ಉದಯೋನ್ಮುಖರುಸುದ್ದಿಗಳು

ಒಳ್ಳೇ ಹುಡುಗ ಪ್ರಥಮ್,  ಅವರ ಹೀರೋಯಿನ್ ಸಂಪರ್ಕ ಇಟ್ಟುಕೊಳ್ಳಲ್ಲವಂತೆ..ಯಾಕೆ ಗೊತ್ತಾ..?

ಬಾಲ್ಕನಿಯೊಡನೆ ತಮ್ಮ ಅಂತರಂಗದ ಮಾತುಗಳ ಹಂಚಿಕೊಳ್ಳುತ್ತಾ ಪ್ರಥಮ್ ಹೇಳಿದ್ದು ಇಷ್ಟು…”

 

ಬೆಂಗಳೂರು, ಡಿ.1: ‘ನಟ ಭಯಂಕರ’ ನಮ್ಮ ಒಳ್ಳೇ ಹುಡುಗ ಪ್ರಥಮ್ ರವರ ಸದ್ಯ ನಿರ್ಮಾಣವಾಗುತ್ತಿರುವ ಸಿನೆಮಾ. ಹೌದಲ್ವಾ ಈ ಹಿಂದೆ ಕರುನಾಡಿನಲ್ಲಿ ಅಣ್ಣಾವ್ರಿಗೆ ‘ ನಟ ಸಾರ್ವಭೌಮ’ ಎಂಬ ಬಿರುದಿತ್ತು. ಕುಮಾರತ್ರಯರೆಂದೇ ಖ್ಯಾತಿ ಹೊಂದಿದ್ದರು  ಕಲ್ಯಾಣ ಕುಮಾರ್, ಉದಯ್ ಕುಮಾರ್ , ರಾಜ್ ಕುಮಾರ್. ಅಂದಹಾಗೇ ಕಲ್ಯಾಣ್ ಕುಮಾರ್ ರವರಿಗೆ ‘ನಟ ಶೇಖರ ‘ ಎಂಬ ಬಿರುದಿತ್ತು. ಇದೀಗ ಸಾಯಿ ಕುಮಾರ್ ರೊಡನೆ ಸ್ಕ್ರೀನ್ ಹಂಚಿಕೊಂಡು ನಟಿ ಸುಷ್ಮಿತಾ ಜೋಷಿಯೊಡನೆ  ನಾಯಕ ನಟ-ನಟಿಯ ಸಾಂಗತ್ಯ ಹೊಂದಿರುವ ಪ್ರಥಮ್ ‘ನಟ ಭಯಂಕರ’ದ ನಿರ್ಮಾಣದಲ್ಲಿ ಸಖತ್ ಬ್ಯುಸಿ.

ಬಾಲ್ಕನಿಯೊಡನೆ ತಮ್ಮ ಅಂತರಂಗದ ಮಾತುಗಳ ಹಂಚಿಕೊಳ್ಳುತ್ತಾ ಪ್ರಥಮ್ ಹೇಳಿದ್ದು ಇಷ್ಟು…”

“…ಸಾಮಾನ್ಯವಾಗಿ ನಾನು  ಹುಡುಗಿಯರ ಜೊತೆ ಇತ್ತೀಚಿನ ದಿನಗಳಲ್ಲಿ ಫೋಟೋ ತೆಗಿಸಿಕೊಳ್ಳೋದೆ  ಇಲ್ಲ! ನನ್ನ ಸಿನಿಮಾದಲ್ಲಿ ನಟಿಸಿದವರ  ಮೊಬೈಲ್ ಫೋನ್ ನಂಬರ್ ಸಹಿತ ನಾನು ಇಟ್ಕೊಳ್ಳೋದಿಲ್ಲ!  

ಕಾರಣ ಇಷ್ಟೇ ! ಒಂದು ಆರೋಗ್ಯಕರ ಸ್ನೇಹ-ವಿಶ್ವಾಸ ನಮ್ಮ ನಮ್ಮಲ್ಲಿ ಸಿನಿಮಾ ನಿರ್ಮಾಣವಾಗುವ ಹಂತದಲ್ಲಿ ಇರುತ್ತದೆ.  ಅದು ಅಷ್ಟಕ್ಕೆ ಇರಲಿ…ಉಳಿದುಕೊಳ್ಳಿ  ಅಂತ!!!

ಇನ್ನು ‘ನಟ ಭಯಂಕರ’ ಚಿತ್ರದಲ್ಲಿ ಸುಷ್ಮಿತಾ ಜೋಷಿ ನನ್ನ ನಾಯಕಿ.  ಇಲ್ಲಿ ಆಕೆಯ ಪಾತ್ರದ ಹೆಸರು ‘ಗಾಂಚಲಿ ಗೀತಾ’ ಎಂದು. ಆಕೆಯ ಕುರಿತು ಒಂದು ಮಾತು…. ಆಕೆ ಬಹಳ ಉತ್ತಮ ನಟಿಯೆಂಬುದರಲ್ಲಿ ಎರಡು ಮಾತಿಲ್ಲ. ರೂಪವತಿಯೂ, ಪ್ರತಿಭಾನ್ವಿತೆಯೂ, ಸರಳ ವ್ಯಕ್ತಿತ್ವವುಳ್ಳ ಆಕೆಗೆ ಬಹು ದೊಡ್ಡ ಭವಿಷ್ಯವಿದೆ ಎಂಬ ಭಾವನೆ, ನನ್ನ ದೃಷ್ಠಿಯಲ್ಲಿ ..!

ನನಗಂತೂ ಅಷ್ಟಾಗಿ ನಟನೆ ಬರಲ್ಲ..!! ಆದರೆ ಅಷ್ಟಾಗಿ ಕನ್ನಡ ಬರದಿದ್ರೂ ಸುಷ್ಮಿತಾ ಜೋಷಿ ನಿಷ್ಠೆಯಿಂದ ಕನ್ನಡ ಕಲಿಯಲು ಯತ್ನಿಸುತ್ತಿದ್ದಾರೆ.  ಒಳ್ಳೇದಾಗ್ಲಿ ಅವ್ರಿಗೆ…….ನಿಮ್ಮ ಹಾರೈಕೆಯೂ ಇರಲಿ!!”

ಅಂತೂ ಪ್ರಥಮ್ ಬಾಲ್ಕನಿಯೊಡನೆ ತಮ್ಮ ಅಂತರಂಗದ  ಮಾತುಗಳನ್ನಾಡಿ ಮತ್ತೇನನ್ನೋ ಸೂಚಿಸಿದ್ದಾರೆ. ಅದ ತಿಳಿಯುವುದೂ ಬಿಡುವುದೂ ನಿಮಗೆ ಸೇರಿದ್ದು. ಒಳ್ಳೇ ಹುಡುಗನಿಗೆ ಶುಭವಾಗಲಿ

-ಡಾ. ಸುದರ್ಶನ ಭಾರತೀಯ, 7022274686, editor@balkaninews.com

Tags