ಬಾಲ್ಕನಿಯಿಂದಬಾಲ್ಕನೀ ಭವಿಷ್ಯವಾರ ಭವಿಷ್ಯ

ಬಾಲ್ಕನಿ ವಾರಭವಿಷ್ಯ: 31-12-2018 ಸೋಮವಾರದಿಂದ 05-01-2019 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…..

ಮೇಷವಾರದ ಆರಂಭದಲ್ಲಿ ಕುಟುಂಬದವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಕೊಳ್ಳುವಿರಿ ಇಲ್ಲವೇ ಪ್ರಯಾಣ ಬೆಳೆಸುವಿರಿ. ವಾರದ ಮಧ್ಯ ಮತ್ತು ಕೊನೆಯಲ್ಲಿ ನಿಮ್ಮ ಜ್ಞಾನ ಮತ್ತು ಬುದ್ದಿಯ ಸದ್ವಿನಿಯೋಗ ಆಗುವುದಿಲ್ಲ. ಸರಿಯಾಗಿ ಆಲೋಚಿಸಿ ಮುನ್ನಡೆಯಿರಿ. ತಾಯಿಯ ಆರೋಗ್ಯದಲ್ಲಿ ಏರುಪೇರು ಅಥವಾ ಮಾತಿನ ಚಕಮಕಿ. ಮನೆಯಲ್ಲಿ ಪ್ರಾಣಿ ಸಾಕಿದ್ದರೆ ತೊಂದರೆ ಶೀತ, ನೆಗಡಿ, ಕೆಮ್ಮು ನಿಮ್ಮನ್ನು ಬಾದಿಸಬಹುದು. ಹಣಕಾಸಿನ ವ್ಯವಹಾರದಲ್ಲಿ ಕೊಂಚ ಮಟ್ಟಿಗೆ ಹಿನ್ನಡೆ. ಸ್ನೇಹಿತರು, ಕುಟುಂಬದವರ ಮೇಲೆ ನಂಬಿಕೆ ಕಳೆದುಕೊಳ್ಳುವ ವಾರ. ಕ್ರೀಡ ಕ್ಷೇತ್ರದಲ್ಲಿ ಇರುವವರಿಗೆ ಹಿನ್ನಡೆ. ವಾರದ ಕೊನೆಯಲ್ಲಿ ಇಷ್ಟದ ವಸ್ತುಗಳಿಗಾಗಿ ಹಣ ವ್ಯಯ.

ವೃಷಭ ವಾರದ ಆರಂಭದಲ್ಲಿ ವಾಸ್ತವ ಬದುಕಿನಿಂದ ದೂರ ಇರುವಿರಿ. ಸ್ನೇಹಿತ ಮತ್ತು ಕುಟುಂಬ ವರ್ಗದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ನಿಮ್ಮ ಸುತ್ತಮುತ್ತಲಿನ ಜನ ನಿಮ್ಮ ಮೇಲೆ ವಿಪರೀತ ಅವಲಂಬಿತವಾಗಿ ನಿಮ್ಮ ಸಲಹೆಯನ್ನು ಅಪೇಕ್ಷಿಸುವರು. ಅತಿಯಾದ ಕೆಲಸದ ಒತ್ತಡದಿಂದ ಸ್ವಲ್ಪ ಕಿರಿಕಿರಿ ಅನುಭವಿಸಿ ಕುಟುಂಬದವರ ಮೇಲೆ ಹೇರುವಿರಿ ಸ್ನೇಹಿತರಿಂದ ಆಹ್ವಾನ ಒಂದನ್ನು  ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮವಾರ, ಉದ್ಯೋಗದವರಿಗೆ ಕೊಂಚ ಅಸಮಾಧಾನ ಹೊಗೆ ಆಡಿದರು ಒಳಿತಾಗುವುದು, ವ್ಯಾಪಾರದವರಿಗೆ ಉತ್ತಮವಾರ, ಸರ್ಕಾರಿ ಕೆಲಸದಲ್ಲಿರುವವರಿಗೆ ಸಾಮಾನ್ಯ.

ಮಿಥುನ ವಾರದ ಆರಂಭದಲ್ಲಿ ಪ್ರಯಾಣ ಹಾಗೂ  ಹೊರಡುವ ಸಾಧ್ಯತೆ ಹೆಚ್ಚು ವಾರದ ಮಧ್ಯ ನೀವು ಏಣ ಸಿದಂತೆ ಕೆಲಸಗಳು ಆಗದು ಹಾಗಾಗಿ ಕೊಂಚ ವಿಚಲಿತರಾಗುವಿರಿ. ವಾರದಲ್ಲಿ ಹೆಚ್ಚು ಸಲಹೆ ಹಾಗೂ ಉಪದೇಶಗಳನ್ನು ಇತರರಿಂದ ತೆಗೆದು ಕೊಳ್ಳಬೇಕಾದಿತು. ಇತರೊಂದಿಗೆ ನಿಮ್ಮನ್ನು ನೀವೇ ಹೋಲಿಸಿಕೊಳ್ಳುವಿರಿ. ವ್ಯಾಪಾರಸ್ಥರಿಗೆ ಉತ್ತಮವಲ್ಲ, ಉದ್ಯೋಗಸ್ಥರಿಗೆ ಉತ್ತಮ, ವಿದ್ಯಾರ್ಥಿಗಳಿಗೆ  ಹೆಚ್ಚಿನ ಪರಿಶ್ರಮ ಅಗತ್ಯ. ಎದುರಾಳಿಗಳ ವಿರುದ್ಧ ತೊಡೆ ತಟ್ಟುವ ವಾರ ಇದಲ್ಲ. ಖರ್ಚುಗಳಿಂದ ಕೊಂಚ ಹಿನ್ನಡೆಯಾಗುವುದು. ಓಡಾಡುವಾಗ ವಾಹನ ಚಲಿಸುವಾಗ ಜಾಗ್ರತೆ.

ಕಟಕಬಹುದಿನಗಳಿಂದ ಪ್ರವಾಸದ ಬಗ್ಗೆ ಅಲೋಚಿಸುತ್ತಿರೀವಿರಿ ನಿಮಗೆ ವಾರ ಇದರ ಸಂಬಂಧ ಪ್ರಗತಿ ಆದರೆ ಪ್ರಯಾಣದಲ್ಲಿ ಕಿರಿಕಿರಿ, ವ್ಯಾಪಾರಿಗಳಿಗೆ ಉತ್ತಮ, ಉದ್ಯೋಗಸ್ಥರಿಗೆ ಉದ್ಯೋಗದಲ್ಲಿ ಪ್ರಗತಿ ಅಥವಾ ಬಡ್ತಿ ವಿಷಯವಾಗಿ ಸುದ್ದಿಯೊಂದು ಬರುವುದು. ವಾರಂತ್ಯಕ್ಕೆ ನಿದ್ದೆಯಲ್ಲಿ ದುಸ್ವಪ್ನದಿಂದಾಗಿ ವಿಚಲಿತರಾಗುವಿರಿ. ಕುಲದೇವರ ದರ್ಶನದಿಂದ ಒಳಿತು. ಕೊಂಚ ಮಟ್ಟಿಗೆ ಉಸಿರಾಟದ ತೊಂದರೆಯಿಂದ ಬಳಲುವಿರಿ. ಸಂತಾನ ಅಪೇಕ್ಷೆ ಇದ್ದವರಿಗೆ ಸಿಹಿ ಸುದ್ದಿ ಇದರ ಸಂಬಂಧವಾಗಿ ವೈದ್ಯರಿಂದ ಉತ್ತಮ ಸಲಹೆ ಪಡೆಯಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಸಿಂಹ  ವಾರ ದೇಹದ ಬಗ್ಗೆ ವಿಪರೀತ ಕಾಳಜಿವಹಿಸುವಿರಿ ಹಾಗಾಗಿ ಇದರ ಸಂಬಂಧ ಹಣವನ್ನು ಖರ್ಚು ಮಾಡುವಿರಿ. ವಾರ ನಿಮ್ಮ ಶಿಸ್ತು ಹಾಗೂ ಸಮಯ ಪರಿಪಾಲನೆಯಲ್ಲಿ ಇತರರೊಂದಿಗೆ ರಾಜಿ ಮಾಡಿಕೊಳ್ಳ ಬೇಕಾದಿತು. ಹೆಚ್ಚಾಗಿ ನಿಮ್ಮದಲ್ಲದ ಸ್ವಭಾವದ ಮಾತುಗಳನ್ನಾಡುವಿರಿ. ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಇತರರ ಸಲಹೆ ಪಡೆದರೆ ಒಳಿತು. ಸೋದರ ಮಾವನಿಂದ ಒಳಿತು. ಸ್ತ್ರೀಯರಿಂದ ಕೊಂಚ ಕಿರಿಕಿರಿ, ಕೋರ್ಟು ಮೆಟ್ಟಿಲಿರುವ ಆಲೋಚನೆಯಲ್ಲಿ ಇದ್ದರೆ ಸ್ವಲ್ಪ ಕಾಯುವುದು ಒಳಿತು. ಬೆನ್ನುನೋವು ಬಾದಿಸಬಹುದು ಸಹೋದರ ಅಥವಾ ಸಹೋದರಿಯ ಸಹಾಯಕ್ಕೆ ಮೊರೆ ಹೋಗುವಿರಿ.

ಕನ್ಯಾಎಡಗಣ್ಣು  ಎಡಕಾಲಿನ ಸಮಸ್ಯೆ ಮುಂದುವರಿಯುವುದು ಜ್ಞಾನಕ್ಕೂ, ಬುದ್ದಿಗೂ ಇರುವ ಅತ್ಯಂತ ಸೂಕ್ತ ಅಂತರವನ್ನು ತಿಳಿಯದೆ ಹೋಗುವಿರಿ. ಎಲ್ಲವನ್ನು ಪ್ರಶ್ನೆ ಮಾಡುವಿರಿ ಮತ್ತು ಅನುಮಾನದಿಂದ ನೋಡಿವಿರಿ. ಬೇಡದ ವಸ್ತುಗಳಿಗೆ  ಅಥವಾ ಬೇಡದ ಕಾರ್ಯಕ್ಕೆ  ಹಣ ವ್ಯಯವಾಗುವುದು. ಆತ್ಮವು ಸುಖದ ಕಡೆ ಮತ್ತು ಧಾರ್ಮಿಕದ ಕಡೆ ದ್ವಂದದಲ್ಲಿ ನಿಲ್ಲುವಿರಿ. ಬಾಯಾರಿಕೆ ಹೆಚ್ಚುವುದು. ಸಂಬಂಧಗಳು ವೃದ್ದಿಯಾಗುವುದು. ಹೊಸ ಪರಿಚಯಗಳು ಸ್ನೇಹಗಳು ಬೆಳೆಯುವುದು. ಕುಟುಂಬದಲ್ಲಿ ಚಿಕ್ಕವರಾಗಿದ್ದರು ನೀವೇ ಹಿರಿಯರಂತೆ ವರ್ತಿಸುವಿರಿ.

ತುಲಾಉದ್ಯೋಗದಲ್ಲಿ ಮುಂದುವರಿದ ಕಿರಿಕಿರಿ. ಸ್ಥಾನದ ಅಭದ್ರತೆ ಕಾಡುವುದು. ಹಾಗಾಗಿಯೂ ವಾರಾಂತ್ಯಕ್ಕೆ ಆತ್ಮ ಬಲ ಹೆಚ್ಚುವುದು. ನಿಮ್ಮ ಶಿಸ್ತಿನಲ್ಲಿ ಕೊಂಚ ಮಟ್ಟಿಗೆ ರಾಜಿ ಮಾಡಿಕೊಳ್ಳುವಿರಿ. ಕಾನೂನು ಅಡಿಯಲ್ಲಿ ಕೆಲಸ ಮಾಡುವವರಿಗೆ, ವಕೀಲರಿಗೆ ಹಾಗೂ ಕಲಾರಂಗದಲ್ಲಿ ಇರುವವರಿಗೆ ಉತ್ತಮ ವಾರವಲ್ಲ. ವಸ್ತ್ರ ಖರೀದಿ ಅಥವಾ ಗೃಹ ಉಪಯೋಗಿ ವಸ್ತುಗಳಿಗಾಗಿ ಹಣ ಖರ್ಚು. ಅಧಿಕ ಉಷ್ಣದಿಂದ ಬಳಲುವಿರಿ. ಅತಿಯಾದ ಕೆಲಸದ ಒತ್ತಡದಿಂದ ವಿಚಲಿತರಾಗುವಿರಿ. ಹಾಗಾಗಿಯೂ ವಾರಾಂತ್ಯಕ್ಕೆ ಸಂತೋಷದಿಂದ ಕಾಲಕಳೆಯುವಿರಿ ಹಾಗೂ ವಾರದ ಆರಂಭ ಪ್ರಯಾಣದಿಂದ ಪ್ರಾರಂಭವಾಗಿ ಪ್ರಯಾಣದಿಂದ ಅಂತ್ಯವಾಗುವುದು.

ವೃಶ್ಚಿಕ ವಾರದಲ್ಲಿ ಎಲ್ಲವನ್ನು ಲೆಕ್ಕಚಾರದಲ್ಲಿ ನೋಡುವಿರಿ. ಎಲ್ಲವನ್ನು ಪ್ರಶ್ನಿಸುವಿರಿ. ಮಧ್ಯಭಾಗದಲ್ಲಿ ಕೊಂಚ ಕಿರಿಕಿರಿ ಅನುಭವಿಸುವರಿ ಹಾಗಾಗಿಯೂ ವಾರಂತ್ಯಕ್ಕೆ ಆತ್ಮ ಬಲ ಹೆಚ್ಚುವುದು. ನರಗಳ ಸಮಸ್ಯೆ ಕಾಣಿಸಿಕೊಳ್ಳಬಹುದು. ಕುಟುಂಬದಲ್ಲಿ ಯಾವುದಾದರೂ  ರಾಜಿ ಸಂಧಾನಕ್ಕಾಗಿ ನಿಮ್ಮ ಸಲಹೆ ಪಡೆಯಬಹುದು. ಹಾಗಾಗಿಯೂ ವ್ಯಂಗ್ಯ ಮಾತುಗಳನ್ನು ಕೇಳ ಬೇಕಾದಿತು. ಕುಟುಂಬದೊಂದಿಗೆ ಕಾಲ ಕಳೆಯುವುದು ಉತ್ತಮ. ನಿಮ್ಮ ಹಣಕಾಸಿನ ಲೆಕ್ಕಚಾರದಲ್ಲಿ ವ್ಯತ್ಯಾಸವಾದರೂ ಗುರು ಬಲದಿಂದ ಒಳಿತಾಗುವುದು. ನೀರಿಗಾಗಿ ಹಣ ಖರ್ಚು. ವಾಹನ ಖರೀದಿಸುವ ಬಗ್ಗೆ ಆಲೋಚಿಸುವಿರಿ. ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಿದ್ದರೆ ಸರಿಪಡಿಸಿಕೊಳ್ಳಿ.

ಧನಸ್ಸುಧರ್ಮ ಕಾರ್ಯಗಳಿಗಾಗಿ ಹಣ ವ್ಯಯ ಅಥವಾ ದಾನ ಮಾಡಲು ಮುಂದಾಗುವಿರಿ. ವಸ್ತುವೊಂದನ್ನು ಎಲ್ಲೋ ಇಟ್ಟು ಮರೆತು ವೃತಾ ಹುಡುಕಾಡುವಿರಿ. ಅಥವಾ ವಸ್ತುಗಳನ್ನು ಕಳೆದುಕೊಳ್ಳುವಿರಿ. ಬಳಸುವ ಫೋನ್ ಕೈ ಜಾರಿ ಬೀಳಬಹುದು ಅಥವಾ ಕೆಲಸ ಮಾಡದೆ ಇರಬಹುದು ಅಥವಾ ಅನವಶ್ಯಕ ದೂರವಾಣಿ ಕರೆಗಳನ್ನು ಉತ್ತರಿಸಬೇಕಾಗಬಹುದು. ಹಿರಿಯರಿಂದ ಬಂದ ಆಸ್ತಿಯನ್ನು ಕಳೆದುಕೊಳ್ಳಬಹುದು. ಅಥವಾ ಅದರ ಚರ್ಚೆಯಾಗಬಹುದು. ಹಳೆಯ ವಸ್ತುಗಳು, ಹಳೆಯ ಸಂಬಂಧಗಳು ಅಥವಾ ಹಳೆಯ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಆತ್ಮ ಬಲವನ್ನು ಕಳೆದುಕೊಳ್ಳುವಿರಿ. ಹನುಮನ ದರ್ಶನದಿಂದ ಒಳಿತು.

ಮಕರಕೊಂಚ ಮಟ್ಟಿಗೆ ಸೋಮಾರಿತನ ನಿಮ್ಮನ್ನು ಕಾಡುವುದು. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಪ್ರಯತ್ನ ಪಡುವಿರಿ ಆದರೆ ಅವಕಾಶಗಳು ಕೈಗೂಡಲು ಬಿಡುವುದಿಲ್ಲ. ಉದ್ಯೋಗದಿಂದ ನಿವೃತ್ತಿ ಪಡೆಯಲು ಬಯಸುತ್ತಿರುವ ನೀವು ಕೊಂಚ ಸಮಯ ಕಾಯುವುದು ಒಳಿತು. ನಿಮ್ಮಲ್ಲಿರುವ ಜ್ಞಾನ ತಾಳ್ಮೆ, ಹಾಗೂ ಅನುಭವ ಎಲ್ಲವನ್ನು ಪರೀಕ್ಷಿಸುವ ಸಮಯವಾದರು ಕೊನೆಯಲ್ಲಿ ಒಳಿತು, ನಿಮ್ಮ ಆರೋಗ್ಯದ  ಕಡೆ ಗಮನ ಕೊಡಿ ವಾರದ ಮಧ್ಯೆ ಹಾಗೂ ಅಂತ್ಯದಲ್ಲಿ ಕುಟುಂಬದಲ್ಲಿ ಕಲಹ. ವಿಶೇಷವಾಗಿ ಸ್ತ್ರೀಯರಿಂದ ವಿಷ್ಣುವಿನ ಆರಾಧನೆಯಿಂದ ಒಳಿತು.

ಕುಂಭಉದ್ಯೋಗದಲ್ಲಿ ,ವ್ಯಾಪಾರದಲ್ಲಿ ಸ್ಥಾನ ಭದ್ರತೆ ಹೆಚ್ಚುವುದು . ಹಾಗಾಗಿಯೂ ನಿಮ್ಮ ಅತಿಯಾದ ಲೆಕ್ಕಾಚಾರದಿಂದ  ಕೈಗೆ ಬಂದ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಉದ್ಯೋಗ ನಿಮಿತ್ತ  ಪ್ರಯಾಣ ಸೂಚಿತ ಅಥವಾ ಅವರ ಮಾತುಕಥೆ ನಡೆಯುವುದು. ನಿದ್ರಾಹೀನತೆ ಕಾಡುವುದು. ಅತಿಯಾದ ಗ್ಯಾಸಿಟ್ರಿಕ್ ಎದೆಯಲ್ಲಿ ಉರಿ, ಅಥವಾ ಉಸಿರಾಟದ ತೊಂದರೆ ಬಾಧಿಸಬಹುದು. ತಂದೆಯಿಂದ ಲಾಭವಾದರು ಅವರ ಆರೋಗ್ಯದಲ್ಲಿ ವ್ಯತ್ಯಾಸ. ವಾರ ಶೇರು ಮಾರ್ಕೆಟ್ ಹೊಡಿಕೆಯಿಂದ ದೂರ ಇರಿ ಇತರರಿಗೂ ಹೂಡಿಕೆಯ ಸಲಹೆ ಕೊಡಬೇಡಿ.

 ಮೀನಸಂತಾನ ಅಪೇಕ್ಷ ಇರುವವರಿಗೆ ಅನೀರಿಕ್ಷಿತ ಫಲಿತಾಂಶ, ವಸ್ತ್ರಗಳು ಕಳುವಾಗ ಬಹುದು. ಅಥವಾ ಹರಿದು ಹೋಗಬಹುದು ಖರ್ಚು ಮಾಡುವ ಮುನ್ನ ಮುಂದಿನ ದಿನಗಳನ್ನು ನೆನೆದು ಖರ್ಚು ಮಾಡಿ ಧಂದ್ವದಲ್ಲಿ ಇರುವ ನೀವು ತಟಸ್ಥ ಮನೋಭಾವ ತಾಳಿದರೆ ಒಳಿತು. ಸಾಧನೆಗಾಗಿ ಸಂಕಲ್ಪ ಇದ್ದವರು ಅದಕ್ಕೆ ಪ್ರಯತ್ನ ಪಡೆಯಬಹುದು. ಗರ್ವದಿಂದ ಕೊಂಚ ಮಟ್ಟಿಗೆ ಹೊರ ಬಂದರೆ ಒಳಿತು. ಸಮಯ ಪರಿಪಾಲನೆಯಲ್ಲಿ ಕಷ್ಟು ಪಡುವಿರಿ ವೈದ್ಯರಿಗೆ ಉತ್ತಮವಾರ. ಮಕ್ಕಳಿಂದ ಕಿರಿಕಿರಿ ಅಥವಾ ಅವರ ಆರೋಗ್ಯದಲ್ಲಿ ಏರುಪೇರು ಅಥವಾ ಅವರಿಂದಾಗಿ ನೆರೆ ಹೊರೆಯವರೊಂದಿಗೆ ಮಾತಿನ ಚಕಮಕಿ, ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.

ಜ್ಯೋತಿಷರವಿ ಕೃಬೆಂಗಳೂರು

Tags

Related Articles