ಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ವಾರಭವಿಷ್ಯ: 6-1-2019 ಭಾನುವಾರದಿಂದ 12-1-2019 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…..

ಮೇಷವಾರದ ಆರಂಭದಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ, ಪ್ರತಿಷ್ಠೆಯ ಪ್ರಶ್ನೆ. ಅನಾರೋಗ್ಯ ಹಾಗು ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ ಇಲ್ಲವೆ ಕುಟುಂಬದಲ್ಲಿ ಏನಾದರೂ ಸಮಸ್ಯೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ವಾರದ ಮಧ್ಯ ಮತ್ತು ವಾರಾಂತ್ಯಕ್ಕೆ ಉತ್ತಮ ಧನ ಲಾಭ. ಆಸ್ತಿ ವಿಚಾರವಾಗಿ ಅನವಶ್ಯಕ ಚರ್ಚೆ. ವಾಹನಗಳಿಂದ ಕಿರಿಕಿರಿ. ತಾಯಿಗೆ ನಿಮ್ಮ ಬಗ್ಗೆ ಅಸಮಧಾನ ಹಾಗು ಅವರು ಹೇಳುವ ಬುದ್ದಿ ಮಾತನ್ನು ತಾಳ್ಮೆಯಿಂದ ಕೇಳಿ ಇಲ್ಲವೆ ವೈಯಕ್ತಿಕವಾಗಿ ಕಷ್ಟಕ್ಕೆ ಸಿಲುಕುವಿರಿ. ಷೇರು ಮಾರ್ಕೆಟ್, ಸಾಲ ಕೊಡುವುದು ಹಾಗು ಚೀಟಿ ವ್ಯವಹಾರಗಳಿಂದ ಈ ವಾರ ದೂರ ಇರಿ ಇಲ್ಲವೆ ನಷ್ಟ ಅನುಭವಿಸಬೇಕಾದೀತು. ದುರ್ಗಿಯ ಆರಾಧನೆಯಿಂದ ಒಳಿತು.

ವೃಷಭವಾರದ ಆರಂಭದಲ್ಲಿ ನಿಮ್ಮ ಸಂಗಾತಿಯ ಕುಟುಂಬ ವರ್ಗದಲ್ಲಿ ಅನಾರೋಗ್ಯದ ಸಮಸ್ಯೆ ಇಲ್ಲವೆ ಹಣಕಾಸಿನ ಮುಗ್ಗಟ್ಟಿನಿಂದ ಸಮಸ್ಯೆಗೆ ಸಿಲುಕಿಹಾಕಿ ಕೊಳ್ಳುವರು. ನೀವು ಅತೀವ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವಿರಿ. ತಿನ್ನುವ ಆಹಾರದಿಂದ ವ್ಯತ್ಯಾಸ. ಕಾಲುಗಳಿಗೆ ಪೆಟ್ಟಾಗಬಹುದು. ವಾರಾಂತ್ಯಕ್ಕೆ ಮನಸ್ಸಿಗೆ ಉಲ್ಲಾಸ, ಅನೇಕ ಚಟುವಟಿಕೆಗಳಿಂದ ಹಿಗ್ಗುವಿರಿ. ನೆರೆಹೊರೆಯವರು ಇಲ್ಲವೆ ನಿಮ್ಮ ಸ್ನೇಹಿತ ವರ್ಗದವರು ನಿಮ್ಮ ಸಲಹೆ ನಿರೀಕ್ಷಿಸುವರು. ನಿಮ್ಮ ಮಕ್ಕಳ ವಿಚಾರವಾಗಿ ಅಸಮದಾನವನ್ನು ಹೊರಹಾಕುವಿರಿ. ನಿಮ್ಮ ಸಂಗಾತಿಗೆ ಉದ್ಯೋಗದಲ್ಲಿ ಅಥವಾ ವ್ಯಾಪಾರದಲ್ಲಿ ಅಭಿವೃದ್ಧಿ. ತಂದೆಯ ಆರೋಗ್ಯದಲ್ಲಿ ಏರುಪೇರು. ಈ ವಾರ ವಾಹನ ವಿಚಾರವಾಗಿ ಕಿರಿಕಿರಿ ಅನುಭವಿಸುವಿರಿ.

ಮಿಥುನಹಣಕಾಸಿನ ಮುಗ್ಗಟ್ಟು ಮುಂದುವರಿಯವ ವಾರ. ಸರ್ಕಾರಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಇಲ್ಲವೆ ಅನಾಯಸವಾಗಿ ನಿಮ್ಮ ಕೆಲಸಗಳು ವಿಳಂಬವಾಗಬಹುದು. ಸಂಯಮದಿಂದ ಇಲ್ಲದಿದ್ದರೆ ವ್ಯವಹಾರವೊಂದು ಕೈ ತಪ್ಪಬಹುದು. ಅವಶ್ಯಕತೆಗಿಂತ ಹೆಚ್ಚಿನ ಹಣ ವ್ಯಯವಾಗುವ ವಾರ. ವಾರದ ಮಧ್ಯದಲ್ಲಿ ವಾಸ್ತವ ಬದುಕಿನಿಂದ ದೂರ ಉಳಿಯುವಿರಿ. ನಿಮ್ಮ ಆಲೋಚನೆಗಳೆಲ್ಲವೂ ನಿಧಾನವಾಗಿ ಪ್ರಾಮುಖ್ಯತೆ ಪಡೆದುಕೊಳ್ಳವ ವಾರ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ವಿನಾಕಾರಣ ಚರ್ಚೆ. ವಿದ್ಯಾರ್ಥಿಗಳಿಗೆ ಕೊಂಚ ಹುನ್ನಡೆ. ಗುರುಗಳ ಸಹಕಾರ ಇಲ್ಲದಿರುವ ವಾರದ. ಲಕ್ಷ್ಮೀ ವೆಂಕಟೇಶ್ವರನ ದರ್ಶನದಿಂದ ಒಳಿತು ಕಾಣುವಿರಿ.

ಕಟಕವಾರದ ಆರಂಭದಲ್ಲಿ ಉದ್ಯೋಗದಲ್ಲಿ/ಸಾಲ ಪಡೆದವರಿಂದ/ಸ್ನೇಹಿತ ವರ್ಗದಿಂದ ಇಲ್ಲವೆ ನಿಮ್ಮ ಸೇವಕರಿಂದ ಅತಿಯಾದ ಒತ್ತಡಕ್ಕೆ ಸಿಲುಕುವಿರಿ. ಸಮಯ ಪಾಲನೆಯಲ್ಲಿ ಕಷ್ಟವಾಗಿ ಒಪ್ಪಿಕೊಂಡಿರುವ ಕೆಲಸ ಕಾರ್ಯಗಳನ್ನು ಮುಗಿಸಲು ವಿಫಲತೆ ಕಾಣುವಿರಿ. ಕೊಂಚ ಮಟ್ಟಿಗೆ ಅನಾರೋಗ್ಯದ ಸಮಸ್ಯೆ ಕಾಡಬಹುದು. ತಾಯಿಯ ಮಾರ್ಗದರ್ಶನ ಸಿಗುವ ವಾರ. ಮಾತಿನಿಂದ ವ್ಯತ್ಯಾಸವಾಗುವ ವಾರ. ಅನಗತ್ಯ ಮಾತಿನ ಚರ್ಚೆಗೆ ಕೈ ಜೋಡಿಸುವಿರಿ ಹಾಗು ಹಿನ್ನಡೆ ಅನುಭವಿಸುವಿರಿ. ಹಳೆಯ ಗಡಿಯಾರಗಳನ್ನು ರಿಪೇರಿ ಮಾಡಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಹಾಗು ಅವರ ಆರೋಗ್ಯದ ವಿಷಯ ನಿಮ್ಮನ್ನು ಕಾಡಲಿದೆ. ಅಮ್ಮನವರ ದರ್ಶನದಿಂದ ಒಳಿತು.

ಸಿಂಹವಾರದ ಆರಂಭದಲ್ಲಿ ಅತ್ಯಂತ ಜಾಗರೂಕತೆಯಿಂದ ಇದ್ದರೆ ಒಳಿತು. ಕುಟುಂಬ ಕಲಹ, ಹಣದ ಮುಗ್ಗಟ್ಟು, ವೃತ್ತಿಯ ವಿಚಾರವಾಗಿ ಅತೀವ ಒತ್ತಡಕ್ಕೆ ಸಿಲುಕುವಿರಿ. ಆದಷ್ಟು ಸಮಾಧನದಿಂದ ಇರಿ. ಯಾವುದೇ ಆತುರದ ನಿರ್ಧಾರ ಬೇಡ. ಮುಂಬರುವ ದಿನಗಳಲ್ಲಿ ಶುಭವಾಗಲಿದೆ. ಬೆನ್ನು ನೋವು, ಸ್ಪಾಡಿಲೈಟಿಸ್, ಕೀಲುನೋವು ಮತ್ತೆ ಮರುಕಳಿಸುವ ವಾರ. ವೈದ್ಯರನ್ನು ಭೇಟಿಮಾಡಿ ಪರಿಹಾರ ಕಂಡುಕೊಳ್ಳಿ. ವಾರಾಂತ್ಯಕ್ಕೆ ಚೇತರಿಕೊಂಡು ಮುನ್ನುಗ್ಗುವಿರಿ. ಪ್ರತಿಷ್ಠೆಯನ್ನು ಪಣಕ್ಕಿಡಬೇಡಿ. ಸಹೋದರ ಅಥವಾ ಸಹೋದರಿಯೊಂದಿಗೆ ಮಾತಿನ ಚಕಮಕಿ ಇಲ್ಲವೆ ಅವರಿಗೆ ಅನಾರೋಗ್ಯದ ವಿಷಯವಾಗಿ ಹಣವ್ಯಯ. ಹನುಮಾನ್ ಚಾಲಿಸ್, ವಿಷ್ಣು ಸಹಸ್ರನಾಮ ಕೇಳಿ ಹಾಗು ಪಠಣ ಮಾಡಿ.

ಕನ್ಯಾಆಸ್ತಿಯ ವಿಚಾರವಾಗಿ ಆತುರದ ನಿರ್ಧಾರ ಬೇಡ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ನಿಮ್ಮ ಬಹು ಇಷ್ಟದ ವಸ್ತುವೊಂದು ಹಾಳಾಗಬಹುದು ಇಲ್ಲವೆ ಕೈಜಾರುವುದು. ನಿಮ್ಮ ಶಿಸ್ತನ್ನು ಇತರರ ಮೇಲೆ ಹೇರಲು ಪ್ರಯತ್ನ ಪಟ್ಟು ನಿಂದನೆಗೆ ಗುರಿಯಾಗುವಿರಿ. ಮನೆಯ ಹಿರಿಯರಿಗೆ(ಮಾವ, ಸೋದರ ಮಾವ ಇಲ್ಲವೆ ಅಣ್ಣ) ಅನಾರೋಗ್ಯದ ಸಮಸ್ಯೆ ಕಾಡಬಹುದು. ವಾಹನಗಳಿಂದ ಕಿರಿಕಿರಿ ಮತ್ತು ಅತೀವ ನಷ್ಟ ಅನುಭವಿಸುವಿರಿ. ಉದ್ಯೋಗಸ್ಥರಿಗೆ ಅಧಿಕಾರಿಗಳಿಂದ, ವ್ಯಾಪಾರಸ್ಥರಿಗೆ ಅವರ ಕೆಲಸಗಾರರಿಂದ, ವಿದ್ಯಾರ್ಥಿಗಳಿಗೆ ಶಿಕ್ಷಕರೂ ಹಾಗು ಹಿರಿಯರಿಂದ ಸಮಸ್ಯೆ. ನೀವು ಯಾವುದಾದರೂ ಕೋರ್ಟ್ ಕೇಸ್ ಎದುರಿಸುತ್ತಿದ್ದರೆ ಅದರಿಂದ ಹಿನ್ನಡೆಯಾಗುವುದು. ವಾರಾಂತ್ಯಕ್ಕೆ ಮನೋರಂಜನಾತ್ಮಕ ಚಟುವಟಿಕೆಗಳಿಗೆ ಹಣ ವ್ಯಯ.

ತುಲಾವಾರದ ಆರಂಭದಿಂದಲೂ ದ್ವಂದ್ವ ನಿಲುವು ತಾಳುವಿರಿ. ಬರಬೇಕಾಗಿರುವ ಹಣ ಸಮಯಕ್ಕೆ ಬಾರದು ಕೊಂಚ ನಿದಾನವಾದೀತು. ಆರೋಗ್ಯದಲ್ಲಿ ಕೊಂಚ ಏರುಪೇರು. ಹೆಚ್ಚಿನ ಶ್ರಮ ಪಟ್ಟು ಕಡಿಮೆ ಫಲ ಪಡೆಯುವ ವಾರ. ತೆರಿಗೆ ವಿಷಯವಾಗಿ ಇಲ್ಲವೆ ಸರ್ಕಾರದ ವಿಷಯವಾಗಿ ಬೇಸರ. ಉದ್ಯೋಗದಲ್ಲಿ ಕೊಂಚ ಕಿರಿಕಿರಿ ಏದುರಿಸುವ ವಾರವಾದರೂ ವಾರಾಂತ್ಯದಲ್ಲಿ ಜಯ ಕಾಣುವಿರಿ. ಡಯಾಬಿಟಿಸ್ ಇಲ್ಲವೆ ಗ್ಯಾಸ್ಟ್ರಿಕ್ ಹೆಚ್ಚಾಗುವ ವಾರ. ಸಹೋದರ ಅಥವಾ ಸಹೋದರಿಯರು ನಿಮ್ಮಿಂದ ಸಹಾಯ ನಿರೀಕ್ಷಿಸುವ ವಾರ. ವಿದ್ಯಾರ್ಥಿಗಳು ಸೂರ್ಯ ನಮಸ್ಕಾರದಿಂದ ಒಳಿತು ಕಾಣಬಹುದು. ವ್ಯಾಪಾರದಸ್ಥರಿಗೆ ಕೊಂಚ ಹಿನ್ನಡೆಯವಾರ.

ವೃಶ್ಚಿಕ ವಾರದ ಆರಂಭದಲ್ಲಿ ಎಲ್ಲಾ ಇದ್ದು ಏನು ಇಲ್ಲದ ಅನುಭವವಾದರೂ ಧೈರ್ಯದಿಂದ ಎಲ್ಲಾ ಪ್ರಯತ್ನಗಳಿಗೆ ಮುನ್ನುಗ್ಗುವಿರಿ. ಇತರರು ನಿಮ್ಮ ಮೇಲೆ ಅತೀವ ನಂಬಿಕೆ ಇಟ್ಟಿರುವರು ಅದಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ. ಹಣಕಾಸಿನ ವಿಚಾರವಾಗಿ ನಿಮ್ಮ ಅಧಿಕಾರಿಯೊಂದಿಗೆ ಇಲ್ಲವೆ ನಿಮ್ಮ ಕೆಳಗಿನವರೊಂದಿಗೆ ವ್ಯತ್ಯಾಸ ಉಂಟಾಗುವುದು. ಮಾತಿನ ಮೇಲೆ ಹತೋಟಿಯಿರಲಿ. ಆರೋಗ್ಯದ ಬಗ್ಗೆ ಗಮನವಿರಲಿ. ವಾಹನ ಚಾಲನೆಯಲ್ಲಿ ಜಾಗರೂಕತೆ ವಹಿಸಿ. ಮಕ್ಕಳಿಂದ ಸಮಾಧಾನ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕಮ್ಮಿ. ಸಮಯಕ್ಕೆ ಸರಿಗಾಗಿ ಊಟ ಮಾಡಲು ಆಗದು ಅದರಿಂದ ಆರೋಗ್ಯದಲ್ಲಿ ಏರಿಪೇರು. ಉದ್ಯೋಗ ನಿಮಿತ್ತ ಹಳೆಯ ಸಂಬಂಧವನ್ನು ಕೆದಕುವಿರಿ. ಇಲ್ಲವೆ ಭೇಟಿ ಮಾಡುವಿರಿ.

ಧನಸ್ಸುವಾರದ ಆರಂಭದಲ್ಲಿ ಶುಭವಲ್ಲದಿದ್ದರೂ ಸುಖ ಸುದ್ದಿ. ಧಾರ್ಮಿಕ ಹಾಗು ಮನೋರಂಜನಾತ್ಮಕ ಚಟುವಟಿಕೆಗಳಿಗಾಗಿ ಹಣ ವ್ಯಯ. ತಿನ್ನುವ ಆಹಾರದಲ್ಲಿ ಏನನ್ನಾದರೂ ಹುಡುಕುವಿರಿ. ವಾರಾಂತ್ಯಕ್ಕೆ ತಾಯಿಯೊಂದಿಗೆ ಮುನಿಸು ಇಲ್ಲವೆ ನಿಮ್ಮ ನಿರ್ಧರಾಕ್ಕೆ ಅವರ ಸಹಮತವಿರುವುದಿಲ್ಲ. ಶೀತದ ವಾತಾವರಣದಿಂದಾಗಿ ಆರೋಗ್ಯದಲ್ಲಿ ಏರುಪೇರು. ವಾಹನ ನಿಲುಗಡೆ ಶುಲ್ಕದ ಸಲುವಾಗಿ ಅನವಶ್ಯಕ ವಾಗ್ವಾದ. ಕ್ರೆಡಿಟ್ ಕಾರ್ಡ್ ನಿಂದಾಗಿ ಹೆಚ್ಚಿನ ಹೊರೆ ಹೊರುತ್ತಿರುವ ಅನುಭವವಾಗುವ ವಾರ. ನಿಮ್ಮ ಸಂಗಾತಿಯ ತಂದೆಯನ್ನು ಭೇಟಿ ಮಾಡುವಿರಿ ಇಲ್ಲವೆ ಫೋನ್ ಮುಖೇನ ಅವರ ಆರೋಗ್ಯದ ಬಗ್ಗೆ ವಿಚಾರಿಸುವಿರಿ. ಹನುಮ ಮತ್ತು ಸೂರ್ಯನ ಪ್ರಾರ್ಥನೆಯಿಂದ ಒಳಿತಾಗುವುದು.

ಮಕರ

ವಾರದ ಆರಂಭದಲ್ಲಿ ಅನವಶ್ಯಕ ಯೋಚನೆಗಳು ನಿಮ್ಮನ್ನು ಕಾಡುವುದು. ಮನೆಯ ಹಿರಿಯರನ್ನು ನೆನೆದು ಕೊಂಚ ಬೇಸರಗೊಳ್ಳುವಿರಿ. ವಾಹನದ ವಿಚಾರವಾಗಿ ಇತರರ ಜೊತೆ ಚರ್ಚೆ ನಡೆಸುವಿರಿ. ನಿಮ್ಮ ಪ್ರಯತ್ನಗಳಿಗೆ ಪ್ರತಿಫಲ ದೊರಕುವುದರಲ್ಲಿ ವಿಳಂಬವಾಗುತ್ತಿರುವುದರಿಂದ ಕೊಂಚ ಬೇಸರಗೊಳ್ಳುವ ವಾರ. ಶಿಸ್ತನ್ನು ಪಾಲಿಸುವಲ್ಲಿ ಹಿಂದೆ ಬಿಳುವಿರಿ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಚಿಂತಿಸುವಿರಿ ಹಾಗು ಅದರ ಸಲುವಾಗಿ ತಯಾರಿ ನಡೆಸುವಿರಿ. ನಿಮ್ಮ ಯೋಜನೆಗಳು ನಿಧಾನವಾಗಿ ಸಾಗಿದರೂ ಅಂತ್ಯದಲ್ಲಿ ಒಳಿತಾಗುವುದು. ವಾರಾಂತ್ಯಕ್ಕೆ ನಿಮ್ಮ ಆಲೋಚನೆಗಳೆಲ್ಲವೂ ಬದಲಾಗಿ ಹೊಸದೊಂದು ಯೋಜನೆಗೆ ಸಿದ್ದರಾಗುವಿರಿ.

ಕುಂಭವಾರದ ಆರಂಭದಲ್ಲಿ ವಾಸ್ತವ ಬದುಕಿನಿಂದ ದೂರ ಇರುವಿರಿ. ಉತ್ತಮ ಲಾಭದ ನಿರೀಕ್ಷೆಯಲ್ಲಿ ಇರುವ ನಿಮಗೆ ಕೊಂಚ ಬೇಸರವಾದೀತು. ತಾಯಿಯ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ. ಸೇವೆಯಲ್ಲಿ ಬಡ್ತಿ ಇಲ್ಲವೆ ನಿಮ್ಮ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರಶಂಸಿಸುವರು. ಈ ವಾರ ಬಹಳ ಏರು ಧ್ವನಿಯಲ್ಲಿ ಮಾತನಾಡುವಿರಿ ಹಾಗು ಆತ್ಮ ಧೈರ್ಯದಿಂದ ಮಾತನಾಡುವಿರಿ. ಉನ್ನತ ವ್ಯಕ್ತಿಗಳ ಭೇಟಿ ಮಾಡುವಿರಿ. ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವಿರಿ. ಈ ವಾರ ನಿಮ್ಮಿಂದ ಕೆಲವರು ಧನ ಸಹಾಯದ ನಿರೀಕ್ಷೆಯಲ್ಲಿ ಇರುವರು. ನಿಮ್ಮ ಸೇವಾ ತೆರಿಗೆಯಲ್ಲೂ, ಆದಾಯ ತೆರಿಗೆಯಲ್ಲಿ ವ್ಯತ್ಯಾಸವಾಗಿರುವುದು. ಕೊಂಚ ಅದರ ಬಗ್ಗೆ ಗಮನ ಹರಿಸಿ. ಅಮ್ಮನವರ ದರ್ಶನದಿಂದ ಒಳಿತು.

ಮೀನವಾರದ ಆರಂಭದಲ್ಲಿ ಹಿನ್ನಡೆಯಾದರೂ ವಾರದ ಮಧ್ಯದಲ್ಲಿ ಸ್ನೇಹಿತ ಅಥವಾ ಕುಟುಂಬ ವರ್ಗದಿಂದ ಉಡುಗೊರೆ ಪಡೆಯುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ವಿಶೇಷವಾಗಿ ಶಕ್ತಿ ಪೀಠಗಳಿಗೆ ಸ್ನೇಹಿತರೊಂದಿಗೆ ಕೂಡಿ ಅತ್ಯಂತ ಮನೋರಂಜನೆಯಿಂದ ಕಳೆಯುವಿರಿ ಹಾಗು ಖರ್ಚು ಮಾಡುವಿರಿ. ವಾಹನಗಳಿಂದ ಕಿರಿಕಿರಿ ಅನುಭವಿಸುವಿರಿ ಇಲ್ಲವೆ ಸಂಚಾರ ನಿಯಮ ಪಾಲನೆ ಮಾಡದೆ ದಂಡ ಪಾವತಿಸುವಿರಿ. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ. ಮನೆಯನ್ನು ಹುಡುಕುತ್ತಿದ್ದರೆ ಬಹುತೇಕ ಹಳೆಯ ಮನೆಗಳನ್ನು ಹೆಚ್ಚಾಗಿ ಮಧ್ಯವರ್ತಿಗಳು ತೋರಿಸುವರು. ತಲೆ ಕೂದಲೂ ಉದುರುವಿಕೆ ಹಾಗೂ ಹೆಚ್ಚುತ್ತಿರುವ ದೇಹದ ತೂಕದ ಬಗ್ಗೆ ಚಿಂತಿತತಾಗುವಿರಿ.

ಜ್ಯೋತಿಷರವಿ ಕೃಬೆಂಗಳೂರು

Tags