ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಇದು ಥ್ರಿಲ್ಲಿಂಗ್ ತುಂಬಿದ ‘ಟ್ರಂಕ್’

ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರಾದ ಜಿ.ವಿ ಅಯ್ಯರ್ ಅವರ ಮೊಮ್ಮಗಳಾದ ರಿಶಿಕಾ ಶರ್ಮಾ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಟ್ರಂಕ್ ಚಿತ್ರವು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ಟ್ರಂಕ್’.. ಇದೊಂದು ಕಂಪ್ಲಿಟ್ ಹಾರರ್ ಶೋ, ಥ್ರಿಲ್ ಜಾಸ್ತಿ ಇದೆ. ಕನ್ನಡದಲ್ಲಿ ಮೊದಲ ಸಲ ಹಾರರ್ ಚಿತ್ರವೊಂದನ್ನು ಘೋಸ್ಟ್ ಹಂಟರ್ ತಂಡದ ಮೂಲಕ ನಿರೂಪಿಸಲಾಗಿದೆ. ಇಲ್ಲಿ ಆತ್ಮದ ಕಾಟ, ಅದರಿಂದ ಮುಕ್ತಿ ಪಡೆಯಲು ಮೊರೆ ಹೋಗುವ ವಿಧಾನಗಳ ಕುರಿತು ನಿರೂಪಿಸಲಾಗಿದೆ.

ಒಂಟಿ ಮನೆಯ ಎಸ್ಟೇಟ್ ನಲ್ಲಿರುವ ಕುಟುಂಬಕ್ಕೆ ಮದುವೆ ಆಗಿ ಬರುವ ಹುಡುಗಿ, ಜೊತೆಯಲ್ಲಿ ಹಳೆ ‘ಟ್ರಂಕ್’ನ್ನ ತೆಗೆದುಕೊಂಡು ಬರ್ತಾಳೆ. ಆ ಟ್ರಂಕ್ ಮನೆಗೆ ಬಂದ್ಮೇಲೆ ವಿಚಿತ್ರ ಘಟನೆಗಳು ನಡೆಯುತ್ತೆ. ಯಾರೋ ತೊಂದರೆ ಕೊಡ್ತಿದ್ದಾರೆ ಎಂಬ ಭಯಾನಕ ಘಟನೆಗಳು ಸಂಭವಿಸುತ್ತೆ. ಇದನ್ನ ಗಮನಿಸಿದ ನಾಯಕ ಅದು ಯಾರು, ಯಾಕೆ ಎಂಬುದನ್ನ ತಿಳಿಯುವ ಸಾಹಸಕ್ಕೆ ಮುಂದಾಗುತ್ತಾನೆ. ಇಲ್ಲೊಂದು ಆತ್ಮ ಬರುತ್ತೆ, ಅದು ಯಾಕೆ ಬರುತ್ತೆ ಅದರ ಉದ್ದೇಶವೇನೆಂಬುದುನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿದರೆ ಚಂದ.

ಚಿತ್ರದಲ್ಲಿ ಹಿನ್ನೆಲೆ ಸಂಗೀತ, ಲೈಟಿಂಗ್ ಹಾಗೂ ಕ್ಯಾಮರಾ ವರ್ಕ್ ಸೂಪರ್ ಆಗಿ ಮೂಡಿ ಬಂದಿದ್ದು, ಅರಾಮಾಗಿ ಎಂಜಾಯ್ ಮಾಡಬಹುದು. ಅದರೊಂದಿಗೆ ಚಿತ್ರದಲ್ಲಿ ಬಿಚ್ಚಿಕೊಳ್ಳುವ ಫ್ಲ್ಯಾಶ್ಬ್ಯಾಕ್ ಮೂಲಕ ಚಿತ್ರದ ನಿಜವಾದ ಕಥೆ ತೆರೆದುಕೊಳ್ಳುತ್ತೆ. ಜೊತೆಗೆ ಸೆಂಟಿಮೆಂಟ್ ಸಹ ಬೆರೆಸಿ ಒಂದಷ್ಟು ಹೊತ್ತು ಮನಮಿಡಿಯುವಂತೆ ಮಾಡಲಾಗಿದೆ.

ನಾಯಕ ನಿಹಾಲ್ ರಜಪೂತ್ ಅವರ ಮೊದಲ ಪ್ರಯತ್ನ ಮೆಚ್ಚುಗೆ ಆಗುತ್ತೆ. ಅವರಂತೆಯೇ ವೈಶಾಲಿ ಅವರೂ ಮೆಚ್ಚುಗೆ ಗಳಿಸುತ್ತಾರೆ. ಉಳಿದಂತೆ ಅರುಣಾ ಬಾಲರಾಜ್, ಸುಂದರಶ್ರೀ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ರಿಯಲ್ ಗೋಸ್ಟ್ ಗಳು ಕೂಡ ವಿಶೇಷವಾಗಿ ಗಮನ ಸೆಳೆಯುತ್ತಾರೆ.

ಕನ್ನಡದಲ್ಲಿ ಮೊದಲ ಸಲ ಹಾರರ್ ಚಿತ್ರವೊಂದನ್ನು ಘೋಸ್ಟ್ ಹಂಟರ್ ತಂಡದ ಮೂಲಕ ನಿರೂಪಿಸಲಾಗಿದ್ದು, ತಾಂತ್ರಿಕವಾಗಿಯೂ ಹೊಸತನ ಹೊಂದಿರುವ ಟ್ರಂಕ್ ಚಿತ್ರವು ಗಮನ ಸೆಳೆಯುತ್ತದೆ. ಈಗಾಗಿ ಅದೇ ಮಾಮೂಲಿ ಹಾರರ್ ಸಿನಿಮಾ ಎಂದುಕೊಳ್ಳದೇ ಅರಾಮಾಗಿ ಕುಳಿತು ಈ ಚಿತ್ರವನ್ನು ನೋಡಬಹುದು.

Tags