ಬಾಲ್ಕನಿಯಿಂದಬಾಲ್ಕನೀ ಭವಿಷ್ಯ

ಬಾಲ್ಕನಿ ವಾರಭವಿಷ್ಯ: 18-11-2018ಭಾನುವಾರದಿಂದ 24-11-2018ಶನಿವಾರದವರೆಗೆ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ……

ಮೇಷ ವಾರದ ಆರಂಭದಲ್ಲಿ ನಿಮ್ಮ ಆಲೋಚನೆ ಮತ್ತು ಕಾರ್ಯಗಳು ಒಂದಕ್ಕೊಂದು ತಾಳೆ ಹೊಂದುವುದಿಲ್ಲ. ಮಾನಸಿಕವಾಗಿ ಎಲ್ಲವುದರಿಂದ ಹಾಗೂ ಎಲ್ಲರಿಂದ ದೂರ ಇರುವಿರಿ. ಅತಿಯಾದ ಓಡಾಟವಿದ್ದರೂ ಆಶ್ಚರ್ಯವಿಲ್ಲ. ಉದ್ಯೋಗ ಹಾಗೂ ವ್ಯವಹಾರದ ದೃಷ್ಟಿಯಿಂದ ಇದು ಆಶಾದಾಯಕ ವಾರ. ಅತ್ತೆ ಅಥವಾ ಮಾವನ ಆರೋಗ್ಯ ಏರುಪೇರು ಅಥವಾ ಅನಾರೋಗ್ಯದ ವಿಚಾರವಾಗಿ ಖರ್ಚು. ಅನವಶ್ಯಕ/ಬೇಡದ ಮಾತುಗಳನ್ನಾಡಿ ಕುಟುಂಬ ವರ್ಗದಿಂದ ವಿರೋಧ. ಶಿಸ್ತನ್ನು ಪಾಲಿಸಲು ಕಷ್ಟಪಡುವ ವಾರ. ಯಾವುದಾದರೂ ವಸ್ತು ಒಂದು ಹಾಳಾಗುವುದು ಅಥವಾ ರಿಪೇರಿಗೆ ಬರುವುದು.

ವೃಷಭ ಮಕ್ಕಳಿಂದ ವಯಸ್ಸಿಗೆ ಮೀರಿದ ಮಾತುಗಳನ್ನು ನಿರೀಕ್ಷಿಸಬಹುದು ಮತ್ತು ಅವರ ಮೆಚ್ಯುರಿಟಿ ಮಟ್ಟವನ್ನು ಕಂಡು ಸಂತಸ ಪಡುವಿರಿ. ಆಹಾರ ವಿಷಯದಲ್ಲಿ ಶಿಸ್ತನ್ನು ಪಾಲಿಸುವ ವಾರ. ಮಕ್ಕಳ ವಿಚಾರದಲ್ಲಿ ಲೆಕ್ಕಚಾರ ಹಾಕುವ ವಾರ. ವಾರದ ಮಧ್ಯ ಹಾಗೂ ಕೊನೆಯಭಾಗದಲ್ಲಿ ನೀವೆಣಿಸಿದಂತೆ ಕೆಲಸ ಕಾರ್ಯಗಳು ನಡೆಯದು. ಹಾಗಾಗಿ ಬೇಸರಗೊಳ್ಳುವ ವಾರ. ನಿಮ್ಮ ಹೂಡಿಕೆಗಳಿಂದ ಲಾಭ ನಿರೀಕ್ಷಿಸಬಹುದು ಅಥವಾ ಹೊಸ ಹೂಡಿಕೆಗಳನ್ನು ಮಾಡುವಿರಿ. ತಾಯಿಯೊಂದಿಗೆ ಹೆಚ್ಚಾಗಿ ಸಂಪರ್ಕದಲ್ಲಿ ಇರುವ ವಾರ. ನಿಮ್ಮ ಜೊತೆಗಾರರ  ಹಾಗೂ ತಿಳುವಳಿಕೆಗೆ ಮಾರು ಹೋಗುವಿರಿ ಹಾಗೂ ಅವರಿಂದ ಅತಿಯಾದ ಪ್ರೀತಿ ಹಾಗೂ ಸಾಂತ್ವನವನ್ನು ನಿರೀಕ್ಷಿಸುವಿರಿ.

ಮಿಥುನ ತುಂಬಾ ಲೆಕ್ಕಾಚಾರ ಹಾಗೂ ತೂಕದ ಮಾತುಗಳನ್ನು ಆಡುವಿರಿ. ಸೋದರ ಮಾವನ ಆರೋಗ್ಯ ವಿಚಾರಿಸುವಿರಿ ಅಥವಾ ಅವರಿಂದ ಸಲಹೆ ಒಂದನ್ನು ಅಪೇಕ್ಷಿಸುವಿರಿ. ಈ ವಾರ ಎಲ್ಲವನ್ನು ತುಲನಾತ್ಮಕ ದೃಷ್ಟಿಯಿಂದ ನೀವು ನೋಡುವುದರಿಂದ ಈ ವಾರ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ ಹಾಗು ಅದು ಲಾಭದಾಯಕವಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆತು ಕೀರ್ತಿಯನ್ನುಗಳಿಸುವಿರಿ. ಶಿಸ್ತಿನ ಸಂಭಂಧ ಮನೆಯ ಹಿರಿಯ/ಕಿರಿಯರೊಡನೆ ಮನಸ್ತಾಪ. ವ್ಯಾವಾಹಾರಿಕವಾಗಿ ಉತ್ತಮ ವಾರ. ಉದ್ಯೋಗಸ್ಥರಿಗೆ ಹೆಚ್ಚಿನ ಕೆಲಸದ ವಾರ. ವಿದ್ಯಾರ್ಥಿಗಳಿಗೆ  ಆಶಾದಾಯಕವಾರ. ವಾರಾಂತ್ಯಕ್ಕೆ ನಿಮ್ಮ ಲವಲವಿಕೆ/ಚಟುವಟಿಕೆಗಳು ಕಮ್ಮಿ ಆಗುವುದು. ಇಲ್ಲವೆ ಅತಿಯಾದ ಸಂಚಾರದಿಂದ ಆಯಾಸದಲ್ಲಿ ಕೊನೆಗೊಳ್ಳುವುದು.

ಕಟಕನಿಮ್ಮ ಅತಿಯಾದ ಆತ್ಮ ವಿಶ್ವಾಸ ನಿಮ್ಮನ್ನು ಭೀಗುವಂತೆ ಮಾಡುವುದು. ಹಾಗೂ ಇತರರನ್ನು ಮಾತಿನಲ್ಲಿ ಕಟ್ಟಿಹಾಕುವಿರಿ. ನಿಮ್ಮ ಅತಿಯಾದ ಚಟುವಟಿಕೆಯಿಂದ ಹಾಗು ವೇಗಕ್ಕೆ ಈ ವಾರ ಯಾವುದೇ ಅಡೆತಡೆ ಇಲ್ಲವಾದರು ವೇಗವಾಗಿ ವಾಹನವನ್ನು ಚಾಲನೆ ಮಾಡದಿರಿ. ತಾಯಿಗೆ ಅನಾರೋಗ್ಯ ಮುಂದುವರೆಯುವುದು. ಇದರ ಸಲುವಾಗಿ ವೈದ್ಯರನ್ನು ಭೇಟಿಮಾಡುವಿರಿ. ವಾರಾಂತ್ಯಕ್ಕೆ ಹಳೆಯ ಸಂಬಂಧ/ಸ್ನೇಹಿತರನ್ನು ಭೇಟಿಮಾಡುವಿರಿ ಅಥವಾ ಅವರಿಂದ ವಾರ್ತೆ ಬರುವುದು. ಗುರುಹಿರಿಯರನ್ನು ಭೇಟಿಮಾಡುವಿರಿ ಹಾಗು ಇದರಿಂದ ಲಾಭ ಪಡೆಯುವಿರಿ. ನಿಮ್ಮ ಶಕ್ತಿ ಪ್ರದರ್ಶನಕ್ಕೆನಿಲ್ಲುವ ಸಮಯ ಬಂದರೂ ಕೊಂಚ ತಾಳ್ಮೆಯಿಂದ ಇರಿ. ಇದು ಸಕಾಲವಲ್ಲ.

ಸಿಂಹ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು, ವೈದ್ಯರನ್ನು ಭೇಟಿಮಾಡಿದರೆ ಒಳಿತು. ವಾರದ ಆರಂಭದಲ್ಲಿ ಕೊಂಚ ಬೇಸರ ಅಥವಾ ಮಾನಸಿಕ ಅಶಾಂತಿ ಇದ್ದರೂ ದಿನಕಳೆದಂತೆ ಸರಿಹೋಗುವುದು. ಸಾಹಿತಿಗಳು, ಪತ್ರಕರ್ತರು, ಬರಹಗಾರರು, ಕಲಾವಿದರುಗಳಿಗೆ ಉತ್ತಮ ವಾರ. ಸರ್ಕಾರಿ ಮಟ್ಟದ ಚರ್ಚೆಗಳಲ್ಲಿ ಭಾಗವಹಿಸಬಹುದು ಅಥವಾ ಸರ್ಕಾರಿ ಆದೇಶ ಒಂದು ನಿಮ್ಮ ಅರಿವಿಗೆ ಬರದೆಯಿರುವುದರಿಂದ ಅದರ ವಿಶ್ಲೇಷಣೆಗಾಗಿ ಇತರರ ಸಲಹೆ ಪಡೆಯಬೇಕಾಗಬಹುದು. ಮಕ್ಕಳ ನಿಧಾನಗತಿ ಬೆಳವಣಿಗೆಯಿಂದ ಕೊಂಚ ವಿಚಲಿತರಾಗುವಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಜ್ಞಾನ ಹಾಗು ಕೌಶಲ್ಯಕ್ಕೆ ಮನ್ನಣೆ ಸಿಗುವ ವಾರ. ನಿಮ್ಮ ಶಿಸ್ತನ್ನು ಎಲ್ಲರೂ ಕೊಂಡಾಡಿದರೂ ಅದನ್ನು ಅವರಿಂದ ನಿರೀಕ್ಷಿಸಿದರೆ ತಪ್ಪಾಗುವುದು.

ಕನ್ಯಾವಾರದ ಆರಂಭದಲ್ಲಿ ಹೆಚ್ಚು ಲವಲವಿಕೆಯಿಂದ ಕೂಡಿ ಕೆಲಸ ಕಾರ್ಯಗಳನ್ನು ಮಾಡುವಿರಿ ಹಾಗು ಕೇಂದ್ರ ಬಿಂದುವಾಗುವಿರಿ. ವಾರದ ಮಧ್ಯ ಭಾಗದಲ್ಲಿ ಕೊಂಚ ಹಿನ್ನಡೆಯಾಗಿ ಇಕ್ಕಟ್ಟಿಗೆ ಸಿಲುಕುವಿರಿ. ವ್ಯಾಪಾರಸ್ಥರಿಗೆ ಪರಿಶ್ರಮ ಹೆಚ್ಚು ಲಾಭಗಳಿಕೆಯಲ್ಲಿ ತುಸು ಇಳಿಕೆ. ಉದ್ಯೋಗದಲ್ಲಿ ಕೊಂಚ ಬಯದ ವಾತಾವರಣ ನಿರ್ಮಾಣವಾಗುವ ವಾರ. ಆದ್ದರಿಂದ ಕೆಲವು ಕಾರ್ಯಕ್ರಮಗಳನ್ನು ಮುಂದೂಡಲು ಯೋಚಿಸುವಿರಿ. ವಾಹನವನ್ನು ಬದಲಿಸುವ ಆಲೋಚನೆಯಲ್ಲಿ ಇದ್ದರೂ ಮುಂದೂಡುವಿರಿ. ಹೆಚ್ಚು ಖರ್ಚಾದರೂ ಆಶ್ಚರ್ಯವಿಲ್ಲ. ಮಧ್ಯವರ್ತಿಗಳೊಂದಿಗೆ ಚರ್ಚೆಯಾಗಬಹುದು ಅಥವಾ ಅವರೊಡನೆ ವ್ಯವಹರಿಸುವ ಸಂದರ್ಭ ಒದಗಿ ಬರಬಹುದು. ಸ್ವಲ್ಪ ಜಾಣ್ಮೆಯಿಂದ ವ್ಯವಹರಿಸಿ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಬಹುದು. ಹನುಮ ಮತ್ತು ನರಸಿಂಹನ ದರ್ಶನ ಹಾಗು ಪ್ರಾರ್ಥನೆಯಿಂದ ಒಳಿತಾಗುವುದು.

ತುಲಾಧನಾಗಮನದ ನಿರೀಕ್ಷೆಯಲ್ಲಿರುವ ನಿಮಗೆ ಕೊಂಚ ಮಟ್ಟಿನ ಅಡೆತಡೆಗಳು ಬರಬಹುದು. ವಾರದ ಆರಂಭದಲ್ಲಿ ಹಾಗು ವಾರದ ಕೊನೆಯಲ್ಲಿ ವಿಪರೀತ ಖರ್ಚು. ನಿಮ್ಮ ವರಮಾನ ಹಾಗು ಖರ್ಚಿಗೂ ಈ ವಾರ ತಾಳೆಯಾಗದು. ದೈಹಿಕವಾಗಿ ಹಾಗು ಮಾನಸಿಕವಾಗಿ ಬಸವಳಿಯವ ವಾರ. ಮಕ್ಕಳ ಪರ ನಿಲ್ಲುವ ವಾರ. ಹಾಗಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಎದುರಿಸಬೇಕಾದಿತು. ಇತರರನ್ನು ನಂಬುವುದರಿಂದ ಮನಸ್ಸಿಗೆ ಗಾಸಿಮಾಡಿಕೊಳ್ಳುವಿರಿ. ವಾರಾಂತ್ಯಕ್ಕೆ ಆತ್ಮಬಲ ಕುಗ್ಗುವುದು. ಆದಾಗಿಯೂ ರಾಶಿಯ ಅಧಿಪತಿ ರಾಶಿಯಲ್ಲೇ ಸ್ಥಿತನಾಗಿರುವುದರಿಂದ ನಿಮ್ಮ ಕನಸು ಹಾಗು ಯೋಜನೆಗಳಿಗೆ ಬಣ್ಣ ಹಚ್ಚುವುದನ್ನು ನಿಲ್ಲಿಸುವುದಿಲ್ಲ.

ವೃಶ್ಚಿಕವಾರದ ಆರಂಭ ಸುಖವಾಗಿ ಪ್ರಾರಂಭವಾಗಿ ಬಂಧುವರ್ಗದವರನ್ನು ಭೇಟಿಮಾಡುವಿರಿ. ಹಾಗಾಗಿಯೂ ನಿಮ್ಮ ಸಂಕುಚಿತ ಬುದ್ಧಿಯಿಂದ ವಾರದ ಮಧ್ಯಬಾಗದಲ್ಲಿ ಕೊಂಚ ಕಿರಿಕಿರಿ ಅನುಭವಿಸುವಿರಿ. ಕಾರ್ಯಸಿದ್ದಿಯಿಲ್ಲದೆ ವೃಥಾ ಅಲೆದಾಟ. ನಿಮ್ಮ ಜ್ಞಾನ ಹಾಗು ಬುದ್ದಿಯ ಸದ್ಬಳಕೆ ಮಾಡಿಕೊಳ್ಳುವಲ್ಲಿ ಎಡುವುತ್ತಿದ್ದಿರಿ. ಇತರರನ್ನು ನಂಬದೆ, ಇತರರಿಗಾಗಿ ಯೋಚಿಸದೆ ನಿಮಗಾಗಿ ಕೊಂಚ ಸಮಯ ಕಳೆಯಿರಿ. ಸೂರ್ಯನ ಆರಾಧನೆ ಅಥವಾ ಸೂರ್ಯನ ದರ್ಶನದಿಂದ ಮುಂಬರುವ ದಿನಗಳಲ್ಲಿ ಉದ್ಯೋಗದಲ್ಲಿ ಪ್ರಗತಿ. ವಾರದ ಆರಂಭ ಮಕ್ಕಳ ಬಗ್ಗೆ ಚರ್ಚೆಯಿಂದ ಪ್ರಾರಂಭವಾಗಿ ವಾರಾಂತ್ಯಕ್ಕೆ ಮಕ್ಕಳಿಗಾಗಿ ಖರ್ಚಿನಿಂದ ಅಂತ್ಯಗೊಳ್ಳುವುದು.

ಧನಸ್ಸುವಾರದ ಆರಂಭದಲ್ಲಿ ಕೊಂಚ ಹಿನ್ನಡೆಯಾದರೂ ಮುನ್ನುಗ್ಗಿ, ವಾರದ ಮಧ್ಯಭಾಗದಲ್ಲಿ ಹಾಗು ಅಂತ್ಯದಲ್ಲಿ ಒಳಿತಾಗುವುದು. ಕೊಂಚ ಅನಾರೋಗ್ಯ ಹಾಗು ಮಂದಗತಿಯ ಅನುಭವವಾಗಿರುವ ನಿಮಗೆ, ನಿದ್ರಾಹೀನತೆ ಈ ವಾರ ಕಾಡುವುದು. ಈಶ್ವರನ ಆರಾಧನೆಯಿಂದ ಕೊಂಚ ಸಮಾಧಾನ. ನಿಮ್ಮ ಆಲೋಚನೆಗಳು ಹಾಗು ಯೋಜನೆಗಳು ದೊಡ್ಡ ಮಟ್ಟದಲ್ಲಿ ಇರುವುದರಿಂದ ಕೊಂಚ ತಾಳ್ಮೆಯಿಂದ ಇರಿ. ಮಧ್ಯಮವರ್ತಿಗಳಿಂದ ಧನವ್ಯಯ. ಟ್ರಾನ್ಸ್-ವರ್ ಗಾಗಿ ಪ್ರಯತ್ನ ಪಡುತ್ತಿರುವವರಿಗೆ ನಿರಾಸಾದಾಯಕ ವಾರ. ನೀವು ವೈರಾಗಿಗಳಂತೆ ಮಾತನಾಡುವುದರಿಂದ ಕುಟುಂಬದವರು ವಿಚಲಿತರಾಗುವರು. ನೆಟ್-ವರ್ಕ್ ಮಾರ್ಕೆಟಿಂಗ್, ಚೈನ್ ಲಿಂಕ್ ಅಥವಾ ಷೇರ್ ಮಾರ್ಕೆಟ್ ಗೀಳು ಹೆಚ್ಚಿಸಿಕೊಳ್ಳುವಿರಿ. ಆದರೆ ಇದ್ಯಾವುದು ಲಾಭದಾಯಕವಲ್ಲ. ಅಮ್ಮನವರ ದರ್ಶನದಿಂದ ಒಳಿತು.

ಮಕರವಾರದ ಆರಂಭದಲ್ಲಿ ನೀವೆಣಿಸಿದಂತೆ ಕಾರ್ಯಗಳು ನಡೆಯದು, ನಿಮ್ಮ ಕನಸುಗಳಿಗೆ ಬಣ್ಣಹಚ್ಚಿ, ನಿಮಗರಿಯದಂತೆ ನಿಮ್ಮ ಯೋಚನೆಗಳಿಗೆ ಅಡಿಪಾಯ ಬಿಳುತ್ತಿದೆ. ವಾರದ ಮಧ್ಯಭಾಗದಲ್ಲಿ ಹಾಗು ಅಂತ್ಯದಲ್ಲಿ ಆತ್ಮಬಲ ಹೆಚ್ಚುವುದು. ನಿದ್ರಾಹೀನತೆ ಮುಂದುವರೆಯುವ ವಾರ. ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಿರಿ.  ಹಲವು ಅವಕಾಶಗಳು ಒದಗಿ ಬಂದರೂ ಅದನ್ನು ಸದ್ಬಳಕೆ ಮಾಡುವಲ್ಲಿ ವಿಫಲರಾಗುವಿರಿ. ವಾರಾಂತ್ಯಕ್ಕೆ ಸೋದರ ಮಾವನ ಭೇಟಿ ಅಥವಾ ಅವರಿಂದ ಸುದ್ದಿ. ನಿಮ್ಮ ಜ್ಞಾನಕ್ಕೆ ಹಾಗು ಕೌಶಲ್ಯಕ್ಕೆ ಮನ್ನಣೆ ದೊರೆಯಲಿದೆ. ಗ್ಯಾಸ್ಟ್ರಿಕ್ ನಿಂದ ಬಳಲುವಿರಿ. ನಡೆದಾಡುವಾಗ ಕಾಲುಗಳಿಗೆ ಪೆಟ್ಟುಮಾಡಿಕೊಳ್ಳುವಿರಿ. ವಿಶೇಷವಾಗಿ ಕಾಲಿನ ಕಿರುಬೆರಳಿಗೆ. ಹಳೆಯ ಸಂಬಂಧವೊಂದು ಸಂಪರ್ಕಕಕ್ಕೆ ಬರಬಹುದು.

ಕುಂಭಇಷ್ಟು ದಿನ ಇದ್ದ ಭಯದ ವಾತಾವರಣದಿಂದ ಹೊರಬರುವಿರಿ. ಆತ್ಮಬಲ ಹೆಚ್ಚುವ ವಾರ. ನಿಮ್ಮ ಆಲೋಚನೆ ಹಾಗು ಯೋಜನೆಗಳನ್ನು ಇತರರ ಮೇಲೆ ಹೇರುವಿರಿ. ತಾಳ್ಮೆ ಕೊಂಚ ಕಡಿಮೆಯಾಗಿ ಇತರರ ಮೇಲೆ ಸಿಡಿಮಿಡಿಗೊಳ್ಳುವಿರಿ. ಸ್ಥಿರಾಸ್ಥಿಯನ್ನು ಮಾರಾಟ ಮಾಡಲು ಬಹುದಿನಗಳಿಂದ ಪ್ರಯತ್ನದಲ್ಲಿದ್ದರೆ, ಈ ವಾರ ಆ ವಿಚಾರವಾಗಿ ಪ್ರಗತಿ ಕಾಣುವಿರಿ. ನಿಮ್ಮ ಏಳಿಗೆಗೆ ಶಾರ್ಟ್ ಕಟ್ ಮಾರ್ಗಗಳನ್ನು ಹುಡುಕುವಿರಿ ಹಾಗು ವಿಫಲ ಪ್ರಯತ್ನ ಪಡುವಿರಿ. ವಾರಾಂತ್ಯಕ್ಕೆ ಕುಟುಂಬದ ಸದಸ್ಯರಿಗೆ ಅನಾರೋಗ್ಯ ಕಾಡುವುದು. ಇಲ್ಲವೆ ಅವರ ಸಹಾಯ ಹಸ್ತ ನಿರೀಕ್ಷಿಸುವಿರಿ. ಬೇಡದ ವಸ್ತುಗಳನ್ನು ಖರೀದಿಸಿ ಹಣವನ್ನು ಫೋಲು ಮಾಡುವಿರಿ. ಮಕ್ಕಳಿಗಾಗಿ ಪ್ರವಾಸ ಹೊರಡಲು ಯೋಜನೆ ಮಾಡುವಿರಿ. ಅಥವಾ ಅದರ ಬಗ್ಗೆ ಚರ್ಚೆ ಮಾಡುವಿರಿ. ಮಕ್ಕಳಿಂದ ಕೊಂಚ ನೆಮ್ಮದಿ ಹಾಗು ಅವರ ಪ್ರೌಡಿಮೆ ಕಂಡು ಆಶ್ಚರ್ಯ ಪಡುವಿರಿ.

ಮೀನವಾರದ ಆರಂಭದಲ್ಲಿ ಎಲ್ಲಾ ಸರಿ ಕಂಡರೂ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವ ಒಳ ಭಯದಿಂದ ಆತಂಕ ಮನೆಮಾಡುವುದು. ಸುಖ ಭೋಜನ. ಅತೀವ ಕೆಲಸದ ಒತ್ತಡವಿದ್ದರೂ ಇತರರು ನಿಮ್ಮ ಸಹಾಯಕ್ಕೆ ಧಾವಿಸುವರು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವಿರಿ. ಸಹೋದರ ಅಥವಾ ಸಹೋದರಿಯೊಬ್ಬರು ಪ್ರವಾಸ ಹೋಗಬಹುದು ಅಥವಾ ಉದ್ಯೋಗ ಸಂಬಂಧ ನಿಮ್ಮಿಂದ ದೂರವಾಗಬಹುದು. ಹಾಗಾಗಿ ಅವರಿಗಾಗಿ ಖರ್ಚು. ಮಕ್ಕಳ ಬಗ್ಗೆ ಕೊಂಚ ಚಿಂತೆಗೊಳಗಾಗುವಿರಿ. ಚರ್ಮದ ಅರ್ಲಜಿ ಆಗಬಹುದು. ಸಮಯ ಪಾಲನೆಗೆ ಹೆಚ್ಚು ಒತ್ತು ಕೊಡುವಿರಿ. ಪುಸ್ತಕ ಒಂದನ್ನು ಓದುವಿರಿ. ಮನೆಯ ಒಳಾಂಗಣ ಹಾಗು ಹೊರಾಂಗಣ ವೈಭವಿಕರಿಸಲು ಹೆಚ್ಚು ಹಣ ಖರ್ಚು ಮಾಡುವಿರಿ. ಸ್ನೇಹಿತರೊಬ್ಬರ ಔತಣ ಕೂಟದಲ್ಲಿ ಪಾಲ್ಗೊಳ್ಳುವಿರಿ ಹಾಗು ಫಲ ದಾಯಕವಾದ ಮಾತುಕತೆಯಲ್ಲಿ ಕೊನೆಗೊಳ್ಳುವುದು.

————————————————————*************——————————————————————

ಡಿಸೆಂಬರ್ 20ರ ನಂತರ ಹಾಗು ಫೆಬ್ರವರಿ 2ರ ತನಕ ಜಲ ತತ್ವ ರಾಶಿಗಳಲ್ಲಿ ಮೂರು ಪ್ರಬಲ ಗ್ರಹಗಳು ಸ್ಥಿತವಾಗುವುದರಿಂದ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗಬಹುದು.

ಆಲಿ ಕಲ್ಲು ಮಳೆಯಾಗಿ ಬೆಳೆಗಳಿಗೆ ಹಾನಿಯಾಗುವುದು.

ವಿಪರೀತ ಮಂಜು ಮತ್ತು ಹಿಮದಿಂದ(ಹಿಮ ಬೀಳುವ ಸ್ಥಳಗಳಲ್ಲಿ) ಅನಾಹುತಗಳು ಸಂಭವಿಸಬಹುದು.

ಜ್ಯೋತಿಷ: ರವಿ ಕೃ, ಬೆಂಗಳೂರು

Tags