ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಪಕ್ಕಾ ಕಮರ್ಶಿಯಲ್ ಆಗಿ ಮನರಂಜಿಸುವ ‘ವಾಸು’

‘ಅಕಿರಾ’ ಚಿತ್ರದ ನಂತರ ಅನಿಶ್ ನಟಿಸಿ-ನಿರ್ಮಿಸಿರುವ ‘ವಾಸು-ನಾನು ಪಕ್ಕಾ ಕಮರ್ಶಿಯಲ್ಎಲ್ಲಾ ರೀತಿಯ ಕಮರ್ಶಿಯಲ್ ಅಂಶಗಳನ್ನು ಒಳಗೊಂಡಿದ್ದರೂ ಸಹ ಇಡೀ ಕುಟುಂಬದವರು ಒಟ್ಟಿಗೆ ಕುಳಿತು ನೋಡಬಹುದಾಗಿದೆ. ಇಲ್ಲಿರುವ ಎಲ್ಲವೂ ಕಮರ್ಶಿಯಲ್ ಆಗಿ ಅದ್ದೂರಿಯಾಗಿ ಮೂಡಿ ಬಂದಿದೆ.

ಸರಳ ಕಥೆ

ಚಿತ್ರದ ನಾಯಕ ವಾಸು (ಅನಿಶ್) ಬಾಕ್ಸಿಂಗ್ ಆಟಗಾರ. ಎದುರಿಗೆ ಎಂತಹ ಪಂಟನೇ ಇರಲಿ, ಅವನನ್ನು ಎದುರಿಸಿ, ಸೋಲಿಸುವ ಚಾಣಾಕ್ಷತನದವ. ಇಂತಹ ಮಗನನ್ನು ಯಾವುದೇ ಸಮಸ್ಯೆ ಇಲ್ಲದೆ ಸಾಕುವ ಅಪ್ಪ, ಮುದ್ದು ಮಾಡೋ ಅಮ್ಮ, ಅವನ ಸಹಾಯಕ್ಕೆ ನಿಲ್ಲುವ ಅಕ್ಕ ಹಾಗೂ ಸದಾ ಜೊತೆಗಿದ್ದು ಸಾಥ್ ನೀಡುವ ಗೆಳೆಯರು.. ಹೀಗೆ ಸಾಗುವ ನಾಯಕ ಬದುಕಿನಲ್ಲಿ ಪ್ರೀತಿಯ ಅಲೆಯಾಗಿ ನಾಯಕಿ ಮಹಾಲಕ್ಷ್ಮಿ (ನಿಶ್ವಿಕಾ ನಾಯ್ಡು) ಬರುತ್ತಾಳೆ. ಬಂದವಳು ಅರೆಘಳಿಗೆಯಲ್ಲಿಯೇ ಹೊರಟು ಹೋಗುತ್ತಾಳೆ. ಅಸಲಿಗೆ ಅವಳು ಹೊರಟು ಹೋಗಲು ಮುಖ್ಯವಾದ ಕಾರಣವೇನು..? ಇಬ್ಬರೂ ಮತ್ತೆ ಒಂದಾಗುತ್ತಾರೆಯೇ..? ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

ಕಮರ್ಶಿಯಲ್ ಟಚ್

ಕಥೆ ತೀರಾ ಸರಳವೆನಿಸಿದರೂ ಅದಕ್ಕೊಂದು ಕಮರ್ಶಿಯಲ್ ಟಚ್ ನೀಡುವಲ್ಲಿ ನಿರ್ದೇಶಕ ಅಜಿತ್ ವಾಸನ್ ಉಗ್ಗೀನ ಯಶಸ್ವಿಯಾಗಿದ್ದಾರೆ. ಜೊತೆಗೆ ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳು ಗುನುಗುವಂತಿವೆ. ಚಿತ್ರದಲ್ಲಿ ಎಲ್ಲರ ಅಭಿನಯವೂ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಪ್ರೀತಿ , ಹಾಸ್ಯ, ಹೊಡೆದಾಟ, ಮನೆತನದ ಸಮಸ್ಯೆಗಳನ್ನು ಹದವಾಗಿ ತೋರಿಸಲಾಗಿದೆ.

ಪಾತ್ರಗಳ ನಟನೆ

ನಾಯಕಿ ನಿಶ್ವಿಕಾ ನಾಯ್ಡು ಪಳಗಿದ ನಟಿಯಂತೆ ಕಾಣುತ್ತಾರೆ. ಯುವ ನಟ ವರ್ಧನ್ ಕಡಿಮೆ ದೃಶ್ಯಗಳಲ್ಲಿ ಕಾಣಸಿಕೊಂಡರೂ ಗಮನ ಸೆಳೆಯುತ್ತಾರೆ. ಇನ್ನು ನಾಯಕನ ಅಪ್ಪನ ಪಾತ್ರ ನಿರ್ವಹಿಸಿರುವ ಮಂಜುನಾಥ ಹೆಗಡೆ, ತಾಯಿಯಾಗಿ ಅರುಣಾ ಬಾಲರಾಜ್, ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಕ್ ಶೆಟ್ಟಿ ಮತ್ತು ಪೋಲೀಸ್ ಪಾತ್ರಧಾರಿ ಅವಿನಾಶ್ ಅವರ ಅಭಿನಯ ಚೆನ್ನಾಗಿದೆ. ಜೊತೆಗೆ ಇತರೆ ಕಲಾವಿದರೂ ಸಹ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಈಗಾಗಲೇ ಟೀಸರ್, ಹಾಡುಗಳು ಮತ್ತು ಟ್ರೈಲರ್ ನಿಂದ ಗಮನ ಸೆಳೆದಿದ್ದ ‘ವಾಸು..’ ಚಿತ್ರವು ಪಕ್ಕಾ ಕಮರ್ಶಿಯಲ್ ಅಂಶಗಳನ್ನು ಒಳಗೊಂಡಿದ್ದರೂ ಸಹ ಇಡೀ ಕುಟುಂಬದವರು ಒಟ್ಟಿಗೆ ಕುಳಿತು ನೋಡಬಹುದು.

ಚಿತ್ರ           : ವಾಸು- ನಾನು ಪಕ್ಕಾ ಕಮರ್ಶಿಯಲ್’

ಅಂಕ         : 3/5

ತಾರಾಬಳಗ: ಅನಿಶ್, ನಿಶ್ವಿಕಾ ನಾಯ್ಡು, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಜೀವನ್

ನಿರ್ದೇಶನ : ಅಜಿತ್ ವಾಸನ್ ಉಗ್ಗೀನ

Tags