ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

‘ಒಂದಲ್ಲ  ಎರಡಲ್ಲ..’ ರೀಲಾಂಚ್ ಮಾಡಲ್ಲ..!!??!! : ನಿರ್ಮಾಪಕ ಉಮಾಪತಿ

ನನಗೆ “ಒಂದಲ್ಲ ಎರಡಲ್ಲ..” ಡೈರೆ್ಕ್ಟರ್ ಬಗ್ಗೆ ಇರುವ ಅಭಿಮಾನವೇ ಬೇರೆ ಲೆವೆಲ್..!!

ವಿಶೇಷ ಸುದ್ದಿ ಗೋಷ್ಠಿ

ಒಂದಲ್ಲ ಎರಡಲ್ಲ..’ ಸಿನೆಮಾ ನನಗೆ ‘ಹೆಬ್ಬುಲಿ’ಗಿಂತ ಹೆಚ್ಚಿನ  ಆತ್ಮ ತೃಪ್ತಿ ನೀಡಿದೆ. ಲಾಭ ಮಾಡಲಿಲ್ಲವಾದರೂ ಲಾಸ್  ಏನೂ ಆಗಲಿಲ್ಲ…

ಬೆಂಗಳೂರು, ನ-6: ಮಲ್ಲೇಶ‍್ವರದ ‘ರೇಣುಕಾಂಬ’ ದಲ್ಲಿ ಸುದ್ದಿಗೋಷ್ಠಿಯೇನೋ ‘ಮದಗಜ’ದ ಬಗ್ಗೆ ಸ್ಪಷ್ಟೀಕರಣ ಕೊಡಲು ಕರೆದಿದ್ದರೂ, ಸಿನಿಮಾಧ್ಯಮದವರೋ ನಿರ್ಮಾಪಕ ಉಮಾಪತಿ ಶ‍್ರೀನಿವಾಸ್ ಗೌಡರಿಂದ  ಅವರ ಈ ಹಿಂದಿನ ನಿರ್ಮಾಣದ ‘ಒಂದಲ್ಲ ಎರಡಲ್ಲ..’ ಚಿತ್ರದ ವೈಫಲ್ಯತೆಗಳ ಬಗ್ಗೆ ಮಾತಿಗೆಳೆದ ಪ್ರಸಂಗವೂ  ತಾನಾಗೆ ಪ್ರಸ್ತುತವಾಯಿತು…!

ಏನಾಯ್ತು… ನಿಮ್ಮ ‘ಒಂದಲ್ಲ  ಎರಡಲ್ಲ..’ ಸಿನೆಮಾ ಏನಾದ್ರು ಮತ್ತೆ ಲಾಂಚ್ ಮಾಡಿ ಸಮಗ್ರ ಕರ್ನಾಟಕಕ್ಕೇ ತೋರಿಸ್ತೀರಾ..?

ಮಾಧ್ಯಮದ ಈ ಪ್ರಶ್ನೆ ನನಗೆ ಭಾರೀ ಆನಂದ ತರುತ್ತಿದೆ. ಹೆಬ್ಬುಲಿ ಗಿಂತ ಆತ್ಮ ಸಂತೋಷ ಕೊಟ್ಟಿರುವ ಸಿನೆಮಾ ಅದು. ಆದರೂ ಮತ್ತೊಮ್ಮೆ ‘ಒಂದಲ್ಲ ಎರಡಲ್ಲ..’ ಚಿತ್ರ  ಸುತರಾಂ ರಿಲಾಂಚ್  ಮಾಡಲ್ಲ ಎಂದರು ಉಮಾಪತಿ!!

ಬಾರಿಬಾರಿಗೂ  ‘ಒಂದಲ್ಲ ಎರಡಲ್ಲ..’ ಸಿನೆಮಾ ವಿಚಾರದ ಚರ್ಚೆಯಿಂದ ದೂರ ಸರಿದರೂ, ಮತ್ತೆ ಮತ್ತೆ ರಾಜಧಾನಿಯ ಸಿನಿಮಾಧ್ಯಮ ಮೃದು ಮಾತಿನ ಉಮಾಪತಿ ಅವರನ್ನು ಇದೇ ಚರ್ಚೆಯ ಆಂತರ್ಯಕ್ಕೆಳೆದದ್ದು ಗಮನಾರ್ಹ!

ಬಾಲ್ಕನೀ ನ್ಯೂಸ್: ಅಂಥಾ ವಿಶಿಷ್ಠ ವೈಚಾರಿಕತೆ  ಬೆಳೆಸುವ, ಪ್ರಸಕ್ತ ಸಮಾಜಕ್ಕೆ ಸೂಕ್ತ ಟಾನಿಕ್ ಆಗಿ ಪರಿಣಮಿಸುವ ಚಿತ್ರವೊಂದನ್ನು ಅತ್ತ ನಿರ್ಮಾಪಕರೂ ಸರಿಯಾಗಿ ಜನತೆಗೆ ಪ್ರಸ್ತುತ ಪಡಿಸದೇ, ಇತ್ತ ಜನರೂ ಅದರ ನಿಗಾ ವಹಿಸದೇ ಅನಾಥವಾಗಿಸಿಬಿಟ್ರಲ್ಲಾ ಎಂದು ಪ್ರಶ್ನಿಸಿದಾಗ…

ಉಮಾಪತಿ: ಪ್ರತಿಯೊಂದು ಸಮಯದ ಆಟ. ‘ಒಂದಲ್ಲ ಎರಡಲ್ಲ..’ ಬಿಡುಗಡೆ ವೇಳೆ ಸ್ಯಾಂಡಲ್ವುಡ್ ನ ಸಹೋದ್ಯೋಗಿಯೋರ್ವರ  ಲೆಕ್ಕಾಚಾರದ  ಆಟದಿಂದಾಗಿ ನಮ್ಮ ಚಿತ್ರ ಅನಾಥಪ್ರಜ್ಞೆ ತಾಳಿ ಬಳಲಿತು. ನಾನು  ನನ್ನ ಕರ್ತವ್ಯ ಸರಿಯಾಗಿ ನಿರ್ವಹಿಸಲಿಲ್ಲ ಎಂಬ ಅಪವಾದವನ್ನು ಹೊರುವಂತಾಯಿತು. ಆ ಚಿತ್ರ ಸೋಲಲು ಕಾರಣ ಅನಾರೋಗ್ಯಕರ ಸ್ಫರ್ಧೆ. ವಿತರಕರು ಕೈಕೊಟ್ಟರು. ನಮ್ಮ ಜನಕ್ಕೆ ಸೂಕ್ತ ರೀತಿಯಲ್ಲಿ ಪ್ರಸ್ತುತಪಡಿಸುವಲ್ಲಿ ವಿಫಲವಾದೆವು.

ಕಾರಣಗಳೇನೇ ಇರಲಿ, ‘ಒಂದಲ್ಲ ಎರಡಲ್ಲ..’ ಸಿನೆಮಾ ನನಗೆ ‘ಹೆಬ್ಬುಲಿ’ಗಿಂತ ಹೆಚ್ಚಿನ  ಆತ್ಮ ತೃಪ್ತಿ ನೀಡಿದೆ. ಲಾಭ ಮಾಡಲಿಲ್ಲವಾದರೂ ಲಾಸ್  ಏನೂ ಆಗಲಿಲ್ಲ ಅದರಿಂದ. ಇಷ್ಟಾದರೂ ಅದರ ನಿರ್ದೇಶಕ ಸತ್ಯಪ್ರಕಾಶ್ ನಮ್ಮಿಂದ ಇಂದಿಗೂ ಸಂಭಾವನೆ  ಸ್ವೀಕರಿಸಿಲ್ಲ. ನನಗೆ “ಒಂದಲ್ಲ ಎರಡಲ್ಲ..” ಡೈರೆ್ಕ್ಟರ್ ಬಗ್ಗೆಯಿರುವ ಅಭಿಮಾನವೇ ಬೇರೆ ಲೆವೆಲ್..!! ಎಂದು ತಮ್ಮ ಮೆಚ್ಚುಗೆ  ವ್ಯಕ್ತಪಡಿಸಿದರು.

ಸಾರ್ವಜನಿಕವಾಗಿ ರಾಜ್ಯದ 30 ಜಿಲ್ಲೆಯಲ್ಲಿ ಕಾಣಿಸದೇ ರಾಜಧಾನಿಯಲ್ಲಿ ಮಾತ್ರ ಸದ್ದು ಮಾಡಿದ ‘ಒಂದಲ್ಲ ಎರಡಲ್ಲ..’  ಒಟ್ಟಾರೆ  ವಿಫಲವಾಯಿತೆಂಬ ತಲೆಬರಹ ಹೊತ್ತಿದ್ದರೇನಂತೆ, ಒಂದೊಳ್ಳೆ ಸಿನಿಮಾ ಈ ಜಗತ್ತಿಗೆ ತಾವು ಕೊಟ್ಟ ಹೆಗ್ಗಳಿಕೆ ತಮ್ಮದಾಗಿದೆ, …ಮುಂದೆ ಅತಿಶೀಘ್ರ, ಅದೇ ನಿರ್ದೇಶಕರ ಮತ್ತೊಂದು ಅಮೂಲ್ಯ ಚಿತ್ರ ನಿರ್ಮಿಸುವುದಾಗಿಯೂ ಭರವಸೆಯನ್ನಿತ್ತರು ‘ಹೆಬ್ಬುಲಿ’ ಉಮಾಪತಿ..!!

– ಡಾ| ಸುದರ್ಶನ ಭಾರತೀಯ, 7022274686, editor@balkaninews.com

 

Tags