ್ದೇನೆ ಎಂದು ಸಂತಸದಿಂದ ಹೇಳುವ ಅರಮನೆ ನಗರಿ ಚೆಲುವೆಗೆ ಎಲ್ಲಾ ರೀತಿಯ ಪಾತ್ರಕ್ಕೆ ಜೀವ ತುಂಬುವ ಬಯಕೆ. ಇನ್ನು ಕಿರುತೆರೆಯ ಗುಬ್ಬಿಗೆ ಈಗಾಗಲೇ ಸಿನಿಮಾಗಳಲ್ಲಿ ನಟಿಸುವಂತ ಆಫರ್ ಗಳು ಬರುತ್ತಿದೆ. ಚಾಲೆಂಜಿಂಗ್ ಆಗಿರುವಂತಹ ಪಾತ್ರಗಳಲ್ಲಿ ನಟಿಸುವ ಮಹಾದಾಸೆ ಹೊಂದಿರುವ ಸುಪ್ರೀತಾ ಳ್ಳೆಯ ಕತೆ, ಪಾತ್ರಗಳು ದೊರೆತರೆ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ.

ಮೊದಲ ಧಾರಾವಾಹಿಯಲ್ಲೇ ಪ್ರೇಕ್ಷಕರ ಮನ ಗೆದ್ದ ಅರಮನೆ ನಗರಿ ಚೆಲುವೆ ಸುಪ್ರೀತಾ ಬಣ್ಣದ ಬದುಕು ಇನ್ನಷ್ಟು ಕಲರ್ ಫುಲ್ ಆಗಿರಲಿ.

– ಅನಿತಾ ಬನಾರಿ

Image may contain: 1 person, smiling, standing, outdoor and nature

Image may contain: 9 people

Image may contain: 1 person, standing and outdoor

Image may contain: 1 person, smiling, standing

ಕುಂದಾಪುರದ ಬೆಡಗಿಯ ಬಣ್ಣದ ಲೋಕ

#serialactressSuprithaSathyanarayan  #serialactressSuprithaSathyanarayanmovies #serialactressSuprithaSathyanarayanserials #serialactressSuprithaSathyanarayanphotoshoot #serialactressSuprithaSathyanarayanfacebook

Tags