ಬಾಲ್ಕನಿಯಿಂದ

ಬಾಲ್ಕನಿ ವಾರ ಭವಿಷ್ಯ: 25-11-2018 ಭಾನುವಾರದಿಂದ 01-12-2018 ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ……

ಮೇಷ ನಿಮ್ಮ ಅತಿಯಾದ ಮಾತು ವಿಪರೀತ ಲೆಕ್ಕಾಚಾರದ ಬುದ್ದಿಯಿಂದ ವಾರದ ಮೊದಲ ಹಾಗೂ ಮಧ್ಯಭಾಗದ ತನಕ ಮನಃ ಶಾಂತಿಯನ್ನು ಹಾಳುಮಾಡಿಕೊಳ್ಳುವಿರಿ. ತಾಯಿಯ ಆರೋಗ್ಯದಲ್ಲಿ ಏರುಪೇರು ಮತ್ತು ಆಸ್ತಿ  ವಿಷಯವಾಗಿ ಚರ್ಚೆ, ಇಲ್ಲ ಸಲ್ಲದ ಆಮಿಷಗಳಿಗೆ ಒಳಗಾಗುವಿರಿ ಮತ್ತು ಉರ್ಜಿತವಲ್ಲದ ಹೂಡಿಕೆಗಳಿಗೆ ಕೈ ಹಾಕುವಿರಿ. ಇಷ್ಟಟಾಗಿಯೂ ನಿಮ್ಮ ಧೈರ್ಯ ಹಾಗೂ ವಿಶ್ವಾಸವನ್ನು ಇತರರು ಮೆಚ್ಚುತ್ತಾರೆ. ವಾರದ ಮಧ್ಯ ಮತ್ತು ಕೊನೆಯಲ್ಲಿ ಜಾಣ್ಮೆ ಮೆರೆಯುವಿರಿ. ವಸ್ತುವೊಂದು ಕೈ ಜಾರುವುದು. ಸೋದರ ಮಾವನ ಆರೋಗ್ಯ ವಿಚಾರಿಸುವಿರಿ ಅಥವಾ ಅವರನ್ನು ಭೇಟಿಮಾಡುವಿರಿ. ವ್ಯಾಪಾರಸ್ಥರಿಗೆ ಧನ ನಷ್ಟ. ಉದ್ಯೋಗಸ್ಥರಿಗೆ ಸ್ಥಾನದ ಅಭದ್ರತೆ ಕಾಡುವುದು. ಈ ಸಮಯದಲ್ಲಿ ಉದ್ಯೋಗ ಬದಲಿಸುವ ಆಲೋಚನೆ ಇದ್ದರೆ ಮಾಡದಿರುವುದು ಒಳ್ಳೆಯದು.

ವೃಷಭತಾಯಿ ಅಥವಾ ಹಿರಿಯರರಿಂದ ಸುದ್ದಿ. ಸಕಾರಾತ್ಮಕ ಚಿಂತನೆಗಳಿಗಿಂತ ನಕಾರಾತ್ಮಕ ಚಿಂತನೆ ಹೆಚ್ಚು, ಗಂಡ -ಹೆಂಡತಿಯ ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ಅವರ ಕಾಲುಗಳಿಗೆ ಪೆಟ್ಟಾಗಬಹುದು. ನಿಮ್ಮ ಭಾವಾನಾತ್ಮಕ ವಿಷಯಗಳನ್ನು ಹೇಳುವಲ್ಲಿ ಅಥವಾ ಅದನ್ನು ನಿಭಾಯಿಸುವಲ್ಲಿ ವಿಫಲರಾಗುವಿರಿ ಹಾಗೂ ಅದರಿಂದ ಮನಶಾಂತಿ ಹಾಳುಮಾಡಿಕೊಳ್ಳುವಿರಿ. ಹಾಗಾಗಿಯೂ ಹೊರ ಜಗತ್ತಿಗೆ ನೀವು ಬೇರೆಯದೆ ರೀತಿಯಲ್ಲಿ ಕಾಣುವಿರಿ. ನಿಮ್ಮ ಸಲಹೆ ಹಾಗೂ ಸೂಚನೆಗಳಿಗೆ ಮನ್ನಣೆ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚು. ಪ್ರತಿಷ್ಠಿತ ವ್ಯಕ್ತಿಯೊಬ್ಬರ ಭೇಟಿ ಅಥವಾ ಅವರಿಂದ ಸುದ್ದಿಯೊಂದು ತಲುಪಲಿದೆ. ಎಷ್ಟು ದನಾರ್ಜನೆ ಅದರೂ ಖರ್ಚುಗಳು  ಬಿಟ್ಟುಬಿಡದೆ ಕಾಡುವುದು. ಪ್ರವಾಸ ಹೊರಡುವ ಮಾತುಕಥೆ ಆಗುವುದು ಇಲ್ಲವೆ ಅದರ ಸಲುವಾಗಿ ತಯಾರಿನಡೆಸುವಿರಿ. ಕುಟುಂಬದ ಜಟಿಲ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡುವಿರಿ.

ಮಿಥುನವಾರದ ಆರಂಭದಲ್ಲಿ ಎಲ್ಲಾ ಹೊರೆ ನಿಮ್ಮ ಮೇಲೆ ಬಿದ್ದ ಅನುಭವವಾದರೂ ಅದು ವಾಸ್ತವಕ್ಕೆ ದೂರ. ನಿಮ್ಮ ನಾಲಿಗೆ ತೀಕ್ಷ್ಣತೆ ತೀವ್ರವಾಗಿರುವ ವಾರ. ಹಾಗಾಗಿ ವಿನಾಕಾರಣ ಇತರರೊಂದಿಗೆ ಕಲಹ ಅಥವಾ ಇತರರಿಗೆ ನೋವನ್ನುಂಟುಮಾಡುವಿರಿ. ತಿನ್ನುವ ಆಹಾರದಲ್ಲಿ ಎನನ್ನಾದರೂ ಹುಡುಕುವಿರಿ. ಧನ ಚಿಂತೆ. ವಾರದ ಮಧ್ಯ ಬಾಗದ ನಂತರ ಆತ್ಮಬಲ ಹೆಚ್ಚುವುದು. ಇತರರಿಂದ ಗುರುತಿಸಲ್ಪಡುವಿರಿ. ಪ್ರತಿಷ್ಠೆಗಾಗಿ ತೊರ್ಪಡಿಸಲು ಮುಂದಾಗುವಿರಿ. ಆದರೆ ಇದು ಸಕಾಲವಲ್ಲ. ವಸ್ತ್ರಗಳು ಹರಿಯಬಹುದು ಇಲ್ಲವೆ ಕಲೆಯಾಗಬಹುದು. ಸಂಘ ಚಟುವಟಿಕೆಗಳಲ್ಲಿ, ಪಾಲುದಾರಿಕೆಯಲ್ಲಿ ಇತರರೊಂದಿಗ ಹೊಂದಿಕೊಂಡು ಹೊಗಲು ಹೆಣಗಾಡುವಿರಿ. ಹಿರಿಯರು ಅಥವಾ ಅಧಿಕಾರಿ ವರ್ಗಗಳ ಜೊತೆ ಮಾತಿನ ಚಕಮಕಿ. ಹೊಸ ವಾಹನದ ವಿಷಯ ಮುಂದೂಡುವುದು ಒಳಿತು.

ಕಟಕವೈರಲ್ ಜ್ವರದಿಂದಾಗಿ ವಿಪರೀತ ಆಯಾಸವಾಗುವ ವಾರ. ಅದಾಗಿಯೂ ವಿಶ್ರಾಂತಿ ಸಿಗದೆ ಇರುವ ವಾರ. ಸುಖ ಭೋಜನ, ವಸ್ತ್ರ ಲಾಭ. ಮಕ್ಕಳಿಗೆ ತಂದೆ ಬಗ್ಗೆ ಚಿಂತೆ ಅಥವಾ ತಂದೆಗೆ ಮಕ್ಕಳ ಬಗ್ಗೆ ಚಿಂತೆ. ತಾಯಿಯ ಆರೋಗ್ಯ ಕೊಂಚ ಸುದಾರಿಸುವುದು. ಇತ್ತೀಚೆಗೆ ಎಲ್ಲ ವಿಷಯದ ಬಗ್ಗೆ ಪ್ರಶ್ನೆ ಮಾಡುವ ಹವ್ಯಾಸ ರೂಡಿಸಿಕೊಂಡಿರುವ ನಿಮ್ಮನ್ನು ಜನರು ಆಶ್ಚರ್ಯವಾಗಿ ನೋಡಬಹುದು ಮತ್ತು ಅದು ನಿಮ್ಮ ಅನುಭವಕ್ಕೆ ಬರುವುದು. ವಾಹನಕೊಳ್ಳುವ ಅಥವಾ ಬದಲಿಸುವ ಚರ್ಚೆಗಳು ಆಗುವುದು. ಉದ್ಯೋಗದಲ್ಲಿ ಸ್ಥಾನ ಭದ್ರತೆಯ ವಾರ. ಕೆಲಸಕ್ಕೆ ತಕ್ಕಂತೆ ಪ್ರಶಂಸೆ. ಸ್ನೇಹಿತರ ಅಥವಾ ಸಂಬಂಧಿಕರ ಮನೆಗೆ ಭೇಟಿ ನೀಡುವಿರಿ ಹಾಗು ಆ ಮನೆಯ ವಿನ್ಯಾಸಕ್ಕೆ ಮಾರುಹೊಗುವಿರಿ. ವಾರಾಂತ್ಯಕ್ಕೆ ಗುರು ಹಿರಿಯರ/ದೇವಾಲಯಗಳ ಭೇಟಿಯಿಂದ ಲಾಭ.

ಸಿಂಹ ಪ್ರತಿಷ್ಠೆಯ ಪ್ರಶ್ನೆಯಾಗುವ ವಾರ ಹಾಗು ಅದಕ್ಕಾಗಿ ಎಲ್ಲವನ್ನು ಪಣಕ್ಕಿಡುವಿರಿ. ಕೆಲಸ ಹಾಗು ವ್ಯಾಪಾರದಲ್ಲಿ ನಿಧಾನಗತಿಯ ಬೆಳವಣಿಗೆ ನಿಮ್ಮ ಅನುಭವಕ್ಕೆ ಬರುವುದು. ಹಾಗಾಗಿ ಸ್ವಂತ ಏನನ್ನಾದರೂ ಮಾಡಲು ಆಲೋಚಿಸುವಿರಿ. ಇದಕ್ಕೆ ಉತ್ತರವಾಗಿ ಸಹೋದರ/ಸಹೋದರಿಯರಿಂದ ಸ್ನೇಹಿತ ವರ್ಗದಿಂದ ಬೆಂಬಲ ವ್ಯಕ್ತವಾಗುವುದು. ಇದರಿಂದ ನಿಮ್ಮ ಆತ್ಮಬಲ ಹೆಚ್ಚುವುದು. ಆದರೆ ತಾಳ್ಮೆಯಿರಲಿ. ಆತುರದ ನಿರ್ಧಾರಗಳು ಬೇಡ. ನಿದ್ರಾಹೀನತೆ ಕಾಡುವುದು ಇಲ್ಲವೆ ನಿದ್ದೆಯಲ್ಲಿ ದುಸ್ವಪ್ನಗಳು ಕಾಣಸಿಗಲಿವೆ. ಮೇಲಧಿಕಾರಿಗಳಿಗೆ ಅನಿರೀಕ್ಷಿತ ಬೆಳವಣೆಗೆಯೊಂದು ಕಾಣಸಿಗಲಿದೆ. ನಿಮ್ಮ ದರ್ಪ ಹಾಗು ಶಿಸ್ತನ್ನು ಬೇರೆಯವರ ಮೇಲೆ ಹೇರದಿರಿ. ಮನೆಯಲ್ಲಿ ತಿಗಣೆ ಅಥವಾ ಜಿರಳೆ ಸಮಸ್ಯೆ ಕಾಡಬಹುದು. ಹಳೆಯ ಆರೋಗ್ಯ ಸಮಸ್ಯೆ ಒಂದು ಕಾಣಿಸಿಕೊಳ್ಳಬಹುದು. ದಿನನಿತ್ಯ ಸಂಚಾರ ಮಾಡುವ ರಸ್ತೆಗೆ ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಬದಲಿ ಮಾರ್ಗ ಹುಡುಕುವಿರಿ.

ಕನ್ಯಾ 

ವಾರದ ಆರಂಭದಿಂದಲೂ ಉದ್ಯೋಗ ಹಾಗು ವ್ಯಾಪಾರದಲ್ಲಿ ಕಿರಿಕಿರಿ ಅನುಭವಿಸುವಿರಿ. ಹಾಗು ಸ್ಥಾನದ ಅಭದ್ರತೆ ಕಾಡುವುದು ಸ್ತಿರಾಸ್ಥಿ ಸಂಬಂಧ ಸರ್ಕಾರಿ ಅಧಿಕಾರಿಗಳು ಇಲ್ಲವೆ ಮಧ್ಯವರ್ತಿಗಳ ಬಳಿಗೆ ಅಲೆದಾಟ. ಸುಖ ಭೋಜನ. ಕುಟುಂಬದವರೊಂದಿಗೆ ಹಿತಮಿತವಾದ ಮಾತುಗಳು ಹಾಗು ಅವರೊಂದಿಗೆ ವಿಷಯಗಳನ್ನು ಹಂಚಿಕೊಳ್ಳದೆ ರಹಸ್ಯವಾಗಿ ಇಟ್ಟುಕೊಳ್ಳುವಿರಿ. ಪ್ರೀತಿ ಪಾತ್ರರಿಗಾಗಿ ವಸ್ತ್ರ-ಪಾದರಕ್ಷೆ ಖರೀದಿಸುವಿರಿ. ನೀವು ಬಹಳದಿನಗಳಿಂದ ಉಪಯೋಗಿಸುತ್ತಿದ್ದ ಬ್ಯಾಗ್ ಒಂದು ಹರಿದು ಹೋಗಬಹುದು. ಕಣ್ಣಿನ ವೈದ್ಯರು ಇಲ್ಲವೆ ದಂತ ವೈದ್ಯರನ್ನು ಭೇಟಿ ಮಾಡುವಿರಿ. ಮಾರ್ಕೆಟಿಂಗ್/ಸೇಲ್ಸ್ ವೃತ್ತಿಯಲ್ಲಿ ಇರುವವರಿಗೆ ನಿಮ್ಮ ಕ್ಲೈಂಟ್ ನಿಂದ ಪ್ರಶ್ನೆಗಳ ಸುರಿಮಳೆ ಎದುರಿಸಬೇಕಾದೀತು. ವಿಷ್ಣುವಿನ ಆರಾಧನೆಯಿಂದ ಒಳಿತಾಗುವುದು.

ತುಲಾನೀವು ದೊಡ್ಡ ಯೋಜನೆಗಳ ಕುರಿತು ಲೆಕ್ಕಹಾಕುವ ವಾರವಾದರೆ ನಿಮ್ಮ ಸಂಗಾತಿ ಇದಕ್ಕೆ ವ್ಯತಿರಿಕ್ತವಾಗಿ ವಾಸ್ತವಕ್ಕೆ ದೂರದ ಆಲೋಚನೆಯಲ್ಲಿ ಮಗ್ನವಾಗಿರುವುದನ್ನು ಕಂಡು ಗಲಿಬಿಲಿಗೊಳ್ಳುವಿರಿ. ಸರ್ಕಾರಿ/ಅಧಿಕಾರಿಗಳ ಸಂಪರ್ಕದಿಂದ ಧನಾಗಮ ಅಥವಾ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುವುದು. ಉದ್ಯೋಗ ಸ್ಥಳಗಳಲ್ಲಿ ಹಾಗು ವ್ಯಾಪಾರ ಸ್ಥಳಗಳಲ್ಲಿ ಹೆಚ್ಚು ತಾರ್ಕಿಕ ವಿಷಯಗಳ ಬಗ್ಗೆ ಚರ್ಚೆಯಾಗುವುದು ಮತ್ತು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಬೇಕಾದೀತು. ಇದಕ್ಕೆ ಹೆಚ್ಚಿನ ತಾಲಿಮು ನಡೆಸುವುದು ಒಳಿತು. ವಾರದ ಮಧ್ಯಬಾಗದಲ್ಲಿ ಉದ್ಯೋಗದಲ್ಲಿ ಕಿರಿಕಿರಿ ಅನುಭವಿಸುವಿರಿ. ನಿಮಗಿರುವ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವಿರಿ. ತಾಯಿಯ ಆರೋಗ್ಯದ ವಿಷಯವಾಗಿ ವೃಥಾ ಚರ್ಚೆ. ನಿಮ್ಮ ಭಾವ/ ಭಾವಮೈದುನನ ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕವಾರದ ಆರಂಭದಲ್ಲಿ ಹಿತ ಶತ್ರುಗಳಿಂದ ದೂರವಿರಿ ಇಲ್ಲವೆ ಅನಾವಶ್ಯಕ ಕಿರಿಕಿರಿ/ತೊಂದರೆಗೆ ಸಿಲುಕುವಿರಿ. ನಿಮ್ಮ ಜ್ಞಾನಕ್ಕೆ ಹಾಗು  ಅನುಭವಕ್ಕೆ ಮನ್ನಣೆ ಸಿಗುವ ವಾರ. ಹಿರಿಯ ಅಧಿಕಾರಿಗಳು/ಪ್ರತಿಷ್ಠಿತ ವ್ಯಕ್ತಿಗಳ ಸಂಪರ್ಕ ಸಿಗಲಿದೆ. ಹಾಗಾಗಿಯೂ ಉದ್ಯೋಗದಲ್ಲಿ ನಿಮ್ಮ ಕೆಳಗಿನವರ ವ್ಯರ್ಥ ಪ್ರಯತ್ನದಿಂದ ಕಿರಿಕಿರಿ ಅನುಭವಿಸುವಿರಿ. ನ್ಯಾಯ ತೀರ್ಮಾನ, ಸಂಧಾನ ಮಾತುಕತೆಗೆ ಆಹ್ವಾನ ಬರಬಹುದು. ಧನದ ಅಡೆಚಣೆ ಮುಂದುವರೆಯುವ ವಾರ. ನಿಮ್ಮ ಮಕ್ಕಳು ಹಾಗು ಕುಟುಂಬದ ಸದಸ್ಯರೊಂದಿಗೆ ಅತೀವ ಶಿಸ್ತನ್ನು ನಿರೀಕ್ಷಿಸದಿರಿ. ಆಸ್ತಿಯ ಬಗ್ಗೆ ಚರ್ಚೆಯಾಗುವ ವಾರ. ವಾರಾಂತ್ಯಕ್ಕೆ ಸಂತಸ ಹಾಗು ವಿಪರೀತ ಖರ್ಚು ಆಗಲಿದೆ. ದೇವಿ ಆರಾಧನೆ ಅಥವಾ ದರ್ಶನದಿಂದ ಒಳಿತು.

ಧನಸ್ಸು ಅತೀವ ಕೆಲಸದ ಒತ್ತಡದಿಂದ ಬಳಲುವಿರಿ ಇಲ್ಲವೆ ಕೆಲಸವೇ ಇಲ್ಲದೆ ಸೋಮಾರಿತನ ನಿಮ್ಮನ್ನು ಕಾಡುವುದು. ವೈರಲ್ ಜ್ವರದಿಂದ ಬಳಲುವಿರಿ. ನಿಮ್ಮವರಿಂದಲೆ ಕಿರಿಕಿರಿ ಅನುಭವಿಸುವಿರಿ. ನಿದ್ರಾಹೀನತೆ ಕಾಡುವುದು. ನಿಮ್ಮ ವೇಗಕ್ಕೆ ತಡೆಯೊಡ್ಡಿದ ಅನುಭವವಾಗುವುದು. ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವುದು ಇಲ್ಲವೆ ಕನ್ನಡಕವನ್ನು ಬದಲಾಯಿಸುವಿರಿ. ಮನೆಯಲ್ಲಿರುವ ಹಳೆಯ ವಸ್ತುಗಳ ಮೇಲೆ ವ್ಯಾಮೋಹ ಹೆಚ್ಚುವುದು. ನಿಮ್ಮ ಧೈರ್ಯ ಹಾಗು ಆತ್ಮ ವಿಶ್ವಾಸವನ್ನು ಕಂಡು ಇತರರು ಆಶ್ಚರ್ಯ ಪಡುವ ವಾರ. ವಾರದ ಕೊನೆಯ ಭಾಗದಲ್ಲಿ ನಿಮ್ಮಲ್ಲಿರುವ ಅಪರಿಮಿತ ಜ್ಞಾನ ಹಾಗು ಕೌಶಲ್ಯಕ್ಕೆ ಇತರರು ತಲೆಬಾಗುವರು ಹಾಗು ಮನ್ನಣೆ ದೊರೆಯಲಿದೆ. ಹನುಮ ಹಾಗು ಸ್ಕಂದನ ಆರಾಧನೆ/ದರ್ಶನದಿಂದ ಒಳಿತು ಕಾಣುವಿರಿ.

ಮಕರಅತಿಯಾದ ನಿಮ್ಮ ಸಹಾಯದಿಂದ ಪೇಚೆಗೆ ಸಿಲುಕುವ ವಾರ. ಹಾಗಾಗಿ ಶಿಸ್ತು ಹಾಗು ಸಂಯಮವನ್ನು ಪಾಲಿಸಿ. ಸಣ್ಣದೊಂದು ಆರೋಪಕ್ಕೆ ಗುರಿಯಾಗುವ ವಾರವಾದರೂ ವಾರದ ಆರಂಭ ಹಾಗು ಮಧ್ಯಬಾಗದ ತನಕ ಅದರ ಬಗ್ಗೆ ಅತಿಯಾಗಿ ಚಿಂತಿಸುವಿರಿ. ವಾರಾಂತ್ಯಕ್ಕೆ ಗುರುಬಲದ ಕಾರಣ ಶುಭ ಸುದ್ದಿಯೊಂದು ತಲುಪಲಿದೆ. ಅತಿಯಾದ ಕೆಲಸದ ಒತ್ತಡದಲ್ಲಿ ಇರುವ ನೀವು ನಿಮ್ಮ ದೇಹದ ಕಡೆ ಆಲಸ್ಯದಿಂದ ಗಮನಹರಿಸುತ್ತಿಲ್ಲವಾದ್ದರಿಂದ ಅನಾರೋಗ್ಯ ಕಾಡಬಹುದು. ರಕ್ತದ ಒತ್ತಡದಲ್ಲಿ ಏರುಪೇರು ಅಥವಾ ಕಾಲುಗಳಿಗೆ ಪೆಟ್ಟಾಗಬಹುದು. ನಿಮ್ಮ  ಜ್ಞಾನಾರ್ಜನೆ ಮುಂದುವರೆಯುವ ವಾರ. ಯಾರೊಂದಿಗೂ ಅತಿಯಾದ ಸಲುಗೆಯಿಂದ ವರ್ತಿಸದಿರಿ. ನಿಮ್ಮ ಗಾಂಭಿರ್ಯಕ್ಕೆ ದಕ್ಕೆ ಆಗದಂತೆ ನೋಡಿಕೊಳ್ಳಿ. ಮಾತಿನ ಮೇಲೆ ಹಿಡಿತವಿರಲಿ ಹನುಮ ಹಾಗು ದುರ್ಗೆಯ ಆರಾಧನೆಯಿಂದ ಒಳಿತು.

ಕುಂಭ ನಿಮ್ಮ ವೇಗಕ್ಕೆ ಕಡಿವಾಣವಿರಲಿ. ಯಾವುದೇ ನಿರ್ಧಾರ ಅಥವಾ ಮಾತನಾಡುವ ಮುನ್ನ ಆಲೋಚಿಸಿ. ವಾರದ ಆರಂಭ ಶುಭವಾಗಿ ಪ್ರಾರಂಭವಾದರೂ ವಾರದ ಮಧ್ಯದಲ್ಲಿ ಅನಾರೋಗ್ಯ ಇಲ್ಲವೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಹೊಸ ವಾಹನ ಖರೀದಿ ಅಥವಾ ಬದಲಿಸುವ ಆಲೋಚನೆ ಮಾಡುವಿರಿ. ಪ್ರತಿಷ್ಠೆಗಾಗಿ ದೊಡ್ಡ ವಾಹನ ಇಲ್ಲವೆ ಅವಶ್ಯಕತೆಗೆ ತಕ್ಕಂತೆ ವಾಹನವೊ ಎಂಬ ದ್ವಂದ್ವಕ್ಕೆ ಸಿಲುಕುವಿರಿ. ಇದು ಗೃಹಕ್ಕೆ ಅನ್ವಯಿಸಬಹುದು. ಕುಟುಂಬದಲ್ಲಿ ಹಿರಿಯರು(ತಾತ, ಅಜ್ಜಿ)  ಅವರ ಆರೋಗ್ಯದಲ್ಲಿ ಏರುಪೇರು ನಿಮಗೆ ಬೆನ್ನು ನೋವು ಬಾಧಿಸಬಹುದು. ನೆರೆಹೊರೆಯವರ ಕಷ್ಟ-ಸುಖ ಆಲಿಸಬೇಕಾದೀತು. ಅದಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ವಾರಾಂತ್ಯಕ್ಕೆ ವಾಸ್ತವ ಬದುಕಿನಿಂದ ದೂರ ಉಳಿಯುವಿರಿ ಹಾಗು ಖರ್ಚು ಹೆಚ್ಚು.

ಮೀನ ವಾರದ ಆರಂಭದಲ್ಲಿ ಕೊಂಚ ಸುಖಕ್ಕೆ ದಕ್ಕೆ,  ವಸ್ತು ಹಾನಿ. ವಾರದ ಮಧ್ಯದಲ್ಲಿ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಇಲ್ಲವೆ ಅದರ ಬಗ್ಗೆ ಅತೀವ ಚಿಂತನೆ, ಋಣ ಭಾದೆ, ಕುಟುಂಬದ ಸ್ತ್ರೀಯರಿಗೆ ಅನಾರೋಗ್ಯ. ಯಾರೊಂದಿಗೂ ಸಲುಗೆಯಿಂದ ವರ್ತಿಸದಿರಿ.  ಇಲ್ಲವೆ ಅಪವಾದಕ್ಕೆ ಇಡಾಗುವಿರಿ. ಬರಬೇಕಾಗಿರುವ ಹಣ ಅಥವಾ ಲಾಭಾಂಶ ವಿಳಂಬವಾಗಬಹುದು. ಅದಕ್ಕಾಗಿ ಗಣಪತಿ ಪ್ರಾರ್ಥನೆ ಇಲ್ಲವೆ ದರ್ಶನದಿಂದ ಒಳಿತು. ಹೆಚ್ಚುತ್ತಿರುವ ದೇಹದ ತೂಕದ ಬಗ್ಗೆ ಚರ್ಚೆ ಹಾಗು ತೂಕ ಇಳಿಸಲು ಮಾರ್ಗವನ್ನು ಹುಡುಕುವಿರಿ.

———————————————————-*******————————————————————————–

ಶನಿ ಹಾಗು ರವಿ ಯುತಿ ಪ್ರಭಾವ :

ರಾಜಕಾರಣಿ ಅಥವಾ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿ ವರ್ಗದಲ್ಲಿರುವ ವ್ಯಕ್ತಿಗಳಿಗೆ ಮಾನಸಿಕ ಹಿಂಸೆ ಅಥವಾ ತೀವ್ರ ಅನಾರೋಗ್ಯ ಅಥವಾ ಪದವಿ ಕಳೆದುಕೊಳ್ಳುವ ಸಾಧ್ಯತೆ.

ರಾಜಕೀಯವಲಯದಲ್ಲಿ ಕೆಸರೆರೆಚಾಟ ತೀವ್ರ ಕೆಳಮಟ್ಟಕ್ಕೆ ಇಳಿಯುವುದು.

ಕಾನೂನು ಪರಿಪಾಲನೆ ಮಾಡುವವರಿಗೂ, ಧರ್ಮ ಪರಿಪಾಲನೆ ಮಾಡುವವರಿಗೂ ವೃಥಾ ವಾಗ್ವಾದ/ಸಂಘರ್ಷ.

ಜ್ಯೋತಿಷ: ರವಿ ಕೃ, ಬೆಂಗಳೂರು

Tags