ಬಾಲ್ಕನಿಯಿಂದ

ಬಾಲ್ಕನಿ ವಾರಭವಿಷ್ಯ: 21-1-2019 ಸೋಮವಾರದಿಂದ 26-1-2019 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ….

ಮೇಷ ವಾರದ ಆರಂಭದಲ್ಲಿ ಅತ್ಯಂತ ಉತ್ಸಾಹದಿಂದ ಹಿಗ್ಗುವಿರಿ, ಆದರೆ ಇದರಿಂದ ಶುಭಕ್ಕಿಂತ ಅಶುಭವೆ ಹೆಚ್ಚು. ತಾಯಿಯೊಂದಿಗೆ ಹೊಂದಾಣಿಕೆ ಇರುವುದಿಲ್ಲ. ನಿಮ್ಮ ವಿಶಯವಾಗಿ ನಿಮ್ಮ ಹೆತ್ತವರು ಅನವಶ್ಯಕ ಮಾತಿನ ಚಕಮಕಿ. ನಂತರದ ದಿನದಲ್ಲಿ ಜನ ಮನ್ನಣೆ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಶುಭ. ವ್ಯಾವಹಾರಸ್ಥರಿಗೆ ಕೊಂಚ ಹಿನ್ನಡೆಯ ವಾರ. ಉದ್ಯೋಗಸ್ಥರಿಗೆ ಹೊಸ ಸವಾಲಿನ ಅವಕಾಶಗಳು ಒದಗಿಬರಲಿದೆ. ಈ ವಾರ ಹೆಚ್ಚಿನ ಸಮಯವನ್ನು ಕಛೇರಿಯಲ್ಲಿ ಕಳೆಯುವಿರಿ. ಹಣಕಾಸಿನ ವಿಚಾರವಾಗಿ ಸಾಲಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಯಶಸ್ಸು ಸಿಗಲಿದೆ. ಮನೆಯಲ್ಲಿರುವ ಬಂಗಾರವನ್ನು ಅಡವಿಟ್ಟು ಹಣಹೊಂದಿಸಲೂ ಸಹ ಯೋಚಿಸುವಿರಿ.

ವೃಷಭ ವಾರದ ಪ್ರಾರಂಭದಲ್ಲಿ ಅನವಶ್ಯಕವಾಗಿ ಬೇಡದ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವಿರಿ. ವಾರದ ಮಧ್ಯ ಬಾಗದಲ್ಲಿ ಧೈರ್ಯದೊಂದಿಗೆ ಮುನ್ನುಗ್ಗುವಿರಿ ಇಲ್ಲವೆ ಏನನ್ನೂ ಮಾಡದೆ ಮೌನಕ್ಕೆ ಶರಣಾಗುವಿರಿ. ಮನೆಯ ಹಿರಿಯರೊಬ್ಬರ ಅಥವಾ ನಿಮ್ಮ ಸಂಬಂಧದಲ್ಲಿ ಹಿರಿಯರ ಅನಾರೋಗ್ಯದ ವಿಷಯವೊಂದು ಮುಟ್ಟುತ್ತದೆ. ಸೋದರ ಮಾವನಿಗೆ ಸಲ್ಪ ಮಟ್ಟಿಗೆ ಅನಾನುಕೂಲ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಈ ವಾರ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಆನ್ ಲೈನ್ ಶಾಪಿಂಗ್ ನಲ್ಲಿ ಏನನ್ನಾದರೂ ಕೊಳ್ಳುವಿರಿ. ವಾರಾಂತ್ಯಕ್ಕೆ ಮಕ್ಕಳಿಂದ ಸಂತಸ. ತಾಯಿಯೊಂದಿಗೆ ಹೆಚ್ಚಿನ ಒಡನಾಟ ಇಲ್ಲವೆ ದೂರವಾಣಿ ಮುಖೇನ ಹೆಚ್ಚಿನ ಸಂಭಾಷಣೆ.

ಮಿಥುನ ವಾರದ ಆರಂಭದಲ್ಲಿ ಅನಾರೋಗ್ಯ ಇಲ್ಲವೆ ಮಾನಸಿಕವಾಗಿ ಸ್ವಲ್ಪ ಹಿನ್ನಡೆ ಅನುಭವಿಸುವಿರಿ. ಇಲ್ಲ ಸಲ್ಲದ ಆರೋಪಗಳಿಗೆ ಸಮಜಾಯಿಷಿ ನಿಡುವ ವಾರ. ಸರ್ಕಾರಿ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗೆ ಕೊಂಚ ಅಡ್ಡಿ. ಇಲ್ಲವೆ ಉದ್ಯೋಗ/ವ್ಯಾಪಾರ ನಿಮಿತ್ತ ಅನವಶ್ಯಕ ಪ್ರಯಾಣ ಬೆಳೆಸುವಿರಿ. ಹಾಗು ಪ್ರಯಾಣದಿಂದ ಕೊಂಚ ಕಿರಿಕಿರಿ ಆದೀತು. ತಿನ್ನುವ ಆಹಾರ ಅಥವಾ ನೀರಿನಿಂದ ತೊಂದರೆ. ಆಸ್ತಿ ವಿಚಾರಗಳ ಬಗ್ಗೆ ಚರ್ಚೆ. ನಿಮ್ಮ ತಾಯಿ ಹಾಗು ನಿಮ್ಮ ಸಹೋದರಿಯ ಮಧ್ಯ ಮಾತಿನ ಚಕಮಕಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಹಾಗು ಪ್ರಯತ್ನಗಳಲ್ಲಿ ಜಯ ಸಲ್ಲದು.

ಕಟಕ ವಿಪರೀತ ಗೊಂದಲಗಳಿಂದ ಹಾಗು ಭಾವನಾತ್ಮಕವಾಗಿ ವಾರವನ್ನು ಆರಂಭಿಸುವಿರಿ. ವಾಸ್ತವ ಬದುಕಿನಿಂದ ದೂರ ಹೋಗುವಿರಿ. ನೀವು ಇಲ್ಲವೆ ನಿಮ್ಮ ತಂದೆಯವರು ಸರ್ಕಾರ ಇಲ್ಲವೆ ಕಾನೂನಿನ ಸಮಸ್ಯೆಗಳನ್ನು ಎದುರಿಸನೇಕಾಗಬಹುದು. ಈ ವಾರ ಮಾತನ್ನು ಹತೋಟಿಯಲ್ಲಿ ಇಡಿ. ವಾರದ ಮಧ್ಯದಿಂದ  ಆತ್ಮ ಬಲ ಹೆಚ್ಚಿ ಧೈರ್ಯ ಬರುವುದು. ಮಕ್ಕಳ ವಿಚಾರವಾಗಿ ಸ್ವಲ್ಪ ಉದಾಸೀನರಾಗುವಿರಿ. ಅವರಿಂದ ಸಂತಸದ ಸುದ್ದಿಯೊಂದು ಬರಲಿದೆ. ಹಾಗಾಗಿ ಅವರಿಗಾಗಿ ವಿಪರೀತ ಖರ್ಚು ಮಾಡುವಿರಿ. ನಿಮ್ಮ ಸನಿಹದವರಿಂದ ಎನ್ನನಾದರೂ ಉಡುಗೊರೆಯನ್ನು ಪಡೆಯುವಿರಿ. ಈ ವಾರ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವಿರಿ.

ಸಿಂಹ ವಾರದ ಆರಂಭದಲ್ಲಿ ವಿಪರೀತ ಲೆಕ್ಕಾಚಾರದಿಂದ ಪ್ರಾರಂಭ ಮಾಡುವಿರಿ. ನಂತರದ ದಿನಗಳಲ್ಲಿ ಹುಮ್ಮಸ್ಸು ಕಡಿಮೆಯಾದೀತು. ವಿಪರೀತ ಪ್ರಯಾಣದಿಂದ ಅನವಶ್ಯಕ ಖರ್ಚು ಇಲ್ಲವೆ ವಿಪರೀತ ಸುತ್ತಾಟ. ಮನೆಗಾಗಿ ಅಲಂಕಾರಿಕ ವಸ್ತುಗಳ ಖರೀದಿ ಇಲ್ಲವೆ  ತಾಯಿಗಾಗಿ ವಸ್ತ್ರ ಇಲ್ಲವೆ ಆಭರಣಗಳನ್ನು ಖರೀದಿಸುವಿರಿ. ಚರ್ಮದ  ವಿಶಯವಾಗಿ ಆಲಸ್ಯ ಬೇಡ. ಸಮಸ್ಯೆ ಇದ್ದರೆ ವೈದ್ಯರನ್ನು ಕಾಣಿ. ಕಣ್ಣಿನ ವೈದ್ಯರನ್ನು ಕಾಣಬಹುದು. ಕೆಲವು ವಿಶಯದ ಸಂಬಂಧ ನಿಮ್ಮ ವಾದವನ್ನು ಪ್ರಬಲವಾಗಿ ಮುಂಡಿಸುವಿರಿ. ಸಾಲದ ವಿಷಯವಾಗಿ ಚಿಂತಾಕ್ರಾಂತರಾಗುವಿರಿ. ವಾರಾಂತ್ಯಕ್ಕೆ ವಿಶೇಷವಾದ ಭೋಜನದ ನಿರೀಕ್ಷೆಯಲ್ಲಿರುವಿರಿ. ಹಾಗು ಭೂ ವ್ಯವಹಾರ ಮಾಡುವವರಿಗೆ ಉತ್ತಮ ಧನಲಾಭ.

ಕನ್ಯಾ ಹೆಚ್ಚು ಪರಿಶ್ರಮದ ವಾರ ಹಾಗು ಕುಂಟಿತವಾದ ಆದಾಯ ನಿರೀಕ್ಷಿಸಿದ ಹಣಕ್ಕೆ ಸೇರದು ಇಲ್ಲವೆ ನಿರೀಕ್ಷಿಸಿದ ಲಾಭ ದೊರೆಯದಿರುವುದರಿಂದ ತಲೆ ಕೆಡಿಸಿಕೊಳ್ಳುವಿರಿ. ನಿಮ್ಮ ಹಳೆಯ ಲೆಕ್ಕ ಪತ್ರಗಳನ್ನು ಲೆಕ್ಕ ಪರಿಶೋಧಕರ ಮುಖೇನ ಸರಿಪಡಿಸಿಕೊಳ್ಳುವಿರಿ. ವಾರದ ಮಧ್ಯಭಾಗದಲ್ಲಿ ಪ್ರಯಾಣವೊಂದು ಸೂಚಿತ. ಹಳೆಯ ವಸ್ತು, ಆಸ್ತಿ ಅಥವಾ ವಾಹನಗಳಿಂದ ಕಿರಿಕಿರಿ. ಬಡ್ತಿ ನಿರೀಕ್ಷೆಯಲ್ಲಿ ಇರುವವರಿಗೆ ಕೊಂಚ ಹಿನ್ನಡೆ ಸ್ವಲ್ಪ ತಾಳ್ಮೆಯಿಂದ ವ್ಯವಹರಿಸಿದರೆ ಒಳಿತು. ದೇವಸ್ಥಾನಕ್ಕೆ ಹೋಗುವ ವಿಚಾರದಲ್ಲಿ ಅನವಶ್ಯಕ ಮಾತು ಹಾಗು ದ್ವಂದ್ವ. ಸಿನಿಮಾ ಹಾಗು ಮನೋರಂಜನೆಗಾಗಿ ಖರ್ಚು.

ತುಲಾ ಮುಂಬರುವ ದಿನಗಳ ಬಹು ದೊಡ್ಡ ಯೋಜನೆಗೆ ಕೊಂಚ ಅಡ್ಡಿಯಾಗಿ ವಿಳಂಬವಾಗುವುದು. ಆದಾಯದಲ್ಲಿ ಏರಿಕೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗದಲ್ಲಿ ಕೊಂಚ ಹಿನ್ನಡೆ ಅನಿಭವಿಸುವಿರಿ. ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಿಸುವುದು. ಮಕ್ಕಳ ಬುದ್ದಿವಂತಿಕೆ ಕಂಡು ಸಂತಸ ಪಡುವಿರಿ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಹಳೆಯ ಸ್ನೇಹಿತರು ಅಥವಾ ದೂರದ ಕುಟುಂಬ ಸದಸ್ಯರನ್ನು ಕಾಣುವಿರಿ. ಆಸ್ತಿ ವಿಚಾರವಾಗಿ ಕೊಂಚ ಗಲಿಬಿಲಿಗೊಳ್ಳುವಿರಿ. ವಾರಾಂತ್ಯಕ್ಕೆ ಹೆಚ್ಚಿನ ಲಾಭ. ಅವಕಾಶವೊಂದು ಹುಡುಕಿಕೊಂಡು ಬರುವುದು. ಮನೆಯಲ್ಲಿ ಅನಿಲ(ಗ್ಯಾಸ್) ಸೋರಿಕೆ ಆಗಬಹುದು.

ವೃಶ್ಚಿಕ ವಾರದ ಆರಂಭದಲ್ಲಿ ಸಮಯ ಪಾಲನೆಯಲ್ಲಿ ಎಡವುವಿರಿ ಹಾಗು ಅದರ ವ್ಯತಿರಿಕ್ತ ಪರಿಣಾಮವನ್ನು ವಾರ ಪೂರ್ತಿ ಎದುರಿಸುವಿರಿ. ಮಕ್ಕಳ ವಿಚಾರವಾಗಿ ಕೊಂಚ ತಾಳ್ಮೆ ಇರಲಿ. ಅವರ ಆಲೋಚನೆ ಹಾಗು ಶ್ರಮಕ್ಕೆ ಸ್ಪೂರ್ತಿಯಾಗಿ ನಿಲ್ಲಿ.  ಕುಟುಂಬ ಸದಸ್ಯರ ಆರೋಗ್ಯ ವಿಚಾರವಾಗಿ  ಗೊಂದಲದಲ್ಲಿ ಬೀಳುವಿರಿ ವೈದ್ಯರಿಂದ ಸರಿಯಾದ ಮಾರ್ಗದರ್ಶನ ದೊರೆಯದು. ಉದ್ಯೋಗದಲ್ಲಿ ಮುನ್ನಡೆಯಾದರೂ ಸಹೋದ್ಯೋಗಿಯೊಬ್ಬರಿಂದ ಕಿರಿಕಿರಿ. ನಿಮಗೆಷ್ಟದ ವಸ್ತುವೊಂದನ್ನು ಕೊಳ್ಳಲು ಆಲೋಚಿಸುವಿರಿ ಹಾಗು ವಾಸ್ತವವನ್ನು ಅರಿತು ಕೈ ಬಿಡುವಿರಿ. ವಾರಾಂತ್ಯಕ್ಕೆ ಕುಟುಂಬ ಸದಸ್ಯರನ್ನು ಭೇಟಿ ಮಾಡುವಿರಿ ಅಥವಾ ನಿಮ್ಮ ಸಲಹೆ ಪಡೆಯಲು ಭೇಟಿಯಾಗುವರು. ವಾಹನಗಳಿಂದ ಹಣ ವ್ಯಯ.

ಧನಸ್ಸು ವಾರದ ಆರಂಭದಲ್ಲಿ ಎಲ್ಲರ ಮೇಲೆ ಕೂಗಾಡುವಿರಿ. ಅಶಿಸ್ತನ್ನು ಒಪ್ಪುವುದಿಲ್ಲ. ನಿಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗ ತಾಳ್ಮೆಯಿರಲಿ. ಯಾವುದಾದರು ವಸ್ತುವನ್ನು ಎಲ್ಲಾದರೂ ಇಟ್ಟು ಮರೆತು ವೃತಾ ಹುಡುಕಾಡುವಿರಿ ಇಲ್ಲವೆ ವಸ್ತುವನ್ನು ಕೆಳೆದುಕೊಳ್ಳುವಿರಿ. ನಿಮ್ಮ ಸಂಗಾತಿಯ ತಾಯಿಗೆ ಅನಾರೋಗ್ಯ ಕಾಡಬಹುದು. ಇಲ್ಲವೆ ಅದರೂಂದಿಗೆ ಮಾತಿನ ಚಕಮಕಿ ಆಗಬಹುದು. ವಾರದ ಮಧ್ಯಭಾಗದಲ್ಲಿ ನಿಮ್ಮ ಕೆಲಸಗಳಲ್ಲಿ ಜಯಶಾಲಿಗಳಾಗಿ ಕೀರ್ತಿಯನ್ನು ಪಡೆಯುವಿರಿ. ಉದ್ಯೋಗದಿಂದ ವ್ಯಾಪಾರದಿಂದ ಲಾಭ. ನಿಮ್ಮ ಸಹೋದರಿ/ಸಹೋದರನಿಗೆ ನಿಮ್ಮ ಅವಶ್ಯಕತೆ ಬೀಳಬಹುದು. ವಸ್ತ್ರ ಖರೀದಿಯಲ್ಲಿ ಲಾಭ ಪಡೆಯುವಿರಿ.

ಮಕರಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರಗಳಲ್ಲಿ ಶತ್ರುಗಳ ಕಾಟ. ಯಾವುದಕ್ಕೂ ತಲೆ ಹೆಡಿಸಿಕೊಳ್ಳದೆ, ಅಂಜದೆ  ತಾಳ್ಮೆಯಿಂದ ಮುನ್ನುಗ್ಗಿ. ವಾರದ ಆರಂಭದಿಂದಲೂ  ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ. ಗೌರವಕ್ಕೆ ಧಕ್ಕೆಯಾಗುವ ವಾರವಾದರೂ ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಒಳಿತಾಗುವುದು. ವಾರಾಂತ್ಯಕ್ಕೆ ಪ್ರಗತಿ ಹಾಗು ಧನ ಲಾಭ. ನಿಮ್ಮ ಸಹೋದರ ಅಥವಾ ಸಹೋದರಿಗೆ ನಿಮ್ಮ ಅವಶ್ಯಕತೆ ಬೇಕಾಗಬಹುದು. ಚರ್ಮದ ಸೋಂಕು/ಅಲರ್ಜಿ ಆಗಬಹುದು. ನಿಗದಿತ ಸಮಯಕ್ಕೆ ಊಟ-ತಿಂಡಿ ಮಾಡಲು ಆಗದು. ಅಮ್ಮನವರ ದರ್ಶನದಿಂದ ಒಳಿತು.

ಕುಂಭ ವಾರದ ಆರಂಭದಲ್ಲಿ ಮಕ್ಕಳಿಂದ ನೆಮ್ಮದಿ. ಹೆಚ್ಚುತ್ತಿರುವ ಖರ್ಚು ಹಾಗು ಕ್ರೆಡಿಟ್ ಕಾರ್ಡ್ ಬಿಲ್ ನಿಂದ ತಲೆ ಕೆಡಿಸಿಕೊಳ್ಳುವಿರಿ. ಯಾವುದಾದರೂ ದಂಡದ ರೂಪದಲ್ಲಿ ಹಣ ವ್ಯಯ. ನಿಮ್ಮ ಸಂಗಾತಿಯೊಂದಿಗೆ ಕಿರಿಕಿರಯಾದರೂ ಅಚ್ಚರಿಯಿಲ್ಲ. ಈ ವಾರ ನಿದ್ರಾಹೀನತೆ ಕಾಡಬಹುದು. ಅತಿಯಾದ ಗ್ಯಾಸ್ಟ್ರಿಕ್ ನಿಂದ ಅಜೀರ್ಣವಾಗಬಹುದು. ನಿಮ್ಮ ಸಣ್ಣದೊಂದು ಎಡವಟ್ಟಿನಿಂದ ಅನವಶ್ಯ ಟೀಕೆಗೆ ಗುರಿಯಾಗುವಿರಿ. ವಾಹನ ಬದಲಾಯಿಸಲು ಇದು ಸಕಾಲ. ಸಾಲದ ಪ್ರಯತ್ನಗಳು ಕೈಗೂಡುವುದು. ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಆರೋಗ್ಯದ ದೃಷ್ಠಿಯಿಂದ ಯೋಗ ಅಥವಾ ಜಿಮ್ ಮೋರೆ ಹೋಗುವಿರಿ. ಸೂರ್ಯ ಹಾಗು ಗಣಪತಿ ಪ್ರಾರ್ಥನೆಯಿಂದ ಒಳಿತು.

ಮೀನ ಎಲ್ಲರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಇನ್ನೂ ಎರಡು – ಮೂರು ತಿಂಗಳುಗಳ ಕಾಲ ರಾತ್ರಿ ಸಮಯದಲ್ಲಿ ವಾಹನ ಚಾಲನೆ ಮಾಡದಿರಿ. ಮಕ್ಕಳ ಆರೋಗ್ಯ ಹಾಗು ಅವರ ಸ್ನೇಹಿತರ ಕಡೆ ಗಮನ ಕೊಡಿ. ಭೂ ಸಂಬಂಧ  ವ್ಯವಹಾರದಲ್ಲಿ ಜಾಗರೂಕತೆಯಿಂದ ವ್ಯವಹರಿಸಿ. ಕ್ಯಾಲ್ ಷಿಯಮ್ ಸಮಸ್ಯೆಯಿಂದ ಮಂಡಿ ನೋವು ಕಾಣಿಸಿಕೊಳ್ಳಬಹುದು. ದುಬಾರಿ ಬೆಲೆಯ ಪಾದರಕ್ಷೆ ಕೊಳ್ಳದಿರಿ. ಮಾಧ್ಯಮ ಕ್ಷೇತ್ರ, ಆಮದು – ರಫ್ತು ವ್ಯವಹಾರದಲ್ಲಿರುವವರಿಗೆ ಕೊಂಚ ಹಿನ್ನಡೆಯವಾರ. ಉದ್ಯೋಗಸ್ಥರಿಗೆ ವಾರದ ಕೊನೆಯಲ್ಲಿ ಉತ್ತಮ ಬೆಳವಣಿಗೆ. ಸಂಬಂಧಿಕರು ಹಾಗು ನಿಮ್ಮ ಆತ್ಮೀಯ ಬಳಗದವರನ್ನು ಭೇಟಿ ಮಾಡುವಿರಿ. ಹಾಗು ಖುಷಿಯಿಂದ ಕಾಲ ಕಳೆಯುವಿರಿ. ಮನೋರಂಜನೆಗಾಗಿ ಹಣ ವ್ಯಯ.

————————————————***********———————————————————–

  1. ಗ್ರಹಣದ ಪ್ರಭಾವ

2. ಮುಂಬರುವ 15 ದಿನಗಳ ಕಾಲ ಮೀನುಗಾರರು ಸರಿಯಾದ ಮಾಹಿತಿ ಪಡೆದು(ಹವಾಮಾನ) ಜಾಗರೂಕತೆಯಿಂದ ನೀರಿಗೆ ಇಳಿದರೆ ಒಳಿತು.

3. ಹಡಗೊಂದು ಮುಳುಗುವ ಸಾಧ್ಯತೆ ಹೆಚ್ಚು.

#varabhavishya #atrology #weeklyastrology #balkaninews

Tags