ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಪ್ರೀತಿ, ಪ್ರೇಮ, ಪ್ರಣಯಗಳ ಸಮ್ಮಿಶ್ರಣ ‘ಐ ಲವ್ ಯು’!

ಚಿತ್ರ               : ಐ ಲವ್ ಯೂ

ಕಲಾವಿದರು : ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹಾಗೂ ಉಳಿದವರು

ಸಂಗೀತ         : ಡಾ. ಕಿರಣ್ ತೊಟಂಬೈಲ್

ಛಾಯಾಗ್ರಹಣ : ಸುಜ್ಞಾನ್

ನಿರ್ಮಾಣ, ನಿರ್ದೇಶನ  : ಆರ್ ಚಂದ್ರು

ರೇಟಿಂಗ್     : 

ಆರಂಭದ ದಿನಗಳಲ್ಲಿ ಫಿಲ್ಟರಿಲ್ಲದ ಕಹೀ ಸತ್ಯಗಳನ್ನು ತಮ್ಮ ವಿಶಿಷ್ಟ ಡೈಲಾಗು, ಮ್ಯಾನರಿಸಮ್ಮುಗಳ ಮೂಲಕ ಪ್ರೇಕ್ಷಕರೆದುರಿಗೆ  ದಾಟಿಸುತ್ತಲೇ ರಿಯಲ್ ಸ್ಟಾರ್ ಅನ್ನಿಸಿಕೊಂಡಿರುವವರು ಉಪೇಂದ್ರ.  ‘ತಾಜ್ ಮಹಲ್’, ‘ಚಾರ್‍ಮಿನಾರ್’ ನಂಥಾ ನವಿರು ಪ್ರೇಮ ಕಥಾನಕಗಳ ಮೂಲಕವೇ ಯಶಸ್ವೀ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಆರ್ ಚಂದ್ರು.  ಆರ್ ಚಂದ್ರು ಮತ್ತು ಉಪೇಂದ್ರ ಈ ಹಿಂದೆ ‘ಬ್ರಹ್ಮ’ ಎಂಬ ಚಿತ್ರವನ್ನು ಜೊತೆಯಾಗಿ ಮಾಡಿದ್ದರು. ಈ ಇಬ್ಬರ ಸಮಾಗಮದಲ್ಲಿ ಮೂಡಿಬಂದಿರುವ ಎರಡನೇ ಸಿನಿಮಾ ‘ಐ ಲವ್ ಯು’.

Image may contain: 1 person, sky, cloud, outdoor and nature

ಸಿನಿಮಾದ ಮೊದಲ ಭಾಗದಲ್ಲಿ ಉಪ್ಪಿ ಫ್ಲೇವರಿನ ಘಮಲು ಎದ್ದು ಕಾಣುತ್ತದೆ. ಈ ಹಿಂದೆ ‘ಎ’ ಉಪೇಂದ್ರ ಮುಂತಾದ ಚಿತ್ರಗಳಲ್ಲಿ ಉಪ್ಪಿ ಡೈಲಾಗುಗಳು ಪ್ರಸಿದ್ಧಿ ಪಡೆದುಕೊಂಡಿದ್ದವಲ್ಲಾ? ಅಂಥಾದ್ದೇ ದಾಟಿಯ ಡೈಲಾಗುಗಳು ಉಪ್ಪಿ ಕಡೆಯಿಂದ ಹೊರ ಬಿದ್ದಿವೆ. ಪ್ರೀತಿಸಬೇಕು ಅಂದವನ ಕೈಗೆ ಕಾಂಡೋಮ್ ಕೊಡುವ ಹೀರೋ ಕ್ಯಾರೆಕ್ಟರ್ರು ವಿಚಿತ್ರವೆನಿಸುತ್ತದೆ. ಆದರೆ ಆತ ಮಂಡಿಸುವ ಫಿಲಾಸಫಿಯನ್ನು ಕೇಳಿದ ಮೇಲೆ `ಹೌದಲ್ವಾ? ಇದು ನಿಜಾನೇ’ ಅನಿಸುತ್ತದೆ.

ಯಾವೆಲ್ಲಾ ನಿಜ ಎನಿಸುತ್ತದೋ ಅವೆಲ್ಲಾ ಅಂಶಗಳನ್ನು ಎರಡನೇ ಭಾಗದಲ್ಲಿ ಅವರೇ ಸುಳ್ಳಾಗಿಸಿರೋದು ಸಿನಿಮಾದ ತಾಕತ್ತು. ದೃಶ್ಯಮಾಧ್ಯಮದಲ್ಲಿ ಕಥೆ ಕಟ್ಟಿಕೊಡುತ್ತಾ ಒಂದು ವಿಚಾರವನ್ನು ನಂಬಿಸುವುದು ಮತ್ತು ಅದೇ ವಿಚಾರವನ್ನು ಸುಳ್ಳಾಗಿಸಿ ಬೇರೊಂದು ಸತ್ಯವನ್ನು ಎತ್ತಿಹಿಡಿಯುವುದು ಕಷ್ಟಕರ ಕೆಲಸ. ಆದರೆ ಅದನ್ನು ಸಲೀಸಾಗಿ ಸಾಧ್ಯವಾಗಿಸಿರುವುದು ನಿರ್ದೇಶಕ ಆರ್. ಚಂದ್ರು ಅವರ ಕಸುಬುದಾರಿಕೆಗೆ ಸಾಕ್ಷಿ.

 

ಹಾಗಾದರೆ ಚಂದ್ರು ಈ ಸಿನಿಮಾವನ್ನು ಉಪ್ಪಿ ಫ್ಲೇವರಿಗೆ ಒಗ್ಗಿಕೊಂಡು ಮಾಡಿದ್ದಾರಾ? ಇಡೀ ಚಿತ್ರದಲ್ಲಿ ಅದುವೇ ಮುಂದುವರೆದಿದೆಯಾ ಅಂತೆಲ್ಲ ಪ್ರಶ್ನೆಗಳು ಸಹಜ.  ‘ಐ ಲವ್ ಯೂ’ ಚಿತ್ರದಲ್ಲಿ ಉಪ್ಪಿ ಶೈಲಿ ಇರೋದು ನಿಜ. ಹಾಗೆ ಆರಂಭವಾಗಿ ಸಾಗಿ ಬರುವ ಕಥನ ನಂತರ ‘ತಾಜ್ ಮಹಲ್’, ‘ಚಾರ್ ಮಿನಾರ್’ ನಂಥಾ ಫ್ಲೇವರಿನೊಂದಿಗೆ ಬ್ಲೆಂಡ್ ಆಗುತ್ತದೆ.

‘ಐ ಲವ್ ಯೂ’ ಚಿತ್ರದ ಪ್ರಧಾನ ಆಕರ್ಷಣೆಯೇ ಈ ಅಂಶ. ಹೀಗೆ ಉಪೇಂದ್ರ ಮತ್ತು ಆರ್ ಚಂದ್ರು ಫ್ಲೇವರ್ ಗಳು ಹಿತವಾಗಿ ಬ್ಲೆಂಡ್ ಆಗಿರುವ ಈ ಲವ್ ಯೂ. ಇವೆಲ್ಲದರ ಜೊತೆಗೆ ಚಂದ್ರು ಅವರ ಸಿನಿಮಾಗಳಲ್ಲಿ ಬರುವ ಫಾದರ್ ಸೆಂಟಿಮೆಂಟು, ನವಿರು ಹಾಸ್ಯ, ಸ್ನೇಹಿತರ ಸಾಥ್… ಹೀಗೆ ಒಂದು ಕಮರ್ಷಿಯಲ್ ಚೌಕಟ್ಟಿನ ಸಿನಿಮಾಗೆ ಬೇಕಾದ ಸಕಲವೂ ‘ಐ ಲವ್ ಯು’ ಒಳಗೆ ಮಿಶ್ರಣಗೊಂಡಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಇದು ಮನೆಮಂದಿಯೆಲ್ಲಾ ಕೂತು ನೋಡಲೇಬೇಕಾದ ಸಿನಿಮಾ.

ನಾಯಕಿ ಶ‍್ರೀಲೀಲಾ ಬರ್ತಡೇ ಆಚರಿಸಿ, ವಿಶೇಷ ವಿಡಿಯೋ ಡೆಡಿಕೇಟ್ ಮಾಡಿದ ‘ಭರಾಟೆ’ ಚಿತ್ರತಂಡ

 

#balkaninews #iloveyou #iloveyoumoviereview #sandalwood #kannadamovies #rachitharamandupendra

Tags