ಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ವಾರಭವಿಷ್ಯ: 16-12-2018 ಭಾನುವಾರದಿಂದ 22-12-2018 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ……

ಮೇಷದಿನ ನಿತ್ಯದ ಚಟುವಟಿಕೆಯಿಂದ ಕೊಂಚ ವಿಶ್ರಾಂತಿ ಬಯಸುವಿರಿ. ವಾಸ್ತವ ಬದುಕಿನಿಂದ ದೂರ ಉಳಿಯುವಿರಿ. ತಾಯಿಯನ್ನು ಕಾಣಲು ಪ್ರಯಾಣ ಬೆಳೆಸುವಿರಿ ಇಲ್ಲವೆ ತಾಯಿಯು ಪ್ರಯಾಣ ಬೆಳೆಸುವರು. ಕಛೇರಿಯಲ್ಲಿ ನೀವು ಅಂದುಕೊಂಡಂತೆ ಅಪ್ರೈಸಲ್ ವಿಚಾರ ನಡೆಯುವುದಿಲ್ಲ ಆದರೂ ತಾಳ್ಮೆಯಿಂದ ಇರಿ. ಇತರರೊಂದಿಗೆ ಅದರ ಚರ್ಚೆ ಸಲ್ಲದು ಹಾಗು ನಿಮ್ಮ ಅಧಿಕಾರಿಗಳ ಬಗ್ಗೆ ಇತರರೊಂದಿಗೆ ಚರ್ಚೆ ಸಲ್ಲದು. ಶಿಸ್ತು ಈ ವಾರ  ನಿಮಗೆ ಕಿರಿಕಿರಿ ಎನಿಸುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು. ವಾರದ ಮಧ್ಯೆ ಹಾಗು ಕೊನೆಯಲ್ಲಿ ಅತ್ಯಂತ ಲವಲವಿಕೆ ಹಾಗು ಚಟುವಟಿಕೆಗಳಿಂದ ಕೂಡಿರುವುದು. ಮಕ್ಕಳ ಆರೋಗ್ಯದ ಮೇಲೆ ಗಮನವಿರಲಿ.

ವೃಷಭ   ತಂದೆಯ ಆರೋಗ್ಯದಲ್ಲಿ ಏರುಪೇರು. ಇಲ್ಲವೆ ತಂದೆಗೆ ಧನ ನಷ್ಟ. ಮನೆಯ ಗೃಹಉಪಯೋಗಿ ವಸ್ತು ಒಂದು ಹಾಳಾಗುವುದು ಇಲ್ಲವೆ ಮನೆಯ ಪೂರ್ವ ಇಲ್ಲವೆ ಪಶ್ಚಿಮ ಭಾಗದಲ್ಲಿ ಕೊಂಚ ತೊಂದರೆ ಹಾಗಾಗಿ ಧನವ್ಯಯ. ನಿಮ್ಮ ಪತಿ/ಸತಿಯನ್ನು ಇತರರು ಸಲಹೆ ಪಡೆಯಲು ಇತರರು ಹುಡುಕಿಕೊಂಡು ಬರುವರು. ವಾಹನ ಚಾಲನೆ ವೇಳೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಿಂದ ದಂಡ ಕಟ್ಟುವಿರಿ. ಇಷ್ಟಾದರೂ ವಾರದ ಮಧ್ಯ ಹಾಗು ವಾರದ ಅಂತ್ಯಕ್ಕೆ ಅತ್ಯಂತ ಉಲ್ಲಾಸದಾಯಕವಾಗಿ ಎಂದಿಗಿಂತಲೂ ಉತ್ಸಾಹದಿಂದ ಕೆಲಸದಲ್ಲಿ ತಲ್ಲಿನರಾಗುವಿರಿ. ವಾಹನ ಬದಲಾವಣೆಯ ಚರ್ಚೆಯಾಗುವುದು. ತಾಯಿಯ ಕಡೆ ಹಿರಿಯರೊಬ್ಬರಿಗೆ ಅನಾರೋಗ್ಯದ ಸಮಸ್ಯೆ.

ಮಿಥುನ ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಎಣಿಸದ ಬೆಂಬಲ ದೊರೆಯದು ಆದರೂ ಅವರಲ್ಲಿ ಗೌರವವಿರಲಿ. ವ್ಯಾಪಾರಿಗಳಿಗೆ ತೆರಿಗೆ ಇಲಾಖೆ ಅಥವಾ ಇನ್ಯಾವುದಾದರೂ ಸರ್ಕಾರಿ ಕಛೇರಿಗಳಿಂದ ನೋಟಿಸ್ ಬರಬಹುದು. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಇಲ್ಲವೆ ನಿಮ್ಮ ಕೆಳಗಿನವರಿಂದ ಕಿರಿಕಿರಿ. ಅದರೂ ನಿಮ್ಮ ಕಲಾತ್ಮಕ ಶಕ್ತಿಗೆ ಕೊನೆಯೇ ಇಲ್ಲ. ಎಲ್ಲದರಲ್ಲೂ ಮನ್ನುಗ್ಗುವಿರಿ. ಎಲ್ಲಿದ್ದರೂ ಗುಂಪಿನಲ್ಲಿ ಕಾಣಿಸಿಕೊಳ್ಳುವಿರಿ. ಎಲ್ಲರ ಚರ್ಚೆಯ ವಿಷಯವಾಗುವಿರಿ ವಾರದ ಮಧ್ಯ ಮತ್ತು ಕೊನೆಯಲ್ಲಿ ಉದ್ಯೋಗ ಹಾಗು ವ್ಯಾಪಾರಸ್ಥರಿಗೆ ಶುಭ. ವಸ್ತ್ರ ಅಥವಾ ಅಲಂಕಾರಿಕ ವಸ್ತುಗಳಿಗೆ ಖರ್ಚು. ಬರುವ ಅವಕಾಶಗಳನ್ನು ಕೈಚಲ್ಲದಿರಿ. ಸೂರ್ಯನ ಆರಾಧನೆ ಅಥವಾ ದರ್ಶನದಿಂದ ಒಳಿತು.

ಕಟಕ ಲವಲವಿಕೆಯಿಂದ ಪ್ರಾರಂಭವಾಗುವ ವಾರ. ಸ್ನೇಹಿತರು, ಕುಟುಂಬ ವರ್ಗದವರಿಂದಲೂ ಪ್ರಶಂಸಿಸಲ್ಪಡುವಿರಿ. ಆದರೆ ಕಛೇರಿ ಕೆಲಸಗಳಲ್ಲಿ ಹಾಗು ವ್ಯಾಪಾರಸ್ಥರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆಯಾಗುವುದು. ತಂದೆಯೊಂದಿಗೆ ವೈಮನಸ್ಸು ಇಲ್ಲವೆ ಅವರ ಆರೋಗ್ಯದಲ್ಲಿ ವ್ಯತ್ಯಯ. ತಂದೆಯ ಕುಟುಂಬದಲ್ಲಿ ಹಿರಿಯರೊಬ್ಬರಿಗೆ ತೊಂದರೆ. ನಿಮ್ಮ ಹೆಂಡತಿ/ಗಂಡನ ತಂದೆಯೊಂದಿಗೆ ಕಲಹ. ಹಣಕಾಸು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ವಾರ. ವಾರದ ಮಧ್ಯ ಹಾಗು ಕೊನೆಗೆ ಗುರು ಹಿರಿಯರ ಭೇಟಿ ಇಲ್ಲವೆ ದೇವಸ್ಥಾನಕ್ಕೆ ಹೋಗುವಿರಿ. ಔತಣಕೂಟ ಇಲ್ಲವೆ ಸಮಾರಂಭ ಒಂದರಲ್ಲಿ ಬಾಗಿಯಾಗುವಿರಿ. ಪ್ರಯಾಣ ಹೊರಟರೂ ಆಶ್ಚರ್ಯವಿಲ್ಲ.

ಸಿಂಹವಾರದ ಆರಂಭದಲ್ಲಿ ಮಕ್ಕಳಿಂದ ಚಿಂತೆ ಇಲ್ಲವೆ ಅವರ ಆರೋಗ್ಯದಲ್ಲಿ ಏರುಪೇರು. ನಿಮ್ಮ ಸಂಗಾತಿಯೊಂದಿಗೆ ಇದರ ಸಲುವಾಗಿ ಕಲಹ. ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ಬೇನ್ನು ನೋವು ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು. ಅಗ್ನಿ ತತ್ವ ಪ್ರಮಾಣ ಹೆಚ್ಚಿರುವುದರಿಂದ ಅಸಿಡಿಟಿ ಇಲ್ಲವೆ ಗ್ಯಾಸ್ಟ್ರಿಕ್ ಜಾಸ್ತಿಯಾಗಬಹುದು. ಸರ್ಕಾರಿ ವ್ಯವಹಾರದಲ್ಲಿ ಹಿನ್ನಡೆ ಇಲ್ಲವೆ ಸರ್ಕಾರಿ ಕಛೇರಿಗೆ ವೃತಾ ಅಲೆದಾಟ. ಯಾವುದಾದರೂ ರೂಪದಲ್ಲಿ ನಿಮ್ಮಿಂದ ಸರ್ಕಾರಕ್ಕೆ ದಂಡ ಪಾವತಿಯಾಗುವುದು. ಸ್ನೇಹಿತ ವರ್ಗದೊಂದಿಗೆ ಬೆಟ್ಟಿಂಗ್ ಕಟ್ಟಿ ಸೋಲನ್ನು ಅನುಭವಿಸುವಿರಿ. ಹನುಮ ಇಲ್ಲ ದುರ್ಗೆಯ ಆರಾಧನೆ – ದರ್ಶನದಿಂದ ಒಳಿತು.

ಕನ್ಯಾ  ತಾಯಿಯ ಆರೋಗ್ಯದಲ್ಲಿ ಏರುಪೇರು. ಆಸ್ತಿ ವಿಚಾರದಲ್ಲಿ ವೃತಾ ಚರ್ಚೆ ಹಾಗು ಕಲಹ. ವಾರದ ಮಧ್ಯದಲ್ಲಿ ಎಲ್ಲಾ ಕಡೆಯಿಂದ ಕಿರಿಕಿರಿ ಹಾಗು ಭಯದ ವಾತಾವರಣ. ಉದ್ಯೋಗದಲ್ಲಿ ಸ್ಥಾನ ಅಭದ್ರತೆ ಕಾಡುವುದು. ವ್ಯಾಪಾರಸ್ಥರಿಗೆ ಹೇಳಿದ ವಾಯಿದೆ ಉಳಿಸಿಕೊಳ್ಳಲು ಕಷ್ಟ ಪಡಬೇಕಾದೀತು. ಚೆಕ್ ಬೌನ್ಸ್ ಪ್ರಕರಣಗಳು ಆಗಬಹುದು. ವಾರಾಂತ್ಯಕ್ಕೆ ಉತ್ತಮ ಫಲ. ಅಧಿಕ ಜ್ಞಾನ, ಗೌರವ ಹಾಗು ಧನಾರ್ಜನೆ, ಸುಖ ಭೋಜನ, ನೆಂಟರಿಷ್ಟರ ಭೇಟಿ. ವಸ್ತ್ರ ಲಾಭ. ನಿಮ್ಮ ಪ್ರೀತಿ ಪಾತ್ರದವರಿಗೆ ಏನನ್ನಾದರು ಖರೀದಿಸುವಿರಿ ಹಾಗು ಅವರಿಂದ ಪ್ರಶಂಸೆಗೆ ಒಳಗಾಗುವಿರಿ. ಹನುಮನ ಆರಾಧನೆ ಇಲ್ಲವೆ ದರ್ಶನದಿಂದ ಒಳಿತು.

ತುಲಾ  ವಾರದ ಆರಂಭದಲ್ಲಿ ಕೆಲಸದ ಒತ್ತಡ ಹೆಚ್ಚು. ಉದ್ಯೋಗದಲ್ಲಿ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಕಿರಿಕಿರಿ.( ಮೇಲಧಿಕಾರಿಗಳಿಂದ ಇಲ್ಲವೆ ನಿಮ್ಮ ಕೆಳಗಿನವರಿಂದ) ಹಿರಿಯರೊಂದಿಗೆ ಮಾತಿನ ಚಕಮಕಿ ಇಲ್ಲವೆ ವೃತಾ ವಾದವಿವಾದ. ಈ ವಾರ ಭಂಡತನದ ಧೈರ್ಯ ಬರುವುದು ಅದು ಉತ್ತಮವಲ್ಲ ಸ್ವಲ್ಪ ತಾಳ್ಮೆ ವಹಿಸಿ. ದೇಹಕ್ಕೆ ಹೆಚ್ಚಿನ ಆಯಾಸವಾದೀತು. ನಿದ್ದೆಯಲ್ಲಿ ಸಮಸ್ಯೆ. ನಿಮ್ಮ ಶಿಸ್ತು ಇತರರಿಗೆ ಕಿರಿಕಿರಿ ಆದೀತು. ವಾರದ ಮಧ್ಯ ಹಾಗು ವಾರಾಂತ್ಯಕ್ಕೆ ದಿನನಿತ್ಯ ಜಂಜಾಟದ ಸಮಸ್ಯೆಗಳಿಂದ ದೂರ ಇರಲು ಪ್ರಯತ್ನಿಸುವಿರಿ. ಆದರೂ ನಿಮ್ಮ ನಡವಳಿಕೆ ಹಾಗು ಜ್ಞಾನದಿಂದ ಇತರರ ಮೆಚ್ಚುಗೆ ಪಾತ್ರರಾಗುವಿರಿ.

ವೃಶ್ಚಿಕಇತ್ತಿಚಿನ ದಿನಗಳಲ್ಲಿ ನಿಮಗೆ ಹುಮ್ಮಸ್ಸು ಬಂದಿರುವುದು ನಿಜ, ಆದರೆ ದ್ವೀತಿಯದಲ್ಲಿ ಶನಿ ಹಾಗು ರವಿ ಯೂತಿ ಇರುವುದರಿಂದ ನಿಮ್ಮ ಮಾತು ಹಾಗು ನಡೆ ಪ್ರಶ್ನಾತೀತವಾದೀತು. ಹಣದ ಮುಗ್ಗಟ್ಟು ಎದುರಿಸಬೇಕಾದೀತು. ವೈದ್ಯರಿಗೆ ಇಲ್ಲವೆ ಸರ್ಕಾರಕ್ಕೆ ದಂಡ ರೂಪದಲ್ಲಿ ಹಣ ಪೋಲಾಗುವುದು. ನಿಮ್ಮ-ನಿಮ್ಮ ಕ್ಷೇತ್ರಗಳಲ್ಲಿ ಮೇಲಾಧಿಕಾರಿಗಳನ್ನು ಎದುರುಹಾಕಿಕೊಳ್ಳುವಿರಿ. ಆದರೆ ನಿಮ್ಮ ಸೂಕ್ಷ್ಮತೆ ಹಾಗು ಜವಾಬ್ದಾರಿಗಳಿಂದ ಎಲ್ಲವೂ ಸರಿಹೋಗುವುದು. ಮಕ್ಕಳ ಬಗ್ಗೆ ಚಿಂತೆ ಮುಂದುವರೆಯುವುದು. ವಾರಾಂತ್ಯಕ್ಕೆ ಕುಟುಂಬ ವರ್ಗ ಇಲ್ಲವೆ ಸ್ನೇಹಿತರನ್ನು ಕೂಡಿ ಕಾಲ ಕಳೆಯುವಿರಿ.

ಧನಸ್ಸುಬೇಡದ ವಿಷಯಕ್ಕೆ ತಲೆ ಹಾಕಿ ಮೈಮೇಲೆ ಎಳೆದುಕೊಂಡು ಧರ್ಮ ಸಂಕಟದಲ್ಲಿ ಸಿಲುಕಿ ಹಾಕಿಕೊಳ್ಳುವಿರಿ. ಹಳೆಯ ಸಮಸ್ಯೆ ಇಲ್ಲವೆ ಆರೋಗ್ಯದ ಸಮಸ್ಯೆಯೊಂದು ಮರುಕಳಿಸುವುದು. ನಿಮ್ಮ ಸಂಗಾತಿಯನ್ನು ಕಾಣಲು ಇಲ್ಲವೆ ಅವರ ಸಲುವಾಗಿ ಪ್ರಯಾಣ ಮಾಡುವಿರಿ. ಮಕ್ಕಳ ಉನ್ನತ ವಿದ್ಯಾಭ್ಯಾಸದ ವಿಷಯವಾಗಿ ಚರ್ಚೆ ಇಲ್ಲವೆ ನಿಮ್ಮ ಮಕ್ಕಳಿಗೆ ದೂರದ ಅವಕಾಶವೊಂದು ಒದಗಿಬರುವುದು. ಇಲ್ಲವೆ ಅವರು ಹೋಟೆಲ್ ಉದ್ಯಮ ಸ್ಥಾಪಿಸಲು ನಿಮ್ಮ ಬಳಿ ಚರ್ಚೆ ಮಾಡಬಹುದು. ಈ ವಾರ ನಿಮ್ಮ ದೈನಂದಿನ ಕಾರ್ಯಗಳಿಗೆ ವಿಘ್ನಗಳು ಬರಬಹುದು. ಸಹಿಗಳನ್ನು ಹಾಕುವ ಮುನ್ನ ಎಚ್ಚರ.

ಮಕರವೃತಾ ಖರ್ಚಿನ ವಾರ. ಪ್ರಯಾಣದಲ್ಲಿ ಅಡೆತಡೆ. ಆಸ್ತಿಯ ವಿಷಯವಾಗಿ ಕುಟುಂಬದಲ್ಲಿ ಚರ್ಚೆ. ಮಕ್ಕಳ ಏಳಿಗೆಯನ್ನು ಕಂಡು ಸಂತಸಗೊಳ್ಳುವಿರಿ ಕುಲ ದೇವರನ್ನು ನೆನೆಯುವ ವಾರ. ಧೈರ್ಯ ಹಾಗು ಗತ್ತಿನ ಮಾತುಗಳು. ಖರ್ಚುಗಳು ಹೆಚ್ಚಾಗಿ ಹಳೆಯ ವಿಷಯಕ್ಕೆ ಸಂಬಂಧಪಟ್ಟಿರುತ್ತದೆ. ನಿದ್ರಾಹೀನತೆ ಕಾಡುವುದು. ನೀರನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಒಳಿತು. ವಾರಾಂತ್ಯದಲ್ಲಿ ಸಿನಿಮಾ ವೀಕ್ಷಣೆಗೆ ತೆರಳಿ ಕಿರಿಕಿರಿ ಅನುಭವಿಸುವಿರಿ. ವಾಹನ ಚಾಲನೆ ಮಾಡುವಾಗ ಜಾಗೃತೆ ವಹಿಸಿ. ಚರ್ಮದ ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಗಣಪತಿ ಪ್ರಾರ್ಥನೆ ಇಲ್ಲವೆ ದರ್ಶನದಿಂದ ಒಳಿತು.

ಕುಂಭ  ಸಿನಿಮಾ ವೀಕ್ಷಣೆಗೋ ಇಲ್ಲವೆ ಮನೋರಂಜನಾತ್ಮಕ ವಿಷಯಗಳಿಗೆ ಅಧಿಕ ಹಣ ವ್ಯಯ ಮಾಡುವಿರಿ. ಬರುವ ಲಾಭಕ್ಕೆ ಹಿನ್ನಡೆ ಇಲ್ಲವೆ ನಿವೇಣಿಸಿದಕ್ಕಿಂತ  ನಿಮ್ಮ ಕೈಗೆ ಹಣ ಸೇರುವುದು ಹಾಗಾಗಿ ನಿರಾಸೆ ಅನುಭವಿಸುವಿರಿ. ಸಹೋದರ ಇಲ್ಲವೆ ಸಹೋದರಿಯರು ನಿಮ್ಮ ಬೆಂಬಲಕ್ಕೆ ನಿಲ್ಲುವ ವಾರ. ಉದ್ಯೋಗದ ವಿಷಯವಾಗಿ ಮಕ್ಕಳಿಕೆ ತಿಳಿ ಹೇಳುವಿರಿ. ಎದುರಾಳಿಗಳನ್ನು ಮಾತಿನಲ್ಲೇ ಸದೆ ಬಡೆಯುವಿರಿ. ನಿಮ್ಮ ಬಹುದಿನಗಳ ಕನಸಿಗೆ ನಿಮ್ಮ ಹಿರಿಯರು ಅಡ್ಡಿ ಮಾಡುವರು. ಉದ್ಯೋಗ ನಿಮಿತ್ತ ಓಡಾಡುವಾಗ ಸಂಚಾರಿ ದಟ್ಟಣೆಯಿಂದ ಪಾರಾಗಲು ಬದಲಿ ಮಾರ್ಗದ ಹುಡುಕಾಟದಲ್ಲಿ ಯಶಸ್ವಿಯಾಗುವಿರಿ. ವಿದ್ಯುತ್ ಬಿಲ್ ಕಂಡು ಹೌಹಾರುವಿರಿ.

ಮೀನವಾರದ ಆರಂಭದಲ್ಲಿ ಶುಭ. ಆದರೆ ದಿನ ಕಳೆದಂತೆ ಉದ್ಯೋಗದಲ್ಲಿ ಕಿರಿಕಿರಿ ಅನುಭವಿಸುವಿರಿ. ವ್ಯಾಪಾರಸ್ಥರಿಗೆ ಅವಕಾಶವೊಂದು ಕೈಬಿಡುವುದು. ದೂರವಾಣಿ ಮೂಖೇನ ಶುಭ ಸುದ್ದಿಯೊಂದು ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕಮ್ಮಿ ಆಗಿರುವುದರಿಂದ ಚಿಂತಿತರಾಗುವಿರಿ. ಸಹೋದರ ಅಥವಾ ಸಹೋದರಿಗಾಗಿ ಖರ್ಚು. ವಾರಾಂತ್ಯಕ್ಕೆ ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹಾಗೂ ಸ್ತ್ರೀಯಿಂದ ಧನ ನಷ್ಟ. ಸ್ನೇಹಿತರು/ಕುಟುಂಬ ವರ್ಗದವರು ನಿಮ್ಮ ಸಲಹೆ ಕೇಳಿಕೊಂಡು ಬರಬಹುದು. ನಿಮ್ಮ ಚಾಣಾಕ್ಯತನ ಹಾಗು ತಂತ್ರಗಾರಿಕೆಗೆ ಎಲ್ಲರು ಹುಬ್ಬೆರಿಸುವರು. ಕುಲದೇವತಾ ಆರಾಧನೆ ಮಾಡುವಿರಿ.

————————————————————***********—————————————————————-

ಇನ್ನೂ ಮೂರು ತಿಂಗಳಲ್ಲಿ ರೈಲು ಅಪಘಾತವೊಂದು ಸೂಚಿತ.

ಜ್ಯೋತಿಷರವಿ ಕೃಬೆಂಗಳೂರು

Tags