ಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ವಾರಭವಿಷ್ಯ: 03-12-2018 ಸೋಮವಾರದಿಂದ 08-12-2018 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ………

ಮೇಷ  ಹೆಚ್ಚಿನ ಕೆಲಸದಿಂದ ಪ್ರಾರಂಭವಾಗುವ ವಾರವಾದರೂ ದ್ವಂದ್ವ ನಿಲುವನ್ನು ತಾಳುವಿರಿ. ವಾರದ ಮಧ್ಯದಲ್ಲಿ ನಿಮ್ಮ ಆಲೋಚನೆಗೆ ಹಾಗೂ ಕಾರ್ಯ ಕ್ಷಮತೆಗೆ ಮನ್ನಣೆ ದೊರೆಯಲಿದೆ. ಸಹೋದರಿಯೊಂದಿಗೆ ಯಾವುದಾದರೂ ವ್ಯವಹಾರ ಅಥವಾ ಲೆಕ್ಕಾಚಾರಾದ ಮಾತುಕತೆ ಜರುಗಲಿದೆ. ನಿಮ್ಮ ಸಂಗಾತಿಗಾಗಿ ಅಥವಾ ಅವರೊಂದಿಗೆ  ಕೂಡಿ ಯಾವುದಾದರೂ ವಸ್ತು ಒಂದನ್ನು ಕೊಳ್ಳಲು ಮಾತುಕತೆ ನೆಡೆಸುವಿರಿ. ನಂತರದ ದಿನಗಳಲ್ಲಿ ಮಾನಸಿಕವಾಗಿ ಕೊಂಚ ಆಯಾಸ ಅನುಭವಿಸುವಿರಿ. ನಿಮ್ಮ ಸಂಗಾತಿಯ ಕುಟುಂಬದ ಕಡೆಯಿಂದ ವಾರ್ತೆ. ತಾಳ್ಮೆಯಿಂದ ವರ್ತಿಸಿ ಹಾಗೂ ವಾರದ ಕೊನೆಯ ಎರಡು ದಿನಗಳಲ್ಲಿ ಯಾವುದೇ ನಿರ್ಧಾರ ಬೇಡ. ವಾರದ ಕೊನೆಯಲ್ಲಿ ವಾಹನ ಚಾಲಕರು ಅಥವಾ ಕಛೇರಿಯಲ್ಲಿ ಹಿರಿಯ ಸಹೋದ್ಯೋಗಿಗಳೊಂದಿಗೆ ಕಲಹ.

ವೃಷಭ  ವಾರದ ಆರಂಭದಲ್ಲಿ ಶುಭ ಸುದ್ದಿಯೊಂದು ಮುಟ್ಟಿ ಸಂತಸದಿಂದ ಆರಂಭವಾಗುವುದು. ಕಲಾವಿದರು, ಲಾಯರ್ ಗಳು ಹಾಗೂ ಸ್ವಂತ ವ್ಯವಹಾರ ಮಾಡುವವರಿಗೆ ಉತ್ತಮ. ನಂತರದಲ್ಲಿ ನಿಮ್ಮ ಸಂಗಾತಿಗಾಗಿ ಕೊಂಚ ಸಮಯ ಕಳೆಯಬೇಕಾದೀತು. ಸದ್ಯದ ಪರಿಸ್ಥಿತಿಯಿಂದ ನಿಮ್ಮ ಸಂಗಾತಿ ವಿಚಲಿತರಾಗದಂತೆ ತೋರುವುದು ಹಾಗಾಗಿ ನೀವು ಅವರಿಗೆ ಆತ್ಮಸ್ಥೈರ್ಯ ತುಂಬ ಬೇಕಾದೀತು. ಕುಟುಂಬ ಕಾರ್ಯಕ್ರಮ ಒಂದಕ್ಕೆ ಅಡ್ಡಿ ಆತಂಕಗಳು ಬಂದು ಅದರ ಬಗ್ಗೆ ಚರ್ಚೆ ನಡೆಯುವುದು. ನಿಮ್ಮ ಸಂಗಾತಿಗೆ ಮೇಲ್ವರ್ಗದ/ಪ್ರತಿಷ್ಠಿತ ವ್ಯಕ್ತಿಗಳ ಸಂಪರ್ಕವಾಗಲಿದೆ ಹಾಗೂ ಅದರಿಂದ ತೊಂದರೆ. ಮಕ್ಕಳ ವಿದ್ಯಾಭ್ಯಾಸ ಅಥವಾ ಅವರ ಸ್ನೇಹಿತರ ಬಗ್ಗೆ ಚಿಂತಿತರಾಗುವಿರಿ. ವಾರದ ಕೊನೆಯಲ್ಲಿ ಮನೆಯ ವಸ್ತುಗಳಿಗೆ/ರಿಪೇರಿಗಾಗಿ ಹಣ ವ್ಯಯ.

ಮಿಥುನ  ವಾರದ ಆರಂಭದಲ್ಲಿ ವಸ್ತ್ರ ಖರೀದಿ ಹಾಗೂ ಸಂತಸ, ಸ್ತ್ರೀಯರಿಂದ/ಸ್ತ್ರೀಯರಿಗಾಗಿ ಹಣ ಖರ್ಚು. ಉದ್ಯೋಗ ಅಥವಾ ವ್ಯಾಪಾರ ಸ್ಥಳಗಳಲ್ಲಿ ಹೊಸದೊಂದು ಉಪಾಯದಿಂದ ಲಾಭದಾಯಕವಾದ ನಿರ್ಧಾರ ಕೈಗೊಳ್ಳುವಿರಿ. ಆದರೂ ವಾರದ ಮಧ್ಯದಲ್ಲಿ ನಿಮ್ಮ- ನಿಮ್ಮ ಕ್ಷೇತ್ರಗಳಲ್ಲಿ ಕಿರಿಕಿರಿ ಅನುಭವಿಸುವಿರಿ. ಹಣಕಾಸಿನ ಮುಗ್ಗಟ್ಟು ಮುಂದುವರೆಯುವುದು. ವಿದ್ಯಾರ್ಥಿಗಳಿಗೆ ನಿಮ್ಮ ದ್ವಂದ್ವ ನಿಲುವಿನಿಂದ ನಿಮಗೆ ಸಲ್ಲಬೇಕಾಗಿರುವ ಗೌರವ/ಕೀರ್ತಿಯೊಂದು ಇತರರ ಪಾಲಾಗುವುದು. ಹಣಕಾಸಿನ ವಿಷಯವಾಗಿ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥಯಲ್ಲಿ ಸಾಲಕ್ಕೆ ಪ್ರಯತ್ನಿಸುತ್ತಿರುವವರಿಗೆ ವ್ಯತಿರಿಕ್ತ ವಿಷಯವೊಂದು ಬರಲಿದೆ. ವಾರದ ಕೊನೆಯಲ್ಲಿ ಹಿರಿಯರಿಂದ/ಸೇವಕರಿಂದ/ವಾಹನ ಚಾಲಕರಿಂದ/ಹಳೆಯ ವಸ್ತುಗಳಿಂದ ಕಿರಿಕಿರಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬೆನ್ನು ಹಿಡಿತದ ಅನುಭವವಾದಿತು. ವಿಷ್ಣುವಿನ ಆರಾಧನೆಯಿಂದ ಒಳಿತು.

ಕಟಕತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಾರದ ಮಧ್ಯಭಾಗದಲ್ಲಿ ತಂದೆಗೆ ಉದ್ಯೋಗದಲ್ಲಿ ಕಿರಿಕಿರಿ. ವೈಯಕ್ತಿಕವಾಗಿ ವಾರದ ಆರಂಭದಲ್ಲಿ ಉತ್ತಮ. ನೀವು ಇಷ್ಟಪಡುವವರಿಗಾಗಿ ಏನನ್ನಾದರೂ ಖರೀದಿಸುವಿರಿ. ಇಲ್ಲವೆ ಅವರಿಂದ ಉಡುಗೊರೆಯೊಂದನ್ನು ನಿರೀಕ್ಷಿಸಬಹುದು. ನಿಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದ ಚರ್ಚೆ ಆಗುವುದು. ನಿಮ್ಮ ಸಲಹೆ ಅಥವಾ ಸಹಕಾರವನ್ನು ಅಪೇಕ್ಷಿಸಿ ನಿಮ್ಮ ಸ್ನೇಹಿತರು ಬರಬಹುದು. ವಾರಾಂತ್ಯದಲ್ಲಿ ವ್ಯಾಪಾರಸ್ಥರಿಗೆ ಧನಹಾನಿ. ಉದ್ಯೋಗಸ್ಥರಿಗೆ ಕಛೇರಿಗಳಲ್ಲಿ ಅಸಮಾಧಾನ ಹಾಗು ಅಪವಾದದ ಭೀತಿ. ಕಾಲು ಅಥವಾ ಕೈಗಳಲ್ಲಿ  ಚರ್ಮದ ಅಲರ್ಜಿ ಕಾಣಿಸಿಕೊಳ್ಳಬಹುದು. ಗುರು ಹಿರಿಯರು, ಆತ್ಮೀಯರು ಅಥವಾ ದೇವಾಲಯಗಳ ಭೇಟಿ ನೀಡುವ ವಾರವಾದರೂ ಅನಾಯಾಸವಾಗಿ ಧನವೂ ನೀರಿನಂತೆ ಖರ್ಚಾಗುವುದು.

ಸಿಂಹಈ ವಾರ ಕೊಂಚ ಆಲಸ್ಯ ಹಾಗು ಸೋಮಾರಿತನ ಕಾಡುವುದು. ನಿಮ್ಮ ಎಲ್ಲಾ ಆಲೋಚನೆಗಳು ಹಾಗು ಕೆಲಸ ಕಾರ್ಯಗಳಿಗೆ ವಿರಾಮ ನೀಡುವಿರಿ. ನಿಮ್ಮ ಅತಿಯಾದ ಲೆಕ್ಕಾಚಾರದಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗುವುದು. ಸ್ತ್ರೀಯರಿಂದ ಕಲಹ. ನಿಮ್ಮ-ನಿಮ್ಮ ಕ್ಷೇತ್ರಗಳಲ್ಲಿ ನಿಮಗೆ ಮಾನ್ಯತೆ ಅಥವಾ ಗೌರವ ಇಲ್ಲದಂತೆ ಭಾಸವಾಗುವುದು, ಮನೆ ಬದಲಿಸುವ ಅಥವಾ ಮನೆ ನಿರ್ಮಿಸುವ ಚರ್ಚೆ ಆಗುವುದು. ಉದ್ಯೋಗ ನಿಮಿತ್ತ ಸ್ನೇಹಿತ ಅಥವಾ ಹಿರಿಯರ ಸಲಹೆ ಪಡೆಯುವಿರಿ. ಮಕ್ಕಳ ವಿಚಾರವಾಗಿ ಕೊಂಚ ಬೇಸರ. ವಿದ್ಯಾರ್ಥಿಗಳಿಗೆ ಹಿನ್ನಡೆ. ಸಂಚಾರ ಸಮಯದಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಬೇಸರ ಪಡುವಿರಿ. ಹಳೆಯ ಸಾಲ ಮರುಪಾವತಿಸಲು ಒತ್ತಡ ಬರಬಹುದು. ಹನುಮ ಹಾಗು ವಿಷ್ಣುವಿನ ದರ್ಶನದಿಂದ ಒಳಿತು.

ಕನ್ಯಾವಾರದ ಆರಂಭದಲ್ಲಿ ಅತ್ಯಂತ ಉಲ್ಲಾಸ ಹಾಗೂ ಚಟುವಟಿಕೆಯಿಂದ ಕೂಡಿರುವುದು. ಕುಟುಂಬದಲ್ಲಿ ಸಂತಸ, ಸುಖ ಭೋಜನ, ಪ್ರೀತಿ ಪಾತ್ರರೊಂದಿಗೆ ಸಂತೋಷದ ಮಾತುಕತೆ ಹಾಗೂ ಸ್ತ್ರೀಯಿಂದ ಧನಲಾಭ. ವಾರದ ಮಧ್ಯ ಹಾಗೂ ಅಂತ್ಯದಲ್ಲಿ ಕಿರಿಕಿರಿ ಅನುಭವಿಸುವ ವಾರ. ಇನ್ನೊಬ್ಬರಿಗೆ ತಮಾಷೆ ಮಾಡಲು ಹೋಗಿ ಪೇಚಿಗೆ ಸಿಲುಕುವಿರಿ. ಅತಿಯಾದ ಹುಮ್ಮಸ್ಸಿನಲ್ಲಿ ವಾದಕ್ಕೆ ಇಳಿಯದಿರಿ ಹಾಗೂ ನಿರಾಸೆ ಅನುಭವಿಸುವಿರಿ. ತಂದೆಗೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು. ಮಕ್ಕಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಹಾಗೂ ವಿದ್ಯಾಭ್ಯಾಸದ ಚಿಂತೆ ಕಾಡಲಿದೆ. ವಸ್ತುವನ್ನು ಕೊಳ್ಳುವಾಗ ಮಾರುಕಟ್ಟೆ ಬೆಲೆಗಿಂತ ಅಧಿಕ ಬೆಲೆ ಕೊಟ್ಟು ಖರೀದಿಸುವಿರಿ. ರಕ್ತದೊತ್ತಡದಲ್ಲಿ ಕೊಂಚ ಏರುಪೇರು.

ತುಲಾತುಂಬಾ ಆಯಾಸ ಹಾಗೂ ಮಾನಸಿಕ ಒತ್ತಡದಿಂದ ಕೂಡಿರುವ ವಾರ. ವಾರದ ಆರಂಭದಲ್ಲಿ ವಾಸ್ತವ ಬದುಕಿನಿಂದ ಹೊರ ಇರುವಿರಿ ಹಾಗೂ ಕೊಂಚ ತಿರುಗಾಟದಿಂದ ಕೂಡಿರುತ್ತದೆ. ಸಂಗಾತಿಯಿಂದ ಧೈರ್ಯ ಹಾಗೂ ಸಾಂತ್ವಾನದ ಮಾತು. ಎಷ್ಟು ಗುಣಿಸಿ – ಬಾಗಿಸಿದರೂ ನಿಮ್ಮ ಆದಾಯ ವ್ಯಯಕ್ಕೆ ತಾಳೆಯಾಗುವುದಿಲ್ಲ. ಹಾಗಾಗಿ ಕೊಂಚ ಚಿಂತಿತರಾಗುವಿರಿ. ವಕೀಲರಿಗೆ ಉತ್ತಮ ಬೆಳವಣಿಗೆ ವಿಶೇಷವಾಗಿ ಸ್ತ್ರೀಯರಿಗೆ. ಕಣ್ಣಿಗೆ ಆಯಾಸ ಅಥವಾ ಕಣ್ಣಿಗೆ ತೊಂದರೆ. ವಾಹನ ಬದಲಾಯಿಸುವ ಆಲೋಚನೆ ಅಥವಾ ಚರ್ಚೆ. ಸರ್ಕಾರಿ ಅಧಿಕಾರಿಗಳ ಸಂಪರ್ಕ. ಹೂಡಿಕೆಗಳ ಬಗ್ಗೆ ಚರ್ಚೆ. ಸೋದರ ಮಾವನ ಭೇಟಿ ಅಥವಾ ಅವರಿಂದ ಸುದ್ದಿ. ವಾರಾಂತ್ಯಕ್ಕೆ ಹಳೆಯ ಸಮಸ್ಯೆ ಅಥವಾ ವಿಷಯ ಚರ್ಚೆಗೆ ಬರುವುದು. ಇಲ್ಲವೆ ಉದ್ಯೋಗದಲ್ಲಿ ಕಿರಿಕಿರಿ.

ವೃಶ್ಚಿಕವಾರದ ಆರಂಭ ಅತ್ಯಂತ ಲವಲವಿಕೆಯಿಂದ ಪ್ರಾರಂಭವಾಗಿ ಎಲ್ಲರ ಗೌರವ ಪ್ರೀತಿ ಆದರಗಳಿಗೆ ಪಾತ್ರರಾಗುವಿರಿ. ಸ್ನೇಹಿತರು ಅಥವಾ ಕುಟುಂಬ ವರ್ಗದವರು ನಿಮ್ಮನ್ನು ಭೇಟಿಮಾಡಬಹುದು. ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸುವಿರಿ. ಹಲವು ದಿನಗಳಿಂದ ಏನನ್ನೊ ಹುಡುಕುತ್ತಿರುವ ನೀವು ಇಲ್ಲೂ/ ಈ ವಾರವು ನಿಮ್ಮ ಹುಡುಕಾಟ ಮುಂದುವರಿಯುವುದು. ಉದ್ಯೋಗದಲ್ಲಿ ಕೊಂಚ ನಿಷ್ಠುರತೆಯನ್ನು ಎದುರಿಸಬೇಕಾಗಬಹುದು. ಕಾಲುಗಳು ಮತ್ತು ಕೈಗಳಲ್ಲಿ ರಕ್ತ ಚಲನೆ ಕಮ್ಮಿಯಾಗಿ ಊತ ಬರಬಹುದು. ವಾರಾಂತ್ಯಕ್ಕೆ ಕುಟುಂಬ ಸದಸ್ಯರೊಬ್ಬರಿಗೆ(ಹಿರಿಯರಿಗೆ) ಆರೋಗ್ಯ ಸಮಸ್ಯೆ ಆಗಬಹುದು ಹಾಗೂ ಮಕ್ಕಳ ವಿಚಾರವಾಗಿ ಅಥವಾ ನಿಮ್ಮ ಸಂಗಾತಿಯ ವಿಷಯವಾಗಿ ಕೊಂಚ ಮನಸ್ಸಿಗೆ ಬೇಸರವಾಗಬಹುದು ಹಾಗೂ ಎಲ್ಲದುದರಿಂದ ದೂರ ಉಳಿಯುವಿರಿ.

ಧನಸ್ಸು ಎಂದಿನಂತೆ ಕೊಂಚ ನಿಧಾನಗತಿಯ ವಾರ. ವೃಥಾ ಅಲೆದಾಟವಾದರೂ ವಾರದ ಆರಂಭದಲ್ಲಿ ಕೊಂಚ ಮಟ್ಟಿಗೆ ಉದ್ಯೋಗ ವ್ಯವಹಾರಗಳಲ್ಲಿ ಲಾಭ ಹಾಗೂ ಕೀರ್ತಿ ಪಡೆಯುವಿರಿ. ಸ್ತ್ರೀಯರಿಂದ ಲಾಭ ಮತ್ತು ಖರ್ಚು. ಉದ್ಯೋಗಸ್ಥರು ಅಧಿಕಾರಿಗಳಿಂದ ಕಿರಿಕಿರಿ ಅನುಭವಿಸುವಿರಿ. ಇಲ್ಲವೆ ನಿಮ್ಮ ಕೆಲಸದಲ್ಲಿ ಲೋಪ ಕಂಡುಹಿಡಿಯುವರು. ವ್ಯಾಪಾರಸ್ಥರಿಗೆ ಸರ್ಕಾರಿ ಮಟ್ಟದ ವ್ಯವಹಾರ ಒಂದು ಕೈ ಜಾರುವುದು ಇಲ್ಲವೆ ದಂಡದ ರೂಪದಲ್ಲಿ ಹಣ ವ್ಯಯ. ಸೋದರ ಮಾವನ ವಿಷಯ ಮನೆಯಲ್ಲಿ ಪ್ರಸ್ತಾಪವಾಗಬಹುದು. ವಾಹನಗಳ ಸಲುವಾಗಿ ಮಧ್ಯವರ್ತಿಗಳ ಭೇಟಿ ಅಥವಾ ಸರ್ಕಾರಿ ಕಛೇರಿಗೆ ಅಲೆದಾಟ ಮತ್ತು ಖರ್ಚು. ಲೆಕ್ಕ ಪರಿಶೋಧಕರೂ/ಅಕೌಂಟೆಂಟ್/ಸಿ.ಎ/ ಅಡಿಟರ್ಸ್ ಹಾಗೂ ಶಿಕ್ಷಕರಿಗೆ ಒಳ್ಳೆಯದಲ್ಲ. ಹನುಮನ ದರ್ಶನದಿಂದ ಒಳಿತು.

ಮಕರ ವಾರದ ಆರಂಭ ಅತಂತ್ಯ ಉಲ್ಲಾಸದಾಯಕವಾಗಿ ಪ್ರಾರಂಭವಾಗುವುದು ಉತ್ತಮ ಜನಮನ್ನಣೆ ದೊರೆಯುವುದು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ ಪ್ರತಿಷ್ಠಿತ/ಗಣ್ಯ ವ್ಯಕ್ತಿಗಳ ಭೇಟಿ ಅಥವಾ ಅವರಿಂದ ಸುದ್ದಿ. ಉದ್ಯೋಗದಲ್ಲಿ ಕಾರ್ಯಕ್ಷಮತೆ ಹೆಚ್ಚುವುದು, ಆದರೂ ಹೆಚ್ಚಿದ ಕೆಲಸ ಹಾಗೂ ಓಡಾಟದಿಂದ ಆಯಾಸವಾಗುವುದು. ವಸ್ತ್ರ ಅಥವಾ ಪಾದರಕ್ಷೆ ಖರೀದಿಸುವಿರಿ. ವ್ಯಾಪಾರಸ್ಥರಿಗೆ ಬರುವ ಲಾಭದಲ್ಲಿ ಹೆಚ್ಚು ಪಾಲನ್ನು ಕಮಿಷನ್ ರೂಪದಲ್ಲಿ ತೆರಬೇಕಾದೀತು. ಆದಾಯ ತೆರಿಗೆ ಸಂಬಂಧ ತಲೆ ಕೆಡಿಸಿಕೊಳ್ಳುವಿರಿ ಇಲ್ಲವೆ ತಿಳಿದವರ ಬಳಿ ಚರ್ಚೆ ಮಾಡುವಿರಿ. ವಾರಾಂತ್ಯಕ್ಕೆ ಹಿರಿಯರೊಡನೆ ಇಲ್ಲವೆ ತಾಯಿಯೊಡನೆ ಕಿರಿಕಿರಿ ಇಲ್ಲವೆ ಅವರ ಆರೋಗ್ಯ ವಿಚಾರದಲ್ಲಿ ಗೊಂದಲ. ಸ್ವಂತ ಉದ್ಯೋಗವೊಂದನ್ನು ಆರಂಭಿಸಲು ಆಲೋಚಿಸುತ್ತಿರುವ ನಿಮಗೆ ಅನೇಕ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.

ಕುಂಭ  ವಾರದ ಆರಂಭದಲ್ಲಿ ಕಿರಿಕಿರಿ. ಧನ ನಷ್ಟ ಇಲ್ಲವೆ ನಿಮ್ಮ ಸಂಗಾತಿಯ ಮನೆ ಕಡೆಯಿಂದ ದುಃಖ. ವಾಸ್ತವ ಬದುಕಿನಿಂದ ದೂರ. ವಾರದ ಮಧ್ಯದಲ್ಲಿ ವಸ್ತ್ರ ಖರೀದಿ ಅಥವಾ ಆಭರಣ ಖರೀದಿ. ಸ್ತ್ರೀಯರಿಂದ ಲಾಭ ಇಲ್ಲವೆ ಧನಾಗಮ. ಈ ವಾರದ ಬಹುಪಾಲು ಸಂಖ್ಯಾ ಲೆಕ್ಕಾಚಾರದಲ್ಲಿ ಸಮಯ ಕಳೆಯುವಿರಿ. ಹಲವು ವಿಷಯಗಳಲ್ಲಿ ವಾಗ್ವದಕ್ಕೆ ನಿಲ್ಲುವಿರಿ ಹಾಗೂ ಜಯಶೀಲರಾಗುವಿರಿ, ಆದರೂ ನಿಮ್ಮ ಅಪರಿಮಿತ ಶಿಸ್ತು ಇತರರಿಗೆ ಕಿರಿಕಿರಿಯಾಗುವುದು. ಅಪೇಕ್ಷಿತ ಲಾಭದಲ್ಲಿ ಕೊರತೆ ಇಲ್ಲವೆ ವಿಳಂಬ. ಚಲನಚಿತ್ರ ಹಾಗು ಇತರೆ ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಮಕ್ಕಳ ಶಾಲೆಗೆ ಭೇಟಿ.

ಮೀನ ವಾರದ ಆರಂಭ ಅತ್ಯಂತ ಚಟುವಟಿಕೆಗಳಿಂದ ಕೂಡಿರುತ್ತದೆ. ಸ್ತ್ರೀಯರಿಗೆ ಅನಾರೋಗ್ಯ ಇಲ್ಲವೆ ಅವರಿಂದ ನಷ್ಟ, ಇಲ್ಲವೆ ಅವರೊಂದಿಗೆ  ಅಹಂ ಭಾವದ ತೊಂದರೆಯಾಗುವುದು. ಬಂಧು ಹಾಗು ಸ್ನೇಹಿತರ ಭೇಟಿ. ದೇವಸ್ಥಾನ, ಮದುವೆ ಹಾಗು ಇತರ ಸಮಾರಂಭಗಳಿಗೆ ಭೇಟಿ. ಇಷ್ಟಾದರು ಮಕ್ಕಳ ವಿಷಯವಾಗಿ ಚಿಂತೆ ಮುಂದುವರೆಯುವುದು. ಧನದ ಕೊರತೆ ಎದ್ದು ಕಾಣುವುದು. ಕೆಲಸ ಹಾಗು ವ್ಯಾಪಾರದಲ್ಲಿ ವಿಪರೀತ ಪರಿಶ್ರಮ ಆದರೆ ಲಾಭಕ್ಕೆ ಕೊರತೆ. ಬ್ಯಾಂಕ್ ನಲ್ಲಿ ಒ.ಡಿ ಮಾಡುವಿರಿ. ಯಾವುದಾದರೂ ಸರ್ಕಾರಿ ಅಧಿಕಾರಿಗಳ ಸಂಪರ್ಕ ಮತ್ತು ಮಾಧ್ಯಮದವರ ಸಂಪರ್ಕ ಲಭಿಸುತ್ತದೆ. ವಾರಾಂತ್ಯಕ್ಕೆ ಉದ್ಯೋಗ ಹಾಗು ವ್ಯಾಪಾರ ಸ್ಥಳದಲ್ಲಿ ಕಿರಿಕಿರಿ ಮತ್ತು ಹಿರಿಯರೊಂದಿಗೆ ಅಸಮಾಧಾನ.

—————————————————————–*****———————————————————————

ಈ ವಾರ ಷೇರು ಮಾರುಕಟ್ಟೆಯಲ್ಲಿ ವ್ಯತಿರಿಕ್ತ ಪರಿಣಾಮ ಕಾಣುವುದರಿಂದ ಹೂಡಿಕೆದಾರರು ಜಾಗ್ರತರಾಗಿದ್ದರೆ ಒಳಿತು.

ಜ್ಯೋತಿಷರವಿ ಕೃಬೆಂಗಳೂರು

Tags